MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಜೈಲಿನಲ್ಲಿರುವ ತಾಂಡವ್ ನಿಂದ ತನ್ವಿಗೆ ಬಂತು ಲೆಟರ್ ! ಸಾಕಪ್ಪ, ಮುಗ್ಸಿ ಅಂತಿದ್ದಾರೆ ವೀಕ್ಷಕರು

ಜೈಲಿನಲ್ಲಿರುವ ತಾಂಡವ್ ನಿಂದ ತನ್ವಿಗೆ ಬಂತು ಲೆಟರ್ ! ಸಾಕಪ್ಪ, ಮುಗ್ಸಿ ಅಂತಿದ್ದಾರೆ ವೀಕ್ಷಕರು

Bhagyalakshmi Serial : ಭಾಗ್ಯಲಕ್ಷ್ಮಿ ಸೀರಿಯಲ್ ಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಜೈಲಿನಲ್ಲಿದ್ದುಕೊಂಡೇ ತನ್ವಿ ದಾರಿತಪ್ಪಿಸುವ ಹುನ್ನಾರ ನಡೆಸಿದ್ದಾನೆ ತಾಂಡವ್. ತನ್ವಿಗೆ ಬಂದ ಪತ್ರದಲ್ಲಿ ಏನಿದೆ ಅನ್ನೋದು ಸದ್ಯದ ಕುತೂಹಲ. 

2 Min read
Author : Roopa Hegde
Published : Apr 23 2026, 10:10 AM IST
Share this Photo Gallery
  • FB
  • TW
  • Linkdin
  • Whatsapp
15
 ಭಾಗ್ಯ ಗೋಳಿಗೆ ಅಂತ್ಯವಿಲ್ಲ
Image Credit : Asianet News

ಭಾಗ್ಯ ಗೋಳಿಗೆ ಅಂತ್ಯವಿಲ್ಲ

ಕಲರ್ಸ್ ಕನ್ನಡದಲ್ಲಿ ಪ್ರಸಾರ ಆಗ್ತಿರುವ ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಎಲ್ಲ ಸುಖಾಂತ್ಯವಾಯ್ತು, ಭಾಗ್ಯಾಗೆ ಇನ್ನೊಂದು ಮದುವೆ ಆಯ್ತು , ಈಗ ಸೀರಿಯಲ್ ಮುಗಿಯುತ್ತೆ ಅಂತ ವೀಕ್ಷಕರು ಭಾವಿಸಿದ್ರು. ಆದ್ರೆ ಭಾಗ್ಯಲಕ್ಷ್ಮಿ 2 ಆಗ್ಲೇ ಶುರುವಾಗಿದೆ. ಮೋಸ್ಟ್ಲಿ ಭಾಗ್ಯಾ, ಶತ್ರುಗಳಿಲ್ದೆ ಜೀವನ ನಡೆಸಲು ಸಾಧ್ಯವೇ ಇಲ್ಲ ಅನ್ನಿಸುತ್ತೆ. ಒಂದ್ಕಡೆ ನಾದಿನಿ, ಅತ್ತಿಗೆ ಕಾಟವಾದ್ರೆ ಇನ್ನೊಂದು ಕಡೆ ಮಾಜಿ ಗಂಡನ ಸಮಸ್ಯೆ ತಪ್ಪಂಗೆ ಕಾಣ್ತಿಲ್ಲ.

25
ಜೈಲಿನಲ್ಲಿದ್ರೂ ಸುಮ್ಮನಿರಲ್ವ ತಾಂಡವ್?
Image Credit : Asianet News

ಜೈಲಿನಲ್ಲಿದ್ರೂ ಸುಮ್ಮನಿರಲ್ವ ತಾಂಡವ್?

