MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಮದುವೆ ಬಗ್ಗೆ ಅತಿದೊಡ್ಡ ಹಿಂಟ್​ ಕೊಟ್ಟ ರಮೋಲಾ: ನಟಿ ಮಾತಿಗೆ ಫ್ಯಾನ್ಸ್​ ತಲೆಯಲ್ಲಿ ಹುಳು

ಮದುವೆ ಬಗ್ಗೆ ಅತಿದೊಡ್ಡ ಹಿಂಟ್​ ಕೊಟ್ಟ ರಮೋಲಾ: ನಟಿ ಮಾತಿಗೆ ಫ್ಯಾನ್ಸ್​ ತಲೆಯಲ್ಲಿ ಹುಳು

'ಭರ್ಜರಿ ಬ್ಯಾಚುಲರ್ಸ್' ಶೋ ಮೂಲಕ ಜನಪ್ರಿಯರಾದ ರಮೋಲಾ ಮತ್ತು ಬುಲೆಟ್ ರಕ್ಷಕ್ ಜೋಡಿ ಇತ್ತೀಚೆಗೆ ಬಟ್ಟೆ ಅಂಗಡಿಯೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ತಮ್ಮ ಮದುವೆಯ ಕುರಿತ ಪ್ರಶ್ನೆಗೆ ನಟಿ ರಮೋಲಾ 'ಕಾದು ನೋಡಿ' ಎಂದು ನಿಗೂಢವಾಗಿ ಉತ್ತರಿಸಿದ್ದು, ಇದು ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.

2 Min read
Author : Suchethana D
Published : Sep 24 2025, 06:23 PM IST
Share this Photo Gallery
  • FB
  • TW
  • Linkdin
  • Whatsapp
16
ಭರ್ಜರಿ ಬ್ಯಾಚುಲರ್ಸ್​ ಕ್ಯೂಟ್​ ಜೋಡಿ...
Image Credit : Instagram

ಭರ್ಜರಿ ಬ್ಯಾಚುಲರ್ಸ್​ ಕ್ಯೂಟ್​ ಜೋಡಿ...

ಈ ಬಾರಿಯ ಭರ್ಜರಿ ಬ್ಯಾಚುಲರ್ಸ್​ ಷೋನಲ್ಲಿ ಹವಾ ಸೃಷ್ಟಿಸಿದ್ದ ಜೋಡಿಗಳಲ್ಲಿ ಒಂದು ರಮೋಲಾ ಮತ್ತು ಬುಲೆಟ್​ ರಕ್ಷಕ್​ ಅವರದ್ದು. ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರ ಮಗ ರಕ್ಷಕ್ ಬುಲೆಟ್ ಬಿಗ್​ಬಾಸ್​ ಬಳಿಕ ಸಕತ್ ಫೇಮಸ್​ ಆದವರು. ಬಿಗ್​ಬಾಸ್​ ಬಗ್ಗೆ ಹೇಳಿಕೆ ನೀಡಿ ಕಾಂಟ್ರವರ್ಸಿಗೆ ಒಳಗಾಗಿದ್ದರೂ ಇದೀಗ ಅವರಿಗೆ ಸಕತ್​ ಡಿಮಾಂಡ್​ ಕೂಡ ಇದೆ. ಇದೀಗ ಅವರು, ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಭರ್ಜರಿ ಬ್ಯಾಚುಲರ್ಸ್​ಗೆ ಎಂಟ್ರಿ ಕೊಟ್ಟಿದ್ದಾರೆ. ಇದರಲ್ಲಿ ಅವರಿಗೆ, ಸೀತಾರಾಮ ವಿಲನ್​ ಚಾಂದನಿ ಅರ್ಥಾತ್​ ನಟಿ ರಮೋಲಾ ಜೋಡಿಯಾಗಿದ್ದರು. ಇದಾಗಲೇ ಇವರಿಬ್ಬರೂ ಸಾಕಷ್ಟು ಲವ್​ಸಾಂಗ್​ಗಳನ್ನೂ ಮಾಡಿದ್ದರು.

