- Home
- Entertainment
- TV Talk
- BBK 12: ಅಂಥ ಮಾತಾಡಿದ ರಘು; ರಾತ್ರಿ, ಬೆಳಗ್ಗೆ ಎಂದು ಉಪವಾಸ ಸತ್ಯಾಗ್ರಹ ಮಾಡ್ತಿರೋ ಅಶ್ವಿನಿ ಗೌಡ
BBK 12: ಅಂಥ ಮಾತಾಡಿದ ರಘು; ರಾತ್ರಿ, ಬೆಳಗ್ಗೆ ಎಂದು ಉಪವಾಸ ಸತ್ಯಾಗ್ರಹ ಮಾಡ್ತಿರೋ ಅಶ್ವಿನಿ ಗೌಡ
Bigg Boss Kannada Season 12 Updates: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈ ವಾರ ರಘು ಅವರು ಕ್ಯಾಪ್ಟನ್ ಆಗಿದ್ದಾರೆ. ಪ್ರತಿ ವಾರ ಒಂದಿಲ್ಲೊಂದು ವಿಚಾರದಲ್ಲಿ ಅಶ್ವಿನಿ ಗೌಡ ಹೆಸರು ಕೇಳಿ ಬರುತ್ತಿರುತ್ತದೆ. ಈಗ ಅವರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.

ಕಾಫಿ ಕಪ್ ತೊಳೆಯೋಕೆ ಆಗಲ್ವಾ?
ಅಶ್ವಿನಿ ಗೌಡ ಅವರ ಕಾಫಿ ಕಪ್ ಹಾಗೆಯೇ ಇತ್ತು, ಅದನ್ನು ತೊಳೆದಿರಲಿಲ್ಲ. ಇದನ್ನು ರಘು ಅವರು ಹೇಳಿದ್ದರು. ಆಗ ಅಶ್ವಿನಿ ಗೌಡ ಅವರು, “ಆ ಕಾಫಿ ಕಪ್‌ನಲ್ಲಿ ನನ್ನ ಹೆಸರು ಇದೆ, ನನ್ನ ಕಪ್ ಪಕ್ಕದಲ್ಲಿ ಇಟ್ಟುಕೊಂಡು, ಬೇರೆಯವರು ಅವರ ಕಪ್ ತೊಳೆದುಕೊಳ್ಳಲಿ” ಎಂದು ಹೇಳಿದ್ದರು.
ನನಗೆ ಬೆನ್ನು ನೋವಿದೆ
ಈ ವಿಚಾರವಾಗಿ ರಘು ಹಾಗೂ ಅಶ್ವಿನಿ ಗೌಡ ಮಧ್ಯೆ ಜಗಳ ನಡೆದಿತ್ತು. ಅಶ್ವಿನಿ ಮಾತು ರಘುಗೆ ಸಿಟ್ಟು ತರಿಸಿತ್ತು. ನನಗೆ ಬೆನ್ನು ನೋವಿದೆ, ಆಮೇಲೆ ಮಾಡ್ತೀನಿ ಎಂದು ಹೇಳುತ್ತಾರೆ. ಹತ್ತು ನಿಮಿಷದಲ್ಲಿ ನೋವು ಹೋಗತ್ತಾ ಎಂದು ರಘು ಪ್ರಶ್ನೆ ಮಾಡಿದ್ದರು.
ನೀವು ಎಂಥ ದಬ್ಬಾಕಿದ್ದೀರಾ?
ಹತ್ತು ನಿಮಿಷದಲ್ಲಿ ನೋವು ಹೋಗತ್ತಾ ಎಂದು ಪ್ರಶ್ನೆ ಮಾಡಿದಾಗ ಅಶ್ವಿನಿಗೆ ಟ್ರಿಗರ್ ಆಗತ್ತೆ ಎಂದು ಜಾಹ್ನವಿ ಹೇಳಿದ್ದಾರೆ. “ನೀವು ಎಂಥ ದಬ್ಬಾಕಿದ್ದೀರಾ ಎಂದು ಹೇಳಿದಾಗ ಅವರಿಗೆ ಬೇಸರ ಆಗತ್ತೆ ಸರ್” ಎಂದು ರಕ್ಷಿತಾ ಅವರು ರಘುಗೆ ಬುದ್ಧಿ ಹೇಳಿದ್ದಾರೆ.
ಬಿಗ್ ಬಾಸ್ ಮನೇಲಿ ಊಟ ಮಾಡಲ್ವಾ?
ಅಶ್ವಿನಿ ಗೌಡ ಅವರು ನಿನ್ನೆ ರಾತ್ರಿಯೂ ಊಟ ಮಾಡಿಲ್ಲ, ಈಗಲೂ ಊಟ ಮಾಡಿಲ್ಲ ಎಂದು ಜಾಹ್ನವಿ ಅವರು ಹೇಳಿದ್ದಾರೆ. “ಹೆಸರು ಕರೆದರೂ ಅವರಿಗೆ ಬೇಸರ ಆಗತ್ತಾ?” ಎಂದು ರಘು ಹೇಳಿದ್ದಾರೆ. “ಬಿಗ್ ಬಾಸ್ ಮನೆಯಲ್ಲಿರುವಷ್ಟು ದಿನ ಊಟ ಮಾಡಲ್ವಾ?” ಎಂದು ಧ್ರುವಂತ್ ಪ್ರಶ್ನೆ ಮಾಡಿದ್ದಾರೆ.
ನನಗೆ ನಾನು ಸ್ಟ್ಯಾಂಡ್ ತಗೋಬೇಕು
“ನನ್ನ ವಯಸ್ಸಿಗೆ, ನನ್ನ ಪ್ರೌಢಿಮೆಗೆ ಈ ಥರದ ಅವಮಾನ ಸಹಿಸೋಕೆ ಆಗೋದಿಲ್ಲ. ನನ್ನ ಸ್ವಾಭಿಮಾನಕ್ಕೆ ಸಮಸ್ಯೆ ಆದರೆ ಊಟ ಮಾಡೋಕೆ ಮನಸ್ಸು ಬರತ್ತೆ. ನನಗೆ ನಾನು ಸ್ಟ್ಯಾಂಡ್ ತಗೋಬೇಕು” ಎಂದು ಅಶ್ವಿನಿ ಗೌಡ ವಾದ ಮಾಡಿದ್ದಾರೆ.
ಊಟ ಬಿಟ್ಟವರು ಇದ್ದಾರೆ
ಬಿಗ್ ಬಾಸ್ ಮನೆಯಲ್ಲಿ ಸಿಟ್ಟು ಬಂದು, ಬೇಸರ ಆಗಿ ಊಟ ಬಿಟ್ಟವರು ಇದ್ದಾರೆ. ಈಗ ಅಶ್ವಿನಿ ಗೌಡ ಕೂಡ ಅದೇ ಹಾದಿ ಹಿಡಿದಿದ್ದಾರೆ. ಇವರನ್ನು ಯಾರು ಮನಸ್ಸು ಒಲಿಸುತ್ತಾರೆ? ರಘು ಕ್ಷಮೆ ಕೇಳುತ್ತಾರಾ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

