- Home
- Entertainment
- TV Talk
- ಏನಿಲ್ಲ, ಏನಿಲ್ಲ... ಎನ್ನುತ್ತಲೇ ಹೀಗೆ ಮಾಡಿದ Bigg Boss ಐಶ್ವರ್ಯ ಸಿಂಧೋಗಿ- ಶಿಶಿರ್ ಶಾಸ್ತ್ರಿ ಜೋಡಿ
ಏನಿಲ್ಲ, ಏನಿಲ್ಲ... ಎನ್ನುತ್ತಲೇ ಹೀಗೆ ಮಾಡಿದ Bigg Boss ಐಶ್ವರ್ಯ ಸಿಂಧೋಗಿ- ಶಿಶಿರ್ ಶಾಸ್ತ್ರಿ ಜೋಡಿ
ಬಿಗ್ ಬಾಸ್ ಕನ್ನಡ ಸೀಸನ್ 11ರ ನಂತರವೂ ತಮ್ಮ ಸ್ನೇಹವನ್ನು ಮುಂದುವರೆಸಿರುವ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ ಅವರ ಮದುವೆಯ ಬಗ್ಗೆ ಅಭಿಮಾನಿಗಳಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಮದುವೆಯ ಬಗ್ಗೆ ಸ್ಪಷ್ಟನೆ ನೀಡದ ಈ ಜೋಡಿ, ಈಗ ಮತ್ತೊಮ್ಮೆ ಸುದ್ದಿಯಲ್ಲಿದೆ.

ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರಿ
ಬಿಗ್‌ಬಾಸ್ ಮನೆಯಲ್ಲಿ ಲವ್, ರೊಮಾನ್ಸ್ ಅಲ್ಲಿಂದ ಹೊರಕ್ಕೆ ಬರುತ್ತಿದ್ದಂತೆಯೇ ಕಿತ್ತಾಟ, ನಾನ್ಯಾರೋ ನೀನ್ಯಾರೋ ಎಂದುಕೊಳ್ಳುವುದೆಲ್ಲ ಸರ್ವೇ ಸಾಮಾನ್ಯ. ಇದು ಎಲ್ಲಾ ಭಾಷೆಗಳ ಬಿಗ್‌ಬಾಸ್‌ನಲ್ಲಿ ಕೇಳಿ ಬರುವುದೇ. ಆದರೆ ಹಾಗೆ ಮಾಡದೇ ʼಬಿಗ್ ಬಾಸ್ ಕನ್ನಡ ಸೀಸನ್ 11 ರಿಂದ ಹೊರಕ್ಕೆ ಬಂದ ಮೇಲೂ ಅದೇ ರೀತಿ ಫ್ರೆಂಡ್‌ಷಿಪ್ ಉಳಿಸಿಕೊಂಡವರು ಐಶ್ವರ್ಯ ಸಿಂಧೋಗಿ (Aishwarya Sindhogi) ಮತ್ತು ಶಿಶಿರ್ ಶಾಸ್ತ್ರಿ (Shishir Shastry)
ಸಾಕಷ್ಟು ಬಾರಿ ಜೊತೆ
ಈ ಜೋಡಿ ಹೊರಗಡೆ ಸಾಕಷ್ಟು ಬಾರಿ ಕಾಣಿಸಿಕೊಂಡಿದ್ದರಿಂದ, ಜೊತೆಗೆ ಒಟ್ಟಾಗಿ ಧರ್ಮಸ್ಥಳಕ್ಕೂ ಹೋಗಿ ಬಂದಿದ್ದರಿಂದ ಇವರಿಬ್ಬರ ಬಾಂಡಿಂಗ್ ಬೇರೆಯದ್ದೇ ಹೇಳುತ್ತಿದೆ ಎಂದು ಸಕತ್ ಚರ್ಚೆಯಾಗಿತ್ತು. ಇವರಿಬ್ಬರೂ ನಿಜ ಜೀವನದಲ್ಲಿ ಒಂದಾಗಲಿ, ಮದುವೆಯಾಗಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದರು. ಅದೇ ರೀತಿ, ಇವರಿಬ್ಬರ ಸ್ನೇಹ ಗಟ್ಟಿಯಾಗುತ್ತಲೇ ಸಾಗಿದೆ.
ಮದುವೆಯ ಬಗ್ಗೆ ಮಾತನಾಡದ ಜೋಡಿ
ಆದರೆ ಇದುವರೆಗೂ ಅವರು ತಮ್ಮ ಮದುವೆಯ ಬಗ್ಗೆ ಮಾತನಾಡಿರಲಿಲ್ಲ. ಮದುವೆಯ ಬಗ್ಗೆ ಪ್ರಶ್ನೆ ಕೇಳಿದ್ದ ಸಂದರ್ಭದಲ್ಲಿ, ಅವರು, ನಮಗಿಬ್ಬರಿಗೂ ಸಾಕಷ್ಟು ಮದುವೆ ಪ್ರಪೋಸಲ್ ಬಂದಿವೆ. ನಾವಿಬ್ಬರೂ ಬ್ಯುಸಿನೆಸ್ ಪಾರ್ಟನರ್ ಆಗಬಹುದು ಅಷ್ಟೇ, ಆದರೆ ಸಂಗಾತಿಗಳಾಗಲ್ಲ ಎಂದು ಸ್ಪಷ್ಟನೆ ನೀಡಿದ್ದರು. ಹೀಗಾಗಿ ಈ ಮೂಲಕ ನಾವು ಪ್ರೇಮಿಗಳಲ್ಲ, ಮದುವೆ ಆಗಲ್ಲ ಎಂದಿದ್ದರು.