ಭಾಗ್ಯಾಗೆ ಮೋಸ ಮಾಡಿ ಈಗಾಗಲೇ ತಾಂಡವ್ ಜೈಲು ಸೇರಾಗಿದೆ. ಭಾಗ್ಯಾ ಆದಿ ಮದುವೆಯಾಗಿ ಹೊಸ ಜೀವನದ ಕನಸು ಕಾಣ್ತಿದ್ದಾಳೆ. ಆದ್ರೆ ಜೈಲಿನಲ್ಲಿದ್ದುಕೊಂಡೇ ತಾಂಡವ್ ತನ್ನ ಆಟ ಶುರು ಮಾಡಿದಂತಿದೆ. ತಾಂಡವ್, ತನ್ವಿಗೆ ಪತ್ರ ಬರೆದಿದ್ದಾನೆ.

Related Articles

Related image1
'ಕರ್ಣ' ಧಾರಾವಾಹಿಯಲ್ಲಿ ಭರ್ಜರಿ ಟ್ವಿಸ್ಟ್; ನಿತ್ಯಾಗೆ ಗೊತ್ತಾಯ್ತು ಸತ್ಯ! ಅಂತೂ ಒಂದಾದ್ರು ಕರ್ಣ-ನಿಧಿ
Related image2
ಹಳೆ ಹುಡುಗಿ ವಿಷಯ ಎತ್ಬೇಡಿ; ಹೊಸ ಹುಡುಗಿ ಬಗ್ಗೆ ಹೇಳ್ತೀನಿ: ಬೃಂದಾವನ ಧಾರಾವಾಹಿ ನಟ ವರುಣ್‌ ಆರಾಧ್ಯ
35
ತನ್ವಿಯೇ ತಾಂಡವ್ ಅಸ್ತ್ರ
Image Credit : Asianet News

ತನ್ವಿಯೇ ತಾಂಡವ್ ಅಸ್ತ್ರ

ಆರಂಭದಿಂದಲೂ ಒಂದಲ್ಲ ಒಂದು ಸಮಸ್ಯೆ ಎದುರಿಸ್ತಲೇ ಬಂದಿರುವ ಭಾಗ್ಯಾಗೆ ಈಗ ಶತ್ರುಗಳ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇಷ್ಟು ದಿನ ಶ್ರೇಷ್ಠಾ ಕಾಟಕೊಡ್ತಿದ್ದಳು. ತಾಂಡವ್ ನೋವು ನೀಡ್ತಿದ್ದ. ಆದ್ರೀಗ ತಾಂಡವ್ ಜೊತೆ ಆದಿ ಇಬ್ಬರು ಸಹೋದರಿಯರು ಸೇರ್ಕೊಂಡಿದ್ದಾರೆ. ಇಷ್ಟು ದಿನ ಒಂದು ಮನೆ, ಒಂದಿಷ್ಟು ಸಮಸ್ಯೆಯಲ್ಲಿದ್ದ ಭಾಗ್ಯಾ ಈಗ ಎರಡು ಮನೆ, ಡಬಲ್ ಸಮಸ್ಯೆ ಮೈಮೇಲೆ ಎಳೆದುಕೊಂಡಂತಿದೆ. ಈ ಮಧ್ಯೆ ತನ್ವಿ ಬದಲಾಗಿದ್ದಾಳೆ. ಆದಿ – ಭಾಗ್ಯ ಮನೆಗೆ ಬಂದ್ರೂ ಬಾಗಿಲು ತೆಗೆಯದೇ ರೂಮಿನಲ್ಲಿದ್ದ ತನ್ವಿ ಕರೆಯೊಂದು ಬರ್ತಿದ್ದಂತೆ ಹೊರಗೆ ಓಡಿದ್ದಾಳೆ. ಅಲ್ಲಿ ಅಪರಿಚಿತನೊಬ್ಬ ತನ್ವಿ ಕೈಗೆ ಲೆಟರ್ ನೀಡಿದ್ದಾನೆ. ಪತ್ರ ತೆಗೆದು ನೋಡಿದ ತನ್ವಿ ಇದು ಅಪ್ಪನ ಅಕ್ಷರ ಅಂತ ಪತ್ತೆ ಮಾಡಿದ್ದಾಳೆ.

