BBK 12: ನ್ಯಾಯವಾಗಿಯೇ ಆಡಲ್ಲ, ನಾಯಿ ಬಾಲ ಡೊಂಕೆ; ಏನಿದು ಹೊಸ ಕಿರಿಕ್?
ಬಿಗ್‌ಬಾಸ್ ಮನೆಯಲ್ಲಿ ಆಟದ ವಿಚಾರವಾಗಿ ಅಶ್ವಿನಿ ಗೌಡ ಮತ್ತು ಕಾವ್ಯಾ ಶೈವ ನಡುವೆ ತೀವ್ರ ಜಗಳ ನಡೆದಿದೆ. ಏಕವಚನ ಬಳಕೆಯಿಂದ ಶುರುವಾದ ಮಾತಿನ ಚಕಮಕಿ, ವೈಯಕ್ತಿಕ ನಿಂದನೆಗೆ ತಿರುಗಿದೆ. ಇದೇ ವೇಳೆ, ಸೀಕ್ರೆಟ್ ರೂಮ್‌ನಿಂದ ರಕ್ಷಿತಾ ಮತ್ತು ಧ್ರುವಂತ್ ಆಟದ ಮೇಲೆ ಪ್ರಭಾವ ಬೀರುತ್ತಿದ್ದಾರೆ.

ಮಹಿಳಾ ಸ್ಪರ್ಧಿಗಳ ನಡುವೆ ಕಾಳಗ
ಬಿಗ್‌ಬಾಸ್ ಮನೆ ಅಂದ್ರೆ ಅಲ್ಲಿ ಜಗಳ ಕಾಮನ್ ಆಗಿದೆ. ಇದೀಗ ಅಶ್ವಿನಿ ಗೌಡ ಮತ್ತು ಕಾವ್ಯಾ ಶೈವ ನಡುವೆ ಜಗಳ ಏರ್ಪಟ್ಟಿದ್ದು, ಏಕವಚನದಲ್ಲಿ ಒಬ್ಬರಿಗೊಬ್ಬರು ಬೈದಾಡಿಕೊಂಡಿದ್ದಾರೆ. ಸೀಕ್ರೆಟ್ ರೂಮ್‌ನಲ್ಲಿರುವ ರಕ್ಷಿತಾ ಮತ್ತು ಧ್ರುವಂತ್ ಯಾರು? ಯಾವ ಆಟವಾಡಬೇಕು ಅನ್ನೋದನ್ನು ನಿರ್ಧರಿಸುತ್ತಿದ್ದಾರೆ.
ಅಶ್ವಿನಿ ಗೌಡ ಗರಂ
ಇಂದು ಬಿಡುಗಡೆಯಾದ ಪ್ರೋಮೋದಲ್ಲಿ ಅಶ್ವಿನಿ ಗೌಡ ಮತ್ತು ಕಾವ್ಯಾ ಬೇರೆ ಬೇರೆ ತಂಡಗಳಲ್ಲಿ ಆಟವಾಡಿದಂತೆ ಕಂಡು ಬಂದಿದೆ. ಅಟದ ಅಂತ್ಯಕ್ಕೆ ಇಬ್ಬರ ನಡುವೆ ಕಿಡಿ ಹೊತ್ತಿಕೊಂಡಿದೆ. ಈ ಸಮಯದಲ್ಲಿ ಕಾವ್ಯಾ ಶೈವ ಏಕವಚನ ಬಳಕೆ ಮಾಡಿದ್ದಕ್ಕೆ ಎಂದಿನಂತೆ ಅಶ್ವಿನಿ ಗೌಡ ಗರಂ ಆಗಿದ್ದಾರೆ.
ಕಾವ್ಯಾ ಹೇಳಿದ್ದೇನು?
ಆ ಯಮ್ಮಾ ನ್ಯಾಯವಾಗಿ ಆಡೋದೇ ಇಲ್ಲ. ನೀವು ಚೇಂಜ್ ಆಗುವ ವ್ಯಕ್ತಿಯೇ ಅಲ್ಲ. ನಾಯಿ ಬಾಲ ಯಾವತ್ತಿದ್ರೂ ಡೊಂಕೆ. ಇಷ್ಟು ದಿನ ನೀವು ಆಟ ಆಡಿಕೊಂಡು ಬಂದಿದ್ದೇನೆ. ಏಯ್ ಗೆಟ್ ಲಾಸ್ಟ್ ಎಂದು ಅಶ್ವಿನಿ ಗೌಡ ಅವರಿಗೆ ಕಾವ್ಯಾ ಹೇಳಿದ್ದಾರೆ. ಈ ಎಲ್ಲಾ ಮಾತುಗಳಿಗೆ ಅಶ್ವಿನಿ ಗೌಡ ಸಹ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಕಾವ್ಯಾಗೆ ಅಶ್ವಿನಿ ಗೌಡ ಪ್ರಶ್ನೆ
ಮಾತನಾಡುವ ಪದಗಳ ಮೇಲೆ ಗಮನವಿರಲಿ. ಏ ಯಮ್ಮಾ ಎಲ್ಲವನ್ನು ನಿಮ್ಮ ತಾಯಿ ಬಳಿಯಲ್ಲಿಟ್ಟುಕೊ. ನಾನು ಯಾರಿಗೆ ಮೋಸ ಮಾಡಿದ್ದನು ಈಕೆ ನೋಡಿದ್ದಾಳೆ. ನೀನೇನು ಸಹ ತುಂಬಾ ಸಾಚಾ ರೀತಿ ಆಟ ಆಡಿದ್ದೀಯಾ ಎಂದು ಕಾವ್ಯಾಗೆ ಅಶ್ವಿನಿ ಗೌಡ ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: BBK 12: ಅಂದುಕೊಂಡಂತೆಯೇ ಆಯ್ತು: ಸೀಕ್ರೆಟ್ ರೂಮ್‌ನಲ್ಲಿ ರಕ್ಷಿತಾ ಆಗಿ ಬದಲಾದ ಧ್ರುವಂತ್!
ಕ್ಯಾಪ್ಟನ್ಸಿ ಟಾಸ್ಕ್
ಅಂತಿಮವಾಗಿ ಕ್ಯಾಪ್ಟನ್ಸಿ ಟಾಸ್ಕ್ ಆಟವಾಡಲು ಸೂರಜ್ ಸಿಂಗ್, ಕಾವ್ಯಾ ಶೈವ, ಗಿಲ್ಲಿ ನಟ ಮತ್ತು ಮ್ಯೂಟಂಟ್ ರಘು ಆಯ್ಕೆಯಾಗಿದ್ದಾರೆ. ಮನೆಯಿಂದ ಹೊರಗೆ ಹೋಗಲು ಚೈತ್ರಾ ಕುಂದಾಪುರ, ಮಾಳು ನಿಪನಾಳ, ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ಧನುಷ್ ಮತ್ತು ರಜತ್ ನಾಮಿನೇಟ್ ಆಗಿದ್ದಾರೆ.
ಇದನ್ನೂ ಓದಿ: BBK 12: ಅಯ್ಯೋ ಭಗವಂತ ಇದೇನಿದು? ಮನದಲ್ಲಿದ್ದ ಮಾತು ಬಿಚ್ಚಿಟ್ಟ ಚೈತ್ರಾ; ರಜತ್ ಶಾಕ್!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

