- Home
- Entertainment
- TV Talk
- BBK 12: ಕಿಚ್ಚ ಸುದೀಪ್ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ
BBK 12: ಕಿಚ್ಚ ಸುದೀಪ್ ಮುಂದೆ ರೇಷ್ಮೆ ಶಾಲಿನಲ್ಲಿ ಹೊಡೆದಂತೆ ಸತ್ಯದರ್ಶನ ಮಾಡಿಸಿದ ಗಿಲ್ಲಿ ನಟ
Bigg Boss Kannada 12: ಮೊನ್ನೆಯಿಂದ ಗಿಲ್ಲಿ ನಟ ಅವರು ಧ್ರುವಂತ್‌ಗೆ, “ನಾ ಕಂಡ ಧ್ರುವಂತ, ಮನೆಯಿಂದ ಹೊರಹೋಗ್ತೀಯ ಜೀವಂತ” ಎಂದು ಹೇಳುತ್ತಿದ್ದರು. ಈಗ ಕಿಚ್ಚ ಸುದೀಪ್ ಅವರು ಸೂಪರ್ ಸಂಡೇ ವಿಥ್ ಸುದೀಪ ಶೋನಲ್ಲಿ ಗಿಲ್ಲಿ ನಟನಿಗೆ ಯಾರ ಮೇಲೆ ಯಾವ ಪುಸ್ತಕ ಬರೆಯುತ್ತೀರಿ ಎಂದು ಪ್ರಶ್ನೆ ಮಾಡಿದ್ದರು.

ಗಿಲ್ಲಿ ನಟ ತೇಜೋವಧೆ ಮಾಡ್ತಾರೆ
ಗಿಲ್ಲಿ ನಟ ಅವರು, “ನಾ ಕಂಡ ಧ್ರುವಂತ್, ನಾಮಿನೇಶನ್ ಬಂದಾಗ ನಾಗವಲ್ಲಿಯಾಗಿ ಬದಲಾಗುತ್ತಾರೆ” ಎಂದು ಹೇಳಿದ್ದಾರೆ. ಇತ್ತೀಚೆಗೆ ಗಿಲ್ಲಿ ಕಂಡರೆ ಧ್ರುವಂತ್‌ಗೆ ಆಗೋದಿಲ್ಲ. ಬೇರೆಯವರನ್ನು ಕೆಳಗಡೆ ಹಾಕಿ ಗಿಲ್ಲಿ ನಟ ಕಾಮಿಡಿ ಮಾಡ್ತಾರೆ, ತೇಜೋವಧೆ ಮಾಡ್ತಾರೆ ಎಂದು ಧ್ರುವಂತ್ ಬೈಯ್ಯುತ್ತಲೇ ಇದ್ದಾರೆ.
ಸೂರಜ್ ಬಿದ್ದಿದ್ದಾರೆ
ಸೂರಜ್ ಅವರು ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದಾರೆ. ರಾಶಿಕಾ ಶೆಟ್ಟಿ ಜೊತೆ ಮಾತ್ರ ಸೂರಜ್ ಕಾಣಿಸಿಕೊಂಡಿದ್ದರು. ಈ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದು, “ಈ ಕಥೆ ನಾಯಕ ಫೂಲ್‌ನಿಂದ ಎದ್ದು ಬರ್ತಾರೆ, ಎದ್ದು ಬಂದಿದೀನಿ ಎಂದು ಅವರು ಅಂದುಕೊಂಡರೆ, ಎಲ್ಲೋ ಬಿದ್ದಿದೀನಿ ಎಂದು ಅವರಿಗೆ ಅರ್ಥ ಆಗ್ತಿಲ್ಲ” ಎಂದಿದ್ದಾರೆ.
ರಘು ಬೆಳ್ಳುಳ್ಳಿ ಸುಲಿತಿದ್ದಾರೆ
ರಘು ಕೂಡ ವೈಲ್ಡ್‌ಕಾರ್ಡ್ ಎಂಟ್ರಿ ಕೊಟ್ಟಿದ್ದರು. ಈ ಬಗ್ಗೆ ಗಿಲ್ಲಿ ನಟ ಮಾತನಾಡಿ, “ರಘು ಅಣ್ಣ ಬಂದಾಗ ಆಕ್ಷನ್, ಮಚ್ಚು, ಲಾಂಗ್ ಎಲ್ಲ ಓಡಾಡ್ತಾವೆ ಎಂದು ನಿರೀಕ್ಷೆ ಮಾಡಿಸಿದೆ. ಆದರೆ ಇವರು ಕಿಚನ್‌ನಲ್ಲಿ ಬೆಳ್ಳುಳ್ಳಿ ಬಿಡಿಸೋದು, ಈರುಳ್ಳಿ ಕಟ್ ಮಾಡೋದು ಕಾಣಿಸ್ತಿದೆ” ಎಂದು ಹೇಳಿದ್ದಾರೆ.
ಗಿಲ್ಲಿ ನಟ ತಿಗಣೆ ಥರ
ಧ್ರುವಂತ್ ಅವರು ಗಿಲ್ಲಿ ನಟನ ಬಗ್ಗೆ ಮಾತನಾಡಿದ್ದು, “ಅವರು ತಿಗಣೆ ಥರ, ಅವರು ಸರ್‌ವೈವ್ ಆಗಬೇಕು ಎಂದಾಗ ಯಾರನ್ನಾದರೂ ಕಚ್ಚಬೇಕು” ಎಂದು ಹೇಳಿದ್ದಾರೆ. ಗಿಲ್ಲಿ ಕಾಮಿಡಿ ಬಗ್ಗೆ ಅನೇಕರು ಬೇಸರ ಹೊರಹಾಕಿದ್ದಾರೆ. ವಾರದಲ್ಲಿ ಏಳೂ ದಿನಗಳ ಕಾಲ ಅವರು ಬೇರೆಯವರನ್ನು ಆಡಿಕೊಂಡು ನಗುತ್ತಾರೆ ಎಂಬ ಆರೋಪವಿದೆ.
ಕಿಚ್ಚ ಸುದೀಪ್ ಏನಂದ್ರು?
ಗಿಲ್ಲಿ ನಟನ ಜೊತೆ ಯಾರಾದರೂ ಕ್ಲೋಸ್ ಆದರೆ ಮನೆಯಲ್ಲಿದ್ದವರಿಗೆ ಆಗೋದಿಲ್ಲ ಎನ್ನೋದನ್ನು ಕಿಚ್ಚ ಸುದೀಪ್ ಅವರೇ ಸ್ಪಷ್ಟನೆ ನೀಡಿದ್ದಾರೆ. ಅಷ್ಟೇ ಅಲ್ಲದೆ ಗಿಲ್ಲಿ ನಟ ಅವರು ಕಾಮಿಡಿ ಬಗ್ಗೆ ಮಾತನಾಡಿದ್ದು, “ನಾನು ಕಾಮಿಡಿ ಮಾಡೋದು ಬೇರೆಯವರಿಗೆ ಇರಿಟೇಟ್ ಆಗಬಹುದು, ಆದರೆ ನನ್ನ ಬಳಿ ಕಾಮಿಡಿ ಮಾಡಿದರೆ ಸ್ಪೋರ್ಟಿವ್ ಆಗಿ ತಗೋತಿನಿ” ಎಂದು ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

