- Home
- Entertainment
- TV Talk
- Stylish Actress Bhavya Gowda: ಗೌರಮ್ಮ 'ಗೀತಾ' ಬಟ್ಟೆ ಇಷ್ಟು ತುಂಡ್ಯಾಕಮ್ಮ ಎಂದ ನೆಟ್ಟಿಗರು!
Stylish Actress Bhavya Gowda: ಗೌರಮ್ಮ 'ಗೀತಾ' ಬಟ್ಟೆ ಇಷ್ಟು ತುಂಡ್ಯಾಕಮ್ಮ ಎಂದ ನೆಟ್ಟಿಗರು!
ಸದಾ ಟ್ರೆಡಿಷನ್ ಔಟ್‌ಫಿಟ್‌ನಲ್ಲಿ ಕಾಣಿಸಿಕೊಳ್ಳುವ ಗೀತಾ ಧಾರಾವಾಹಿ ನಟಿ ಭವ್ಯಾ ಗೌಡ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಮಾರ್ಡನ್ ಲುಕ್ ಫೋಟೋ ನೋಡಿ ನೆಟ್ಟಿಗರು ಶಾಕ್ ಆಗಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಗೀತಾ ಧಾರಾವಾಹಿಯಲ್ಲಿ ಗೀತಾ ಪಾತ್ರದಲ್ಲಿ ಭವ್ಯಾ ಗೌಡ ಮಿಂಚುತ್ತಿದ್ದಾರೆ.
ಮಿಡಲ್ ಕ್ಲಾಸ್ ಮನೆ ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಗೀತಾ ಸದಾ ಸೆಲ್ವಾರ್ ಧರಿಸಿ, ಜಡಿ ಹಾಕಿಕೊಂಡು ಹೂವು ಮುಡಿದಿರುತ್ತಾರೆ.
ಸೋಷಿಯಲ್ ಮೀಡಿಯಾದಲ್ಲಿ (Social Media) ಆ್ಯಕ್ಟಿವ್ ಇರುವ ಗೀತಾ ಸಖತ್ ಮಾರ್ಡನ್ ಔಟ್‌ಫಿಟ್‌ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ತೆರೆ ಮೇಲೆ ನೋಡಿರುವ ವ್ಯಕ್ತಿತ್ವವೇ ನಿಜವೆಂದುನಂಬುವ ವೀಕ್ಷಕರು ಭವ್ಯಾ ಮಾರ್ಡನ್ ಲುಕ್ ನೋಡಿ ಶಾಕ್ ಆಗಿದ್ದಾರೆ. ಅಲ್ಲದೆ ಕಾಮೆಂಟ್ ಮಾಡುವ ಮೂಲಕ ಪ್ರಶ್ನಿಸಿದ್ದಾರೆ.
ಅಲ್ಲಮ್ಮಾ ಗೀತಾ ನೀವು ಗೌರಮ್ಮ ರೀತಿ ಟಿವಿಯಲ್ಲಿ ಇರ್ತಿಯಾ, ಇಲ್ಲಿ ನೋಡಿದ್ರೆ ಈ ರೀತಿ ಯಾಕಮ್ಮ ಈ ರೀತಿ ಬಟ್ಟೆ ಹಾಕೋತ್ತೀರಾ ಎಂದು ಕಾಮೆಂಟ್ ಮಾಡಿದ್ದಾರೆ.
ಈ ಹಿಂದೆ ಬಿಗ್ ಬಾಸ್ ಮಿನಿ ಸೀಸನ್‌ನಲ್ಲಿ ಕಾಣಿಸಿಕೊಂಡ ಗೀತಾ, ತಮ್ಮ ಬಟ್ಟೆ ಕಲೆಕ್ಷನ್ ಬಗ್ಗೆ ಮಾತನಾಡಿದ್ದರು. ತಮ್ಮ ಬಳಿ ಸುಮಾರು 3000ಕ್ಕೂ ಬಟ್ಟೆ ಇರುವುದಾಗಿ ಹೇಳಿಕೊಂಡಿದ್ದರು.
ಗೀತಾಗೆ ಒಟ್ಟು ಮೂವರು ಸಹೋದರಿಯರಿದ್ದಾರೆ. ಎಲ್ಲರೂ ತುಂಬಾನೇ ಮಾರ್ಡನ್ ಆಗಿದ್ದಾರೆ. ಎಲ್ಲರೂ ಒಂದು ಸಲ ಧರಿಸಿದ ಬಟ್ಟೆಯನ್ನು ಮತ್ತೊಮ್ಮೆ ಧರಿಸುವುದಿಲ್ಲವಂತೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.