- Home
- Entertainment
- TV Talk
- Bigg Boss ಮನೆಯಲ್ಲಿರೋ ನಟಿ ವಿರುದ್ಧ FIR: ದೊಡ್ಮನೆಗೆ ಪೊಲೀಸರ ಎಂಟ್ರಿ? ಅರೆಸ್ಟ್ ಆಗ್ತಾರಾ ಸ್ಪರ್ಧಿ?
Bigg Boss ಮನೆಯಲ್ಲಿರೋ ನಟಿ ವಿರುದ್ಧ FIR: ದೊಡ್ಮನೆಗೆ ಪೊಲೀಸರ ಎಂಟ್ರಿ? ಅರೆಸ್ಟ್ ಆಗ್ತಾರಾ ಸ್ಪರ್ಧಿ?
ಹಿಂದಿ ಬಿಗ್‌ಬಾಸ್ 19ರ ಸ್ಪರ್ಧಿ ತಾನ್ಯಾ ಮಿತ್ತಲ್ ವಿರುದ್ಧ ವಂಚನೆ ಆರೋಪದ ಮೇಲೆ ಎಫ್‌ಐಆರ್ ದಾಖಲಾಗಿದೆ. ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಫೈಜಾನ್ ಅನ್ಸಾರಿ ದೂರು ನೀಡಿದ್ದು, ಈ ಹಿನ್ನೆಲೆಯಲ್ಲಿ ತಾನ್ಯಾ ಬಿಗ್‌ಬಾಸ್ ಮನೆಯಿಂದಲೇ ಬಂಧನಕ್ಕೊಳಗಾಗುವ ಸಾಧ್ಯತೆಯಿದೆ.

ಕಾಂಟ್ರವರ್ಸಿ- ಕೇಸ್ ವಿಚಾರ
ಬಿಗ್‌ಬಾಸ್ (Bigg Boss) ಮನೆಗೆ ಪೊಲೀಸರ ಎಂಟ್ರಿ, ಬಿಗ್‌ಬಾಸ್ ಮನೆಗೆ ಸ್ಪರ್ಧಿಗಳು ಹೋಗ್ತಿದ್ದಂತೆಯೇ ಅವರ ವಿರುದ್ಧ ಕೇಸು ದಾಖಲಿಸುವುದು ಕನ್ನಡಕ್ಕೂ ಹೊಸ ವಿಷಯವೇನಲ್ಲ. ಈ ಹಿಂದೆ ಹುಲಿ ಉಗುರು ಪ್ರಕರಣದಲ್ಲಿ ವರ್ತೂರು ಸಂತೋಷ್ ಅವರನ್ನು ಬಿಗ್‌ಬಾಸ್ ಮನೆಯಿಂದಲೇ ನೇರವಾಗಿ ಅರೆಸ್ಟ್ ಮಾಡಿರುವುದು ಗೊತ್ತಿರುವ ವಿಷಯವೇ. ಅದೇ ರೀತಿ ಇದೀಗ ಇನ್ನೋರ್ವ ಸ್ಪರ್ಧಿಯ ವಿರುದ್ಧ ಅರೆಸ್ಟ್ ತೂಗುಗತ್ತಿ ನೇತಾಡುತ್ತಿದೆ. ನಟಿಯೊಬ್ಬಳ ವಿರುದ್ಧ ದೂರು ದಾಖಲಾಗಿದೆ.
ತಾನ್ಯಾ ಮಿತ್ತಲ್ ವಿರುದ್ಧ FIR
ಈ ಸ್ಪರ್ಧಿ Salman Khan ನಡೆಸಿಕೊಡುವ ಹಿಂದಿಯ ಬಿಗ್‌ಬಾಸ್ 19ನಲ್ಲಿ ಸ್ಪರ್ಧಿಸ್ತಿರೋ ಖ್ಯಾತ ನಟಿ ತಾನ್ಯಾ ಮಿತ್ತಲ್. ಈಕೆ ಕಾಂಟ್ರವರ್ಸಿ ಲೇಡಿ ಎನ್ನುವ ಕಾರಣಕ್ಕೇನೇ ಬಿಗ್ಬಾಸ್ನಲ್ಲಿ ಅವಕಾಶ ಸಿಕ್ಕಿರೋದು ಎಂದು ಬೇರೆ ಹೇಳಬೇಕಿಲ್ಲ. ಬಿಗ್‌ಬಾಸ್ ಮನೆಯಲ್ಲಿಯೂ ತಾನ್ಯಾ ಕೆಲವೊಂದು ಬಿಗ್ ಸ್ಟೇಟ್‌ಮೆಂಟ್ ನೀಡುತ್ತಿದ್ದಾರೆ. ಸ್ನಾನ ಮಾಡೋಕೆ ಮುಂಚೆ ಬಾತ್‌ರೂಮ್‌ಗೆ ಏನನ್ನು ತೆಗೆದುಕೊಂಡು ಹೋಗಬೇಕು ಅನ್ನೋದನ್ನೂ ತಿಳಿದಿಲ್ಲದೇ ಇರುವಂತೆ ತೋರಿಸಿಕೊಳ್ಳುತ್ತಿದ್ದಾರೆ.
