- Home
- Entertainment
- TV Talk
- ಈ ದಿನಕ್ಕೋಸ್ಕರ ನಾನು ಇಷ್ಟು ದಿನ ಕಾದಿದ್ದೆ ಎಂದ Bigg Boss ವಿಜೇತ; ಈ ಖುಷಿಗೆ ಯಾರೂ ಕಣ್ ಹಾಕ್ಬೇಡಿ!
ಈ ದಿನಕ್ಕೋಸ್ಕರ ನಾನು ಇಷ್ಟು ದಿನ ಕಾದಿದ್ದೆ ಎಂದ Bigg Boss ವಿಜೇತ; ಈ ಖುಷಿಗೆ ಯಾರೂ ಕಣ್ ಹಾಕ್ಬೇಡಿ!
Bigg Boss Suraj Chavan Marriage Photos: ಬಿಗ್ ಬಾಸ್ ಮರಾಠಿ ಸೀಸನ್ 5 ರ ವಿಜೇತ ಸೂರಜ್ ಚವಾಣ್ ಅವರು ಬಾಲ್ಯದ ಗೆಳತಿ ಸಂಜನಾ ಗೋಫಣೆ ಅವರನ್ನು ಮದುವೆಯಾಗಿದ್ದಾರೆ. ನವೆಂಬರ್ 29, 2025 ಶನಿವಾರ ಮದುವೆಯಾಗಿದೆ. ಈ ಬಗ್ಗೆ ಅವರು ಹೇಳಿದ್ದೇನು?

ಇದು ನನ್ನ ಬಂಧ
ಸೋಶಿಯಲ್ ಮೀಡಿಯಾದಲ್ಲಿ ಸೂರಜ್ ಚವಾಣ್-ಸಂಜನಾ ಮದುವೆಯ ಫೋಟೋಗಳು ವೈರಲ್ ಆಗುತ್ತಿವೆ. ಈ ದಿನಕ್ಕೋಸ್ಕರ ನಾನು ಕಾಯುತ್ತಿದ್ದೆ, ಇದು ನನ್ನ ಬಂಧ ಎಂದು ಸೂರಜ್ ಅವರು ಹೇಳಿದ್ದಾರೆ.
ಎಲ್ಲರಿಂದ ಶುಭಾಶಯ
ಇನ್‌ಸ್ಟಾಗ್ರಾಮ್ ಅಕೌಂಟ್‌ನಲ್ಲಿ ಸೂರಜ್ ಅವರು ಮದುವೆಯ ಸಂಭ್ರಮದ ಝಲಕ್‌ಗಳನ್ನು ಹಂಚಿಕೊಂಡಿದ್ದಾರೆ. ಅನೇಕರು ಈ ಮದುವೆಗೆ ಶುಭಾಶಯ ತಿಳಿಸಿದ್ರೆ, ಇನ್ನೂ ಕೆಲವರು ನೆಗೆಟಿವ್ ಕಾಮೆಂಟ್ ಮಾಡಿದ್ದಾರೆ.
ಬಾಲ್ಯದ ಗೆಳತಿ ಜೊತೆ ಮದುವೆ
'ಝಾಪುಕ್ ಝುಪುಕ್' (Zapuk Zupuk) ಖ್ಯಾತಿಯ ನಟ ಸೂರಜ್ ಚವಾಣ್ ಅವರು ಬಾಲ್ಯದ ಗೆಳತಿ ಸಂಜನಾ ಗೋಫಣೆ ಜೊತೆ ಮದುವೆಯಾಗಿದ್ದಾರೆ. ಈ ಜೋಡಿಯು ಅದ್ದೂರಿಯಾಗಿ ನಿಶ್ಚಿತಾರ್ಥ, ಹಳದಿ ಶಾಸ್ತ್ರ ಮಾಡಿಕೊಂಡಿದೆ. ಹಾಗೆಯೇ ಮದುವೆ ಆಗಿದೆ. ಪುಣೆಯ ಬಳಿ ಈ ಶಾಸ್ತ್ರಗಳು ನಡೆದಿವೆ.
ಬಿಗ್ ಬಾಸ್ ಶೋನಿಂದ ಹಣ
ಸೂರಜ್ ಚವಾಣ್ ಅವರು ಬಿಗ್ ಬಾಸ್ ಮರಾಠಿಯ ಐದನೇ ಸೀಸನ್‌ನಲ್ಲಿ ಭಾಗವಹಿಸಿ ವಿಜೇತರಾಗಿದ್ದರು. ಅವರಿಗೆ 14.6 ಲಕ್ಷ ನಗದು ಬಹುಮಾನ, ₹ 10 ಲಕ್ಷ ರೂ ಮೌಲ್ಯದ ಆಭರಣ ವೋಚರ್, ದ್ವಿಚಕ್ರ ವಾಹನ ಸಿಕ್ಕಿತ್ತು.
ಕಾಮಿಡಿ ಸಿನಿಮಾದಲ್ಲಿ ನಟನೆ
ಬಿಗ್ ಬಾಸ್ ಶೋವನ್ನು ರಿತೇಶ್ ದೇಶ್‌ಮುಖ್ ನಿರೂಪಿಸಿದ್ದರು. ಸೂರಜ್ ಚವಾಣ್ ಅವರು ಇತ್ತೀಚೆಗೆ ಮರಾಠಿಯ ಝಾಪುಕ್ ಝುಪುಕ್ ಎಂಬ ಕಾಮಿಡಿ ಸಿನಿಮಾದಲ್ಲಿ ನಟಿಸಿದ್ದರು. ಕೇದಾರ್ ಶಿಂಧೆ ನಿರ್ದೇಶನದ ಈ ಸಿನಿಮಾವು ಏಪ್ರಿಲ್ 25, 2025 ರಂದು ರಿಲೀಸ್ ಆಯ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

