- Home
- Entertainment
- TV Talk
- Nee Iralu Jotheyalli serial: ಆಧುನಿಕ ಯುಗದ ಶ್ರೀಕೃಷ್ಣನಾದ ಪವನ್ ರವೀಂದ್ರ, ಹೆದರಿಸೋಕೆ ರೆಡಿಯಾದ ನಟಿ ರಜಿನಿ!
Nee Iralu Jotheyalli serial: ಆಧುನಿಕ ಯುಗದ ಶ್ರೀಕೃಷ್ಣನಾದ ಪವನ್ ರವೀಂದ್ರ, ಹೆದರಿಸೋಕೆ ರೆಡಿಯಾದ ನಟಿ ರಜಿನಿ!
ಸ್ಟಾರ್ ಸುವರ್ಣ ವಾಹಿನಿಯಲ್ಲೀಗ "ನೀ ಇರಲು ಜೊತೆಯಲ್ಲಿ" ಎಂಬ ಹೊಸ ಧಾರಾವಾಹಿಯು ಪ್ರಸಾರ ಆಗಲಿದೆ. ವಿಭಿನ್ನ ಕಥೆಯೊಂದಿಗೆ ಧಾರಾವಾಹಿ ತಂಡವು ತೆರೆ ಮೇಲೆ ಬರಲು ರೆಡಿಯಾಗಿದೆ. ನಟಿ ರಜಿನಿ, ಪವನ್ ರವೀಂದ್ರ, ಸಲೋಮಿ ಡಿಸೋಜಾ ಅವರು ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಅಮೃತವರ್ಷಿಣಿ" ಧಾರಾವಾಹಿ ಖ್ಯಾತಿಯ ರಜಿನಿ, ವರ್ಷಗಳ ಬಳಿಕ ಈ ಕಥೆಯ ಮೂಲಕ ಸುವರ್ಣ ಪರಿವಾರಕ್ಕೆ ಕಮ್ ಬ್ಯಾಕ್ ಆಗಿದ್ದು ಊರ್ಮಿಳಾ ದಿವಾನ್ ಎಂಬ ಮುಖ್ಯ ಖಳನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಾಯಕನಾಗಿ ಪವನ್ ರವೀಂದ್ರ ಹಾಗು ನಾಯಕಿಯಾಗಿ ಸಲೋಮಿ ಡಿಸೋಜಾ ಬಣ್ಣ ಹಚ್ಚಿದ್ದಾರೆ. ಜೊತೆಗೆ ನಟ ಮೋಹನ್ ಸೇರಿದಂತೆ ಇನ್ನು ಅನೇಕ ಪ್ರತಿಭಾನ್ವಿತ ನಟ-ನಟಿಯರು ಅಭಿನಯಿಸುತ್ತಿದ್ದಾರೆ.
ಮಾತಿನಲ್ಲಿ ತುಂಟತನವನ್ನೊಳಗೊಂಡ ಕಥಾನಾಯಕ ಕೃಷ್ಣನದ್ದು ಸ್ವಾತಂತ್ಯ ಹೋರಾಟಗಾರರ ಕುಟುಂಬ. ಕೆಲಸದಲ್ಲಿ ಜಾಣ್ಮೆ, ನಿಪುಣತೆ ಹೊಂದಿರುವ ಈತ, ತಂತ್ರದಲ್ಲಿ ಕಪಟಿಯಾಗಿದ್ದರೂ ಮಾಡಿದ ಸಹಾಯಕ್ಕೆ ಪ್ರತಿಫಲವನ್ನು ನಿರೀಕ್ಷಿಸದ ಅಧುನಿಕ ಯುಗದ ಶ್ರೀ ಕೃಷ್ಣ. ಆದರೆ ಈ ಕೃಷ್ಣನಿಗೆ ಪೂತನಿಯಂತೆ ಕಾಟ ಕೊಡೋಳು ಅತ್ತಿಗೆ ಊರ್ಮಿಳಾ ದಿವಾನ್. ನನ್ನದೇ ನಡಿಬೇಕು, ನನ್ನಿಂದಲೇ ಎಲ್ಲಾ ಎಂಬ ಸೊಕ್ಕಿನಿಂದ ಮೆರಿತಿರೋ ಊರ್ಮಿಳಾ, ಅಹಂಕಾರವನ್ನೇ ಒಡವೆಯನ್ನಾಗಿಸಿಕೊಂಡು ಮನೆಮಂದಿಯನ್ನೆಲ್ಲಾ ತನ್ನ ಕೈಗೊಂಬೆಯಾಗಿಸಿರ್ತಾಳೆ.
ಹೀಗೆ ಸೊಕ್ಕಿನಿಂದ ಮೆರಿತಿರೋ ಊರ್ಮಿಳಾಗೆ ಮುಂದೆ ಕೃಷ್ಣ ತಕ್ಕ ಪಾಠ ಕಲಿಸ್ತಾನ? ತದ್ವಿರುದ್ಧ ಭಾವಗಳನ್ನು ಹೊಂದಿರುವ ಕೃಷ್ಣ,ರಚನಾ ಹೇಗೆ ಒಂದಾಗ್ತಾರೆ? ರಚನಾಗೆ ಆದರ್ಶವಾಗಿರೋ ಊರ್ಮಿಳಾ, ತನ್ನನ್ನೇ ಎದುರಾಳಿಯಾಗಿ ನೋಡಿದ್ರೆ ಮುಂದೇನಾಗಬಹುದು? ಎಂಬುದೇ ಮುಖ್ಯ ಕಥಾ ಹಂದರ.
.
ಇನ್ನು ತಂದೆಯ ಮುದ್ದಿನ ಮಗಳು ಕಥಾನಾಯಕಿ ರಚನಾ ಪಟೇಲ್. ಓದಿನಲ್ಲಿ ಅತ್ಯಂತ ಪ್ರತಿಭಾವಂತೆ, ಯಾರನ್ನು ನೋಯಿಸದ ಮಾತೃ ಹೃದಯಿ. ಸೌಂದರ್ಯವನ್ನು ಮುಖದಲ್ಲಿ ಮಾತ್ರವಲ್ಲದೆ ನಡವಳಿಕೆಯಲ್ಲಿಯೂ ಒಗ್ಗೂಡಿಸಿರುವ ಈಕೆಗೆ, ಸಾಧನೆಯ ಶಿಖರವೇರಿರುವ ಊರ್ಮಿಳಾ ದಿವಾನೇ ಆದರ್ಶ. ಆಕೆಯಂತೆ ಏನನ್ನಾದರೂ ಸಾಧಿಸಬೇಕೆಂಬ ಛಲ ರಚನಾಳದ್ದು.
.
ಮುದ್ದುಲಕ್ಷ್ಮಿ, ಮರಳಿ ಬಂದಳು ಸೀತೆ, ಮರಳಿ ಮನಸಾಗಿದೆ ಸೇರಿದಂತೆ ಇನ್ನೂ ಅನೇಕ ಧಾರಾವಾಹಿಗಳನ್ನು ನಿರ್ದೇಶಿಸಿರುವ ಧರಣಿ ಜಿ.ರಮೇಶ್ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ "ನೀ ಇರಲು ಜೊತೆಯಲ್ಲಿ" ಧಾರಾವಾಹಿ ಮೂಡಿ ಬರಲಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