ಕಾಂಟ್ರವರ್ಸಿ ಲೇಡಿ
ಇನ್ನು ಮಹಾಕುಂಭದಲ್ಲಿ ಬಾಡಿಗಾರ್ಡ್‌ಗಳ ಜೊತೆಗಿನ ಆಕೆಯ ಸುತ್ತಾಟ ವೈರಲ್ ಆಗಿದ್ದವು. ಇಡೀ ಕುಟುಂಬ ನನ್ನನ್ನು ಬಾಸ್ ಎಂದು ಕರೆಯುತ್ತದೆ ಎಂದು ಬಿಗ್ ಬಾಸ್ ಮನೆಯಲ್ಲೇ ಹೇಳಿದ್ದರೆ, ಇನ್ನೊಮ್ಮೆ ತಮ್ಮ ಮನೆ ಯಾವುದೇ 5 ಸ್ಟಾರ್, 7 ಸ್ಟಾರ್ ಹೋಟೆಲ್‌ಗಿಂತ ಚೆನ್ನಾಗಿದೆ. ಮನೆಯಲ್ಲಿ ಒಂದು ಫ್ಲೋರ್ ಇಡೀ ತನ್ನ ಬಟ್ಟೆಗಳಿಗೆ ಮೀಸಲಾಗಿದೆ ಎಂದು ಪುಂಗಿ ಊದಿದ್ದರು. ತಾವು ಗ್ವಾಲಿಯರ್‌ನ ಉದ್ಯಮಿ ಎಂದು ಹೇಳಿಕೊಂಡಿದ್ದಾರೆ ಮತ್ತು ಮಹಾ ಕುಂಭ ಯಾತ್ರೆಯ ನಂತರ ಇಂಟರ್ನೆಟ್‌ನಲ್ಲಿ ವೈರಲ್ ಆಗಿದ್ದಾಗಿ ತಿಳಿಸಿದ್ದರು.
ಫೈಜಾನ್ ಅನ್ಸಾರಿ ದೂರು
ಇದೀಗ ಇವರ ವಿರುದ್ಧ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಫೈಜಾನ್ ಅನ್ಸಾರಿ (influencer Faizan Ansari) ಎನ್ನುವವರು ದೂರು ದಾಖಲು ಮಾಡಿದ್ದಾರೆ. ತಮ್ಮನ್ನು ವಂಚಿಸಿರುವುದಾಗಿ ಅವರು ಆರೋಪಿಸಿದ್ದಾರೆ. ಮನೆಯಲ್ಲಿ ತನ್ನ ಶ್ರೀಮಂತಿಕೆ ಬಗ್ಗೆ ಸುಳ್ಳು ಹೇಳಿದ್ದಾರೆ, ಹಲವರಿಗೆ ವಂಚನೆ ಮಾಡಿದ್ದಾರೆ, ಮತ್ತು ಮಾಜಿ ಗೆಳೆಯನನ್ನು ಜೈಲಿಗೆ ಕಳುಹಿಸಿದ್ದಾರೆ ಎಂದು ತಾನ್ಯ ವಿರುದ್ಧ ಆರೋಪಿಸಲಾಗಿದ್ದು, FIR ದಾಖಲಾಗಿದೆ. ತಾನ್ಯಾ ಬಂಧನಕ್ಕೆ ಫೈಜಾನ್ ಒತ್ತಾಯಿಸಿದ್ದಾರೆ.
ತಾನ್ಯಾ ಬಂಧನ?
ಈ ಹಿನ್ನೆಲೆಯಲ್ಲಿ ತಾನ್ಯಾ ಬಂಧನ ಆಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಪೊಲೀಸರು ಬಿಗ್‌ಬಾಸ್ ಮನೆಯೊಳಕ್ಕೆ ಹೋಗಿಯೇ ಅರೆಸ್ಟ್ ಮಾಡಬಹುದು ಎಂದೂ ಹೇಳಲಾಗುತ್ತಿದೆ. ಆದರೆ ಇದಕ್ಕೂ ಮೊದಲು ಪೊಲೀಸರು ಸತ್ಯಾಸತ್ಯತೆಯನ್ನು ಪರಿಶೀಲಿಸುವ ಅಗತ್ಯವೂ ಇದೆ.
