- Home
- Entertainment
- TV Talk
- Annayya Serial: ಡಿವೋರ್ಸ್ ಕೊಡ್ತೀನಿ ಹೇಳಿ ಜಿಮ್ ಸೀನಾಗೆ ಚಮಕ್ ಕೊಟ್ಟ ಗುಂಡಮ್ಮ… ಭರ್ಜರಿ ಟ್ವಿಸ್ಟ್
Annayya Serial: ಡಿವೋರ್ಸ್ ಕೊಡ್ತೀನಿ ಹೇಳಿ ಜಿಮ್ ಸೀನಾಗೆ ಚಮಕ್ ಕೊಟ್ಟ ಗುಂಡಮ್ಮ… ಭರ್ಜರಿ ಟ್ವಿಸ್ಟ್
Annayya Serial: ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಹಳೆ ಗುಂಡಮ್ಮ ಕಂ ಬ್ಯಾಕ್ ಮಾಡಿದ್ದಾಳೆ. ಇಷ್ಟು ದಿನ ಗಂಡ ಸೀನಾನಿಗೆ ತಾನೇ ಡಿವೋರ್ಸ್ ಕೊಡುವುದಾಗಿ ಹೇಳಿ, ಸೀನಾ ಮತ್ತು ಪಿಂಕಿ ಮದುವೆ ಮಾಡುವುದಾಗಿ ಹೇಳಿದ್ದ ರಶ್ಮಿ, ಡಿವೋರ್ಸ್ ಆಫೀಸ್ ಗೆ ಹೋಗುತ್ತಿದ್ದಂತೆ ಸೀನಾಗೆ ಚಮಕ್ ಕೊಟ್ಟಿದ್ದಾರೆ.

ಅಣ್ಣಯ್ಯ ಸೀರಿಯಲ್
ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಎರಡೆರಡು ಟ್ವಿಸ್ಟ್ ರಿವೀಲ್ ಆಗಿದೆ. ಒಂದು ಕಡೆ ಪರಶು ಜೊತೆ ರತ್ನ ಮದುವೆ ಮಾಡಿಸಲು ಪಾರು ಒಪ್ಪಿಗೆ ಸೂಚಿಸಿದ್ರೆ, ಇನ್ನೊಂದು ಕಡೆ ಜಿಮ್ ಸೀನಾಗೆ ಡಿವೋರ್ಸ್ ಕೊಡ್ತೀನಿ ಎಂದು ಹೇಳಿದ ರಶ್ಮಿ, ಕೊನೆ ಕ್ಷಣದಲ್ಲಿ, ಡಿವೋರ್ಸ್ ಆಫೀಸ್ ನಲ್ಲೆ ಹೊಸ ಡ್ರಾಮ ಶುರುವಿಟ್ಟುಕೊಂಡಿದ್ದಾಳೆ.
ಏನಾಗ್ತಿದೆ ಕಥೆಯಲ್ಲಿ?
ಒಂದು ಕಡೆ ಜಿಮ್ ಸೀನಾ ಮತ್ತು ಪಿಂಕಿ ನಡುವಿನ ಕಳ್ಳಾಟ ಬೆಳಕಿಗೆ ಬಂದ ಬಳಿಕ ರಶ್ಮಿ, ಗಂಡನ ಪಿಂಕಿಗೆ ಬಿಟ್ಟು ಕೊಡಲು ರೆಡಿಯಾಗಿದ್ಲು, ಅತ್ತೆಯ ಕಾಟವನ್ನು ಸಹಿಸಿದ ಗುಂಡಮ್ಮ, ತಾನು ಜಿಮ್ ಸೀನಾಗೆ ಡಿವೋರ್ಸ್ ಕೊಡಲು ತಯಾರಿರುವುದಾಗಿಯೂ, ಸೀನಾ ಜೀವನದಿಂದ ದೂರ ಹೋಗಲು ರೆಡಿಯಾಗಿರೋದಾಗಿಯೂ ಹೇಳಿದ್ದಾಳೆ.
ಡಿವೋರ್ಸ್ ಆಫೀಸಲ್ಲಿ ಸೀನಾ-ರಶ್ಮಿ
ರಶ್ಮಿಗೆ ಡಿವೋರ್ಸ್ ಕೊಟ್ಟು, ಪಿಂಕಿ ಜೊತೆ ಮದುವೆಯಾಗಲು ತಯಾರಿ ಮಾಡಿಕೊಂಡೇ ಡಿವೋರ್ಸ್ ಆಫೀಸ್ ಗೆ ತೆರಳಿದ ಸೀನಾಗೆ ದೊಡ್ಡ ಚಮಕ್ ಕೊಟ್ಟಿದ್ದಾಳೆ ರಶ್ಮಿ. ಲಾಯರ್ ಮುಂದೆ ನಿಂತು ಇನ್ನೇನು ಡಿವೋರ್ಸ್ ಪೇಪರ್ ಗೆ ಸಹಿ ಹಾಕಬೇಕು ಎನ್ನುವಷ್ಟರಲ್ಲಿ ರಶ್ಮಿಗೆ ಅಣ್ಣ ಶಿವು ಮೇಲೆ ದೇವಿ ಬಂದಾಗ ಹೇಳಿದ ಮಾತು ನೆನಪಾಗುತ್ತದೆ.