45
ಲೆಟರ್ ನಲ್ಲಿ ಏನಿದೆ?
Image Credit : Asianet News

ಲೆಟರ್ ನಲ್ಲಿ ಏನಿದೆ?

ತನ್ವಿ ಕೈಗೆ ತಾಂಡವ್ ಪತ್ರ ಸಿಕ್ಕಿದೆ. ಅದ್ರಲ್ಲಿ ಏನಿದೆ ಎಂಬುದು ಇನ್ನೂ ಪ್ರೇಕ್ಷಕರಿಗೆ ಗೊತ್ತಾಗಿಲ್ಲ. ತಾಂಡವ್, ಜೈಲಿನಲ್ಲಿದ್ದುಕೊಂಡು ತನ್ವಿಯನ್ನೇ ಅಸ್ತ್ರ ಮಾಡ್ಕೊಂಡು ಭಾಗ್ಯಾ ಜೀವನದಲ್ಲಿ ಮತ್ತೆ ಆಟ ಶುರು ಮಾಡ್ತಾನಾ ಕಾದು ನೋಡ್ಬೇಕಿದೆ. ಸದ್ಯ ಕುಸುಮಾಗೆ ತನ್ವಿ ಕೈನಲ್ಲಿರುವ ಲೆಟರ್ ಸಿಗುತ್ತಾ ಅನ್ನೋದನ್ನೂ ಕಾದು ನೋಡ್ಬೇಕಿದೆ.

55
ವೀಕ್ಷಕರ ಕೋಪ
Image Credit : Asianet News

ವೀಕ್ಷಕರ ಕೋಪ

ಭಾಗ್ಯಲಕ್ಷ್ಮಿ ಸೀರಿಯಲ್ ಇಷ್ಟುದಿನ ನೋಡ್ಕೊಂಡು ಬಂದ ವೀಕ್ಷಕರ ತಾಳ್ಮೆಗೆಟ್ಟಿದೆ. ಎಲ್ಲ ಸರಿಯಾಯ್ತು, ಈಗಲಾದ್ರೂ ಭಾಗ್ಯಾ ಖುಷಿಯಾಗಿರೋದನ್ನು ನೋಡೋಣ ಅಂದ್ಕೊಂಡಿದ್ವಿ ಮತ್ತೆ ನಿಮ್ಮ ಕಥೆ ಬದಲಿಸಿದ್ದೀರಿ. ಆದಿ ಅಕ್ಕತಂಗಿಯರ ಕಾಟವಲ್ದೆ ಈಗ ತನ್ವಿಯನ್ನು ವಿಲನ್ ಮಾಡ್ತಿದ್ದೀರಿ ಅಂತ ವೀಕ್ಷಕರು ಕೋಪಗೊಂಡಿದ್ದಾರೆ. ಸಾಕಪ್ಪ, ಸೀರಿಯಲ್ ಮುಗಿಸಿ ಅನ್ನೋದು ಅನೇಕರ ಅಭಿಪ್ರಾಯ. ಭಾಗ್ಯ ಹೊಸ ಜೀವನಕ್ಕಾಗಿ ಆದಿಯನ್ನು ಮದುವೆ ಆಗಿರ್ಬಹುದು. ಆದ್ರೆ ಮಕ್ಕಳಿಗೆ ಏಕಾಏಕಿ ಹೊಸ ವ್ಯಕ್ತಿಯನ್ನು ತಂದೆ ಅಂತ ಒಪ್ಪಿಕೊಳ್ಳೋದು ಕಷ್ಟ. ತನ್ವಿಯನ್ನು ಈ ವಿಷ್ಯದಲ್ಲಿ ವಿಲನ್ ಮಾಡ್ಬೇಡಿ ಅಂತ ವೀಕ್ಷಕರು ಸಲಹೆ ಕೂಡ ನೀಡಿದ್ದಾರೆ. ಎಲ್ಲರಿಗೂ ಇಷ್ಟವಾಗ್ತಿದ್ದ ಭಾಗ್ಯ ಈಗ ಅನೇಕರಿಗೆ ಶತ್ರುವಾಗಿ ಕಾಣ್ತಿದ್ದಾಳೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