26
ಲವ್​ಸೀನ್​ ಬಗ್ಗೆ ಮಾತನಾಡಿದ್ದ ರಕ್ಷಕ್​
Image Credit : Instagram

ಲವ್​ಸೀನ್​ ಬಗ್ಗೆ ಮಾತನಾಡಿದ್ದ ರಕ್ಷಕ್​

ಆರಂಭದಲ್ಲಿ ಲವ್​ ಸೀನ್​ಗೆ ಹಿಂದೇಟು ಹಾಕುತ್ತಿದ್ದ ರಕ್ಷಕ್​ (Bullet Rakshak) ಅವರಿಗೆ ಆ ಬಗ್ಗೆ ಚೆನ್ನಾಗಿ ಕಲಿಸಿಕೊಟ್ಟವರು ರಮೋಲಾ. ಕೊನೆಗೆ ಈ ಷೋನಲ್ಲಿ ಅತ್ಯಂತ ಹೆಚ್ಚು ಮುತ್ತು ಕೊಟ್ಟಿರೋ ಜೋಡಿ ಎನ್ನಿಸಿಕೊಂಡದ್ದು ಇದೇ ಜೋಡಿ. ಈ ಬಗ್ಗೆ ಮಾತನಾಡಿದ್ದ ರಕ್ಷಕ್​, ತಮಗೆ ಮುತ್ತು ಕೊಡಲು ಇಷ್ಟವಿಲ್ಲದಿದ್ದರೂ ಬಲವಂತದಿಂದ ಕೊಡಿಸಿದ್ರು ಎಂದಿದ್ದರು. 'ನನಗೆ ಮುತ್ತು ಕೊಡಲು ಇಷ್ಟವಿರಲಿಲ್ಲ. ನಾನು ಸುಮ್ಮನೇ ಇದ್ದೆ. ಬಲವಂತದಿಂದ ಕೊಡಿಸಿದ್ರು. ಮುತ್ತು ಕೊಡುವುದು ಎಂದರೆ ನನಗೆ ಸಿಕ್ಕಾಪಟ್ಟೆ ನಾಚಿಕೆ. ನನಗೆ ಆರಂಭದಲ್ಲಿ ರೊಮ್ಯಾಂಟಿಕ್​ ಡಾನ್ಸ್​ ಮಾಡಿಸಿದ್ರು. ಮೊದಲಿಗೆ ಇವರನ್ನು (ರಮೋಲಾ) ರನ್ನು ಟಚ್​ ಮಾಡಲೂ ನಾಚಿಕೆ ಆಗ್ತಿತ್ತು. ಅಂಥದ್ದರಲ್ಲಿ ಮುತ್ತು ಕೊಟ್ಟಿದ್ದೇನೆ ಎಂದರೆ ಅರ್ಥಮಾಡಿಕೊಳ್ಳಿ. ರಮೋಲಾ (Ramola) ನನ್ನನ್ನು ಎಷ್ಟು ಚೇಂಜ್​ ಮಾಡಿದ್ದಾರೆ' ಎಂದು ಹೇಳಿದ್ದರು.

Related Articles

Related image1
'ಮುತ್ತು ಕೊಡು ಇಲ್ಲಾ ಮೇಲಿಂದ ಬಿದ್ದು ಸಾಯಿ' ಅಂದ್ರು: Bharjari Bachelors ಘಟನೆ ನೆನೆದ ರಕ್ಷಕ್​-ರಮೋಲಾ!
Related image2
Bharjari Bachelors Season 2: ತನುವನು ತಣಿಸು, ಮಜ ಕೊಡು... ಎಂದೆಲ್ಲಾ ಬುಲೆಟ್​ ರಕ್ಷಕ್​ಗೆ ಕಾಡಿಬೇಡಿದ ನಟಿ ರಮೊಲಾ!
36
ಬಟ್ಟೆ ಅಂಗಡಿಯಲ್ಲಿ ರಮೋಲಾ ಮತ್ತು ರಕ್ಷಕ್​
Image Credit : Zee Kannada Facebook

ಬಟ್ಟೆ ಅಂಗಡಿಯಲ್ಲಿ ರಮೋಲಾ ಮತ್ತು ರಕ್ಷಕ್​

ಇದೀಗ ರಮೋಲಾ ಮತ್ತು ರಕ್ಷಕ್​ ಬಟ್ಟೆ ಅಂಗಡಿಯೊಂದರಲ್ಲಿ ಕ್ಯಾಮೆರಾ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಇವರು ಬಟ್ಟೆ ಖರೀದಿ ಮಾಡವುದನ್ನು ನೋಡಿದವರು ಬಿಟ್ಟಾರೆಯೆ? ನಿಮ್ಮ ಮದುವೆ ಯಾವಾಗ ಎಂದು ಕೇಳಿದ್ದಾರೆ. ಇದು ರಮೋಲಾ ಅವರಿಗೆ ಸ್ವಲ್ಪ ಇರುಸು ಮುರುಸು ತರಿಸಿದೆ. ಆದರೂ ನಗುಮುಖ ಮಾಡಿಕೊಂಡು ಕಾದು ನೋಡಿ ಎಂದು ಕನ್ನಡದಲ್ಲಿ ಹೇಳಿದ್ದಾರೆ. ಸ್ವಲ್ಪ ಜೋರಾಗಿ ಹೇಳಿ ಎಂದಾಗ Wait and See ಎಂದು ಹೇಳಿದ್ದಾರೆ.

46
ಒಳಗೊಳಗೇ ನಕ್ಕ ರಕ್ಷಕ್​
Image Credit : Instagram

ಒಳಗೊಳಗೇ ನಕ್ಕ ರಕ್ಷಕ್​

ಪಕ್ಕದಲ್ಲಿಯೇ ಇದ್ದ ರಕ್ಷಕ್​ ಇವರ ಪ್ರಶ್ನೆನೂ ಸಾಕು, ಉತ್ತರಿಸೋದೂ ಸಾಕು ಎನ್ನುವಂತೆ ಮೊಬೈಲ್​ನಲ್ಲಿ ಬಿಜಿಯಾಗಿರುವುದನ್ನು ನೋಡಬಹುದು. ಆದರೆ ರಮೋಲಾ ಅವರು ಉತ್ತರಿಸುವಾಗ ಮಾತ್ರ ಒಳಗೊಳಗೆ ಮುಗುಳು ನಗುತ್ತಿರುವುದನ್ನು ಈ ವಿಡಿಯೋದಲ್ಲಿ ನೋಡಬಹುದಾಗಿದ್ದು, ಈ ಬಗ್ಗೆ ನೆಟ್ಟಿಗರು ಕೂಡ ಅವರ ಕಾಲೆಳೆದಿದ್ದಾರೆ. ಆದರೆ ಫ್ಯಾನ್ಸ್​ ಮಾತ್ರ ರಮೋಲಾ ಮದುವೆಯ ಬಗ್ಗೆ ಏನು ಹೇಳಿದ್ದಾರೆ ಎಂದು ಅರ್ಥವಾಗದೇ ಹುಳು ಬಿಟ್ಟುಕೊಂಡಿದ್ದಾರೆ.

56
ನಟಿ ಕುರಿತು
Image Credit : Instagram

ನಟಿ ಕುರಿತು

ಇನ್ನು ನಟಿ ರಮೋಲಾ ಕುರಿತು ಹೇಳುವುದಾದರೆ, ಇವರು ಕನ್ನಡತಿ ಸೀರಿಯಲ್​ನಿಂದ ಫೇಮಸ್​ ಆದವರು. ಇದರಲ್ಲಿ ವಿಲನ್ ಆಗಿ ನಟಿಸಿ, ಕೆಲವೇ ಸಮಯದಲ್ಲಿ ದೊಡ್ಡ ಅಭಿಮಾನಿಗಳ ಬಳಗವನ್ನು ಹೊಂದಿದ್ದರು. ಆದರೆ ಕಿರುತೆರೆಯನ್ನು ತೊರೆದು ವರ್ಷ ಕಳೆದ ಬಳಿಕ ರೀ ಎಂಟ್ರಿ ಕೊಟ್ಟರು.

