Kantara ಹಾಡಿಗೆ ಸ್ಟೆಪ್ ಹಾಕಲು ಪಾತ್ರೆ ತೊಳೆದ Vaishnavi Gowda! ಅರೆರೆ ಇದೇನಿದು?
ನಟಿ ವೈಷ್ಣವಿ ಗೌಡ ಅವರು ಕಾಂತಾರ ಸಂಗೀತಕ್ಕೆ ನೃತ್ಯ ಮಾಡಿದ ವೀಡಿಯೋ ಹಂಚಿಕೊಂಡಿದ್ದಾರೆ. ಆದರೆ, ಮೊದಲಿಗೆ ಪಾತ್ರೆಗಳನ್ನು ತೊಳೆದಿದ್ದಾರೆ. ಇದೇನಿದು? ಈ ವೀಡಿಯೋದಲ್ಲಿ ಅವರು ಸ್ವಲ್ಪ ದಪ್ಪ ಕಾಣಿಸುತ್ತಿದ್ದಾರೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಮದುವೆ ಲೈಫ್ ಎಂಜಾಯ್
ನಟಿ ವೈಷ್ಣವಿ ಗೌಡ (Vaishnavi Gowda ) ಸದ್ಯ ಮದುವೆ ಲೈಫ್ ಅನ್ನು ಎಂಜಾಯ್ ಮಾಡುತ್ತಿದ್ದಾರೆ. ಇದಾಗಲೇ ಅವರ ಮದುವೆಯಾಗಿ ನಾಲ್ಕು ತಿಂಗಳು ಕಳೆದಿದೆ. ಅಷ್ಟಕ್ಕೂ ನಟಿಗೆ ಹೋದಲ್ಲಿ ಬಂದಲ್ಲಿ ಎದುರಾಗುತ್ತಿದ್ದ ಪ್ರಶ್ನೆ ಒಂದೇ. ಮದ್ವೆ ಯಾವಾಗ ಮೇಡಂ ಎಂದು. ಗೂಗಲ್ ದಾಖಲೆ ಪ್ರಕಾರ ನಟಿಗೆ ಈಗ 33 ವರ್ಷ ವಯಸ್ಸು. ಆದ್ದರಿಂದ ಅವರಿಗಿಂತಲೂ ಹೆಚ್ಚಾಗಿ ಅವರ ಮದುವೆಯ ಬಗ್ಗೆ ಅಭಿಮಾನಿಗಳು ಸಕತ್ ತಲೆ ಕೆಡಿಸಿಕೊಂಡಿದ್ದರು. ಬೇಗ ಮದ್ವೆಯಾಗಿ ಮೇಡಂ ಎಂದೆಲ್ಲಾ ಸಜೆಷನ್ ಕೊಡುತ್ತಿದ್ದರು. ಅಂತೂ ಅವರ ಬಾಯಿ ಮುಚ್ಚಿಸಿದ್ದಾರೆ ನಟಿ ವೈಷ್ಣವಿ ಗೌಡ.
ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್
ನಟಿ ಮದುವೆಯಾದ ಮೇಲೆ ಸೋಷಿಯಲ್ ಮೀಡಿಯಾದಲ್ಲಿ ಮೊದಲಿನಂತೆಯೇ ಆಕ್ಟೀವ್ ಇದ್ದಾರೆ. ಹೊಸ ಹೊಸ ರೀಲ್ಸ್ ಹಾಕುತ್ತಲೇ ಇರುತ್ತಾರೆ. ಪತಿಯನ್ನೂ ತಮ್ಮ ಜೊತೆಗೆ ಕುಣಿಸುವಲ್ಲಿ ಯಶಸ್ವಿಯೂ ಆಗಿದ್ದಾರೆ. ಈ ಕ್ಯೂಟ್ ಜೋಡಿ ರೀಲ್ಸ್ ಮಾಡಿದಾಗಲೆಲ್ಲಾ ಅಭಿಮಾನಿಗಳು ಮೆಚ್ಚಿಕೊಳ್ಳುತ್ತಾರೆ.
