- Home
- Entertainment
- TV Talk
- ದೊಡ್ಮನೆಯಲ್ಲಿ ಭರ್ಜರಿ ಲಾಟರಿ ಹೊಡೆದ Rakshita Shetty: ಬಹುದೊಡ್ಡ ಕನಸು ನನಸು ಮಾಡಿದ Bigg Boss!
ದೊಡ್ಮನೆಯಲ್ಲಿ ಭರ್ಜರಿ ಲಾಟರಿ ಹೊಡೆದ Rakshita Shetty: ಬಹುದೊಡ್ಡ ಕನಸು ನನಸು ಮಾಡಿದ Bigg Boss!
ತಮ್ಮ ಮೀನಿನ ಅಡುಗೆಗಳಿಂದಲೇ ಪ್ರಸಿದ್ಧರಾದ ಬಿಗ್‌ಬಾಸ್ ಸ್ಪರ್ಧಿ ರಕ್ಷಿತಾ ಶೆಟ್ಟಿ, ತಮ್ಮ ಬಹುದೊಡ್ಡ ಆಸೆಯನ್ನು ವ್ಯಕ್ತಪಡಿಸಿದ್ದರು. ಇದೀಗ ಬಿಗ್‌ಬಾಸ್, ರಕ್ಷಿತಾ ಅವರ ಈ ಕನಸನ್ನು ನನಸು ಮಾಡಿದೆ. ಏನದು ಕನಸು? ರಕ್ಷಿತಾ ಶೆಟ್ಟಿಗೆ ಲಾಟರಿ ಹೊಡೆದದ್ದೇಕೆ?

ತುಳುನಾಡಿನ ಕಣ್ಮಣಿ
ತುಳುನಾಡಿನ ಕಣ್ಮಣಿ ಎಂದೇ ಬಿಗ್ಬಾಸ್ನಲ್ಲಿ ಫೇಮಸ್ ಆಗಿರುವವರು ರಕ್ಷಿತಾ ಶೆಟ್ಟಿ (Bigg Boss Rakshita Shetty). ಅರೆಬರೆ ಕನ್ನಡದಲ್ಲಿ ಮಾತನಾಡುತ್ತಾ, ಕೆಲವೇ ದಿನಗಳಲ್ಲಿ ಅಸಂಖ್ಯ ಅಭಿಮಾನಿಗಳನ್ನು ಯುಟ್ಯೂಬ್ನಲ್ಲಿ ಗಳಿಸಿರುವ ಖ್ಯಾತಿ ಇವರದ್ದು.
ಮೀನಿನ ಅಡುಗೆ ಮೂಲಕ ಫೇಮಸ್
ಅಷ್ಟಕ್ಕೂ ರಕ್ಷಿತಾ ಶೆಟ್ಟಿ ಹೆಚ್ಚು ಫೇಮಸ್ ಆಗಿದ್ದೇ ಮೀನಿನ ಅಡುಗೆಗಳ ಮೂಲಕ. ಮೀನು, ಏಡಿ, ಸೀಗಡಿ ಹೀಗೆ ಸಮುದ್ರದ ಆಹಾರಗಳನ್ನು ತಮ್ಮದೇ ಆದ ರೀತಿಯಲ್ಲಿ ತೋರಿಸುತ್ತಾ, ಅವುಗಳ ಅಡುಗೆ ಮಾಡುತ್ತಾ ಫೇಮಸ್ ಆದವರು ರಕ್ಷಿತಾ ಶೆಟ್ಟಿ.
