- Home
- Entertainment
- TV Talk
- ದಿವ್ಯಾ ಉರುಡುಗ-ಅರವಿಂದ್ ಕೆಪಿಗೆ ಬಿಗ್‌ಬಾಸ್ ನೀಡಿದ ಕ್ಯೂಟ್ ಶಿಕ್ಷೆ ನೆನಪಿದೆಯಾ? ಚೆಂದದ ವಿಡಿಯೋ ವೈರಲ್
ದಿವ್ಯಾ ಉರುಡುಗ-ಅರವಿಂದ್ ಕೆಪಿಗೆ ಬಿಗ್‌ಬಾಸ್ ನೀಡಿದ ಕ್ಯೂಟ್ ಶಿಕ್ಷೆ ನೆನಪಿದೆಯಾ? ಚೆಂದದ ವಿಡಿಯೋ ವೈರಲ್
Bigg Boss Season 8 Contestant: ಬಿಗ್‌ಬಾಸ್ ಸೀಸನ್ 8 ರಲ್ಲಿ ಅರವಿಂದ್ ಕೆಪಿ ಆಕಸ್ಮಿಕವಾಗಿ ಗಾಜಿನ ಗ್ಲಾಸ್ ಒಡೆದಿದ್ದರು. ಈ ತಪ್ಪಿಗೆ ಬಿಗ್‌ಬಾಸ್ ತುಂಬಾನೇ ಕ್ಯೂಟ್ ಆಗಿರುವ ಶಿಕ್ಷೆಯನ್ನು ನೀಡುದ್ದರು. ಈ ಪ್ರೀತಿಯ ತುಂಟಾಟದ ಶಿಕ್ಷೆಯ ವಿಡಿಯೋ ಇದೀಗ ಮತ್ತೊಮ್ಮೆ ವೈರಲ್ ಆಗುತ್ತಿದೆ.

ಬಿಗ್‌ಬಾಸ್ ಮನೆಯಲ್ಲಿ ನಿಯಮಗಳ ಪಾಲನೆ
ಬಿಗ್‌ಬಾಸ್ ಮನೆಯಲ್ಲಿರುವ ಸ್ಪರ್ಧಿಗಳು ಅಲ್ಲಿಯ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಮನೆಯಲ್ಲಿರುವ ಯಾವುದೇ ಒಂದು ವಸ್ತುವಿಗೆ ಹಾನಿಯಾದರೂ ಬಿಗ್‌ಬಾಸ್ ಶಿಕ್ಷೆ ನೀಡುತ್ತಾರೆ. ಸೀಸನ್ 12ರ ಸ್ಪರ್ಧಿಯಾಗಿರುವ ಚಂದ್ರಪ್ರಭ ಇಂದು ಕೋಪದಲ್ಲಿ ಗಾಜಿನ ಗ್ಲಾಸ್ ಒಡೆದು ಹಾಕಿದ್ದಾರೆ. ಈ ಕುರಿತ ಪ್ರೋಮೋ ಬಿಡುಗಡೆಯಾಗುತ್ತಿದ್ದಂತೆ ಸೀಸನ್ 8ರ ಚಿಕ್ಕ ತುಣುಕು ಮುನ್ನಲೆಗೆ ಬಂದಿದೆ.
ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ
ಪ್ರತಿ ಸೀಸನ್‌ನಲ್ಲಿಯೂ ಜೋಡಿಯೊಂದು ಗಮನ ಸೆಳೆದಿರುತ್ತದೆ. ಈ ರೀತಿ ಎಲ್ಲರ ಗಮನ ಸೆಳೆದು ಮೆಚ್ಚುಗೆ ಪಾತ್ರವಾಗಿದ್ದು ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಜೋಡಿ. ಇಂದಿಗೂ ಜೊತೆಯಾಗಿಯೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ದಿವ್ಯಾ ಮತ್ತು ಅರವಿಂದ್ ಕಾಣಿಸಿಕೊಳ್ಳುತ್ತಿರುತ್ತಾರೆ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ದಿವ್ಯಾ ಉರುಡುಗ ನಟಿಸುತ್ತಿದ್ದ 'ನಿನಗಾಗಿ' ಸೀರಿಯಲ್ ಇತ್ತೀಚೆಗಷ್ಟೆ ಮುಕ್ತಾಯವಾಗಿದೆ.