ಕಾಂತಾರಾ ಮ್ಯೂಸಿಕ್ಗೆ ಡಾನ್ಸ್
ಇದೀಗ ಕಾಂತಾರಾದ ಟೈಟಲ್ ಮ್ಯೂಸಿಕ್ಗೆ ನಟಿ ಭರತನಾಟ್ಯ ಸ್ಟೆಪ್ ಹಾಕಿದ್ದಾರೆ. ಅಷ್ಟಕ್ಕೂ ನಟಿ ನೃತ್ಯ ಕಲಾವಿದೆ ಕೂಡ. ಆದ್ದರಿಂದ ಅವರು ಅದಕ್ಕೆ ಸ್ಟೆಪ್ ಹಾಕಿದ್ದಾರೆ. ಆದರೆ ಅದಕ್ಕೂ ಮುನ್ನ ಅವರು ಪಾತ್ರೆ ತೊಳೆದಿದ್ದಾರೆ. ಇದರ ವಿಡಿಯೋ ವೈರಲ್ ಆಗಿದೆ. ಅಷ್ಟಕ್ಕೂ ಪಾತ್ರೆ ತೊಳೆಯುವುದಕ್ಕೂ, ಡಾನ್ಸ್ ಮಾಡುವುದಕ್ಕೂ ಎತ್ತಣತ್ತ ಸಂಬಂಧವಯ್ಯಾ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ.
ನೃತ್ಯಕ್ಕೂ ಮುನ್ನ ಪಾತ್ರೆ ತೊಳೆದ ನಟಿ
ಅಂದಹಾಗೆ, ವೈಷ್ಣವಿ ಗೌಡ ಅವರು ಡಿಷ್ ವಾಷ್ ಒಂದರ ಜಾಹೀರಾತಿನಲ್ಲಿ ಹೀಗೆ ಕಾಣಿಸಿಕೊಂಡಿದ್ದಾರೆ. ನೃತ್ಯ ಮಾಡಲು ಗೆಜ್ಜೆ ಹಾಕಲು ಹೋದಾಗ, ಆ ಗೆಜ್ಜೆಯನ್ನು ತೊಳೆಯಬೇಕು ಎಂದಿದ್ದಾರೆ. ಕೊನೆಗೆ, ದೇವರ ಪೂಜೆಗೆ ಇಡಲಾದ ತಾಮ್ರದ ಪಾತ್ರೆಗಳನ್ನು ತೊಳೆಯುವುದಕ್ಕೆ ಮುಂದಾಗಿದ್ದಾರೆ. ಈಪಾತ್ರೆಗಳ ಮೇಲೆ ಆ ಡಿಷ್ ವಾಷ್ ಲಿಕ್ವಿಡ್ ಹಾಕಿದ್ದಾರೆ ಅಷ್ಟೇ. ಕೊನೆಗೆ ಕಾಂತಾರಾ ಚಿತ್ರದ ಮ್ಯೂಸಿಕ್ಗೆ ಸ್ಟೆಪ್ ಹಾಕಿದ್ದಾರೆ.
ಹೊಟ್ಟೆಯತ್ತ ಚಿತ್ತ
ಆಗಿದ್ದು ಇಷ್ಟೇ. ಆದರೆ, ಇದನ್ನು ಬಿಟ್ಟ ನೆಟ್ಟಿಗರು, ನಟಿಯ ಹೊಟ್ಟೆಯತ್ತ ಕಣ್ಣು ಹಾಕಿದ್ದಾರೆ. ಏಕೆಂದ್ರೆ, ಇಲ್ಲಿಯವರೆಗೆ ಮದುವೆ ಮದುವೆ ಅಂತಿದ್ದ ನೆಟ್ಟಿಗರಿಗೆ ಈಗ ಮಗುವಿನ ಚಿಂತೆ ಶುರುವಾಗಿದೆ. ಕೆಲ ದಿನಗಳ ಹಿಂದೆ ನಟಿ ಇದ್ರೆ ನೆಮ್ಮದಿಯಾಗಿ ಇರಬೇಕು (idre nemdiyag irbeku) ಹಾಡಿಗೆ ವೈಷ್ಣವಿ ಅವರು ಸಕತ್ ರೀಲ್ಸ್ ಮಾಡಿದ್ದರು. ಆದರೆ ಈ ವಿಡಿಯೋದಲ್ಲಿ ನಟಿ ಸ್ವಲ್ಪ ದಪ್ಪಗಾಗಿ ಕಾಣುತ್ತಿದ್ದರು. ಅದೇ ರೀತಿ ಈಗಲೂ ಈ ನೆಟ್ಟಿಗರಿಗೆ ಅವರ ಹೊಟ್ಟೆ ದಪ್ಪಗಾಗಿ ಕಾಣಿಸುತ್ತಿದೆಯಂತೆ! ಕೆಲವರು ದಪ್ಪ ಆಗಿಬಿಟ್ರಿ ಮೇಡಂ ಎಂದಿದ್ದರೆ, ಮತ್ತೆ ಕೆಲವರು ಇನ್ನೂ ಮದುವೆಯಾಗಿ ನಾಲ್ಕು ತಿಂಗಳು, ಈಗಲೇ ನಟಿಯ ತಲೆ ಕೆಡಿಸಬೇಡ್ರಪ್ಪಾ ಎನ್ನುತ್ತಿದ್ದಾರೆ. ಹೀಗೆ ಥಹರೇವಾರಿ ಕಮೆಂಟ್ಸ್ ಸುರಿಮಳೆಯಾಗುತ್ತಿದೆ.
