ಅಬ್ಬಬ್ಬಾ… ಇದೇನಿದು ಸಂಗೀತಾ ಶೃಂಗೇರಿ ಹೊಸ ಅವತಾರ… ದೀಪಾವಳಿ ಪಟಾಕಿ!
ಕನ್ನಡ ಬಿಗ್ ಬಾಸ್ ಸೀಸನ್ 10ರಲ್ಲಿ ಸದ್ದು ಮಾಡಿದ ಸಂಗೀತ ಶೃಂಗೇರಿ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಹೊಸ ಲುಕ್ ನೊಂದಿಗೆ ಕಾಣಿಸಿಕೊಂಡಿದ್ದಾರೆ. ಸಂಗೀತ ಸಖತ್ ಗ್ಲಾಮರಸ್ ಆಗಿ ಕಾಣಿಸಿಕೊಂಡಿದ್ದು, ಅಭಿಮಾನಿಗಳು ದೀಪಾವಳಿಗೆ ಪಟಾಕಿ ಜೋರಾಗಿಯೇ ಇದೆ ಎನ್ನುತ್ತಿದ್ದಾರೆ.

ಸಂಗೀತ ಶೃಂಗೇರಿ
ನಟಿ ಸಂಗೀತ ಶೃಂಗೇರಿ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಸಖತ್ ಗ್ಲಾಮರಸ್ ಆಗಿರುವ ಪೋಟೊಗಳನ್ನು ಸೋಶಿಯಲ್ ಮೀಡೀಯಾದಲ್ಲಿ ಹಂಚಿಕೊಂಡಿದ್ದಾರೆ. ಅಭಿಮಾನಿಗಳು ನಟಿಯ ಲುಕ್ ನೋಡಿ ಪಟಾಕಿ ಪೋರಿ ಎನ್ನುತ್ತಿದ್ದಾರೆ.
Lights Camera Action ಎಂದು ಪೋಸ್ ಕೊಟ್ಟ ನಟಿ
ಸಂಗೀತ ಶೃಂಗೇರಿ ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಸಖತ್ ಬೋಲ್ಡ್ ಆಗಿರುವ ಒಂದಷ್ಟು ಫೋಟೊಗಳನ್ನು ಶೇರ್ ಮಾಡಿ, Lights Camera Action ಎಂದು ಕ್ಯಾಪ್ಶನ್ ಕೊಟ್ಟಿದ್ದಾರೆ.
ಬೋಲ್ಡ್ ಲುಕ್ ವೈರಲ್
ಸಂಗೀತ ಶೃಂಗೇರಿ ಕಪ್ಪು ಬಣ್ಣದ ಬ್ರೇಜರ್, ಕಪ್ಪು ಪ್ಯಾಂಟ್ ಜೊತೆ ಕಪ್ಪು ಟ್ರಾನ್ಸಪರೆಂಟ್ ಶ್ರಗ್ ಹಾಕಿದ್ದು, ಗುಂಗುರು ಕೂದಲಿನ ಜೊತೆಗೆ ಕಣ್ಣಲ್ಲೇ ಕೊಲ್ಲುವಂತಹ ಲುಕ್ ಕೊಟ್ಟಿದ್ದಾರೆ ಈ ಬೆಡಗಿ.
ಬಿಗ್ ಬಾಸ್ ಬೆಡಗಿ
ಸಂಗೀತ ಶೃಂಗೇರಿ ಕನ್ನಡ ಸೀರಿಯಲ್, ಸಿನಿಮಾಗಳಲ್ಲಿ ನಟಿಸಿದ್ದರೂ ಸಹ, ಅವರಿಗೆ ಹೆಸರು, ಜನಪ್ರಿಯತೆ ತಂದುಕೊಟ್ಟಿದ್ದು ಕನ್ನಡ ಬಿಗ್ ಬಾಸ್. ಬಿಗ್ ಬಾಸ್ ಸಿಂಹಿಣಿ ಅಂತಾನೆ ಜನಪ್ರಿಯತೆ ಪಡೆದಿದ್ದರು ನಟಿ.
ಬಿಗ್ ಬಾಸ್ ಸೀಸನ್ 10
ಬಿಗ್ ಬಾಸ್ ಸೀಸನ್ 10ರ ಸ್ಪರ್ಧಿಯಾಗಿದ್ದ ಸಂಗೀತ ಶೃಂಗೇರಿ ಆರಂಭದಲ್ಲಿ ಸಿಕ್ಕಾಪಟ್ಟೆ ಫ್ಯಾನ್ಸ್ ಪಡೆದುಕೊಂಡರು, ಆದರೆ ನಂತರದ ದಿನಗಳಲ್ಲಿ ಬಿಗ್ ಬಾಸ್ ಮನೆಯಲ್ಲಿ ಅವರನ್ನು ತೋರಿಸಿದ ರೀತಿಯಿಂದಾಗಿ ಜನರಿಂದ ಉಗಿಸಿಕೊಂಡಿದ್ದೂ ಇದೆ. ಕೊನೆಗೆ ಸಂಗೀತಾ ಶೃಂಗೇರಿಯ ನಿಜವಾದ ಗುಣ ಗೊತ್ತಾಗಿ ಅಭಿಮಾನಿಗಳ ಸಂಖ್ಯೆ ಸಿಕ್ಕಾಪಟ್ಟೆ ಏರಿಕೊಂಡಿತು.
ಆಟಕ್ಕೂ ಸೈ, ಮನರಂಜನೆಗೂ ಸೈ
ಸಂಗೀತ ಶೃಂಗೇರಿ ಬಿಗ್ ಬಾಸ್ ಮನೆಯಲ್ಲಿ ಆಟವಾಡೋದಕ್ಕೂ ಮುಂದಿದ್ದರು, ಮನರಂಜನೆ ನೀಡೋದ್ರಲ್ಲೂ ಮುಂದು, ಆ ಮೂಲಕ ಉಳಿದ ಸ್ಪರ್ಧಿಗಳಿಗೆ ಠಕ್ಕರ್ ನೀಡುತ್ತಿದ್ದರು. ಹಾಗಾಗಿಯೇ ಇವತ್ತು ಬಿಗ್ ಬಾಸ್ ನಡೆಯುವಾಗಲು ಜನ ಅವರನ್ನ ನೆನಪು ಮಾಡಿಕೊಳ್ಳುತ್ತಾರೆ.
ಸೀರಿಯಲ್ ಗಳು
ಸಂಗೀತ ಕನ್ನಡದ ಜನಪ್ರಿಯ ಧಾರಾವಾಹಿಯಾಗಿದ್ದ ಹರ ಹರ ಮಹದೇವದಲ್ಲಿ ಸತಿಯ ಪಾತ್ರದ ಮೂಲಕ ನಟನಾ ಲೋಕಕ್ಕೆ ಎಂಟ್ರಿ ಕೊಟ್ಟಿದ್ದರು. ಈ ಧಾರಾವಾಹಿಯಲ್ಲಿ ವಿನಯ್ ಗೌಡ ಶಿವನ ಪಾತ್ರದಲ್ಲಿ ನಟಿಸಿದ್ದರು. ಜೊತೆಗೆ ತೇನೆ ಮನಸುಲು ಎನ್ನುವ ತೆಲುಗು ಸೀರಿಯಲ್ ನಲ್ಲೂ ನಟಿಸಿದ್ದರು.
ರಿಯಾಲಿಟಿ ಶೋಗಳು
ಇದಲ್ಲದೇ ಸಂಗೀತ ರಿಯಾಲಿಟಿ ಶೋಗಳ ಮೂಲಕವೂ ಜನಪ್ರಿಯತೆ ಗಳಿಸಿದ್ದರು. ಬಿಗ್ ಬಾಸ್ ಅಲ್ಲದೇ ಇವರು ಸ್ಟಾರ್ ಸುವರ್ಣ ವಾಹಿನಿಯ ಸೂಪರ್ ಜೋಡಿ, ಜೊತೆಗೆ ಪಜಾಮ ಪಾರ್ಟಿಯಲ್ಲೂ ಕಾಣಿಸಿಕೊಂಡಿದ್ದರು.
ಸಂಗೀತ ಶೃಂಗೇರಿ ನಟಿಸಿದ ಸಿನಿಮಾಗಳು
ಸಂಗೀತ A+, ಸಾಲಗಾರ ಸಹಕಾರ ಸಂಘ, 777 ಚಾರ್ಲಿ, ಲಕ್ಕಿ ಮ್ಯಾನ್, ಪಂಪ ಪಾಂಚಾಲಿ ಪರಶಿವಮೂರ್ತಿ, ಶಿವಾಜಿ ಸುರತ್ಕಲ್ 2, ಮಾರಿಗೋಲ್ಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಸದ್ಯ ಒಂದು ಹಾರರ್ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

