- Home
- Entertainment
- TV Talk
- BBK 12: ಅಣ್ಣ ಅಣ್ಣ ಎಂದು ಕರೆಯುತ್ತಿದ್ದ ತಂಗಿ Rakshitha ಬೆನ್ನಿಗೆ ಚೂರಿ ಹಾಕಿದ್ರ Dhruvanth! ವೀಕ್ಷಕರು ಗರಂ
BBK 12: ಅಣ್ಣ ಅಣ್ಣ ಎಂದು ಕರೆಯುತ್ತಿದ್ದ ತಂಗಿ Rakshitha ಬೆನ್ನಿಗೆ ಚೂರಿ ಹಾಕಿದ್ರ Dhruvanth! ವೀಕ್ಷಕರು ಗರಂ
BBK 12: ಬಿಗ್ ಬಾಸ್ ಮನೆಯಲ್ಲಿ ಜಗಳಗಳು ಹೊಸದೇನಲ್ಲ, ಇತರ ಸ್ಪರ್ಧಿಗಳ ಬಗ್ಗೆ ಹಿಂದಿನಿಂದ ಮಾತನಾಡೋದು ಸಹ ಹೊಸತಲ್ಲ. ಆದರೆ ನನ್ನ ತಂಗಿ ಎನ್ನುತ್ತಿದ್ದ ಧ್ರುವಂತ್ ಇದೀಗ ದಿಢೀರ್ ಬದಲಾಗಿ ರಕ್ಷಿತಾ ಬಗ್ಗೆ ಇತರರ ಬಳಿ ಸುಳ್ಳು ಆರೋಪ ಮಾಡಿದ್ದು, ವೀಕ್ಷಕರು ಕಿಡಿ ಕಾರಿದ್ದಾರೆ.

ಬಿಗ್ ಬಾಸ್ ಕನ್ನಡ
ಬಿಗ್ ಬಾಸ್ ಮನೆಯಲ್ಲಿ ಸದ್ಯ ಹೆಚ್ಚು ಸದ್ದು ಮಾಡುತ್ತಿರುವ ಸ್ಪರ್ಧಿ ಅಂದ್ರೆ ಅದು ರಕ್ಷಿತಾ ಶೆಟ್ಟಿ, ಆಕೆಗೆ ಯಾರಾದರೂ ಸವಾಲು ಹಾಕೋಕೆ ಬಂದ್ರೆ ಸುಮ್ನೆ ಕೂರೋದೆ ಇಲ್ಲ. ಹಾಗಾಗಿಯೇ ದೊಡ್ಮನೆಯಲ್ಲಿ ಎಲ್ಲರ ವಿರೋಧ ಕಟ್ಟಿಕೊಂಡಿದ್ದಾಳೆ ರಕ್ಷಿತಾ. ಆದರೆ ಇದೀಗ ಅಣ್ಣ ಅಣ್ಣ ಎಂದು ಕರೆಯುತ್ತಿದ್ದ ಧ್ರುವಂತ್ ರಕ್ಷಿತಾ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿದ್ದಾನೆ.
ಧ್ರುವಂತ್ ನನ್ನು ಅಣ್ಣ ಎನ್ನುತ್ತಿದ್ದ ರಕ್ಷಿತಾ
ರಕ್ಷಿತಾ ಶೆಟ್ಟಿ ಬಿಗ್ ಬಾಸ್ ಮನೆಯಲ್ಲಿ ಹೆಚ್ಚಾಗಿ ಮಲ್ಲಮ್ಮ ಮತ್ತು ಧ್ರುವಂತ್ ಜೊತೆ ಇರುತ್ತಿದ್ದಳು. ಧ್ರುವಂತ್ ನನ್ನು ಅಣ್ಣ ಅಂತಾನೆ ಕರೆಯುತ್ತಿದ್ದಳು. ರಿಷಾ ಧ್ರುವಂತ್ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಸ್ಟಾಂಡ್ ತೆಗೆದುಕೊಂಡು ಮಾತನಾಡಿದ್ದು ಕೂಡ ಇದೇ ರಕ್ಷಿತಾ. ಆದರೆ ಈಗ ಮಲ್ಲಮ್ಮ ಇಲ್ಲ, ಧ್ರುವಂತ್ ಇನ್ನೊಂದು ಗುಂಪಿನ ಜೊತೆ ಸೇರಿ ರಕ್ಷಿತಾರನ್ನು ಒಬ್ಬಂಟಿಯನ್ನಾಗಿ ಮಾಡಿ, ರಕ್ಷಿತಾ ಬಗ್ಗೆ ಇತರರ ಕಿವಿ ಚುಚ್ಚುದ್ದಾನೆ ಧ್ರುವಂತ್.
ಧ್ರುವಂತ್ ಹೇಳಿದ್ದೇನು?
ರಾತ್ರಿ ಮಲಗುವ ಸಮಯದಲ್ಲಿ ಅಶ್ವಿನಿ, ಜಾಹ್ನವಿ, ಕೋಕ್ರೋಚ್ ಸುಧಿ, ಸೂರಜ್ ಬಳಿ ರಕ್ಷಿತಾ ಕುರಿತು ಮಾತನಾಡಿದ ಧ್ರುವಂತ್, ‘ರಕ್ಷಿತಾ ಮನೆಯಲ್ಲಿ ನಾನೇ ಅಡುಗೆ ಮಾಡ್ತಿನಿ, ನಾನೇ ಪಾತ್ರೆ ತೊಳೆಯುತ್ತೇನೆ ಎಂದು ಮುಂದೆ ಬಂದು ಮಾಡ್ತಾಳೆ. ಆದರೆ ಅದು ಸರಿ ಆಗಿರಲ್ಲ. ಇಡೀ ಮನೆಯನ್ನು ನಾನೇ ನೋಡಿಕೊಳ್ಳೋದು, ರಕ್ಷಿತಾ ಬಿಟ್ಟರೆ ಇಲ್ಲಿ ಯಾರೂ ಇಲ್ಲ ಅನ್ನೋ ಥರ ಆಡ್ತಾಳೆ. ಅವರು ತುಳುವನ್ನು ಸರಿಯಾಗಿ ಮಾತನಾಡಲ್ಲ, ಕನ್ನಡವನ್ನು ಮಾತನಾಡಲ್ಲ.
