- Home
- Entertainment
- TV Talk
- BBK 12: ರಕ್ಷಿತಾ ಶೆಟ್ಟಿ ಆ ರೀತಿ ಮಾಡ್ತಾಳೆ ಅಂತ ಅಂದ್ಕೊಂಡಿರಲಿಲ್ಲ, ಶಾಕ್ ಆಯ್ತು: ಅಭಿಷೇಕ್ ಶ್ರೀಕಾಂತ್
BBK 12: ರಕ್ಷಿತಾ ಶೆಟ್ಟಿ ಆ ರೀತಿ ಮಾಡ್ತಾಳೆ ಅಂತ ಅಂದ್ಕೊಂಡಿರಲಿಲ್ಲ, ಶಾಕ್ ಆಯ್ತು: ಅಭಿಷೇಕ್ ಶ್ರೀಕಾಂತ್
Bigg Boss Kannada Season 12: ಬಿಗ್ ಬಾಸ್ ಮನೆಯಿಂದ ಹೊರಗಡೆ ಬಂದಿರುವ ಅಭಿಷೇಕ್ ಶ್ರೀಕಾಂತ್ ಅವರು ರಕ್ಷಿತಾ ಶೆಟ್ಟಿ ನಡುವಿನ ಬಾಂಧವ್ಯದ ಬಗ್ಗೆ ಮಾತನಾಡಿದ್ದಾರೆ. ರಕ್ಷಿತಾ ಆ ರೀತಿ ಮಾಡಿದ್ದು ಶಾಕ್ ಆಯ್ತು ಎಂದು ಹೇಳಿದ್ದಾರೆ. ಹಾಗಾದರೆ ರಕ್ಷಿತಾ ಏನು ಮಾಡಿದರು?

ಬಾಂಧವ್ಯ ಹೇಗಿತ್ತು?
ನಾಮಿನೇಟೆಡ್ ಟೀಮ್ ಮತ್ತು ನಾನ್ ನಾಮಿನೇಟೆಡ್ ಟೀಮ್ ಅಂತ ಮಾಡಿರುತ್ತಾರೆ. ನಿಮ್ಮನ್ನು ಉಳಿಸಿಕೊಳ್ಳಲು ರಕ್ಷಿತಾ ಶೆಟ್ಟಿ ಒದ್ದಾಡುತ್ತಾರೆ. ನಿಮ್ಮ ನಡುವಿನ ಬಾಂಧವ್ಯ ಹೇಗಿತ್ತು ಎಂದು ಪ್ರಶ್ನೆ ಕೇಳಲಾಗಿತ್ತು.
ದೊಡ್ಡ ಯುದ್ಧ ಮಾಡಿದ್ರು
ಆ ಟೈಮ್‌ನಲ್ಲಿ ರಕ್ಷಿತಾ ಅವರು ಅಭಿಷೇಕ್ ಅವರನ್ನು ಸೇವ್ ಮಾಡೋದಕ್ಕೆ ಒಂದು ದೊಡ್ಡ ಯುದ್ಧವನ್ನೇ ಮಾಡ್ತಾರೆ. ಅವರ ಟೀಮ್‌ನಲ್ಲಿ ಅಭಿಯನ್ನು ಈ ಕಡೆ ಕರ್ಕೊಳ್ಳೋದು ಬೇಡ, ನಾವು ಸುಧಿ ಅವರನ್ನು ಕಳಿಸೋಣ, ರಘುನ ಈ ಕಡೆ ಕರ್ಕೊಳ್ಳೋಣ ಅಂತ ಹೇಳುತ್ತಾರೆ ಎಂದು ಅಭಿಷೇಕ್‌ಗೆ ಪ್ರಶ್ನೆ ಕೇಳಲಾಯ್ತು.
