- Home
- Entertainment
- TV Talk
- Bigg Boss Kannada 12: ಗಿಲ್ಲಿ ನಟನ ವಿರುದ್ಧ ತಿರುಗಿ ಬಿದ್ದ ಕಾವ್ಯಾ; ಮಾತಿನ ಮಲ್ಲನಿಗೆ ಮುಳುವು ಆಗಿದ್ದೇನು?
Bigg Boss Kannada 12: ಗಿಲ್ಲಿ ನಟನ ವಿರುದ್ಧ ತಿರುಗಿ ಬಿದ್ದ ಕಾವ್ಯಾ; ಮಾತಿನ ಮಲ್ಲನಿಗೆ ಮುಳುವು ಆಗಿದ್ದೇನು?
ಬಿಗ್‌ಬಾಸ್ ಮನೆಯಲ್ಲಿ ಹಾಸ್ಯ ಕಲಾವಿದ ಗಿಲ್ಲಿ ನಟರ ಮಾತುಗಳು ವಿವಾದ ಸೃಷ್ಟಿಸಿವೆ. ಅಶ್ವಿನಿ ಗೌಡ ಸೇರಿದಂತೆ ಹಲವು ಸ್ಪರ್ಧಿಗಳು, ಗಿಲ್ಲಿಯವರ ವ್ಯಂಗ್ಯದಿಂದ ನೋವಾಗಿದೆ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಯಾಗಿ, ತಾನು ಸತ್ಯವನ್ನೇ ಹಾಸ್ಯದ ಮೂಲಕ ಹೇಳುತ್ತೇನೆ ಎಂದು ಗಿಲ್ಲಿ ನಟ ಸಮರ್ಥಿಸಿಕೊಂಡಿದ್ದಾರೆ.

ಹಾಸ್ಯ ಮಿಶ್ರಿತ ವ್ಯಂಗ್ಯ ಮಾತುಗಳು
ಹಾಸ್ಯ ಕಲಾವಿದ ಗಿಲ್ಲಿ ನಟ ಮಾತುಗಳಿಂದ ನಮಗೆ ನೋವು ಆಗಿದೆ ಎಂದು ಅಶ್ವಿನಿ ಗೌಡ ಸೇರಿದಂತೆ ಹಲವು ಸ್ಪರ್ಧಿಗಳು ಹೇಳಿಕೊಂಡಿದ್ದಾರೆ. ಈ ಕುರಿತು ಇಂದಿನ ಭಾನುವಾರದ ಸಂಚಿಕೆಯಲ್ಲಿ ಮಾತನಾಡಲಾಗಿದೆ. ಸುದೀಪ್ ಅವರ ಮುಂದೆ ಯಾರ ಮಾತುಗಳಿಂದ ನೋವು ಆಗಿದೆ ಎಂಬುದನ್ನು ಸ್ಪರ್ಧಿಗಳು ಹೇಳಿಕೊಂಡಿದ್ದಾರೆ.
ನೋವುಂಟು ಮಾಡುವ ಮಾತುಗಳು
ಬಿಡುಗಡೆಯಾಗಿರುವ ಪ್ರೋಮೋದಲ್ಲಿ ಗಿಲ್ಲಿ ನಟ ವಿರುದ್ಧ ಅಶ್ವಿನಿ ಗೌಡ ತೇಜೋವಧೆಯ ಆರೋಪ ಮಾಡುತ್ತಾರೆ. ಮಾತುಗಳಿಂದ ನನ್ನನ್ನು ಕುಗ್ಗಿಸಬಹುದು ಎಂದು ನನ್ನ ಮೇಲೆ ಆ ತಂತ್ರಗಾರಿಕೆಯನ್ನು ಗಿಲ್ಲಿ ಮಾಡ್ತಾರೆ ಎಂದು ಅಶ್ವಿನಿ ಗೌಡ ಹೇಳುತ್ತಾರೆ. ಒಬ್ಬರನ್ನು ಕೆಳಗೆ ಹಾಕಿಯೇ ಗಿಲ್ಲಿ ನಟ ಕಾಮಿಡಿ ಮಾಡ್ತಾರೆ ಎಂದು ಧನುಷ್ ಸಹ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.
ಗಿಲ್ಲಿ ಬಗ್ಗೆ ಕಾವ್ಯಾ ಮಾತು
ಇನ್ನು ಕಾವ್ಯಾ ಶೈವ ಬಿಗ್‌ಬಾಸ್ ಮನೆಯಲ್ಲಿ ಗಿಲ್ಲಿ ನಟ ಅವರ ಜೊತೆ ಹೆಚ್ಚು ಸಮಯ ಕಳೆಯುತ್ತಿರುತ್ತಾರೆ. ಕಾವ್ಯಾ ಸಹ ಗಿಲ್ಲಿಯ ಮಾತುಗಳಿಂದ ಬೇರೆಯವರಿಗೆ ನೋವು ಆಗುತ್ತೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಗಿಲ್ಲಿ ನಟ ಯಾರದೇ ಹೆಸರು ತೆಗೆದುಕೊಂಡು ರೇಗಿಸಿದಾಗ, ಅದು ಅವರಿಗೆ ವೈಯಕ್ತಿಕವಾಗಿ ನೋವು ಆಗಿರೋದನ್ನು ಗಮನಿಸಿದ್ದೇನೆ ಎಂದು ಹೇಳಿದ್ದಾರೆ.
ಗಿಲ್ಲಿ ನಟ ತಿರುಗೇಟು
ತಮ್ಮ ವಿರುದ್ಧ ಕೇಳಿ ಬಂದ ಆರೋಪಳಿಗೆ ಪ್ರತಿಕ್ರಿಯಿಸಿದ ಗಿಲ್ಲಿ ನಟ, ನಿಮ್ಮ ಬಗ್ಗೆ ಇರೋ ಸತ್ಯವನ್ನು ಕಾಮಿಡಿ ಮೂಲಕ ಹೇಳುತ್ತಿರುತ್ತೇನೆ. ಅದು ಯಾರನ್ನು ಕೆಳಗಿಟ್ಟು ಮಾತನಾಡೋದು ಆಗಲ್ಲ. ಯಾರೋ ಯಾವುದೋ ಮೂಲೆಯಲ್ಲಿ ಕುಳಿತು ಮಾತಾಡರ್ತೀರಾ? ಹೊರಗೆ ಹೋಗಿ ನೋಡಿದ್ಮೇಲೆ ಸತ್ಯ ಗೊತ್ತಾಗುತ್ತದೆ. ಇದ್ದಿದ್ದನ್ನು ಇದ್ದಂತೆ ಹೇಳಿದಾಗ ಅದಕ್ಕೆ ನಿಮಗೆ ಹಾಗೆ ಅನ್ನಿಸಿರಬಹುದು ಎಂದು ಗಿಲ್ಲಿ ನಟ ಎಲ್ಲಾ ಆರೋಪಗಳಿಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: BBK 12: ನಮ್ಮನ್ನು ಹೊಸ ರೀತಿಯಾಗಿ ನೋಡು ಎಂದ ಅಶ್ವಿನಿ ಗೌಡಗೆ ಖಡಕ್ ಮಾತು ಹೇಳಿದ ರಕ್ಷಿತಾ ಶೆಟ್ಟಿ
ಪರ-ವಿರೋಧ ಚರ್ಚೆ
ಇದೇ ಪ್ರೋಮೋದಲ್ಲಿ ಕೆಲ ಸ್ಪರ್ಧಿಗಳು ಅಶ್ವಿನಿ ಗೌಡ, ರಿಷಾ, ಜಾನ್ವಿ ಹೆಸರು ಬರೆದು ಬೋರ್ಡ್ ಹಿಡಿದು ಕುಳಿತಿರೋನ್ನು ಕಾಣಬಹುದಾಗಿದೆ. ಈ ಪ್ರೋಮೋಗೆ ಗಿಲ್ಲಿ ನಟ ಮಾತುಗಳ ಪರ ಮತ್ತು ವಿರೋಧವಾಗಿ ಚರ್ಚೆ ನಡೆಸಲಾಗಿದೆ. ಸದ್ಯ ಈ ಪ್ರೋಮೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಆ ಆಸ್ಪತ್ರೆಯಲ್ಲಿ ಕಣ್ಣು ಕಳ್ಕೊಂಡ ವೃದ್ಧರಿಗೂ, Bigg Boss ಅಶ್ವಿನಿ ಗೌಡಗೂ ಏನು ಸಂಬಂಧ? ಬೂಟ್ ಪಾಲಿಶ್ ಚಳುವಳಿ ಮಾಡಿದ್ರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

