- Home
- Entertainment
- TV Talk
- Karna Serial: ಕರ್ಣ, ನಿತ್ಯಾ ಮದುವೆ ಆಗೋಯ್ತು! ಮದುವೆಗೂ ಮುನ್ನ ಇಂಥ ಕೆಲಸ ಮಾಡಿದಳಾ ನಿಧಿ ಅಕ್ಕ, ಛೇ..!
Karna Serial: ಕರ್ಣ, ನಿತ್ಯಾ ಮದುವೆ ಆಗೋಯ್ತು! ಮದುವೆಗೂ ಮುನ್ನ ಇಂಥ ಕೆಲಸ ಮಾಡಿದಳಾ ನಿಧಿ ಅಕ್ಕ, ಛೇ..!
Karna Kannada Serial Today Episode: ಕರ್ಣ ಧಾರಾವಾಹಿಯಲ್ಲಿ ವೀಕ್ಷಕರು ಬಯಸಿದಂತೆ ಕರ್ಣ ಹಾಗೂ ನಿಧಿ ಒಂದಾಗುತ್ತಿಲ್ಲ, ಇದರ ಬದಲಿಗೆ ಕರ್ಣ, ನಿತ್ಯಾ ಮದುವೆ ಆಗಿದ್ದಾರೆ. ಮದುವೆ ಆಗುತ್ತಿದ್ದಂತೆ ಅವನಿಗೆ ಇನ್ನೊಂದು ಶಾಕಿಂಗ್ ವಿಷಯ ಸಿಕ್ಕಿದೆ. ಏನದು?

ಕರ್ಣ ಹಾಗೂ ನಿತ್ಯಾ ಮದುವೆ ಆಗಿದೆ
ಕರ್ಣ ಧಾರಾವಾಹಿಯಲ್ಲಿ ಕೊನೆಗೂಕರ್ಣ ಹಾಗೂ ನಿತ್ಯಾ ಮದುವೆ ಆಗಿದೆ. ಸಪ್ತಪದಿ ತುಳಿಯುವಾಗ ನಿತ್ಯಾ ಗರ್ಭಿಣಿ ಎನ್ನೋದು ಕರ್ಣನಿಗೆ ಗೊತ್ತಾಗಿದೆ. ಎಲ್ಲವೂ ಮನೆಹಾಳ ರಮೇಶ್ ಪ್ಲ್ಯಾನ್‌ನಂತೆ ನಡೆದಿದೆ. ಒಟ್ಟಿನಲ್ಲಿ ನಿಧಿ, ನಿತ್ಯಾ, ಕರ್ಣನಿಗೆ ಅವರ ಪ್ರೀತಿ ಕೊನೆಗೂ ಸಿಗಲಿಲ್ಲ.
ಕಣ್ಣೀರು ಹಾಕ್ತಿರೋ ಶಾಂತಿ
ತೇಜಸ್ ಅವನ ತಂದೆ-ತಾಯಿ ಜೊತೆಗೆ ಮನೆ ಖಾಲಿ ಮಾಡಿಕೊಂಡು ಹೋಗಿದ್ದಾನೆ. ಕಾಶಿ ಯಾತ್ರೆ ಮಾಡುವವರೆಗೂ ಎಲ್ಲರ ಜೊತೆಯೂ ಚೆನ್ನಾಗಿದ್ದ ತೇಜಸ್ ಹಾಗೂ ಅವನ ಮನೆಯವರು ಕೊನೆಯಲ್ಲಿ ಯಾಕೆ ಈ ರೀತಿ ಮಾಡಿದರು ಎಂದು ಕರ್ಣನಿಗೂ ಪ್ರಶ್ನೆ ಕಾಡ್ತಿದೆ. ತಾನು ಪ್ರೀತಿಸಿದ ಹುಡುಗ ಮದುವೆ ದಿನ ಓಡಿ ಹೋದ, ಮೋಸ ಮಾಡಿದ ಅಂತ ನಿತ್ಯಾ ಬೇಸರದಲ್ಲಿದ್ದಾಳೆ. ಅಂದು ನಾನು ಹೇಳಿದರೂ ಕೂಡ ಕೇಳದೆ, ತೇಜಸ್‌ನನ್ನು ಮದುವೆ ಆಗ್ತೀನಿ ಅಂತ ಹೇಳಿದ್ದ ಮೊಮ್ಮಗಳಿಗೆ ಈಗ ಮೋಸ ಆಗಿದೆ, ಮದುವೆ ದಿನವೇ ಅವಳನ್ನು ಮದುವೆ ಆಗುವವನು ಓಡಿ ಹೋದ ಅಂತ ಶಾಂತಿ ಕಣ್ಣೀರು ಹಾಕುತ್ತಿದ್ದಾಳೆ.
ಸಾ*ಯಲು ಮುಂದಾಗಿದ್ದ ಶಾಂತಿ
ಹಸೆಮಣೆಯಲ್ಲಿ ಕೂರಬೇಕಿದ್ದ ಮೊಮ್ಮಗಳು, ಈಗ ಮೂಲೆಯಲ್ಲಿ ಕೂರುವ ಹಾಗೆ ಆಗಿದೆ ಎಂದು ಶಾಂತಿ, ಅಲ್ಲಿದ್ದವರ ಬಳಿ ನನ್ನ ಮೊಮ್ಮಗಳನ್ನು ಮದುವೆ ಆಗಿ ಎಂದು ಅಂಗಲಾಚಿ ಬೇಡಿಕೊಂಡಿದ್ದಳು. ಯಾರೂ ಕೂಡ ನಿತ್ಯಾ ಪರವಾಗಿ ಮಾತನಾಡದೆ, ಬಾಯಿಗೆ ಬಂದಹಾಗೆ ಮಾತನಾಡಿದ್ದರು. ಇದರಿಂದ ಬೇಸರಗೊಂಡ ಶಾಂತಿ ಪೆಟ್ರೋಲ್ ಸುರಿದುಕೊಂಡು ಸಾ*ಯಲು ಮುಂದಾಗಿದ್ದಳು.
ಕರ್ಣ, ನಿತ್ಯಾ ಮದುವೆ ಆಗ್ತಾರೆ!
ಶಾಂತಿ ಈ ರೀತಿ ಅಳೋದು ನೋಡಿ ಕರ್ಣನ ಅಜ್ಜಿಗೆ ಟೆನ್ಶನ್ ಆಗಿತ್ತು. ಅದೇ ಸಮಯದಲ್ಲಿ ಕರ್ಣನ ತಂದೆ ರಮೇಶ್, ಅವಳ ಬಳಿ ಹೋಗಿ ಕರ್ಣ ಹಾಗೂ ನಿತ್ಯಾ ಮದುವೆ ಆದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಹೇಳಿದ್ದಾನೆ. ಮಗನ ಮಾತನ್ನು ಅಜ್ಜಿ ಕೇಳಿದ್ದು, ಕರ್ಣ, ನಿತ್ಯಾ ಮದುವೆಯನ್ನು ಘೋಷಿಸಿದ್ದಳು. ಅನಾಥನಾದ ನನ್ನನ್ನು ಸಾಕಿದ ಅಜ್ಜಿಯ ಮಾತಿಗೆ ಕರ್ಣ ಇಲ್ಲ ಎನ್ನೋದಿಲ್ಲ. ಹೀಗಾಗಿ ಅವನು ಮದುವೆ ಆಗೋಕೆ ಒಪ್ತಾನೆ.
ದುರಂತ ಅಂತ್ಯ ಕಂಡ ಮೂವರ ಪ್ರೀತಿ!
ಈ ವಿಷಯ ಕೇಳಿ ಕರ್ಣ, ನಿತ್ಯಾ, ನಿಧಿಗೆ ಬೇಸರ ಆಗಿದೆ. ಕರ್ಣನನ್ನು ಗಂಡ ಅಂತ ಒಪ್ಪಿಕೊಳ್ಳೋಕೆ ನಿತ್ಯಾ ರೆಡಿ ಇಲ್ಲ. ಕರ್ಣನ ಮನಸ್ಸಿನಲ್ಲಿ ನಿಧಿ ಇದ್ದಾಳೆ. ಒಂದು ಕಡೆ ಅಕ್ಕನ ಜೀವನ ಹಾಳಾಯಿತು, ಇನ್ನೊಂದು ಕಡೆ ನಾನು ಪ್ರೀತಿಸಿದ್ದ ಹುಡುಗ ನನ್ನಿಂದ ದೂರ ಆದ ಅಂತ ನಿಧಿ ಕಣ್ಣೀರಿಡುತ್ತಿದ್ದಾಳೆ. ತ್ರಿಕೋನ ಪ್ರೇಮ ಕಥೆ ದುರಂತ ಅಂತ್ಯ ಕಂಡಿದೆ.
ಗರ್ಭಿಣಿಯಾಗಿರೋ ನಿತ್ಯಾ
ಕರ್ಣ ಹಾಗೂ ನಿತ್ಯಾ ಮದುವೆ ಆಯ್ತು. ನಿತ್ಯಾ ಗರ್ಭಿಣಿ ಎನ್ನೋದು ಕೂಡ ಕರ್ಣನಿಗೆ ಗೊತ್ತಾಗಿದೆ. ಹೀಗಾಗಿ ಅವನಿಗೆ ಇನ್ನೊಂದಿಷ್ಟು ಶಾಕ್ ಆಗಿದೆ. ಸಂಸ್ಕಾವಂತ ಹುಡುಗಿ ನಿತ್ಯಾ ಮದುವೆಗೆ ಮುನ್ನ ಈ ರೀತಿ ಮಾಡೋದಾ? ಕರ್ಣನ ಮುಖದಲ್ಲಿ ಇಷ್ಟುದಿನ ನಗು ಇರುತ್ತಿತ್ತು, ಈಗ ನಗು ಇಲ್ಲ ಎಂದು ರಮೇಶ್ ಖುಷಿಯಾಗಿದ್ದಾನೆ. ಹಾಗಾದರೆ ಮುಂದೆ ಏನಾಗುವುದು ಎಂಬ ಪ್ರಶ್ನೆ ಕಾಡುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