ಚಮಕ್ ಕೊಟ್ಟ ಗುಂಡಮ್ಮ
‘ಕೈತುತ್ತು ಕೊಟ್ಟದ್ದನ್ನು ಇನ್ನೊಬ್ಬರಿಗೆ ಕೊಡಬಹುದು, ಆದ್ರೆ ಕೊಟ್ಟ ಪ್ರಸಾದವನ್ನು ಇನ್ನೊಬ್ಬರಿಗೆ ಕೊಡುವುದು ತಪ್ಪು’ ಎಂದು ಅಣ್ಣ ಹೇಳಿದ್ದು ನೆನಪಾಗಿ ರಶ್ಮಿ ಲಾಯರ್ ಮುಂದೆ ಜೋರಾರಿ ಬಾಯಿ ಬಡಿದುಕೊಳ್ಳುತ್ತಾ, ಅಯ್ಯೋ ಇದು ಡಿವೋರ್ಸ್ ಪೇಪರಾ? ನಂಗೆ ಗೊತ್ತೇ ಇಲ್ಲಾಯ್ತು ಸರ್, ನನಗೆ ಕೈಕೊಟ್ಟು ಬೇರೆಯವರ ಜೊತೆ ಓಡಿ ಹೋಗಲು ಪ್ಲ್ಯಾನ್ ಮಾಡ್ತಿದ್ದಾನೆ ಸರ್ ಎಂದು ಅಳುವ ಮೂಲಕ ಡಿವೋರ್ಸ್ ಕೊಡುವ ಯೋಚನೆಯಲ್ಲಿದ್ದ ಸೀನಾಗೆ ಚಮಕ್ ಕೊಡುತ್ತಾರೆ.
ಶಾರದಮ್ಮನ ಕೈಯಿಂದ ಲೀಲಾಗೆ ಏಟು
ಲೀಲಾಳಿಂದ ತನ್ನ ಮಗಳ ಬಾಳು ಹಾಳಾಗುತ್ತಿದೆ ಎಂದು ನೊಂದು ಕೊಂಡ ಶಾರದಮ್ಮ, ಲೀಲಾ ಹಿಂದಿನಿಂದ ಹೋಗಿ, ಮುಖಕ್ಕೆ ಬಟ್ಟೆ ಸುತ್ತಿ, ಸರಿಯಾಗಿ ಧರ್ಮದೇಟು ಹಾಕಿದ್ದಾರೆ. ಇದನ್ನು ನೋಡಿ ವೀಕ್ಷಕರಂತೂ ಸಿಕ್ಕಾಪಟ್ಟೆ ಖುಷಿಪಟ್ಟಿದ್ದಾರೆ. ಇನ್ನೂ ಎರಡು ಏಟು ಹೆಚ್ಚಾಗಿಯೇ ಕೊಡಬೇಕು ಎಂದು ಹೇಳಿದ್ದಾರೆ.
ಪರಶುವನ್ನು ನಂಬಿದ್ಲಾ ಪಾರು
ಇನ್ನೊಂದು ಕಡೆ ಇಲ್ಲಿವರೆಗೂ ಪರಶುವನ್ನು ಒಪ್ಪಿಕೊಳ್ಳದೇ ಇದ್ದ ಪಾರು ಕೊನೆಗೂ ಪರಶು ಮತ್ತು ರತ್ನ ಮದುವೆ ಮಾಡಿಸಲು ಒಪ್ಪಿಕೊಂಡಿದ್ದಾಳೆ. ಅಂದ್ರೆ ಒಳ್ಳೆಯವನು ಆಗಿರುವಂತೆ ಪರಶು ಆಡುತ್ತಿರ್ರುವ ನಾಟಕವನ್ನು ಪಾರು ಸಹ ನಂಬಿದ್ದಾಳೆ. ಶಿವುಗೆ ಈಗ ತಂಗಿಯರ ಮದುವೆ ಮಾಡುತ್ತಿರುವ ಖುಷಿ ಇದ್ದರೆ, ಮೂವರೂ ತಂಗಿಯರ ಜೀವನ ನನ್ನ ಕೈಯಾರೆ ನಾನು ಹಾಳು ಮಾಡುತ್ತಿದ್ದೇನೆ ಅನ್ನೋ ಸತ್ಯ ಮಾತ್ರ ಶಿವಣ್ಣನಿಗೆ ಗೊತ್ತೇ ಇಲ್ಲ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

