- Home
- Entertainment
- TV Talk
- 656 ನೇ ಎಪಿಸೋಡ್‌ಗೆ ಸೀರಿಯಲ್ ಮುಗಿಸ್ತಿರೋ Avanu Matthe Shravani; ಕೊನೇ ದಿನ ಏನಾಯ್ತು?
656 ನೇ ಎಪಿಸೋಡ್‌ಗೆ ಸೀರಿಯಲ್ ಮುಗಿಸ್ತಿರೋ Avanu Matthe Shravani; ಕೊನೇ ದಿನ ಏನಾಯ್ತು?
ವರ್ಷಗಳಿಂದ ಪ್ರಸಾರ ಆಗ್ತಿದ್ದ ‘ಅವನು ಮತ್ತೆ ಶ್ರಾವಣಿ’ ಧಾರಾವಾಹಿ ಅಂತ್ಯ ಆಗಲಿದೆ. ಇಂದು ಈ ಸೀರಿಯಲ್‌ನ ಕೊನೆ ಎಪಿಸೋಡ್ ಪ್ರಸಾರ ಆಗಲಿದೆ. ಹಾಗಾದರೆ ಕ್ಲೈಮ್ಯಾಕ್ಸ್‌ನಲ್ಲಿ ಏನಾಗಲಿದೆ?

ಅಂದಹಾಗೆ ಈ ಧಾರಾವಾಹಿ ಯಾಕೆ ಅಂತ್ಯವಾಗುತ್ತಿದೆ ಎಂಬ ಬಗ್ಗೆ ಮಾಹಿತಿ ಇಲ್ಲ. ವಾಹಿನಿಯಾಗಲೀ, ಸೀರಿಯಲ್ ತಂಡವಾಗಲೀ ಈ ಬಗ್ಗೆ ಮಾಹಿತಿ ನೀಡಿಲ್ಲ.
ಎರಡಕ್ಷರದ ಪ್ರೀತಿಗೆ ಎರಡನೇ ಅವಕಾಶ ಸಿಗಲಿದೆಯಾ ಎಂಬ ಟ್ಯಾನ್‌ಲೈನ್ ಜೊತೆಗೆ ಆರಂಭವಾದ ಧಾರಾವಾಹಿ ‘ಅವನು ಮತ್ತೆ ಶ್ರಾವಣಿ’. 2013ರಲ್ಲಿ ಆರಂಭವಾದ ‘ಅವನು ಮತ್ತೆ ಶ್ರಾವಣಿ’ 900 ಎಪಿಸೋಡ್ ಪ್ರಸಾರ ಮಾಡಿ ಅಂತ್ಯ ಆಗಿತ್ತು. ಇದೇ ಟೈಟಲ್‌ನಲ್ಲಿ 2023 ಹೊಸದಾಗಿ ಹೊಸ ಕಥೆಯೊಂದಿಗೆ ‘ಅವನು ಮತ್ತೆ ಶ್ರಾವಣಿ’ ಧಾರಾವಾಹಿ ಪ್ರಸಾರ ಆಗಿತ್ತು. ಒಂದಿಷ್ಟು ವಿಷಯಕ್ಕೆ ಬೇಸರ ಮಾಡಿಕೊಂಡು ಶ್ರಾವಣಿ ವಿದೇಶದಲ್ಲಿ ಸೆಟಲ್ ಆಗುತ್ತಾಳೆ. ತಂಗಿ ಮದುವೆಗೆ ಮನೆಗೆ ಬಂದಾಗ ಅವಳಿಗೆ ಮಾಜಿ ಪತಿಯೇ ನನ್ನ ತಂಗಿಯನ್ನು ಮದುವೆ ಆಗುವ ವಿಷಯ ಗೊತ್ತಾಗುತ್ತದೆ. ಇನ್ನೊಂದು ಕಡೆ ಇವರಿಬ್ಬರ ಮುದ್ದಿನ ನಾಯಿ ಚೀಕು ಇವರಿಬ್ಬರು ಹತ್ತಿರ ಆಗಲು ಸಹಾಯ ಮಾಡುವುದು.
ಮತ್ತೆ ಅಭಿಮನ್ಯು ಹಾಗೂ ಶ್ರಾವಣಿ ಮದುವೆ ಆಗ್ತಾರೆ. ಅಭಿಮನ್ಯು ಮನೆಯಲ್ಲಿರುವ ಸಂಯುಕ್ತಾ ಮಾಟಗಾತಿ ಕೂಡ ಹೌದು. ಇನ್ನು ಅಧೀರ ಎನ್ನುವ ಭೂತದ ಎಂಟ್ರಿಯೂ ಆಗುವುದು. ಶ್ರಾವಣಿ ಮಾತ್ರ ಅಧೀರ ಆತ್ಮಕ್ಕೆ ಮುಕ್ತಿ ಕೊಟ್ಟು ಓಡಿಸುವ ಪ್ರಯತ್ನ ಮಾಡುತ್ತಾಳೆ. ಅಭಿ ಮಾತ್ರ ಸಂಯುಕ್ತಾಳನ್ನು ತಾಯಿಯಂತೆ ಪ್ರೀತಿ ಮಾಡುತ್ತಾನೆ, ಆದರೆ ಅವನಿಗೆ ಸಂಯುಕ್ತಾ ನಿಜವಾದ ಮುಖ ಏನು ಎಂದು ಗೊತ್ತಿಲ್ಲ. ಸಂಯುಕ್ತಾಳ ನಿಜವಾದ ಮುಖವನ್ನು ತೆರೆದಿಡಲು ಶ್ರಾವಣಿ ಯಶಸ್ವಿ ಆಗುತ್ತಾಳಾ ಎಂದು ನೋಡಲು ನೀವು ಸೀರಿಯಲ್ ನೋಡಬೇಕು.
ಅಂದಹಾಗೆ ಸ್ಕಂದ ಅಶೋಕ್ ಅವರು ಈ ಧಾರಾವಾಹಿಯಲ್ಲಿ ಲೀಡ್ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಈ ಹಿಂದೆ ಇವರು ‘ರಾಧಾ ರಮಣ’, ‘ಸರಸು’ ಧಾರಾವಾಹಿಯಲ್ಲಿ ನಟಿಸಿದ್ದರು.
ಸಂಯುಕ್ತಾ ಹಾಗೂ ನಾಯಕಿ ಶ್ರಾವಣಿ ಪಾತ್ರಧಾರಿ ಕೂಡ ಬದಲಾಗಿದ್ದಾರೆ. ಸುಜಾತಾ ಅಕ್ಷಯ್ ಅವರು ಸಂಯುಕ್ತಾ ಆಗಿ ನಟಿಸುತ್ತಿದ್ದಾರೆ. 656 ಎಪಿಸೋಡ್‌ಗೆ ಈ ಸೀರಿಯಲ್ ತನ್ನ ಕಥೆಗೆ ವಿದಾಯ ಹೇಳಲಿದೆ.
ಅವನು ಮತ್ತೆ ಶ್ರಾವಣಿ ಧಾರಾವಾಹಿ ತಂಡವು ಕೊನೆಯದಾಗಿ ತೆಗೆಸಿಕೊಂಡ ಫೋಟೋ ಇದು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