ಮಂಗಳೂರು ಕಡೆ ಹೀಗೆ ಮಾತನಾಡಲ್ಲವಂತೆ
ಅಷ್ಟೇ ಅಲ್ಲ ರಕ್ಷಿತಾ ಕುರಿತು ಮತ್ತಷ್ಟು ದೂರುಗಳನ್ನು ನೀಡಿದ ಧ್ರುವಂತ್ ಮಂಗಳೂರು ಕಡೆ ಯಾರೂ ಈ ತರ ಮಾತನಾಡಲ್ಲ. ನಾನು ಮೊದಲಿನಿಂದ ಇವಳ ವಿಡೀಯೋ ನೋಡಿದ್ದೇನೆ. ಅವಳಿಕೆ ಕ್ಲೀನ್ ಆಗಿ ಮಾತನಾಡೋಕೆ ಬರುತ್ತೆ. ಅವಳು ಮಾತನಾಡುವ ಸ್ಟೈಲೇ ಅವಳಿಗೆ ಪ್ಲಸ್ ಪಾಯಿಂಟ್. ಅದನ್ನೇ ಬಂಡವಾಳ ಮಾಡಿಕೊಂಡು ಇಲ್ಲಿದ್ದಾಳೆ ಎಂದಿದ್ದಾರೆ ಧ್ರುವಂತ್.
ಡವ್ ಮಾಡ್ತಿದ್ದಾಳೆ ರಕ್ಷಿತಾ
ಇನ್ನು ರಕ್ಷಿತಾ ಮಾಡೋದೆಲ್ಲಾ ಬರಿ ಡವ್, ಯಾರು ಈ ಥರ ನಾಟಕ ಮಾಡ್ಕೊಂಡು, ವಯ್ಯಾರ ಮಾಡ್ಕೊಂಡು ಇರ್ತಾರೆ ಹೇಳಿ. ನಮ್ಮ ಮಂಗಳೂರಿನಲ್ಲಿ ಈ ತರಹ ಯಾರೂ ಇರಲ್ಲ. ಚಿತ್ರವಿಚಿತ್ರವಾಗಿ ವರ್ತಿಸುತ್ತಾಳೆ. ಕ್ಯಾಮೆರಾ ಮುಂದೆ ಸುಮ್ ಸುಮ್ನೆ ಮಾತನಾಡುತ್ತಾಳೆ, ಅಳ್ತಾಳೆ. ಅವಳಿಗೆ ಉಪಯೋಗ ಬಂದ್ರೆ ಯಾರನ್ನಾದ್ರೂ ಯೂಸ್ ಮಾಡಿಕೊಳ್ಳುತ್ತಾಳೆ ಅನ್ನೋದಾಗಿ ಹೇಳಿದ್ದಾನೆ ಧ್ರುವಂತ್.
ಕಿಡಿ ಕಾರಿದ ವೀಕ್ಷಕರು
ಧ್ರುವಂತ್ ಮಾತು ಕೇಳಿ ಬಿಗ್ ಬಾಸ್ ವೀಕ್ಷಕರು ಧ್ರುವಂತ್ ವಿರುದ್ಧ ಕಿಡಿ ಕಾರಿದ್ದು, ರಕ್ಷಿತಾ ಯಾರನ್ನು ಹಚ್ಚಿಕೊಂಡಿದ್ದಳೋ ಅವರ ಬಗ್ಗೆ ಅವರ ಹಿಂದೆ ಮುಂದೆ ಯಾವುದೇ ರೀತಿಯಲ್ಲಿ ನೆಗೆಟಿವ್ ಆಗಿ, ಕೆಟ್ಟದಾಗಿ ಮಾತಾಡಿಲ್ಲ. ಅವಳಿಗೆ ಇಷ್ಟ ಆಗದ ಅವರಿಗೆ ಅವರ ಮುಖಕ್ಕೆ ಹೊಡೆದ ಹಾಗೆ ಮಾತಾಡ್ತಾಳೆ ಅಷ್ಟೇ. ಆದ್ರೆ ಧ್ರುವಂತ್ ಮುಂದೆಯಿಂದ ತಂಗಿ ಎಂದು, ಹೀಗೆ ಹಿಂದೆಯಿಂದ ನರಿಗಳ ಜೊತೆ ಅವಳ ಬಗ್ಗೆ ಮಾತಾಡುವುದು ತಪ್ಪು..he is ಫೇಕ್. ತನ್ನ ಗುಂಡಿಯನ್ನು ತಾನೇ ತೋಡಿಕೊಂಡ, ಎಷ್ಟು ಕೆಟ್ಟ ವ್ಯಕ್ತಿ ಅನ್ನೋದನ್ನು ಪ್ರೂವ್ ಮಾಡಿದ ಎಂದು ಹೇಳುತ್ತಿದ್ದಾರೆ ಜನ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

