Bigg Boss ರಕ್ಷಿತಾ ಶೆಟ್ಟಿಯ ಯುಟ್ಯೂಬ್ ಆದಾಯ ಇದೀಗ ರಿವೀಲ್! ಇಷ್ಟು ಸಿಕ್ಕಿದ್ಯಾ?
ಬಿಗ್ಬಾಸ್ ಮನೆಯಲ್ಲಿ ಸದ್ದು ಮಾಡುತ್ತಿರುವ ರಕ್ಷಿತಾ ಶೆಟ್ಟಿ, ತಮ್ಮ ವಿಭಿನ್ನ ಭಾಷಾ ಶೈಲಿಯಿಂದಲೇ ಜನಪ್ರಿಯರಾಗಿದ್ದಾರೆ. ಮುಂಬೈನಲ್ಲಿ ಬೆಳೆದರೂ ಕರಾವಳಿ ಅಡುಗೆ ವಿಡಿಯೋಗಳಿಂದ ಫೇಮಸ್ ಆಗಿರುವ ಅವರ ಯೂಟ್ಯೂಬ್ ಆದಾಯದ ಅಂದಾಜು ಲೆಕ್ಕಾಚಾರದ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

ರಕ್ಷಿತಾ ಶೆಟ್ಟಿ ಹವಾ ಜೋರು
ಸದ್ಯ ಬಿಗ್ಬಾಸ್ನಲ್ಲಿ ರಕ್ಷಿತಾ ಶೆಟ್ಟಿ (Bigg Boss Rakshita Shetty) ಹವಾ ಜೋರಾಗಿಯೇ ಇದೆ. ಇಷ್ಟು ದಿನ ಪ್ರೀತಿ ಗಳಿಸುತ್ತಿದ್ದ ರಕ್ಷಿತಾ ಶೆಟ್ಟಿ ಒಂದೆರಡು ದಿನಗಳಿಂದ ಯಾಕೋ ಎಲ್ಲರ ಅಸಮಾಧಾನಕ್ಕೆ ಗುರಿಯಾಗಿದ್ದಾರೆ. ಅಭಿಷೇಕ್ ಅವರನ್ನ ಸೇವ್ ಮಾಡುವ ಭರದಲ್ಲಿ ರಕ್ಷಿತಾ ಶೆಟ್ಟಿ ರಘು ಅವರನ್ನ ನಾಮಿನೇಟ್ ಮಾಡಿದ್ದರು. ಇದು ಹಲವರ ಅಸಮಅಧಾನಕ್ಕೆ ಗುರಿಯಾಗಿತ್ತು.
ರಕ್ಷಿತಾ ಮೇಲೆ ಕ್ರೇಜ್
ಕೊನೆಗೆ ಕಾವ್ಯ ಶೈವ ಅವರ ಮನವರಿಕೆಯಿಂದ ರಕ್ಷಿತಾ ಶೆಟ್ಟಿ ತಮ್ಮ ತಪ್ಪನ್ನ ಒಪ್ಪಿಕೊಂಡಿದ್ದಾರೆ. ಅದೇನೇ ಇದ್ದರೂ ರಕ್ಷಿತಾ ಮೇಲಿನ ಕ್ರೇಜ್ ವೀಕ್ಷಕರಿಗೆ ಕಡಿಮೆ ಆಗಲ್ಲ ಎನ್ನಿ.
ಹಲವು ಭಾಷೆಗಳ ಮಿಕ್ಸಿಂಗ್
ಅಷ್ಟಕ್ಕೂ ರಕ್ಷಿತಾ ಅವರು, ತುಳು, ಕನ್ನಡ, ಹಿಂದಿ, ಇಂಗ್ಲಿಷ್ ಎಲ್ಲಾ ಮಿಕ್ಸ್ ಮಾಡಿ ಮಾತನಾಡುವುದರಿಂದಲೇಫೇಮಸ್. ಇದೇ ಆಕೆಯನ್ನು ಬಿಗ್ಬಾಸ್ ಮನೆಯವರೆಗೂ ತಂದು ನಿಲ್ಲಿಸಿದೆ. ಮುಂಬೈನಲ್ಲಿ ಬೆಳೆದಿರೋ ಅವರು, ತಮ್ಮ ಕರಾವಳಿ ಊಟದ ವಿಡಿಯೋಗಳಿಗೆ ಹೆಸರುವಾಸಿಯಾಗಿದ್ದಾರೆ.
ಯುಟ್ಯೂಬ್ ಆದಾಯ ಎಷ್ಟು
ಹಾಗಿದ್ದರೆ ರಕ್ಷಿತಾ ಶೆಟ್ಟಿ (Bigg Boss Rakshita Shetty) ಯುಟ್ಯೂಬ್ ಆದಾಯ ಎಷ್ಟು ಎಂದು ತಿಳಿಯುವ ಆಸೆ ಹಲವರಿಗೆ ಇದ್ದೇ ಇರುತ್ತದೆ. ನಿಖರವಾಗಿ ಇಂತಿಷ್ಟೇ ಎಂದು ಹೇಳಲು ಆಗದಿದ್ದರೂ, ಅವರ ಫಾಲೋವರ್ಸ್, ವ್ಯೂವ್ಸ್, ಅವರು ಹಾಕಿರುವ ವಿಡಿಯೋಗಳ ಆಧಾರದ ಮೇಲೆ ಇದರ ಲೆಕ್ಕಾಚಾರ ಹಾಕಲಾಗಿದೆ.
119 ವಿಡಿಯೋ
ಪ್ರಶಾಂತ್ ಟಾಕ್ಸ್ ಇನ್ಸ್ಟಾದಲ್ಲಿ ರಕ್ಷಿತಾ ಶೆಟ್ಟಿ ಅವರ ಅಂದಾಜು ಗಳಿಕೆಯ ಬಗ್ಗೆ ವಿವರಣೆ ನೀಡಲಾಗಿದೆ. ಇವರ ಯುಟ್ಯೂಬ್ ಹೆಸರು ರಕ್ಷಿತಾ ಟಾಕ್ಸ್. ಇವರ ಯುಟ್ಯೂಬ್ ಫಾಲೋವರ್ಸ್ 3 ಲಕ್ಷದ 37 ಸಾವಿರ ಮಂದಿ. ಅವರು ಇದುವರೆಗೆ 119 ವಿಡಿಯೋಗಳನ್ನು ಹಾಕಿದ್ದಾರೆ.
390 ಯುಟ್ಯೂಬ್ ಶಾರ್ಟ್ಸ್
ಇದರಲ್ಲಿ 390 ಯುಟ್ಯೂಬ್ ಶಾರ್ಟ್ಸ್ ಹಾಗೂ 803 ಲಾಂಗ್ ಫಾರ್ಮ್ ವಿಡಿಯೋಗಳಿವೆ. ಇವರ ವಿಡಿಯೋಗಳ ಡ್ಯುರೇಷನ್ 20 ರಿಂದ 30- ನಿಮಿಷಗಳು ಇವೆ. ಲೈಫ್ಸ್ಟೈಲ್ ವಿಡಿಯೋ ಹೆಚ್ಚು ಶೇರ್ ಮಾಡುತ್ತಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