66
ಮಾಡೆಲ್ ಆಗಿದ್ದ ರಮೋಲಾ
Image Credit : our own

ಮಾಡೆಲ್ ಆಗಿದ್ದ ರಮೋಲಾ

ಮಾಡೆಲ್ ಆಗಿದ್ದ ರಮೋಲಾ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಅದ್ಭುತವಾಗಿ ಮೂಡಿ ಬರುತ್ತಿದ್ದ ಕನ್ನಡತಿ ಧಾರಾವಾಹಿಯಲ್ಲಿ ನಟಿಸಿದ್ದರು. ಈ ಧಾರಾವಾಹಿಯಲ್ಲಿ ರಮೋಲಾ ಅವರ ವಿಲನ್ ಪಾತ್ರವೂ ಕೊಂಚ ಡಿಫರೆಂಟ್ ಆಗಿಯೇ ಇತ್ತು. ಅಂದಹಾಗೆ ರಮೋಲಾ ಅವರು, ಬೆಲ್ಲಿ ಡ್ಯಾನ್ಸ್ ಎಕ್ಸ್​ಪರ್ಟ್​. ಅದನ್ನು ಈ ವಿಡಿಯೋ ನೋಡಿದರೆ ತಿಳಿಯಬಹುದು. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಬಿಗ್ ಬಾಸ್ ಮಿನಿ ಸೀಸನ್ ನಲ್ಲೂ ಭಾಗವಹಿಸಿದ್ದರು. ನ್ಯೂಸ್​ ಕನ್ನಡಬೀಟ್​ಗೆ ನೀಡಿರುವ ಸಂದರ್ಶನ ಇಲ್ಲಿದೆ…

ಇದನ್ನೂ ಓದಿ: Bharjari Bachelors: ರಕ್ಷಕ್​ಗೆ ಅದಿಲ್ಲ, ಅದಕ್ಕೇ ಹಗ್​ ಮಾಡಲ್ಲ ಎನ್ನೋದಾ ನಟಿ ರಮೋಲಾ? ವೇದಿಕೆ ಮೇಲೆ ಪೆಚ್ಚಾದ ಬುಲೆಟ್​

 
 
 
 
View this post on Instagram
 
 
 
 
 
 
 
 
 
 
 

A post shared by NewsBeatKannada (@newsbeatkannada)

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಜೀ ಕನ್ನಡ
ಕನ್ನಡ ಧಾರಾವಾಹಿ
ರಿಯಾಲಿಟಿ ಶೋ
ಸಂಬಂಧಗಳು

Latest Videos
Recommended Stories
Recommended image1
Bigg Boss ಶೋಗೆ ಕಾಲಿಟ್ಟಿದ್ದೇ ಕಾಲಿಟ್ಟಿದ್ದು.. ರಾಜಯೋಗ ಬಂತು..! ಜಾಕ್‌ಫಾಟ್‌ ಹೊಡೆದ Gilli Nata
Recommended image2
ಬಿಗ್‌ಬಾಸ್ ಮುಗಿದ್ರೂ ನಿಲ್ಲದ ಕೋಳಿ ಜಗಳ? ಅಶ್ವಿನಿ ಗೌಡ ವಿರುದ್ಧ ಚೈತ್ರಾ ಕುಂದಾಪುರ ಗರಂ
Recommended image3
‘ದೃಷ್ಟಿ ಬೊಟ್ಟು’ ಧಾರಾವಾಹಿಯ ಕೃಷ್ಣಸುಂದರಿಯ ಈ ಲುಕ್ ಹೇಗಿದೆ?
Related Stories
Recommended image1
'ಮುತ್ತು ಕೊಡು ಇಲ್ಲಾ ಮೇಲಿಂದ ಬಿದ್ದು ಸಾಯಿ' ಅಂದ್ರು: Bharjari Bachelors ಘಟನೆ ನೆನೆದ ರಕ್ಷಕ್​-ರಮೋಲಾ!
Recommended image2
Bharjari Bachelors Season 2: ತನುವನು ತಣಿಸು, ಮಜ ಕೊಡು... ಎಂದೆಲ್ಲಾ ಬುಲೆಟ್​ ರಕ್ಷಕ್​ಗೆ ಕಾಡಿಬೇಡಿದ ನಟಿ ರಮೊಲಾ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved