- Home
- Entertainment
- TV Talk
- Bigg Boss Kannada: ಅಶ್ವಿನಿ ಗೌಡ ಮಾತಿಗೆ ಮಾಳು ಕೂದಲಿಗೆ ಬಿತ್ತು ಕತ್ತರಿ! ಈ ವಾರ ಮನೆಯಿಂದ ಹೋಗೋರು ಯಾರು?
Bigg Boss Kannada: ಅಶ್ವಿನಿ ಗೌಡ ಮಾತಿಗೆ ಮಾಳು ಕೂದಲಿಗೆ ಬಿತ್ತು ಕತ್ತರಿ! ಈ ವಾರ ಮನೆಯಿಂದ ಹೋಗೋರು ಯಾರು?
ಬಿಗ್ಬಾಸ್ 74ನೇ ದಿನಕ್ಕೆ ಕಾಲಿಟ್ಟಿದ್ದು, ಟಾಸ್ಕ್ಗಳು ತೀವ್ರಗೊಂಡಿವೆ. ಅಶ್ವಿನಿ ಗೌಡ ಅವರ ಸಲಹೆಯಂತೆ, ಟಾಸ್ಕ್ವೊಂದರ ಭಾಗವಾಗಿ ಸ್ಪರ್ಧಿ ಮಾಳು ಅವರ ಕೂದಲಿಗೆ ಕತ್ತರಿ ಬಿದ್ದಿದೆ. ಈ ವಾರ ಏಳು ಮಂದಿ ನಾಮಿನೇಟ್ ಆಗಿರುವ ನಡುವೆಯೇ ಮಾಳು ಅವರ ಈ ಹೊಸ ಲುಕ್ ಗಮನ ಸೆಳೆದಿದೆ.

ಟಾಸ್ಕ್ಗಳ ಭರಾಟೆ
ಬಿಗ್ಬಾಸ್ನಲ್ಲಿ ಇದೀಗ ಟಾಸ್ಕ್ಗಳ ಭರಾಟೆ ಜೋರಾಗಿ ನಡೆಯುತ್ತಿದೆ. ಇದಾಗಲೇ ಬಿಗ್ಬಾಸ್ 74ನೇ ದಿನಕ್ಕೆ ಕಾಲಿಟ್ಟಿದ್ದು, ಇನ್ನು ಷೋ ಮುಗಿಯಲು ಕೆಲವೇ ದಿನಗಳು ಬಾಕಿ ಇವೆ. ಇಂಥ ಸಂದರ್ಭದಲ್ಲಿ ಯಾರೂ ಮನೆಯಿಂದ ಹೊರಕ್ಕೆ ಹೋಗಲು ಇಷ್ಟ ಪಡುವುದಿಲ್ಲ. ತಮ್ಮ ಉಳಿವಿಗಾಗಿ ಶ್ರಮಿಸುತ್ತಲೇ ಇದ್ದಾರೆ.
ಏಳು ಮಂದಿ ನಾಮಿನೇಟ್
ಈ ವಾರ ಗಿಲ್ಲಿ ನಟ, ರಜತ್, ಧ್ರುವಂತ್, ರಕ್ಷಿತಾ, ಸ್ಪಂದನಾ, ಅಶ್ವಿನಿ, ರಾಶಿಕಾ ಮನೆಯಿಂದ ಹೊರಕ್ಕೆ ಹೋಗುವವರಲ್ಲಿ ನಾಮಿನೇಟ್ ಆಗಿದ್ದಾರೆ. ಈ ಏಳು ಮಂದಿ ಪೈಕಿ ಯಾರು ಔಟ್ ಆಗುತ್ತಾರೋ ಕಾದು ನೋಡಬೇಕಿದೆ.
