ಭವ್ಯಾ ಗೌಡ ಆಯ್ತು… ಈಗ ಕರ್ಣನಿಗೆ ಮತ್ತೋರ್ವ ನಾಯಕಿಯಾಗ್ತಿದ್ದಾರೆ ನಮ್ರತಾ ಗೌಡ!
ಝೀ ಕನ್ನಡದಲ್ಲಿ ಪ್ರಸಾರವಾಗಲಿರುವ ಬಹು ನಿರೀಕ್ಷಿತ ಕರ್ಣ ಧಾರಾವಾಹಿಗೆ ಈಗಾಗಲೇ ಭವ್ಯಾ ಗೌಡ ಅಧಿಕೃತವಾಗಿ ನಾಯಕಿ ಎಂದು ತಿಳಿದು ಬಂದಿದ್ದು, ಮತ್ತೋರ್ವ ನಾಯಕಿ ಬಿಗ್ ಬಾಸ್ ಚೆಲುವೆ.

ಝೀ ಕನ್ನಡದಲ್ಲಿ (Zee Kannada) ಪ್ರಸಾರವಾಗಲಿರುವ ಹೊಚ್ಚ ಹೊಸ ಹಾಗೂ ಬಹು ನಿರೀಕ್ಷಿತ ಧಾರಾವಾಹಿಯಲ್ಲಿ ಒಂದು ನಟ ಕಿರಣ್ ರಾಜ್ ಅಭಿನಯದ ಕರ್ಣ ಧಾರಾವಾಹಿ. ಈ ಧಾರಾವಾಹಿಯ ಪ್ರೊಮೋ ಬಿಡುಗಡೆಯಾಗಿ ಸಖತ್ ಸದ್ದು ಮಾಡಿತ್ತು.
ಇತ್ತೀಚಿನ ದಿನಗಳಲ್ಲಿ ಕರ್ಣನಿಗೆ (Karna Serial)ನಾಯಕಿಯಾಗುವವರು ಯಾರು ಎನ್ನುವ ಚರ್ಚೆ ಕೂಡ ಭಾರಿ ಸುದ್ದಿಯಾಗಿತ್ತು. ಈ ಮೊದಲು ಕನ್ನಡತಿಯ ಚೆಲುವೆ ರಂಜನಿ ರಾಘವನ್ ನಾಯಕಿಯಾದ್ರೆ ಚೆನ್ನಾಗಿರ್ತಿತ್ತು ಎನ್ನುವ ಮಾತು ಕೂಡ ಕೇಳಿ ಬಂದಿತ್ತು. ಆದರೆ ಅದು ನಿಜವಾಗಲಿಲ್ಲ.
ಎರಡು ದಿನಗಳ ಹಿಂದೆಯಷ್ಟೇ ಕರ್ಣನಿಗೆ ನಾಯಕಿಯಾಗಿ ಭವ್ಯಾ ಗೌಡ (Bhavya Gowda) ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಹಾಗೂ ಭವ್ಯಾ ಗೌಡ ಹಾಗೂ ಕಿರಣ್ ರಾಜ್ ಜೊತೆಗಿನ ಒಂದು ವಿಡಿಯೋ ಕ್ಲಿಪ್ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಹಾಗಾಗಿ ಒಬ್ಬ ನಾಯಕಿ ಭವ್ಯಾ ಗೌಡ ಅನ್ನೋದು ಅಧಿಕೃತವಾಗಿತ್ತು.
ಇನ್ನು ಈ ಧಾರಾವಾಹಿಯಲ್ಲಿ ಮತ್ತೋರ್ವ ನಾಯಕಿ ಇದ್ದಾಳೆ ಎನ್ನುವ ಮಾತು ಕೂಡ ಕೇಳಿ ಬಂದಿತ್ತು, ಆದರೆ ಆ ಜಾಗಕ್ಕೆ ಯಾರು ಬರ್ತಾರೆ ಅನ್ನೋದು ಮಾತ್ರ ಇದುವರೆಗೆ ತಿಳಿದು ಬಂದಿಲ್ಲ. ಆದರೆ ಇವತ್ತು ಸೋಶಿಯಲ್ ಮೀಡಿಯಾದಲ್ಲಿ ಮತ್ತೋರ್ವ ನಟಿ, ಬಿಗ್ ಬಾಸ್ ಚೆಲುವೆಯ ಹೆಸರು ಸದ್ದು ಮಾಡುತ್ತಿದೆ.
ಹೌದು, ಬಿಗ್ ಬಾಸ್ ಸೀಸನ್ 10ರ ಚೆಲುವೆ, ನಾಗಿಣಿಯಾಗಿ ಕನ್ನಡಿಗರ ಮನಗೆದ್ದ ಬ್ಯೂಟಿ ನಮ್ರತಾ ಗೌಡ (Namratha Gowda) ಕರ್ಣನಿಗೆ ಮತ್ತೋರ್ವಾ ನಾಯಕಿಯಾಗ್ತಿದ್ದಾರೆ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಆದರೆ ಇದು ಇನ್ನೂ ಕೂಡ ಕನ್ ಫರ್ಮ್ ಆಗಿಲ್ಲ.
ಆದರೆ ಭವ್ಯಾ ಗೌಡ ಮತ್ತು ನಮ್ರತಾ ಗೌಡ ಕರ್ಣ ಧಾರಾವಾಹಿಯಲ್ಲಿ ನಟಿಸುತ್ತಿರುವ ಸುದ್ದಿ ಕೇಳಿ ವೀಕ್ಷಕರು ಖುಷ್ ಆಗಿದ್ದಾರೆ. ಮಿಸ್ ಮಾಡದೇ ನಾವು ಸೀರಿಯಲ್ ನೋಡ್ತೀವಿ. ಇದು ಡಬಲ್ ಧಮಾಕ ಎಂದು ಹೇಳಿದ್ದಾರೆ.
ಜೊತೆಗೆ ಇದೀಗ ವೀಕ್ಷಕರಿಗೆ ಒಂದು ಸಂಶಯ ಕೂಡ ಮೂಡಿದೆ. ನಾಯಕಿ ಭವ್ಯಾ ಗೌಡ ಅಂದ ಮೇಲೆ, ನಮ್ರತಾ ಸೆಕೆಂಡ್ ಲೀಡ್ ಆಗಿ ನಟಿಸುತ್ತಿದ್ದಾರ? ಅಂದ್ರೆ ನಮ್ರತಾ ಗೌಡ ಈ ಧಾರಾವಾಹಿಯಲ್ಲಿ ವಿಲನ್ ಪಾತ್ರದಲ್ಲಿ ಮಿಂಚುತ್ತಾರ? ಅನ್ನೋ ಪ್ರಶ್ನೆ ಕೂಡ ಮೂಡಿದೆ. ಯಾವುದಕ್ಕೂ ಸೀರಿಯಲ್ ತಂಡದಿಂದ ಅಧಿಕೃತ ಮಾಹಿತಿ ಬರಬೇಕು ಅಷ್ಟೇ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.