ಅಡುಗೆಗೇ ಫೇಮಸ್ಸು
ಬಿಗ್‌ಬಾಸ್ (Bigg Boss) ಮನೆಯಲ್ಲಿ ಕೂಡ ಅವರು ಅಡುಗೆಗೇ ಫೇಮಸ್ಸು. ಎಷ್ಟೇ ಸುಸ್ತಾದರೂ ಅಡುಗೆ ಮಾಡಿ ಬಡಿಸುತ್ತಾಳೆ ಎಂದೇ ಬಿಗ್‌ಬಾಸ್ ಮನೆಯಿಂದ ಎಲಿಮಿನೇಟ್ ಆಗಿ ಬಂದವರು ಹೇಳುವುದು ಉಂಟು. ಆದ್ದರಿಂದ ಅಡುಗೆಗೂ ರಕ್ಷಿತಾಗೂ ಎಲ್ಲಿಲ್ಲದ ನಂಟು.
ಮೀನಿನ ಅಡುಗೆ
ಬಿಗ್‌ಬಾಸ್ ಮನೆಯಲ್ಲಿ ಕೆಲವು ದಿನಗಳ ಹಿಂದೆ ಬಹುದೊಡ್ಡ ಆಸೆಯನ್ನು ಅವರು ವ್ಯಕ್ತಪಡಿಸಿದ್ದರು. ಅದೇನೆಂದರೆ ಬಿಗ್ಬಾಸ್ಗೆ ಬಂದಾಗಿನಿಂದಲೂ ಮೀನಿನ ಅಡುಗೆ ತಿಂದಿರಲಿಲ್ಲ ರಕ್ಷಿತಾ. ಇದೇ ಕಾರಣಕ್ಕೆ ಉಳಿದವರೆಲ್ಲರೂ ಬಿಗ್‌ಬಾಸ್ ಗೆಲ್ಲುವುದು ಹೇಗೆ ಎಂದು ಚಿಂತೆ ಮಾಡುತ್ತಿದ್ದರೆ, ರಕ್ಷಿತಾ ಮಾತ್ರ ನನಗೇನಾದರೂ ಒಂದು ವರವನ್ನು ಬಿಗ್‌ಬಾಸ್ ಕೇಳಿದ್ರೆ ಮೀನಿನ ಸಾಂಬಾರ್ ಕೇಳುತ್ತೇನೆ ಎಂದಿದ್ದರು.
ಆಸೆ ನೆರವೇರಿಸಿದ ಬಿಗ್‌ಬಾಸ್
ಇದೀಗ ಆ ಬಹುದೊಡ್ಡ ಆಸೆಯನ್ನು ಬಿಗ್‌ಬಾಸ್ ನೆರವೇರಿಸಿದೆ. ರಕ್ಷಿತಾ ಶೆಟ್ಟಿ ಅವರ ಅಮ್ಮ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದು, ಮೀನಿನ ಅಡುಗೆಯನ್ನು ಮಾಡಿಕೊಂಡು ಬಂದಿದ್ದಾರೆ. ಇದನ್ನು ನೋಡಿ ರಕ್ಷಿತಾ ಕುಣಿದು ಕುಪ್ಪಳಿಸಿದ್ದಾರೆ. ಇದೇ ವೇಳೆ ಮೀನಿನ ಅಡುಗೆಯ ಬಗ್ಗೆ ಯುಟ್ಯೂಬ್ ಚಾನೆಲ್ಗೆ ವ್ಲಾಗ್ ಮಾಡುವಂತೆ ಇಲ್ಲಿಯೂ ಮಾಡಲು ಬಿಗ್‌ಬಾಸ್ ಅವರಿಗೆ ಅವಕಾಶವನ್ನೂ ಕಲ್ಪಿಸಿತು.
ಬಿಗ್‌ಬಾಸ್ ಗೆದ್ದಷ್ಟೇ ಖುಷಿ
ಒಟ್ಟಿನಲ್ಲಿ ಮೀನಿನ ಅಡುಗೆ ತಿಂದ ಮೇಲೆ ರಕ್ಷಿತಾ ಶೆಟ್ಟಿ ಫುಲ್ ಖುಷ್ ಆಗಿದ್ದಾರೆ. ಬಿಗ್‌ಬಾಸ್ ಗೆದ್ದಷ್ಟೇ ಖುಷಿ ಅವರ ಮೊಗದಲ್ಲಿ ಕಾಣಬಹುದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