ನಟಿಯ ಕುರಿತು...
ಇನ್ನು ವೈಷ್ಣವಿ ಗೌಡ ಕುರಿತು ಹೇಳುವುದಾದರೆ, ಕನ್ನಡದ ಪ್ರೇಕ್ಷಕರಿಗೆ ಸನ್ನಿಧಿಯಂತಲೇ ಇವರು ಪರಿಚಯವಿದ್ದರು. ಅಗ್ನಿಸಾಕ್ಷಿ ಸೀರಿಯಲ್‌ನ ಸನ್ನಿಧಿ ಮೂಲಕ ಸಕತ್ ಫೇಮಸ್ ಆಗಿದ್ದ ನಟಿ ಈಗ ಸೀತಾರಾಮದ ಸೀತೆಯಾಗಿ ಮನೆ ಮಾತಾಗಿದ್ದಾರೆ. ವೈಷ್ಣವಿ ಕನ್ನಡ ಕಿರುತೆರೆಲೋಕದ ಜನಪ್ರಿಯ ನಟಿ. ಅಷ್ಟೇ ಅಲ್ಲದೇ, ಹಲವು ಉತ್ಪನ್ನಗಳ ರಾಯಭಾರಿಯೂ ಹೌದು.
ವಿವಿಧ ಸೀರಿಯಲ್
ಜೀ ಕನ್ನಡದ `ದೇವಿ' ಸೀರಿಯಲ್‌ನಿಂದ ಇವರ ಕಿರುತೆರೆ ಪಯಣ ಆರಂಭವಾಯಿತು.ನಂತರ `ಪುನರ್‌ವಿವಾಹ'ದಲ್ಲಿ ನಟಿಸಿ `ಅಗ್ನಿಸಾಕ್ಷಿ' ಸೀರಿಯಲ್‌ನ ಸನ್ನಿಧಿಯಾಗಿ ಆಯ್ಕೆಗೊಂಡರು. ಈ ಪಾತ್ರದ ಮೂಲಕ ಅಪಾರ ಜನಮನ್ನಣೆ ಪಡೆದಿದ್ದಾರೆ.
'ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿ
ಗಿರಿಗಿಟ್ಲೆ' ಚಿತ್ರದ ಮೂಲಕ ನಾಯಕಿಯಾಗಿದ್ದಾರೆ. `ಭರ್ಜರಿ ಕಾಮಿಡಿ' ಎಂಬ ರಿಯಾಲಿಟಿ ಷೋ ನಿರೂಪಣೆ ಕೂಡ ಮಾಡಿದ್ದಾರೆ. `ಕುಣಿಯೋಣ ಬಾರ' ಡ್ಯಾನ್ಸ್ ರಿಯಾಲಿಟಿ ಷೋ ಆಗೂ ಬಿಗ್‌ಬಾಸ್ ಸೀಸನ್ 8ನಲ್ಲಿ ಭಾಗವಹಿಸಿದ್ದಾರೆ. ಕಳೆದ ಜೂನ್ ತಿಂಗಳಿನಲ್ಲಿ Anukool Mishra ಜೊತೆ ಮದುವೆಯಾಗಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

