- Home
- Entertainment
- TV Talk
- Bigg Bossಗೆ ಬಂದ ಚೈತ್ರಾ ಕುಂದಾಪುರ, ರಜತ್ ವಾಪಸ್ ಹೋಗದ ಗುಟ್ಟು ರಟ್ಟಾಗೋಯ್ತು! ಕುಂಟೆಬಿಲ್ಲೆ ಆಟದಲ್ಲಿ ರಿವೀಲ್!
Bigg Bossಗೆ ಬಂದ ಚೈತ್ರಾ ಕುಂದಾಪುರ, ರಜತ್ ವಾಪಸ್ ಹೋಗದ ಗುಟ್ಟು ರಟ್ಟಾಗೋಯ್ತು! ಕುಂಟೆಬಿಲ್ಲೆ ಆಟದಲ್ಲಿ ರಿವೀಲ್!
ಬಿಗ್ ಬಾಸ್ ಸೀಸನ್ 12 ರಲ್ಲಿ ಚೈತ್ರಾ ಕುಂದಾಪುರ ಮತ್ತು ರಜತ್ ಇನ್ನೂ ಮನೆಯಲ್ಲಿದ್ದಾರೆ. ಇತ್ತೀಚಿನ ಪ್ರೊಮೋದಲ್ಲಿ, ಕುಂಟೆಬಿಲ್ಲೆ ಆಟದ ವೇಳೆ ಅವರಿಗೂ ಮತ್ತು ಅಶ್ವಿನಿ ಗೌಡ ಅವರಿಗೂ ನಡೆದ ಜಗಳವನ್ನು ತೋರಿಸಲಾಗಿದೆ. ಈ ಜಗಳದ ಮೂಲಕ, ಇವರಿನ್ನೂ ಯಾಕೆ ಇದ್ದಾರೆ ಎನ್ನುವುದನ್ನು ನೆಟ್ಟಿಗರು ತಿಳಿಸಿದ್ದಾರೆ.

ಚೈತ್ರಾ ಕುಂದಾಪುರ
Bigg Boss 11ರಲ್ಲಿ ಹವಾ ಸೃಷ್ಟಿಸಿದವರಲ್ಲಿ ಒಬ್ಬರು ಚೈತ್ರಾ ಕುಂದಾಪುರ ಮತ್ತು ರಜತ್ ಕಿಶನ್. ಇದೀಗ 12ನೇ ಸೀಸನ್ನಲ್ಲಿಯೂ ಕೆಲವು ಸ್ಪರ್ಧಿಗಳನ್ನು ಬಿಗ್ಬಾಸ್ ಮನೆಗೆ ಕಳುಹಿಸಲಾಗಿದೆ. ಅವರಲ್ಲಿ ಕೆಲವರು ಇದಾಗಲೇ ಹೊರಗಡೆ ಹೋಗಿದ್ದರೆ ಚೈತ್ರಾ ಕುಂದಾಪುರ ಮಾತ್ರ ಇನ್ನೂ ಒಳಗೇ ಇದ್ದಾರೆ.
ಜಾಲತಾಣದಲ್ಲಿ ಪ್ರಶ್ನೆ
ಇವರನ್ನು ಕರೆಸಿಕೊಂಡದ್ದು ಯಾಕೆ, ಕಳೆದ ಬಾರಿ ಇದ್ದರೂ ಇಲ್ಲಿಯವರೆಗೆ ಇವರನ್ನು ಪುನಃ ಇರಿಸಿಕೊಂಡದ್ದು ಯಾಕೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಹಲವರು ಪ್ರಶ್ನೆ ಮಾಡುತ್ತಲೇ ಇದ್ದಾರೆ. ಇದೀಗ ಹೊಸ ಪ್ರೊಮೋ ಒಂದು ರಿಲೀಸ್ ಆಗಿದ್ದು, ಅದರಲ್ಲಿ ನೆಟ್ಟಿಗರೇ ಖುದ್ದು ಉತ್ತರವನ್ನೂ ಕಂಡುಕೊಂಡಿದ್ದಾರೆ!
ಜಟಾಪಟಿ
ಅಷ್ಟಕ್ಕೂ ಈ ಪ್ರೊಮೋದಲ್ಲಿ ಕುಂಟೆಬಿಲ್ಲೆ ಆಟದ ವೇಳೆ ನಡೆದಿರುವ ಜಟಾಪಟಿಯನ್ನು ನೋಡಬಹುದಾಗಿದೆ. ಆಟದ ಉಸ್ತುವಾರಿ ವಹಿಸಿಕೊಂಡಿರುವ ಅಶ್ವಿನಿ ಗೌಡ ಅವರು, ಕುಂಟೆಬಿಲ್ಲೆ ಆಟದಲ್ಲಿ ಯಾರೂ ಯಾರಿಗೂ ಹೇಳಿಕೊಡಬಾರದು ಎಂದು ಚೈತ್ರಾ ಕುಂದಾಪುರ ಅವರಿಗೆ ಆವಾಜ್ ಹಾಕಿದ್ದಾರೆ.
ಚೈತ್ರಾ ತಿರುಗೇಟು
ಅದಕ್ಕೆ ತಿರುಗೇಟು ನೀಡಿರೋ ಚೈತ್ರಾ, ಏನೂ ರೂಲ್ಸ್ ಗೊತ್ತಿಲ್ಲದೇ ಹತ್ತು ಸಲ ಡೌಟ್ ಪಡೋರೆಲ್ಲಾ ನನಗೆ ಹೇಳಿಕೊಡ್ತಾ ಇದ್ದಾರೆ ಎಂದರು. ನನಗೆ ಪಾಠ ಮಾಡೋದು ಬೇಕಾಗಿಲ್ಲ ಎಂದರು.
ಅಶ್ವಿನಿ ಗೌಡ ಗರಂ
ಅದಕ್ಕೆ ಗರಂ ಆದ ಅಶ್ವಿನಿ ಗೌಡ, ಉಸ್ತುವಾರಿಯನ್ನು ಕೇಳುವ ಅಧಿಕಾರ ಪ್ರತಿಯೊಬ್ಬರಿಗೂ ಇದೆ ಎಂದರು. ಇದೇ ವಿಷಯವಾಗಿ ಇಬ್ಬರಿಗೂ ಜಗಳವಾಯ್ತು. ಕೊನೆಗೆ ಮಧ್ಯೆ ಪ್ರವೇಶಿಸಿದ ರಜತ್ ಉರಿಯುವ ಬೆಂಕಿಗೆ ತುಪ್ಪ ಸುರಿದು, ಇಂಥ ಡ್ರಾಮಾಗಳಿಗೆ ಏನೂ ಕೊರತೆ ಇಲ್ಲ ಎಂದರು.
ರಣರಂಗವಾದ ಬಿಗ್ಬಾಸ್
ಇದರಿಂದ ಬಿಗ್ಬಾಸ್ ಮನೆ ಮತ್ತಷ್ಟು ರಣರಂಗವಾಯಿತು. ಇದರ ಪ್ರೊಮೋ ನೋಡಿದವರು ಹೇಳ್ತಿರೋದು ಒಂದೇ. ಈ ಬಾರಿಯ ಬಿಗ್ಬಾಸ್ನಲ್ಲಿ ಜಗಳಕ್ಕಾಗಿಯೇ ಇರೋದು ಅಶ್ವಿನಿ ಗೌಡ ಮಾತ್ರ.
ರಿವೀಲ್ ಆಯ್ತು ಗುಟ್ಟು
ಜಗಳ ಇಲ್ಲದೇ ಬಿಗ್ಬಾಸ್ ಟಿಆರ್ಪಿ ಏರಲ್ಲ. ಅದಕ್ಕಾಗಿಯೇ ಜಗಳಾಕ್ಕಿಯೇ ಫೇಮಸ್ ಎನ್ನಿಸಿರೋ ಚೈತ್ರಾ ಕುಂದಾಪುರ ಮತ್ತು ರಜತ್ ಅವರನ್ನು ಇನ್ನೂ ಇಟ್ಟುಕೊಂಡಿದ್ದಾರೆ ಎನ್ನುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