ಏನಿಲ್ಲ ಏನಿಲ್ಲ ಎನ್ನುತ್ತಿದ್ದಾರೆ
ಕೆಲವು ದಿನಗಳ ಹಿಂದೆ ನೀಡಿದ್ದ ಸಂದರ್ಶನದಲ್ಲಿ ಈ ಜೋಡಿ ಸ್ವಲ್ಪ ಭಿನ್ನ ಪ್ರತಿಕ್ರಿಯೆ ಕೊಟ್ಟಿತ್ತು. ನಮ್ಮ ಅಭಿಮಾನಿಗಳು ಸದಾ ಮದುವೆಯ ಬಗ್ಗೆ ಕೇಳುತ್ತಿರುತ್ತಾರೆ. ನಿಮ್ಮನ್ನು ನೋಡಿದರೆ ತುಂಬಾ ಖುಷಿಯಾಗುತ್ತದೆ. ಯಾವಾಗ ಗುಡ್‌ನ್ಯೂಸ್ ಕೊಡುತ್ತೀರಿ ಎಂದು ಪ್ರಶ್ನಿಸುತ್ತಿರುತ್ತಾರೆ, ಆದರೆ ಸದ್ಯ ಏನಿಲ್ಲಾ ಎಂದಿದ್ದರು.
ಬೇಗ ಅನ್ನಿಸತ್ತೆ
ಇದಕ್ಕೆ ಉತ್ತರ ಕೊಡುವುದು ತುಂಬಾ ಬೇಗ ಆಯ್ತು ಅನಿಸತ್ತೆ ಎನ್ನುವ ಮೂಲಕ ಮದುವೆ ಆಗುವ ಛಾನ್ಸ್ ಇರುವ ಬಗ್ಗೆ ಪರೋಕ್ಷವಾಗಿ ನುಡಿದಿದ್ದಾರೆ. ಶಿಶಿರ್ ಹೇಳಿದ್ದು ಏನೆಂದರೆ, ಕಾಲಾವೇ ಇದಕ್ಕೆ ಉತ್ತರಿಸುತ್ತದೆ. ಯಾವಾಗ ಏನು ಆಗಬೇಕು ಅದು ಖಂಡಿತ ಆಗುತ್ತದೆ. ಈಗಲೇ ಏನೂ ಆ ಬಗ್ಗೆ ನಾವು ಯೋಚನೆ ಮಾಡಲಿಲ್ಲ. ಹೇಳಿಕೊಳ್ಳುವಂಥ ಕ್ಲಾರಿಟಿಗೆ ನಾವೂ ಬಂದಿಲ್ಲ ಎನ್ನುತ್ತಲೇ ಇದ್ದಾರೆ.
ಹುಟ್ಟುಹಬ್ಬ
ಇದೀಗ ಶಿಶಿರ್ ಅವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಇದಕ್ಕೆ ಐಶ್ವರ್ಯ ಅವರು ಭರ್ಜರಿ ಕೇಕ್ ರೆಡಿ ಮಾಡಿಸಿದ್ದಾರೆ. ಇದನ್ನು ನೋಡಿದರೆ, ಇವರಿಬ್ಬರೂ ಶೀಘ್ರದಲ್ಲಿಯೇ ಮದುವೆಯಾಗುವ ಎಲ್ಲಾ ಲಕ್ಷಣ ಇದೆ ಎನ್ನುತ್ತಿದ್ದಾರೆ ಅಭಿಮಾನಿಗಳು. ಈ ಹಿಂದೆ ಐಶ್ವರ್ಯ ಬರ್ತ್ಡೇಯಲ್ಲಿಯೂ ಇವರಿಬ್ಬರೂ ಸಿಕ್ಕಾಪಟ್ಟೆ ಕ್ಲೋಸ್ ಆಗಿದ್ದರು.
ತುಂಬಾ ಬಿಜಿ
ಆದರೆ, ಕೆಲ ದಿನಗಳ ಹಿಂದೆ ಮಾತ್ರ ಈ ಜೋಡಿ, ಸದ್ಯ ನಮ್ಮಿಬ್ಬರ ಕಾನ್‌ಸಂಟ್ರೇಷನ್ ಇರುವುದು ನಮ್ಮ ಕೆಲಸದ ಮೇಲೆ ಇಬ್ಬರೂ ನಮ್ಮ ನಮ್ಮ ಫೀಲ್ಡ್‌ನಲ್ಲಿ ಬಿಜಿ ಆಗಿದ್ದೇವೆ. ನಾವಿಬ್ಬರೂ ಸೇರಿ ಹಲವು ಬ್ರಾಂಡ್‌ಗಳಿಗೆ ಪ್ರಮೋಟ್ ಮಾಡುತ್ತಿದ್ದೇವೆ. ಒಟ್ಟಿಗೇ ಬಿಜಿನೆಸ್ ಶುರು ಮಾಡಿದ್ದೇವೆ. ಆದರೆ ಈಗಲೇ ಮದುವೆಯ ಬಗ್ಗೆ ಏನೂ ಯೋಚಿಸಿಲ್ಲ. ಮುಂದೆ ನೋಡೋಣ ಎಂದಿದ್ದರು. ಆ ಮುಂದೆ ಎಷ್ಟು ವರ್ಷ ಅಂತ ಕೇಳ್ತಿದ್ದಾರೆ ಫ್ಯಾನ್ಸ್.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