ಅಶ್ವಿನಿ ಗೌಡ ಸಲಹೆ
ಆದರೆ ಇದರ ನಡುವೆಯೇ ಮಾಳುಗೆ ಹೊಸ ಲುಕ್ ಬಂದಿದೆ. ಅವರ ಕೂದಲಿಗೆ ಕತ್ತರಿ ಬಿದ್ದಿದೆ. ಅಶ್ವಿನಿ ಗೌಡ (Bigg Boss Ashwini Gowda) ಅವರ ಮಾತಿನ ಮೇರೆಗೆ ಈ ಕಟಿಂಗ್ ಮಾಡಲಾಗಿದೆ.
ಎರಡು ಟೀಮ್
ಇದಾಗಲೇ ಬಿಗ್ಬಾಸ್ ಮನೆಯಲ್ಲಿ, ಟಾಸ್ಕ್ ಸಂಬಂಧ ಎರಡು ಗುಂಪು ಮಾಡಲಾಗಿದೆ. ಒಂದು ರಜತ್ ಟೀಂ ಇನ್ನೊಂದು ಅಶ್ವಿನಿ ಗೌಡ ಟೀಂ, ರಜತ್ ಅವರ ಗುಂಪಿನಲ್ಲಿ ಧನುಷ್, ಗಿಲ್ಲಿ, ಕಾವ್ಯ, ರಘು ಹಾಗೂ ರಾಶಿಕಾ, ಕಾವ್ಯ ಇದ್ದು, ಬಾಕಿ ಇರುವ ಸ್ಪರ್ಧಿಗಳು ಅಶ್ವಿನಿ ಗೌಡ ಗುಂಪಿನಲ್ಲಿ ಇದ್ದಾರೆ.
ಒಂದು ಗುಂಪು ವಿಲನ್
ಒಂದು ಗುಂಪಿನ ಸ್ಪರ್ಧಿಗಳನ್ನು ವಿಲನ್ ಮಾಡಲಾಗಿದೆ. ಅವರು ಈಗ ಇನ್ನೊಂದು ಟೀಮ್ಗೆ ಕಷ್ಟ ಕೊಡಬೇಕಿದೆ. ಕಠಿಣ ಟಾಸ್ಕ್ಗಳನ್ನೂ ನೀಡಬೇಕಿದೆ. ಆದ್ದರಿಂದ ಪರಸ್ಪರ ಎರಡೂ ಟೀಮ್ಗಳು ಜಿದ್ದಿಗೆ ಬಿದ್ದವರಂತೆ ಕಠಿಣ ಟಾಸ್ಕ್ ಕೊಡುತ್ತಿದ್ದಾರೆ.
ಕಾವ್ಯಾ ಕೂದಲಿಗೆ ಬಣ್ಣ
ನಿನ್ನೆ ಕಾವ್ಯಾ ಶೈವ (Bigg Boss Kavya Shaiva) ಅವರ ಕೂದಲಿಗೆ ಬಣ್ಣ ಹಾಕಲಾಗಿದ್ದು, ರಜತ್ಗೆ ಟ್ಯಾಟೂ ಹಾಕಲಾಗಿತ್ತು. ಆದರೆ ಇದೀಗ ಮಾಳು ಅವರ ಕೂದಲು ಕಟ್ ಮಾಡುವಂತೆ ಅಶ್ವಿನಿ ಗೌಡ ಹೇಳಿದ್ದರಿಂದ ಕಟ್ ಮಾಡಲಾಗಿದೆ.
ಹೇಗಿದೆ ಹೊಸ ಲುಕ್?
ಮಾಳು ಹೊಸ ಲುಕ್ ಹೇಗಿದೆ ಎನ್ನುವ ಹೆಸರಿನಲ್ಲಿ ಈ ಪ್ರೊಮೋ ಹಂಚಿಕೊಳ್ಳಲಾಗಿದೆ. ಇದರಲ್ಲಿ ಮಾಳು ಅವರನ್ನು ವಿಶೇಷ ರೀತಿಯಲ್ಲಿ ನೋಡಬಹುದಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

