- Home
- Entertainment
- TV Talk
- BBK 12: ಆಗ ಕಿಚ್ಚ ಸುದೀಪ್ ಹೇಳಿದ್ರೂ ಕೇಳಲಿಲ್ಲ; ಈಗ ಗಿಲ್ಲಿ ನಟ ಶರಣಾಗುವಂತೆ ಮಾಡಿದ ರಕ್ಷಿತಾ ಶೆಟ್ಟಿ
BBK 12: ಆಗ ಕಿಚ್ಚ ಸುದೀಪ್ ಹೇಳಿದ್ರೂ ಕೇಳಲಿಲ್ಲ; ಈಗ ಗಿಲ್ಲಿ ನಟ ಶರಣಾಗುವಂತೆ ಮಾಡಿದ ರಕ್ಷಿತಾ ಶೆಟ್ಟಿ
Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ಈಗ ರಕ್ಷಿತಾ, ಧ್ರುವಂತ್ ಅವರು ಮನೆಯೊಳಗಡೆ ಬಂದು, ಇಡೀ ಮನೆಯನ್ನು ಗಲೀಜು ಮಾಡಿದ್ದಾರೆ. ಈಗ ಮನೆಯಲ್ಲಿದ್ದವರು ಮನೆಯನ್ನು ಕ್ಲೀನ್ ಮಾಡಬೇಕಿದೆ.

ಗಲೀಜು ಮಾಡಬೇಕು
ಮನೆಯನ್ನು ಕ್ಲೀನ್ ಮಾಡೋಕೆ ಆಗೋದಿಲ್ಲ, ಅಷ್ಟರಮಟ್ಟಿಗೆ ಗಲೀಜು ಮಾಡಬೇಕು, ಗಲೀಜು ಏನು ಎಂದು ನಾನು ತೋರಿಸುವೆ ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ. ಇಡೀ ಮನೆಯಲ್ಲಿ ಗಲೀಜು ಮಾಡಲಾಗಿದೆ. ಮನೆಯ ಯಾವ ಮೂಲೆಯನ್ನು ಬಿಟ್ಟಿಲ್ಲ, ಅಷ್ಟರಮಟ್ಟಿಗೆ ಗಲೀಜು ಮಾಡಿದ್ದಾರೆ.
ಲಕ್ಷುರಿ ಟಾಸ್ಕ್ ಯಾಕೆ ಬೇಕು?
ಗಲೀಜು ಕ್ಲೀನ್ ಮಾಡಿದರೆ ಮಾತ್ರ ಲಕ್ಷುರಿ ಟಾಸ್ಕ್ ಸಿಗುವುದು. ಈ ಮನೆ ಗಲೀಜು ಆಗಿದ್ದು ನೋಡಿ ಇಡೀ ಮನೆಯವರು ಕಂಗಾಲಾಗಿದ್ದಾರೆ, ಗಿಲ್ಲಿಯೇ ಕೆಲಸ ಮಾಡಲು ಮುಂದಾಗಿದ್ದಾರೆ. ಲಕ್ಷುರಿ ಟಾಸ್ಕ್ ಸಿಕ್ಕಿದರೆ ಮಾತ್ರ ಮನೆಯಲ್ಲಿದ್ದವರಿಗೆ ಚಿಕನ್, ಮಠನ್, ಬ್ರೆಡ್, ತುಪ್ಪ, ಕಾಫಿ ಪುಡಿ ಇತ್ಯಾದಿ ಸಿಗುವುದು.
ಸೋಂಭೇರಿತನ ತೋರಿಸಿದ್ದರು
ಗಿಲ್ಲಿ ನಟನ ಬಳಿ ಕೆಲಸ ಮಾಡಿಸಬೇಕು ಎಂದು ಇಡೀ ಮನೆಯವರು ಹರಸಾಹಸ ಮಾಡಿದ್ದರು. ಯಾರು ಏನೇ ಹೇಳಲಿ, ಕಿಚ್ಚ ಸುದೀಪ್ ಹೇಳಿದರೂ ಕೂಡ ಗಿಲ್ಲಿ ನಟ ಕೆಲಸ ಮಾಡಿರಲಿಲ್ಲ, ಸೋಂಭೇರಿತನ ತೋರಿಸಿದ್ದರು. ಆದರೆ ಈಗ ಗಿಲ್ಲಿ ನಟ ಕೆಲಸ ಮಾಡುತ್ತಿರುವುದು ಕಾಣಿಸುತ್ತಿದೆ.
ವಂಶದ ಕುಡಿಯಿಂದಲೇ ಸಮಸ್ಯೆ
ಒಟ್ಟಿನಲ್ಲಿ ರಕ್ಷಿತಾ ಶೆಟ್ಟಿ ತನ್ನ ವಂಶದ ಕುಡಿ ಎಂದು ಗಿಲ್ಲಿ ನಟ ಯಾವಾಗಲೂ ಹೇಳಿಕೊಂಡು ತಮಾಷೆ ಮಾಡುತ್ತಿದ್ದರು. ಈಗ ವಂಶದ ಕುಡಿಯಿಂದಲೇ ಅವರಿಗೆ ಸಮಸ್ಯೆ ಬಂದಿದೆ. ಲಕ್ಷುರಿ ಟಾಸ್ಕ್‌ಗೋಸ್ಕರ ಗಿಲ್ಲಿ ನಟ ಅವರು ಕೆಲಸ ಮಾಡುತ್ತಾರೆ. ಒಟ್ಟಿನಲ್ಲಿ ರಕ್ಷಿತಾ ಶೆಟ್ಟಿ ಮಾಡಿದ ಕೆಲಸಕ್ಕೆ ಈಗ ಗಿಲ್ಲಿ ನಟ ಬೆಲೆ ತೆರಬೇಕಿದೆ.
ನಾಲ್ಕು ವಾರ ಇದೆ ಅಷ್ಟೇ
ಅಂದಹಾಗೆ ಬಿಗ್ ಬಾಸ್ ಕನ್ನಡ ಸೀಸನ್ 12 ಮನೆಯಲ್ಲಿ ಇನ್ನು ನಾಲ್ಕು ವಾರಗಳು ಉಳಿದಿವೆ. ಫಿನಾಲೆ ಶುರುವಾಗಲಿದೆ. ಹೀಗಾಗಿ ಎಲ್ಲರೂ ತಮ್ಮ ಅಳಿವು-ಉಳಿವಿಗೋಸ್ಕರ ಒದ್ದಾಡುತ್ತಿದ್ದಾರೆ. ಯಾರು ಈ ಬಾರಿ ಟ್ರೋಫಿ ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