ರಕ್ಷಿತಾಗೆ ಮೆಣಸಿನಕಾಯಿ ಕೊಟ್ಟಿದ್ದೆ
ರಕ್ಷಿತಾ ನನ್ನನ್ನು ಸೇವ್ ಮಾಡುವ ದಿನ ಶಾಕಿಂಗ್ ಆಗಿತ್ತು. ಯಾರು ಹರ್ಟ್ ಮಾಡ್ತಾರೋ ಅವರಿಗೆ ಮೆಣಸಿನಕಾಯಿ ತಿನ್ನಿಸುವ ಚಟುವಟಿಕೆ ಇತ್ತು. ನಾನು ರಕ್ಷಿತಾಗೆ ಮೆಣಸಿನಕಾಯಿ ಕೊಟ್ಟಿದ್ದೆ. ಆದರೆ ರಕ್ಷಿತಾ ನನ್ನ ಸೇವ್ ಮಾಡೋ ಯೋಚನೆ ಮಾಡಿದ್ದಳು ಎಂದು ಅಭಿಷೇಕ್ ಹೇಳಿದ್ದಾರೆ
ಲೈವ್ಲಿ ಲೈವ್ಲಿ ಆಗಿ ಇರ್ತಾಳೆ
ನನಗೆ ನಿಜವಾಗಿಯೂ ರಕ್ಷಿತಾ ಶೆಟ್ಟಿ ಅಂದ್ರೆ ತುಂಬ ಇಷ್ಟ. ಅವಳು ತುಂಬ ಪ್ರೌಢಿಮೆಯಿಂದ ಯೋಚನೆ ಮಾಡ್ತಾಳೆ. ಆಮೇಲೆ ಮನೆಯಲ್ಲಿ ತುಂಬ ಲೈವ್ಲಿ ಲೈವ್ಲಿ ಆಗಿ ಇರ್ತಾಳೆ. ಅವಳು ಏನಾದ್ರೂ ಮಾತಾಡಬೇಕಾ ಖುಷಿಯಿಂದ ಮಾತಾಡ್ತಾಳೆ. ನಾನು ಅವಳ ಬಳಿ ತುಂಬ ವಿಷಯಗಳನ್ನು ಶೇರ್ ಮಾಡ್ಕೊಂಡಿದ್ದೆ. ಎಂಜಾಯ್ ದ ಜರ್ನಿ, ತುಂಬ ಯೋಚನೆ ಮಾಡಬೇಡಿ, ತುಂಬ ರಿಲ್ಯಾಕ್ಸ್ ಆಗಿರಿ, ಎಂಜಾಯ್ ಮಾಡಿ ಅಂತ ಅವಳು ನನಗೆ ಸಲಹೆ ಕೊಡುತ್ತಿದ್ದಳು. ನನಗೆ ಅವಳ ಮೇಲೆ ತುಂಬ ಒಳ್ಳೆಯ ಅಭಿಪ್ರಾಯ ಇತ್ತು ಎಂದಿದ್ದಾರೆ.
ರಕ್ಷಿತಾ ಶೆಟ್ಟಿ ತುಂಬ ಸೆನ್ಸಿಬಲ್
ಮೆಣಸಿನ ಕಾಯಿ ತಿನಿಸೋ ಟಾಸ್ಕ್ ಇತ್ತು. ನಾನು ಮೆಣಸಿನ ಕಾಯಿ ಕೊಟ್ಟೆ ಅಂತ ರಕ್ಷಿತಾ ಸಿಟ್ಟಾಗಿರ್ತಾಳೆ ಎಂದುಕೊಂಡಿದ್ದೆ. ರಾತ್ರಿ ಎಲಿಮಿನೇಶನ್ ಟಾಸ್ಕ್ ಬಂದಾಗ ಅವಳು ನನಗೋಸ್ಕರ ಫೈಟ್ ಮಾಡ್ತಾ ಇರ್ತಾಳೆ ಅಂತ ನಾನು ಅಂದುಕೊಂಡಿರಲಿಲ್ಲ. ರಕ್ಷಿತಾ ಶೆಟ್ಟಿ ತುಂಬ ಸೆನ್ಸಿಬಲ್, ಅವಳು ಫೇವರಿಸಂ ಮಾಡಲ್ಲ, ನಿಮ್ಮ ಜೊತೆನೆ ತುಂಬ ಚೆನ್ನಾಗಿ ಇರ್ತಾಳೆ. ಆದರೆ ಏನಾದರೂ ವಿಷಯ ಬಂದಾಗ ಮಾತಾಡ್ತಾಳೆ, ಆದರೆ ಕಾರಣಗಳನ್ನು ಕೊಡೋಕೆ ಒದ್ದಾಡುತ್ತಾಳೆ. ಮನಸ್ಸಿನಲ್ಲಿ ಏನಿದೆಯೋ ಅದನ್ನು ರಕ್ಷಿತಾ ಹೇಳುತ್ತಾಳೆ. ಅದು ಹೇಗೆ ಹೇಗೆ ಅಂದಾಗ ಅವಳಿಗೆ ಗಾಬರಿ ಆಗುವುದು. ಅವಳು ತುಂಬ ಯೋಚನೆ ಮಾಡಿ ಮಾತಾಡೋದು ಮಾಡಲ್ಲ ಎಂದಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