RH
Roopa Hegde
Roopa Hegdeಮೂಲತಃ ಉತ್ತರ ಕನ್ನಡದ ಯಲ್ಲಾಪುರದವಳು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ಕಸ್ತೂರಿ, ಸಮಯ ಹಾಗೂ ಸುವರ್ಣ ವಾಹಿನಿಯಲ್ಲಿ ಕೆಲಸ ಮಾಡಿದ್ದೇನೆ. ಈಗ ಏಷ್ಯಾನೆಟ್ ಕನ್ನಡದಲ್ಲಿ ಫ್ರೀಲಾನ್ಸರ್ ಆಗಿ ಕೆಲಸ ಮಾಡುತ್ತಿದ್ದೇನೆ. ಟ್ರೆಂಡಿಂಗ್ ನ್ಯೂಸಲ್ಲಿ ಹೆಚ್ಚು ಆಸಕ್ತಿ ಇದ್ದು, ಸಿನಿಮಾ, ಬ್ಯುಸಿನೆಸ್, ಆರೋಗ್ಯ, ಕ್ರೈಂ, ಕ್ರೀಡೆ ಸೇರಿ ಎಲ್ಲ ಕ್ಷೇತ್ರದ ಸುದ್ದಿ ಬರೆಯುತ್ತೇನೆ.
ಕಲರ್ಸ್ ಕನ್ನಡ
ಭಾಗ್ಯಲಕ್ಷ್ಮಿ ಧಾರಾವಾಹಿ

Latest Videos
Recommended Stories
Recommended image1
ರೀಲ್ ಅಮ್ಮ ಭಾಗ್ಯನಿಗೆ ಮದ್ವೆ ಆಗ್ತಿದ್ದಂಗೆ ರಿಯಲ್ ಅಮ್ಮನ ಜೊತೆ ಗೋವಾಕ್ಕೆ ಹಾರಿದ ಗುಂಡಣ್ಣ
Recommended image2
'ಕರ್ಣ' ಧಾರಾವಾಹಿಯಲ್ಲಿ ಭರ್ಜರಿ ಟ್ವಿಸ್ಟ್; ನಿತ್ಯಾಗೆ ಗೊತ್ತಾಯ್ತು ಸತ್ಯ! ಅಂತೂ ಒಂದಾದ್ರು ಕರ್ಣ-ನಿಧಿ
Recommended image3
ಹಳೆ ಹುಡುಗಿ ವಿಷಯ ಎತ್ಬೇಡಿ; ಹೊಸ ಹುಡುಗಿ ಬಗ್ಗೆ ಹೇಳ್ತೀನಿ: ಬೃಂದಾವನ ಧಾರಾವಾಹಿ ನಟ ವರುಣ್‌ ಆರಾಧ್ಯ
Related Stories
Recommended image1
'ಕರ್ಣ' ಧಾರಾವಾಹಿಯಲ್ಲಿ ಭರ್ಜರಿ ಟ್ವಿಸ್ಟ್; ನಿತ್ಯಾಗೆ ಗೊತ್ತಾಯ್ತು ಸತ್ಯ! ಅಂತೂ ಒಂದಾದ್ರು ಕರ್ಣ-ನಿಧಿ
Recommended image2
ಹಳೆ ಹುಡುಗಿ ವಿಷಯ ಎತ್ಬೇಡಿ; ಹೊಸ ಹುಡುಗಿ ಬಗ್ಗೆ ಹೇಳ್ತೀನಿ: ಬೃಂದಾವನ ಧಾರಾವಾಹಿ ನಟ ವರುಣ್‌ ಆರಾಧ್ಯ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved