ಸದ್ದಿಲ್ಲದೇ ಮದುವೆಯಾದ್ರಾ ‘ಬ್ರಹ್ಮಗಂಟು’ ನಾಯಕಿ ದಿಯಾ ಪಾಲಕ್ಕಲ್? Photo Viral
‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ನಾಯಕಿ ದೀಪಾ ಆಗಿ ನಟಿಸುತ್ತಿರುವ ನಟಿ ದಿಯಾ ಪಾಲಕ್ಕಲ್ ಮದುವೆಯಾಗುತ್ತಿರುವ ಫೋಟೊ ಒಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಹಾಗಿದ್ರೆ ನಿಜವಾಗಿಯೂ ದಿಯಾ ಪಾಲಕ್ಕಲ್ ಮದ್ವೆ ಆಗೋದ್ರಾ? ಇಲ್ಲಿದೆ ಅಸಲಿ ಮಾಹಿತಿ.

ದಿಯಾ ಪಾಲಕ್ಕಲ್
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಬ್ರಹ್ಮಗಂಟು’ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ನಟಿಸುತ್ತಿರುವ ನಟಿ ದಿಯಾ ಪಾಲಕ್ಕಲ್ ಫೋಟೊ ಒಂದು ವೈರಲ್ ಆಗುತ್ತಿದ್ದು, ಇದರಲ್ಲಿ ದಿಯಾ ಮದುವೆ ಮಂಟಪದಲ್ಲಿದ್ದಾರೆ. ಹಾಗಿದ್ರೆ ನಿಜವಾಗಿಯೂ ದಿಯಾ ಮದುವೆ ಆಗ್ಬಿಟ್ರಾ?
ಮದುವೆಯಾದ್ರೆ ದಿಯಾ
ದಿಯಾ ಮದುವೆಯ ಫೋಟೊಗಳನ್ನು ನಟಿ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಈ ಫೋಟೊ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ. ಅಷ್ಟಕ್ಕೂ 19 ವರ್ಷದ ನಟಿಯ ಮದುವೆ ಸದ್ದಿಲ್ಲದೇ ಆಗಿಯೇ ಹೋಯ್ತಾ?
ಏನಿದು ಫೋಟೊ
ದಿಯಾ ಪಾಲಕ್ಕರ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿರುವ ಫೋಟೊಗಳು ಮೈಕ್ರೀ ಸೀರಿಸ್ ಒಂದರ ಶೂಟಿಂಗ್ ಫೋಟೊಗಳಾಗಿವೆ. ಶೂಟಿಂಗ್ ಸಮಯದಲ್ಲ್ ತೆಗೆದಿರುವಂತಹ ಫೋಟೊಗಳು ಇವಾಗಿದ್ದು, ದಿಯಾ ಯಾವುದೇ ಮದುವೆಯಾಗಿಲ್ಲ.
‘ಕೇರ್ ಟೇಕರ್’ ಮೈಕ್ರೋ ವೆಬ್ ಸೀರೀಸ್
ನಿಮ್ಮೊಂದಿಗೆ ಉಳಿಯುವ ಕಥೆ… ಇಂದು ಬುಲೆಟ್ ಅಪ್ಲಿಕೇಶನ್‌ನಲ್ಲಿ ನನ್ನ ಹೊಸ ಮೈಕ್ರೋ ವೆಬ್ ಸರಣಿ ‘ಕೇರ್‌ಟೇಕರ್’ ಅನ್ನು ವೀಕ್ಷಿಸಿ ಎಂದು ದಿಯಾ ಪಾಲಕ್ಕಲ್ ತಮ್ಮ ಫೋಟೊಗಳ ಜೊತೆಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಯಾರು ನಾಯಕ?
ಬುಲ್ಲೆಟ್ ಆಪ್ ನಲ್ಲಿ ಪ್ರಸಾರವಾಗಲಿರುವ ಹೊಸ ವೆಬ್ ಸೀರೀಸ್ ‘ಕೇರ್ ಟೇಕರ್’. ಈ ಸೀರೀಸ್ ನಲ್ಲಿ ದಿಯಾ ಪಾಲಕ್ಕಲ್ ಜೊತೆಗೆ ಅಕ್ಷಯ್ ನಾಯಕ್ ನಟಿಸುತ್ತಿದ್ದಾರೆ. ಇದು ಸಾವಿನಿಂದ ನಾಯಕನನ್ನು ಕಾಪಾಡಿ, ಆತನ ಜೀವನದಲ್ಲಿ ಸ್ಥಾನ ಪಡೆಯುವಂತಹ ಕಥೆ ಇದಾಗಿದೆ.
ಧಾರಾವಾಹಿಯಲ್ಲಿ ಏನಾಗ್ತಿದೆ?
ಬ್ರಹ್ಮಗಂಟು ಧಾರಾವಾಹಿಯಲ್ಲಿ ಸದ್ಯ ದೀಪಾ, ದಿಯಾ ಆಗಿಯೂ ನಟಿಸುವ ಮೂಲಕ ಸೌಂದರ್ಯನಿಗೆ ಎದಿರೇಟು ನೀಡುತ್ತಿದ್ದ್ದಾಳೆ. ಆದರೆ ಅಕ್ಕ ರೂಪಗೆ ದೀಪಾಳ ಆಟ ಗೊತ್ತಾಗಿದ್ದು, ಆ ಮೂಲಕ ದೀಪಾಳನ್ನು ಆಡಿಸುವ ಯೋಚನೆ ಮಾಡುತ್ತಿದ್ದಾಳೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

