- Home
- Entertainment
- TV Talk
- ನಿತ್ಯಾ-ತೇಜಸ್ ಮದುವೆಗೆ ಪ್ಲಾನ್ ಮಾಡುತ್ತಿರುವ ಕರ್ಣ; ಎಲ್ಲಾ ಸತ್ಯ ಗೊತ್ತಾದ ಮೇಲೆ ರಮೇಶ್ ಸುಮ್ನಿರ್ತಾನಾ?
ನಿತ್ಯಾ-ತೇಜಸ್ ಮದುವೆಗೆ ಪ್ಲಾನ್ ಮಾಡುತ್ತಿರುವ ಕರ್ಣ; ಎಲ್ಲಾ ಸತ್ಯ ಗೊತ್ತಾದ ಮೇಲೆ ರಮೇಶ್ ಸುಮ್ನಿರ್ತಾನಾ?
Karna plans wedding: ಕರ್ಣ ಧಾರಾವಾಹಿಯಲ್ಲಿ ಒಂದಿಷ್ಟು ಸತ್ಯಗಳು ಬಯಲಾಗಿವೆ. ಅದರಲ್ಲಿ ಒಂದು ನಿತ್ಯಾ ಪ್ರಗ್ನೆಂಟ್ ಎಂಬ ವಿಚಾರ ತೇಜಸ್‌ಗೆ ತಿಳಿದಿದೆ. ಹಾಗೆಯೇ ಕರ್ಣ-ನಿತ್ಯಾ ಮದುವೆಯಾಗಿಲ್ಲ ಎಂಬುದು ಗೊತ್ತಾಗಿದೆ. ಆದರೆ ಈ ಸತ್ಯ ತೇಜಸ್‌ಗೆ ಮಾತ್ರವಲ್ಲ, ರಮೇಶ್‌ಗೂ ತಿಳಿದಿದೆ.

ತಪ್ಪಿನ ಅರಿವಾಯ್ತು ತೇಜಸ್‌ಗೆ
ನಿತ್ಯಾಗೆ ತೇಜಸ್ ಸಿಗಬೇಕು ಅಂದುಕೊಳ್ಳುತ್ತಿದ್ದ ವೀಕ್ಷಕರ ಆಸೆ ಅಂತೂ ನೆರವೇರಿತು. ಹಾಗೆಯೇ ತೇಜಸ್‌ಗೆ ಇಷ್ಟು ದಿನ ಕರ್ಣನ ಮೇಲಿದ್ದ ತಪ್ಪು ಅಭಿಪ್ರಾಯ ಹೋಗಿದೆ. ಹೌದು. ತೇಜಸ್ ಇಷ್ಟು ದಿನ "ತನ್ನನ್ನು ಕಿಡ್ನಾಪ್ ಮಾಡಿಸಿದ್ದು, ನಿತ್ಯಾ-ತನ್ನ ಮದುವೆಯಾಗದಿರುವುದಕ್ಕೆ ಕಾರಣ ಎಲ್ಲವೂ ಕರ್ಣ" ಅಂದುಕೊಂಡಿದ್ದ. ಆದರೆ ಈಗ ಅವನಿಗೆ ತನ್ನ ತಪ್ಪಿನ ಅರಿವಾಗಿದೆ.
ಅಪಾಯದಿಂದ ಪಾರಾದ ಅಜ್ಜಿ
ಅಷ್ಟಕ್ಕೂ ತೇಜಸ್‌ಗೆ ಈ ವಿಷ್ಯವೆಲ್ಲಾ ಹೇಗೆ ಗೊತ್ತಾಯ್ತು ಎಂದು ನೋಡುವುದಾದರೆ ಸದ್ಯ ನಿತ್ಯಾ-ನಿಧಿ ಅಜ್ಜಿ ಹೃದಯ ಸಮಸ್ಯೆಯಿಂದ ಆಸ್ಪತ್ರೆ ಸೇರಿದ್ದಾರೆ. ವೈದ್ಯರು ಅಜ್ಜಿಗೆ ಚಿಕಿತ್ಸೆ ನೀಡಿ, ಸದ್ಯ ಯಾವುದೇ ಸಮಸ್ಯೆಯಿಲ್ಲ. ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮತ್ತೆ ಪ್ರಜ್ಞೆ ತಪ್ಪಿದ ಅಜ್ಜಿ
ಅಜ್ಜಿಗೆ ಪ್ರಜ್ಞೆ ಬಂದ ಬಂತರ ಮೊದಲು ಕರ್ಣನನ್ನು ನೋಡಬೇಕೆಂದು ಹಂಬಲಿಸುತ್ತಾಳೆ. ಕರ್ಣ ಅಜ್ಜಿಯ ಆರೋಗ್ಯ ವಿಚಾರಿಸಲು ಹೋದಾಗ ಒಂದು ಭಾಷೆ ತೆಗೆದುಕೊಳ್ಳುತ್ತಾರೆ. ಅದನ್ನು ನಿಧಿಯು ಕೇಳಿಸಿಕೊಳ್ಳುತ್ತಾಳೆ. ಆದರೆ ಅಷ್ಟರಲ್ಲಿ ಅಜ್ಜಿಗೆ ಮತ್ತೆ ಪ್ರಜ್ಞೆ ತಪ್ಪುತ್ತದೆ.
