BBK 12 : ಬಿಗ್ ಬಾಸ್‌ನಲ್ಲಿ ಗಿಲ್ಲಿ ಗಿಮಿಕ್, ದಾಖಲೆಯಾಯ್ತು ಇನ್ಸ್ಟಾ ಫಾಲೋವರ್ಸ್
ಬಿಗ್ ಬಾಸ್ ಮನೆ ಸೇರ್ತಿದ್ದಂತೆ ಗಿಲ್ಲಿ ಲಕ್ ಬದಲಾಗಿದೆ. ಗಿಲ್ಲಿ ಫಾಲೋವರ್ಸ್ ಸಂಖ್ಯೆ ಏರ್ತಾನೇ ಇದೆ. ಆರಂಭದಲ್ಲಿ 1 ಲಕ್ಷವಿದ್ದ ಗಿಲ್ಲಿ ಫಾಲೋವರ್ಸ್ ಸಂಖ್ಯೆ ಈಗ ಎಷ್ಟಾಗಿದೆ ಗೊತ್ತಾ?

ಬಿಗ್ ಬಾಸ್ ನಲ್ಲಿ ಗಿಲ್ಲಿ ಕಮಾಲ್
ಕಾಮಿಡಿ ಕಿಲಾಡಿಗಳು ಶೋನಲ್ಲಿ ರನ್ನರ್ ಅಪ್ ಆಗಿದ್ದ ಗಿಲ್ಲಿ ನಟ, ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಬಿಗ್ ಬಾಸ್ ಶೋನಲ್ಲಿ ಮಿಂಚುತ್ತಿದ್ದಾರೆ. ಕಾಮಿಡಿ ಕಿಲಾಡಿಗಳು, ಡಾನ್ಸ್ ಕರ್ನಾಟಕ ಡಾನ್ಸ್ ಸೇರಿದಂತೆ ಕೆಲ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದ ಗಿಲ್ಲಿ ಈಗ ಬಿಗ್ ಬಾಸ್ ನಲ್ಲಿ ಕಾಮಿಡಿ ಮೂಲಕವೇ ಲಕ್ಷಾಂತರ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ಮಕ್ಕಳಿಂದ ವೃದ್ಧರವರೆಗೆ ಎಲ್ಲರ ಬಾಯಲ್ಲೂ ಗಿಲ್ಲಿ ನಟನದ್ದೇ ಮಾತು.
ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚಾಯ್ತು ಫಾಲೋವರ್ಸ್
ಬಿಗ್ ಬಾಸ್ ಮನೆಗೆ ನಟಿ ಕಾವ್ಯಾ ಜೊತೆ ಜೋಡಿಯಾಗಿ ಪ್ರವೇಶ ಮಾಡಿದ್ದ ಗಿಲ್ಲಿ ಆರಂಭದಿಂದಲೂ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಗಿಲ್ಲಿ ನಟ ಹಾಸ್ಯಕ್ಕೆ ಇಂಪ್ರೆಸ್ ಆಗಿದ್ದ ಫ್ಯಾನ್ಸ್, ಗಿಲ್ಲಿ ಇನ್ಸ್ಟಾಖಾತೆ ಸರ್ಚ್ ಮಾಡಿದ್ದು ಸುಳ್ಳಲ್ಲ.
1 ಲಕ್ಷದಿಂದ 5 ಲಕ್ಷಕ್ಕೇರಿದ ಫಾಲೋವರ್ಸ್
ಗಿಲ್ಲಿ ನಟ ಬಿಗ್ ಬಾಸ್ ಮನೆ ಪ್ರವೇಶ ಮಾಡುವ ಮುನ್ನ ಇನ್ಸ್ಟಾಗ್ರಾಮ್ ನಲ್ಲಿದ್ದಿದ್ದು 1 ಲಕ್ಷ ಫಾಲೋವರ್ಸ್. ರಿಯಾಲಿಟಿ ಶೋಗಳಲ್ಲಿ ಆಕ್ಟಿವ್ ಆಗಿದ್ದ ಗಿಲ್ಲಿ, ಸೋಶಿಯಲ್ ಮೀಡಿಯಾದಲ್ಲಿ ಅಷ್ಟೊಂದು ಸಕ್ರಿಯವಾಗಿರಲಿಲ್ಲ. ಜನಕ್ಕೆ ಗಿಲ್ಲಿ ಬಗ್ಗೆ ಹೆಚ್ಚು ಮಾಹಿತಿ ಕೂಡ ಇರಲಿಲ್ಲ. ಆದ್ರೆ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡ್ತಿದ್ದಂತೆ ಗಿಲ್ಲಿ ಫಾಲೋವರ್ಸ್ ಸಂಖ್ಯೆ 5 ಲಕ್ಷಕ್ಕೆ ಏರಿದೆ.
ಮಿಲಿಯನ್ ನಿರೀಕ್ಷೆಯಲ್ಲಿ ಫ್ಯಾನ್ಸ್
ಬಿಗ್ ಬಾಸ್ ಮನೆಯ ಎಲ್ಲ ಮೂಲೆಯಲ್ಲೂ ಗಿಲ್ಲಿ ಕಾಣಿಸಿಕೊಳ್ತಿದ್ದಾರೆ. ಅಶ್ವಿನಿ, ರಕ್ಷಿತಾ, ರಘು ಜೊತೆ ಜಗಳ ಮಾಡಿದ್ರೂ ಅವರ ಜೊತೆಯೇ ತಮಾಷೆ ಮಾಡ್ತಾ ತಿರುಗುವ ಗಿಲ್ಲಿಗೆ ದಿನ ಕಳೆದಂತೆ ಫಾಲೋವರ್ಸ್ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿದೆ. ಗಿಲ್ಲಿ ಫಾಲೋವರ್ಸ್ ಸಂಖ್ಯೆ 1 ಮಿಲಿಯನ್ ದಾಟಲಿದೆ ಎನ್ನುವ ನಿರೀಕ್ಷೆಯಲ್ಲಿ ಫ್ಯಾನ್ಸ್ ಇದ್ದಾರೆ.