ಮಾಜಿ ಗೆಳೆಯನ ವಿಷ್ಯ ಹೀಗಿದೆ..
ಇನ್ನು ತಾನ್ಯಾ ಅವರ ಮಾಜಿ ಲವರ್ ಬಲರಾಜ್ ಸಿಂಗ್ ಕುರಿತು ಹೇಳುವುದಾದರೆ, ಮೊದಲು ಸಾಮಾಜಿಕ ಮಾಧ್ಯಮದಲ್ಲಿ ಫೋಟೋ ಪೋಸ್ಟ್ ಮಾಡುವ ಮೂಲಕ ತಾನ್ಯಾ ಅವರ ಅಸಲಿ ವಿಚಾರವನ್ನು ಬಹಿರಂಗಪಡಿಸಿದ್ದರು. ಅವರ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದರು. ಅದರಲ್ಲಿ ಅವರು ತಾನ್ಯಾಳೊಂದಿಗೆ ಡೇಟ್ ಮಾಡಿದ್ದಾಗಿ ಹೇಳಿಕೊಂಡರು. ತಾನ್ಯಾ ಜನರನ್ನು ಅಗೌರವಿಸುತ್ತಾರೆ ಮತ್ತು ಅವರು ಬಯಸಿದ್ದನ್ನು ಪಡೆಯುತ್ತಾಳೆ ಎಂದು ಬಲರಾಜ್ ಹೇಳಿದ್ದರು.
ಶ್ರೀಮಂತನ ಮದ್ವೆಯಾಗೋ ಇಷ್ಟವಿಲ್ಲ
ತಮ್ಮ ಮದುವೆಯಾಗುವ ಹುಡುಗನ ಬಗ್ಗೆ ಹೇಳಿದ್ದ ತಾನ್ಯಾ, ನನಗೆ ಶ್ರೀಮಂತ ವ್ಯಕ್ತಿಯನ್ನ ಮದುವೆಯಾಗೋಕೆ ಇಷ್ಟವಿಲ್ಲ. ಇಂದು ನನ್ನ ಬಳಿ ಮೂರು ಕಾರ್ಖಾನೆಗಳಿವೆ. ಬೇಕಾದಷ್ಟು ಹಣ ಇದೆ. ಇಷ್ಟೆಲ್ಲಾ ಇದ್ದ ಬಳಿಕ, ನನಗೋಸ್ಕರ ಮತ್ತೆ ಹಣವನ್ನೇ ದುಡಿಯುವ ವ್ಯಕ್ತಿ ನನಗೆ ಬೇಡ. ಇದು ತಪ್ಪು ಅನಿಸುತ್ತದೆ. ಸ್ವಲ್ಪ ಬದಲಾವಣೆ ಎನ್ನುವಂತೆ, ಮನೆಗೆ ದುಡಿಯಬೇಕು ಅನ್ನೋ ಯೋಚನೆಯೇ ಇಲ್ಲದಂಥ ವ್ಯಕ್ತಿ ಇರಬೇಕು ಎಂದಿದ್ದರು.
ನಾನೇ ಎಲ್ಲಾ ಮಾಡ್ತೇನೆ
ನಾನೇ ದುಡಿದು, ನನ್ನ ಗಂಡನಿಗೆ ನಾನೇ ಅಡುಗೆ ಮಾಡುತ್ತೇನೆ. ಎಲ್ಲಾ ರೀತಿಯ ಮನೆ ಕೆಲಸಗಳೂ ನನಗೆ ಗೊತ್ತಿದೆ. ಫೆಮಿನಿಸಂ ಅನ್ನೋ ಹೆಸರಲ್ಲಿ ನಾವು ಗಂಡಂದಿರರಿಗಿಂತ ಮುಂದೆ ಹೋಗಲು ಪ್ರಾರಂಭ ಮಾಡಿದ್ದೇವೆ. ನನ್ನ ಪ್ರಕಾರ ಇದು ತಪ್ಪು. ಸೀತಾ ಮಾತೆ ಕೂಡ ಭಗವಾನ್ ರಾಮನ ಕಾಲು ಮುಟ್ಟಿ ನಮಸ್ಕಾರ ಮಾಡುತ್ತಿದ್ದರು ಎಂದು ತಾನ್ಯಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

