ಸರಿಗಮಪ ಟ್ರೋಫಿಯನ್ನು ಪುನೀತ್ ಸಮಾಧಿಗೆ ಅರ್ಪಿಸಿದ ಶಿವಾನಿ ಸ್ವಾಮಿ: ಫೋಟೋಸ್ ವೈರಲ್
ಸರಿಗಮಪ ಗೆಲುವಿನ ಬಳಿಕ ಬೀದರ್‌ನ ಶಿವಾನಿ ಸ್ವಾಮಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿದ್ದಾರೆ. ಜೊತೆಗೆ ನಮನ ಸಲ್ಲಿಕೆ ಮಾಡಿದ್ದಾರೆ.

ʻಜೀ ಕನ್ನಡʼ ವಾಹಿನಿಯ ಜನಪ್ರಿಯ ಸಿಂಗಿಂಗ್ ಶೋ ʻಸರಿಗಮಪ ಸೀಸನ್ 21ʼ ಇತ್ತೀಚೆಗಷ್ಟೇ ಮುಕ್ತಾಯವಾಗಿದೆ. ಈ ಸೀಸನ್‌ನ ವಿನ್ನರ್ ಆಗಿ ಬೀದರ್‌ನ ಶಿವಾನಿ ಸ್ವಾಮಿ ಹೊರಹೊಮ್ಮಿದ್ದಾರೆ.
ಸರಿಗಮಪ ಗೆಲುವಿನ ಬಳಿಕ ಅವರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿದ್ದಾರೆ. ಜೊತೆಗೆ ನಮನ ಸಲ್ಲಿಕೆ ಮಾಡಿದ್ದಾರೆ. ಸದ್ಯ ಸಂದರ್ಭದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿವೆ.
ಪುನೀತ್ ಸಮಾಧಿ ಮೇಲೆ ಸರಿಗಮಪ ಸೀಸನ್ 21ರ ವಿನ್ನರ್ ಟ್ರೋಫಿಯನ್ನು ಇಟ್ಟು, ಅವರ ಆಶೀರ್ವಾದವನ್ನು ಶಿವಾನಿ ಪಡೆದುಕೊಂಡಿದ್ದಾರೆ. ಜೊತೆಗೆ ಅವರ ಕುಟುಂಬಸ್ಥರು ಕೂಡ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಜೀ ಕನ್ನಡ ವಾಹಿನಿಯ ಸರಿಗಮಪ ಸೀಸನ್ 21 ಶೋ ಇತ್ತೀಚೆಗಷ್ಟೇ ಮುಕ್ತಾಯವಾಗಿದೆ. ಆರು ಜನ ಫೈನಲಿಸ್ಟ್‌ಗಳಲ್ಲಿ ಅಂತಿಮವಾಗಿ ಬೀದರ್‌ನ ಶಿವಾನಿ ಸ್ವಾಮಿ ಹೆಚ್ಚು ವೋಟ್ ಪಡೆದು ವಿಜೇತರಾಗಿದ್ದಾರೆ.
ʻಸರಿಗಮಪ ಸೀಸನ್ 21’ ಶೋನಲ್ಲಿ ಆರು ಜನ ಫೈನಲಿಸ್ಟ್‌ಗಳಲ್ಲಿ ಬೀದರ್‌ನ ಶಿವಾನಿ ಸ್ವಾಮಿ ವಿನ್ನರ್ ಪಟ್ಟ ಅಲಂಕರಿಸಿದ್ದರು. ವಿನ್ನರ್ ಶಿವಾನಿ ಸ್ವಾಮಿಗೆ ವಿನ್ನಿಂಗ್ ಟ್ರೋಫಿ ಜೊತೆಗೆ 15 ಲಕ್ಷ ರೂ. ಮೌಲ್ಯದ ಚಿನ್ನದ ನಾಣ್ಯ ಸಿಕ್ಕಿತ್ತು.
ಜೊತೆಗೆ ಪರ್ಫಾಮರ್ ಆಫ್ ದಿ ಸೀಸನ್ ಪ್ರಶಸ್ತಿ ಕೂಡ ಶಿವಾನಿ ಸ್ವಾಮಿ ಪಾಲಾಗಿತ್ತು. ಇದಕ್ಕಾಗಿ ಶಿವಾನಿ ಅವರಿಗೆ ಮಾರುತಿ ಸುಜುಕಿ ಸ್ವಿಫ್ಟ್ ಕಾರನ್ನು ಸಹ ಗಿಫ್ಟ್ ಆಗಿ ನೀಡಲಾಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