ಇಲ್ಲೊಂದು ಟ್ವಿಸ್ಟ್ ಇದೆ
ಈಗ ಅಜ್ಜಿಗೆ ನಾವು ಸುಳ್ಳು ಹೇಳುತ್ತಿದ್ದೇವೆ ಎಂಬ ಭಯ ಕರ್ಣನಿಗೆ ಕಾಡುತ್ತಿದೆ. ಈ ಮಧ್ಯೆ ಕರ್ಣ ಮತ್ತೊಂದು ಪ್ಲಾನ್ ಮಾಡಿದ್ದಾನೆ. ಅದೇ ತೇಜಸ್-ನಿತ್ಯಾ ಮದುವೆ. ಹೌದು. ಕರ್ಣ ನಿಧಿಯ ಬಳಿ ತೇಜಸ್ ಮತ್ತು ನಿತ್ಯಾ ಮದುವೆ ಮಾಡಿಸಲು ಹೊರಗೆ ಹೋಗೋಣವೆಂದು ಹೇಳುತ್ತಿದ್ದಾನೆ. ಆದರೆ ಇಲ್ಲೊಂದು ಟ್ವಿಸ್ಟ್ ಇದೆ.
ರಮೇಶ್‌ಗೂ ಗೊತ್ತಾಯ್ತು ಸತ್ಯ
ಯಾರಿಗೂ ಗೊತ್ತಾಗದ ಹಾಗೆ ನಿತ್ಯಾ, ತೇಜಸ್, ನಿಧಿ ಮಾತನಾಡುವುದನ್ನ ಈಗ ಸಂಜಯ್ ವಿಡಿಯೋ ಕಾಲ್ ಮೂಲಕ ರಮೇಶ್‌ಗೆ ತೋರಿಸಿದ್ದಾನೆ. ನಿತ್ಯಾ ಬಳಿ ತೇಜಸ್ "ನಾನು ಅಜ್ಜಿಯನ್ನು ನೋಡಿ, ಕರ್ಣ ಮುಚ್ಚಿಟ್ಟಿರುವ ಎಲ್ಲಾ ವಿಷಯವನ್ನ ಹೇಳಬೇಕು" ಎಂದು ಹೇಳಿದಾಗ ನಿತ್ಯಾ, "ಕರ್ಣ ಏನನ್ನೂ ಮುಚ್ಚಿಟ್ಟಿಲ್ಲ, ಮುಚ್ಚಿಟ್ಟಿರುವುದು ನಾನೇ. ನಾನು ಪ್ರೆಗ್ನೆಂಟ್" ಎಂದು ಹೇಳುತ್ತಾಳೆ.
ರಮೇಶ್ ಮುಂದಿನ ನಡೆಯೇನು?
ಇದನ್ನು ಕೇಳಿದ ತೇಜಸ್‌ಗೆ ಮಾತ್ರವಲ್ಲ, ಅಲ್ಲೇ ಕದ್ದು ಮುಚ್ಚಿ ಕೇಳಿಸಿಕೊಳ್ಳುತ್ತಿರುವ ಸಂಜಯ್, ಸಂಜಯ್ ಅತ್ತೆ ಹಾಗೂ ರಮೇಶ್‌ಗೂ ಶಾಕ್ ಆಗುತ್ತದೆ. ಆದ್ದರಿಂದ ಈಗ ನಿತ್ಯಾ-ತೇಜಸ್‌ಗೆ ಮದುವೆ ಮಾಡಿಸಬೇಕೆಂದುಕೊಂಡಿರುವ ಕರ್ಣನ ಪ್ಲಾನ್ ವರ್ಕ್-ಔಟ್ ಆಗುತ್ತಾ?, ಇದಕ್ಕೆ ಪ್ರತಿಯಾಗಿ ರಮೇಶ್ ಏನು ಕುತಂತ್ರ ಮಾಡಬಹುದು ಎಂಬುದನ್ನ ಮುಂದಿನ ಸಂಚಿಕೆಯಲ್ಲಿ ತಿಳಿಯಬೇಕಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