ಗಿಲ್ಲಿ ಕೈಗೆ ಬಿಗ್ ಬಾಸ್ ಟ್ರೋಫಿ
ಇನ್ನು ಗಿಲ್ಲಿ ಇನ್ಸ್ಟಾ ಖಾತೆಯಲ್ಲಿ ಫಾಲೋವರ್ಸ್ ಹೆಚ್ಚಾಗ್ತಿದ್ದಂತೆ ಫ್ಯಾನ್ಸ್ ಆಸೆ ಗರಿಗೆದರಿದೆ. ಗಿಲ್ಲಿ ಕೈನಲ್ಲಿ ಬಿಗ್ ಬಾಸ್ ಟ್ರೋಫಿ ನೋಡ್ಬೇಕು, ಬಿಗ್ ಬಾಸ್ ವಿನ್ನರ್ ಗಿಲ್ಲಿ ಆಗ್ಬೇಕು ಅಂತ ಅಭಿಮಾನಿಗಳು ತಮ್ಮ ಕಮೆಂಟ್ ಶುರು ಮಾಡಿದ್ದಾರೆ.
ಅಶ್ವಿನಿ ಜೊತೆ ಸೂಪರ್ ಡಾನ್ಸ್
ಅಶ್ವಿನಿ ಹಾಗೂ ಗಿಲ್ಲಿ ಹಾವು ಮುಂಗುಸಿಯಂತಿದ್ರೂ ಇಬ್ಬರ ಮಧ್ಯೆ ಭಿನ್ನವಾದ ಬಾಂಡಿಂಗ್ ಇದೆ. ಕಿಚ್ಚನ ವೇದಿಕೆಯಲ್ಲಿ ಅಶ್ವಿನಿ ಹಾಗೂ ಗಿಲ್ಲಿ ರೋಮ್ಯಾಂಟಿಕ್ ಹಾಡಿಗೆ ಡಾನ್ಸ್ ಮಾಡಿದ್ದಾರೆ. ಇದು ಪ್ರೇಕ್ಷಕರನ್ನು ಮತ್ತಷ್ಟು ಸೆಳೆದಿದೆ.
ಎರಡು ಬಾರಿ ಜೈಲು ಸೇರಿದ ಗಿಲ್ಲಿ
ಗಿಲ್ಲಿ ಮನೆಯಲ್ಲಿ ಕೆಲ್ಸ ಮಾಡೋದಿಲ್ಲ ಎನ್ನುವ ಗಂಭೀರ ಆರೋಪ ಇದೆ. ಹೊರಗೆ ಬಂದ ಕೆಲ ಸ್ಪರ್ಧಿಗಳು ಇದನ್ನೇ ಹೇಳಿದ್ದಾರೆ. ಟಾಸ್ಕ್ ಬಂದಾಗ್ಲೂ ಗಿಲ್ಲಿ ಪ್ರದರ್ಶನ ಹೇಳಿಕೊಳ್ಳುವಂತಿಲ್ಲ. ಆದ್ರೆ ಅವರ ಹಾಸ್ಯವೇ ಅವರಿಗೆ ಪ್ಲಸ್ ಪಾಯಿಂಟ್ ಆಗಿದೆ. ಎಲ್ಲರನ್ನು ತಮ್ಮ ಮಾತಿನಿಂದ್ಲೇ ಹಿಡಿದಿಡುತ್ತಿರುವ ಗಿಲ್ಲಿ ಈಗಾಗ್ಲೇ ಎರಡು ಬಾರಿ ಕಳಪೆ ಪಡೆದು ಜೈಲಿಗೆ ಹೋಗಿ ಬಂದಿದ್ದಾರೆ.
ಗಿಲ್ಲಿ ಏನು ಮಾಡಿದ್ರೂ ಸುದ್ದಿ
ಗಿಲ್ಲಿ ಫ್ಯಾನ್ಸ್ ಸಂಖ್ಯೆ ಎಷ್ಟಿದೆ ಅಂದ್ರೆ ಇಡೀ ದಿನ ಜನ ಲೈವ್ ನೋಡ್ತಿದ್ದಾರೆ. ಯಾವ್ದೇ ಒಂದು ಕಂಟೆಂಟ್ ಮಿಸ್ ಆಗ್ದಂತೆ ಕಣ್ಣಲ್ಲಿ ಕಣ್ಣಿಟ್ಟು ನೋಡೋದಲ್ದೆ ಕಲರ್ಸ್ ಕನ್ನಡ ಪ್ರಸಾರ ಮಾಡದ ಕೆಲ ಕ್ಲಿಪ್ ಗಳನ್ನು ತಮ್ಮ ಇನ್ಸ್ಟಾಖಾತೆಯಲ್ಲಿ ಪೋಸ್ಟ್ ಮಾಡಿ ಹೈಪ್ ನೀಡ್ತಿದ್ದಾರೆ. ಸದ್ಯ ರಘು, ಗಿಲ್ಲಿಗೆ ಚಪಾತಿ ನೀಡದ ವಿಷ್ಯ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

