- Home
- Entertainment
- TV Talk
- Gilli Nata: ಬಿಗ್‌ಬಾಸ್‌ನಲ್ಲಿ ಗಿಲ್ಲಿ ನಟನೆಯ 'ಡೆವಿಲ್' ಟ್ರೈಲರ್ ಹಾಕದ್ದಕ್ಕೆ ದರ್ಶನ್ ಕಾರಣ ಎಂದ ನಿರ್ದೇಶಕ
Gilli Nata: ಬಿಗ್‌ಬಾಸ್‌ನಲ್ಲಿ ಗಿಲ್ಲಿ ನಟನೆಯ 'ಡೆವಿಲ್' ಟ್ರೈಲರ್ ಹಾಕದ್ದಕ್ಕೆ ದರ್ಶನ್ ಕಾರಣ ಎಂದ ನಿರ್ದೇಶಕ
ಬಿಗ್‌ಬಾಸ್ ಸ್ಪರ್ಧಿ 'ಗಿಲ್ಲಿ' ನಟನ 'ಡೆವಿಲ್' ಚಿತ್ರದ ಟ್ರೈಲರ್ ಪ್ರಸಾರವಾಗದ ಬಗ್ಗೆ ವಿವಾದ ಸೃಷ್ಟಿಯಾಗಿದೆ. ಈ ಘಟನೆಗೆ ನಟ ದರ್ಶನ್ ಅವರೇ ಕಾರಣ ಎಂದು ನಿರ್ದೇಶಕ ಆರೋಪಿಸಿದ್ದಾರೆ. ದರ್ಶನ್ ಈ ಹಿಂದೆ ನೀಡಿದ್ದ ಹೇಳಿಕೆಯೇ ಇದಕ್ಕೆ ಕಾರಣ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಡೆವಿಲ್ ಟ್ರೈಲರ್
ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿರುವ ಗಿಲ್ಲಿ ನಟ ಅಭಿನಯದ ಡೆವಿಲ್ ಸಿನಿಮಾದ ಟ್ರೈಲರ್ ಹಾಕದ್ದಕ್ಕೆ ದರ್ಶನ್ ಕಾರಣ ಎಂದು ನಿರ್ದೇಶಕರೊಬ್ಬರು ಹೇಳಿದ್ದಾರೆ. ಡೆವಿಲ್ ಚಿತ್ರದ ಟೀಸರ್/ಟ್ರೈಲರ್ ಪ್ರಸಾರ ಮಾಡದ್ದಕ್ಕೆ ಗಿಲ್ಲಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದ ಮೂಲಕ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಆರೋಪಗಳಿಗೆ ಚಂದನವನದ ನಿರ್ದೇಶಕರು ಸ್ಪಷ್ಟನೆ ನೀಡುವ ಕೆಲಸವನ್ನು ಮಾಡಿದ್ದಾರೆ.
ದರ್ಶನ್ ಕಾರಣ
ಖಾಸಗಿ ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ, ಬಿಗ್‌ಬಾಸ್ ಶೋನಲ್ಲಿ ಡೆವಿಲ್ ಟ್ರೈಲರ್ ಪ್ರಸಾರವಾಗದ್ದಕ್ಕೆ ದರ್ಶನ್ ಕಾರಣರಾಗಿದ್ದಾರೆ ಎಂದು ಹೇಳಿದ್ದಾರೆ. ಈ ಹಿಂದೆ ನೀಡಿದ ಹೇಳಿಕೆಯಿಂದ ಯಾವ ಚಾನೆಲ್‌ಗಳು ದರ್ಶನ್ ನಟನೆಯ ಸಿನಿಮಾ ಟ್ರೈಲರ್ ಬಳಸಲು ಹತ್ತು ಬಾರಿ ಯೋಚಿಸುತ್ತವೆ ಎಂದಿದ್ದಾರೆ. ಹಾಗಾದ್ರೆ ದರ್ಶನ್ ಹೇಳಿದ ಹೇಳಿಕೆ ಏನು?
ದರ್ಶನ್ ಹೇಳಿಕೆ ಏನು?
ನನ್ನ ಸಿನಿಮಾದ ಹಾಡು ಮತ್ತು ದೃಶ್ಯಗಳನ್ನು ಯಾವುದೇ ರಿಯಾಲಿಟಿ ಶೋಗಳಲ್ಲಿ ಬಳಕೆ ಮಾಡಬಾರದು ಎಂದು ಪಥ್ವಾ ರೀತಿಯ ಕಾನೂನು ಮಾಡಿಕೊಂಡಿದ್ದು ದರ್ಶನ್. ಖಾಸಗಿ ವಾಹಿನಿಯ ಅವಾರ್ಡ್ ಕಾರ್ಯಕ್ರಮಕ್ಕೆ ದರ್ಶನ್ ಅವರನ್ನು ಕರೆಯಲಾಗಿತ್ತು. ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಚಾನೆಲ್‌ಗಳ ಮುಖ್ಯಸ್ಥರಿಗೆ ವಾಯ್ಸ್ ನೋಟ್ ಕಳುಹಿಸಲಾಗಿತ್ತು ಎಂದು ಚಕ್ರವರ್ತಿ ಚಂದ್ರಚೂಡ ಹೇಳುತ್ತಾರೆ.
ದರ್ಶನ್ ಸಿನಿಮಾ ದೃಶ್ಯ
ನಿಮ್ಮಿಂದ ನನಗೆ ಏನು ಆಗಬೇಕಿಲ್ಲ. ಹಣ ಕೊಡದೇ ಚಿತ್ರದ ಹಾಡು ಮತ್ತು ದೃಶ್ಯಗಳನ್ನು ರಿಯಾಲಿಟಿ ಶೋಗಳಲ್ಲಿ ಬಳಕೆ ಮಾಡಬಾರದು ಅಂತ ದರ್ಶನ್ ಹೇಳಿದ್ದಾರೆ ಎಂಬ ಮಾಹಿತಿ ಇದೆ. ಹಾಗಾಗಿ ಖಾಸಗಿ ವಾಹಿನಿಗಳು ದರ್ಶನ್ ಸಿನಿಮಾ ದೃಶ್ಯ ಬಳಸಿಕೊಳ್ಳಲು ಯೋಚನೆ ಮಾಡುತ್ತಾರೆ. ಅಂದು ನಾನು ಬಿಗ್‌ಬಾಸ್ ಮನೆಯಲ್ಲಿರಲಿಲ್ಲ. ಈ ವಿಷಯ ತುಂಬಾ ದೊಡ್ಡಮಟ್ಟದಲ್ಲಿ ನಡೆದಿದೆ ಅನ್ನೋದು ನನಗೆ ತಿಳಿದಿರುವ ಮಾಹಿತಿ.
ಒರಟು ಮಾತು
ಒಂದು ಹಂತಕ್ಕೂ ಮೀರಿಯೂ ಈ ಸಂಬಂಧ ಮಾತುಕತೆಗಳು ನಡೆದಿವೆ. ಸೃಜನಶೀಲತೆ ಮೀರಿ ಒರಟಾಗಿಯೂ ಮಾತುಕರೆ ನಡೆದಿದೆ ಅನ್ನೋದು ನನಗೆ ತಿಳಿದಿರುವ ವಿಷಯವಾಗಿದೆ. ಇದರಿಂದಾಗಿ ಕೆಲವರು ಬೇಸತ್ತು ದರ್ಶನ್ ಸಿನಿಮಾದ ದೃಶ್ಯ ಬಳಸೋದನ್ನು ಬಿಟ್ಟಿದ್ದಾರೆ ಎಂಬುವುದು ನನಗಿರುವ ಮಾಹಿತಿ ಎಂದು ಚಕ್ರವರ್ತಿ ಚಂದ್ರಚೂಡ ಸಂದರ್ಶನದಲ್ಲಿ ಹೇಳಿದ್ದಾರೆ.
ಇದನ್ನೂ ಓದಿ: BBK 12: ಮನೆಗೆ ಬಂದ್ರು ರಾಶಿಕಾ, ಸೂರಜ್ ಕುಟುಂಬಸ್ಥರು; ಇಲ್ಲಿಯೂ ಮುಂದುವರಿದ ಗಿಲ್ಲಿ ತರಲೆ!
ಏನಿದು ವಿವಾದ?
ಸೀಸನ್ 11ರಲ್ಲಿ ಸ್ಪರ್ಧಿ ಉಗ್ರಂ ಮಂಜು ನಟನೆಯ ಮ್ಯಾಕ್ಸ್ ಸಿನಿಮಾದ ಟ್ರೈಲರ್ ಬಿಗ್‌ಬಾಸ್ ಮನೆಯಲ್ಲಿ ಪ್ರದರ್ಶನ ಮಾಡಲಾಗಿತ್ತು. ಆದ್ರೆ ಗಿಲ್ಲಿ ನಟ ಅವರ ಸಿನಿಮಾದ ಟ್ರೈಲರ್ ಯಾಕಿಲ್ಲ? ಈ ರೀತಿಯ ತಾರತಮ್ಯ ಯಾಕೆ ಎಂಬ ಪ್ರಶ್ನೆಗಳು ಮುನ್ನಲೆಗೆ ಬಂದಿದೆ. ಜಿಎಸ್‌ಟಿ ಮತ್ತು ಪ್ಯಾರ್ ಸಿನಿಮಾದ ಪ್ರಚಾರ ನಡೆದಾಗ ಈ ಚರ್ಚೆ ಮತ್ತಷ್ಟು ವೇಗ ಪಡೆದುಕೊಂಡಿತ್ತು.
ಇದನ್ನೂ ಓದಿ: ಮಾರ್ಕ್ ಸುದೀಪ್ ಆಡಿದ ಮಾತುಗಳನ್ನು ಡಿಕೋಡ್ ಮಾಡಿದ ನಿರ್ದೇಶಕ ಚಕ್ರವರ್ತಿ ಚಂದ್ರಚೂಡ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

