- Home
- Entertainment
- TV Talk
- ಸಿದ್ದೇಗೌಡ್ರ ಹೆಂಡ್ರು ಭಾವನಾ ಮೇಡಂ ಇವರೇನಾ? ಕಾನ್ ಚಿತ್ರೋತ್ಸವದಲ್ಲಿ ಭಾಗಿಯಾದ ಏಕೈಕ ಕನ್ನಡತಿ!
ಸಿದ್ದೇಗೌಡ್ರ ಹೆಂಡ್ರು ಭಾವನಾ ಮೇಡಂ ಇವರೇನಾ? ಕಾನ್ ಚಿತ್ರೋತ್ಸವದಲ್ಲಿ ಭಾಗಿಯಾದ ಏಕೈಕ ಕನ್ನಡತಿ!
ಲಕ್ಷ್ಮೀ ನಿವಾಸ ಧಾರಾವಾಹಿಯ ಭಾವನಾ ಪಾತ್ರಧಾರಿ ದಿಶಾ ಮದನ್ ಅವರು ಕಾನ್ ಚಿತ್ರೋತ್ಸವದಲ್ಲಿ ಭಾಗವಹಿಸಿ, ತಮ್ಮ ಅಮ್ಮನ ಸೀರೆಯಿಂದ ಮಾಡಿದ ಗೌನ್ ಧರಿಸಿ ಕಂಗೊಳಿಸಿದ್ದಾರೆ. ಕನ್ನಡ ಕಿರುತೆರೆಯ ನಟಿ ಕಾನ್ ಚಿತ್ರೋತ್ಸವದಲ್ಲಿ ಭಾಗವಹಿಸಿರುವುದು ವಿಶೇಷವಾಗಿದೆ.

ಜೀ ಕನ್ನಡ ವಾಹಿನಿ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಬಡ ಕುಟುಂಬದ ಮಗಳಾಗಿ ಮದುವೆಯಾಗದೆ ಪರದಾಡುತ್ತಿದ್ದ ಯುವತಿಯ ಪಾತ್ರವನ್ನು ಮಾಡಿ, ಇದೀಗ ಶ್ರೀಮಂತರ ಮನೆಯ ಹುಡುಗ ಸಿದ್ದೇಗೌಡ್ರ ಮಡದಿ ಆಗಿದ್ದಾರೆ ಈ ಭಾವನಾ. ಧಾರಾವಾಹಿಯಲ್ಲಿ ಸಿದ್ದೇಗೌಡರ ಹೆಂಡತಿ ಪಾತ್ರದಲ್ಲಿ ಕೇವಲ ಸೀರೆ ಧರಿಸಿ ಭಾರತೀಯ ಸಂಪ್ರದಾಯಸ್ತ ಕುಟುಂಬವನ್ನು ಪ್ರತಿನಿಧಿಸುವ ಈ ದಿಶಾ ಮದನ್ ಅವರು 2025ರ ಕಾನ್ ಚಿತ್ರೋತ್ಸವದಲ್ಲಿ ಪಾಲ್ಗೊಂಡಿದ್ದಾರೆ. ಇವರ ವಿಭಿನ್ನ ಉಡುಗೆ ಶೈಲಿಯನ್ನು ನೋಡಿದರೆ ಇವರೇನಾ ಧಾರಾವಾಹಿಯ ಸಿದ್ದೇಗೌಡ್ರ ಹೆಂಡತಿ ಭಾವನಾ ಮೇಡಮ್ಮೋರು ಅಂತಾ ಕನ್ಫೂಸ್ ಆಗೋದಂತೂ ಗ್ಯಾರಂಟಿ..
ಸಪ್ತ ಸಾಗರದಾಚೆ ಫ್ರಾನ್ಸ್‌ನಲ್ಲಿ ನಡೆಯುತ್ತಿರುವ ಕಾನ್ ಚಲನಚಿತ್ರೋತ್ಸವಕ್ಕೂ ಹಾಗೂ ಭಾರತೀಯ ಚಿತ್ರರಂಗಕ್ಕೂ 77 ವರ್ಷದ ಸಂಬಂಧವಿದೆ. ಸಾವಿರಾರು ತಾರೆಯರು ಕಾನ್ ಚಲನಚಿತ್ರೋತ್ಸವದಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆಯನ್ನು ಹಾಕಿ ತಮ್ಮ ಖ್ಯಾತಿಯನ್ನು ಸ್ಮರಣೀಯಗೊಳಿಸಿದ್ದಾರೆ. ಬಹುತೇಕ ಬಾಲಿವುಡ್ ತಾರೆಯರಿಗೆ ಸೀಮಿತವಾಗಿರುತ್ತಿದ್ದ ಕಾನ್ ಚಲನಚಿತ್ರೋತ್ಸವ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕುವ ಅವಕಾಶವನ್ನು ಈ ವರ್ಷ ಏಕೈಕ ಕನ್ನಡತಿ ಗಿಟ್ಟಿಸಿಕೊಂಡಿದ್ದಾರೆ. ಅವರೇ ಲಕ್ಷ್ಮೀ ನಿವಾಸ ಧಾರಾವಾಹಿಯ ಭಾವನಾ ಪಾತ್ರಧಾರಿ ದಿಶಾ ಮದನ್ ಅವರು.
ಇನ್ನು ದಿಶಾ ಮದನ್ ಅವರು ಕಾನ್ ಚಲನಚಿತ್ರೋತ್ಸವದಲ್ಲಿಯೂ ನಮ್ಮ ದಕ್ಷಿಣ ಭಾರತೀಯ ಶೈಲಿಯನ್ನುಯ ಉಳಿಸುವ ಸಾಂಸ್ಕೃತಿಕ ರಾಯಭಾರಿಯಂತೆ ಕಂಗೊಳಿಸಿದ್ದಾರೆ. ಜೊತೆಗೆ, ಫ್ರಾನ್ಸ್‌ನಲ್ಲಿ ಕನ್ನಡ ನಾಡು ಹಾಗೂ ಕನ್ನಡ ಚಿತ್ರರಂಗದ ಕೀರ್ತಿ ಪತಾಕೆ ಎತ್ತಿ ಹಿಡಿದಿದ್ದಾರೆ. ಇಲ್ಲಿ ದಿಶಾ ಅವರ ರೆಡ್ ಕಾರ್ಪೆಟ್ ಮೇಲಿನ ನಡಿಗೆಗೆ ಧರಿಸಿದ ಉಡುಪು ಭಾರೀ ಆಕರ್ಷಣೀಯವಾಗಿತ್ತು. ಈ ಉಡುಪಿನ ವಿಶೇಷ ಅಂದರೆ ತಮ್ಮ ಅಮ್ಮನ ಸೀರೆಯನ್ನೇ ಗೌನ್ ಮಾಡಿಕೊಂಡು ದಿಶಾ ಮದನ್ ಕಾನ್ ಚಲನಚಿತ್ರೋತ್ಸವದಲ್ಲಿ ಮಿಂಚಿದ್ದಾರೆ.
ಕುಲವಧು ಧಾರಾವಾಹಿಯ ಮೂಲಕ ದಿಶಾ ಮದನ್ ಅವರು ಕನ್ನಡ ಕಿರುತೆರೆಯನ್ನು ಪ್ರವೇಶ ಮಾಡಿ, ಇದೀಗ ಲಕ್ಷ್ಮಿ ನಿವಾಸದಲ್ಲಿ ಭಾವನಾ ಪಾತ್ರಕ್ಕೆ ಜೀವ ತುಂಬುತ್ತಿದ್ದಾರೆ. ಈ ಬಾರಿಯ ಕಾನ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾರೆ. ಕನ್ನಡದ ಕಂಪನ್ನು ಮತ್ತು ದಕ್ಷಿಣ ಭಾರತದ ಸಂಸ್ಕ್ರತಿಯನ್ನು ಪಸರಿಸಿದ್ದಾರೆ.
ದಿಶಾ ಮದನ್ ಅವರು ಸ್ವತಃ ತಮ್ಮ ಉಡುಪಿನ ವಿಶೇಷತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ತಮಿಳುನಾಡಿನ ಚೆಟ್ಟಿನಾಡ್ ಬಳಿಯ ವಿಶೇಷ ಕುಶಲಕರ್ಮಿಗಳು 400 ಗಂಟೆಗಳ ಕಾಲ ರೇಷ್ಮೆ ಹಾಗೂ ಚಿನ್ನದ ಎಳೆಗಳಿಂದ ನೇಯ್ದ ವಿಶೇಷ ಕಾಂಚಿವರಂ ಸೀರೆ ಮತ್ತು ರವಿಕೆಯಲ್ಲಿ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದಾಗಿ ತಿಳಿಸಿದ್ದಾರೆ. ಗಜರಾಜ್ ಜ್ಯುವೆಲರಿಯ ಹಳೆಯ ಸಂಗ್ರಹದಲ್ಲಿನ ಚಿನ್ನ ಮತ್ತು ವಜ್ರಾಭರಣ ಧರಿಸಿ ಕ್ಯಾಟ್ ವಾಕ್ ಮೂಲಕ ಅನೇಕರನ್ನು ಬೆರಗಾಗಿಸಿದ್ದಾರೆ.
ತಮಿಳುನಾಡಿನ ಚೆಟ್ಟಿನಾಡ್ ಭಾಗದಲ್ಲಿ 1950ರಲ್ಲಿ ಪ್ರಖ್ಯಾತವಾಗಿದ್ದ ವಧುವಿನ ಉಡುಗೆಯನ್ನು ನಾನು ಧರಿಸಿದ್ದೇನೆ. ಇದು ನನಗೆ ವೇಷಭೂಷಣಕ್ಕಿಂತಲೂ ಹೆಚ್ಚಿನದಾಗಿತ್ತು. ಕಳೆದು ಹೋದ ಸಂಸ್ಕ್ರತಿಯನ್ನು ಕಸೂತಿ ಹಾಗೂ ನೇಯ್ಗೆಯನ್ನು ಅಂತರಾಷ್ಟ್ರೀಯ ವೇದಿಕೆಯಲ್ಲಿ ನೆನಪಿಸುವ ಮೂಲಕ ಅದರ ಜೀವಂತಿಕೆಯನ್ನು ಪುನರುಜ್ಜೀವನಗೊಳಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ. ಜೊತೆಗೆ ತಮ್ಮ ಪೋಸ್ಟ್‌ಗೆ #FromKarnatakaToCannes ಎಂಬ ಹ್ಯಾಶ್ ಟ್ಯಾಗ್‌ನ್ನು ಬಳಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