ಬಿಗ್‌ಬಾಸ್ ಕ್ಯೂಟ್ ಶಿಕ್ಷೆ
ಬಿಗ್‌ಬಾಸ್ ಸೀಸನ್ 8ರಲ್ಲಿ ಅರವಿಂದ್ ಕೆಪಿ ಆಕಸ್ಮಿಕವಾಗಿ ಮನೆಯಲ್ಲಿರುವ ಗಾಜಿನ ಗ್ಲಾಸ್ ಒಡೆದಿರುತ್ತಾರೆ. ಅರವಿಂದ್ ಕೆಪಿ ಮಾಡಿರುವ ಈ ತಪ್ಪಿಗೆ ಬಿಗ್‌ಬಾಸ್ ಕ್ಯೂಟ್ ಶಿಕ್ಷೆಯನ್ನು ನೀಡಿರುತ್ತಾರೆ. ಈ ಶಿಕ್ಷೆಯನ್ನು ಮನೆ ಮಂದಿಯೆಲ್ಲಾ ಎಂಜಾಯ್ ಮಾಡಿರುತ್ತಾರೆ. ಇದೀಗ ಈ ಶಿಕ್ಷೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಶಿಕ್ಷೆಯಲ್ಲಿ ಪ್ರೀತಿಯ ತುಂಟಾಟ
ಅರವಿಂದ್ ಮಾಡಿರುವ ತಪ್ಪಿಗೆ ಶಿಕ್ಷೆ ನೀಡಲು ಬಿಗ್‌ಬಾಸ್ ಪುಟಾಣಿ ಕಪ್ ಕಳುಹಿಸುತ್ತಾರೆ. ಮುಂದಿನ ಆದೇಶದವರೆಗೂ ಅರವಿಂದ್ ನೀರು ಕುಡಿಯಲು ಈ ಸ್ಮಾಲ್ ಕಪ್ ಬಳಸಬೇಕೆಂದು ಬಿಗ್‌ಬಾಸ್ ಸೂಚಿಸುತ್ತಾರೆ. ಇದಕ್ಕೆ ಅರವಿಂದ್ ಸಹ ಒಪ್ಪಿಕೊಳ್ಳುತ್ತಾರೆ. ಈ ಶಿಕ್ಷೆಯ ಪ್ರಮಾಣ ಇಲ್ಲಿಗೆ ಕಡಿಮೆಯಾಗಲ್ಲ, ಮುಂದುವರಿಯುತ್ತದೆ.
ಇದನ್ನೂ ಓದಿ: ರಾಜಮಾತೆ ಅಶ್ವಿನಿ ಗೌಡಗೆ ಮುಳುವಾಗುತ್ತಾ ಎರಡು ಪದ? ಕ್ಲಾಸ್ ತೆಗೆದುಕೊಳ್ತಾರಾ ಸುದೀಪ್?
ಮುಂದುವರಿದ ಶಿಕ್ಷೆಯ ಪ್ರಮಾಣ
ನಿಮಗೆ ಅರವಿಂದ್ ಅವರಿಗೆ ನೀರು ಕುಡಿಸಲು ಇಷ್ಟವೇ ಎಂದು ದಿವ್ಯಾ ಉರುಡುಗ ಅವರನ್ನು ಬಿಗ್‌ಬಾಸ್ ಪ್ರಶ್ನೆ ಮಾಡುತ್ತಾರೆ. ಇದಕ್ಕೆ ದಿವ್ಯಾ ಉರುಡುಗ, ಹೌದು ಅನ್ನುತ್ತಾರೆ. ಹಾಗಾದ್ರೆ ಮುಂದಿನ ಆದೇಶವರೆಗೆ ಅರವಿಂದ್ ಕೆಪಿ ಅವರಿಗೆ ನೀಡಲಾಗಿರುವ ಸ್ಮಾಲ್ ಕಪ್‌ನಲ್ಲಿ ದಿವ್ಯಾ ನೀರು ಕುಡಿಸಬೇಕು ಎಂದು ಆದೇಶಿಸುತ್ತಾರೆ. ಆ ಸಂಚಿಕೆಯಲ್ಲಿ ಇಡೀ ದಿನ ಅರವಿಂದ್ ಮತ್ತು ದಿವ್ಯಾ ಜೋಡಿ ತೆರೆಯ ಮೇಲೆ ಕ್ಯೂಟ್ ಆಗಿ ಕಾಣಿಸಿತ್ತು.
ಇದನ್ನೂ ಓದಿ: ಅಸುರನ ಹುಚ್ಚು ಬಿಡಿಸಿದ ಬಿಗ್ ಮನೆಯ ಪುಟ್ಟಿ: ಯಾವಳ್ಯಾವಳು ನಾಯಿ ಅಂದಿದ್ದು? ಅಶ್ವಿನಿ ಗೌಡ ಕೆಂಡ
ವೈರಲ್ ಆಗಿರುವ ವಿಡಿಯೋ ನೋಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
https://www.instagram.com/reel/DPOFJa-ks-H/?igsh=M21rdTdwNnpxam5i
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

