- Home
- Entertainment
- TV Talk
- Ramachari Serial: ರಾಮಾಚಾರಿನ ಮುಗಿಸೋಕೆ ಒಂದಾದ ವಿಲನ್ಸ್... ಅಯ್ಯೋ ಡೈರೆಕ್ಟರ್ರೇ ಸೀರಿಯಲ್ ಮುಗಿಸ್ಬಿಡಿ ಸಾಕು ಎಂದ ವೀಕ್ಷಕರು
Ramachari Serial: ರಾಮಾಚಾರಿನ ಮುಗಿಸೋಕೆ ಒಂದಾದ ವಿಲನ್ಸ್... ಅಯ್ಯೋ ಡೈರೆಕ್ಟರ್ರೇ ಸೀರಿಯಲ್ ಮುಗಿಸ್ಬಿಡಿ ಸಾಕು ಎಂದ ವೀಕ್ಷಕರು
ರಾಮಾಚಾರಿ ಧಾರಾವಾಹಿಯಲ್ಲಿ ಇದೀಗ ಮೂರು ಜನ ಖಳನಾಯಕಿಯರು ಒಂದಾಗಿದ್ದು, ರಾಮಾಚಾರಿಯನ್ನು ಮುಗಿಸಲು ಪ್ಲ್ಯಾನ್ ಮಾಡುತ್ತಿದ್ದರೆ, ವೀಕ್ಷಕರು ಮಾತ್ರ ಸೀರಿಯಲ್ ವಿರುದ್ಧ ಕಿಡಿ ಕಾರಿದ್ದಾರೆ.

ರಾಮಾಚಾರಿ ಧಾರಾವಾಹಿ (Ramachari serial) ಇದೀಗ ಮೊದಲಿನಂತೆ ಸುಂದರವಾದ ಪ್ರೇಮಕಥೆಯ ಹಿಂದೆ ಸುತ್ತುತ್ತಿಲ್ಲ. ಬದಲಾಗಿ ಇತ್ತೀಚಿನ ಎಪಿಸೋಡ್ ಗಳಲ್ಲಿ ಬರೀ ವಿಲನ್ ಗಳೇ ತುಂಬಿ ಹೋಗಿದ್ದಾರೆ. ಒಬ್ಬರಾದ ಬಳಿಕ ಮತ್ತೊಬ್ಬರು ಎನ್ನುವಂತೆ ವಿಲನ್ ಗಳು ಎಂಟ್ರಿಕೊಡುತ್ತಲೇ ಇದ್ದಾರೆ.
ಇದೀಗ ಸೀತಾಲಕ್ಷ್ಮಿ, ಮಾನ್ಯಾತ, ರುಕ್ಮಿಣಿ ಎಲ್ಲಾ ವಿಲನ್ ಗಳು ಇದೀಗ ರಾಮಾಚಾರಿಯ ವಿರುದ್ಧ ತಿರುಗಿ ಬಿದ್ದಿದ್ದು ಆತನನ್ನು ಸಾಯಿಸೋದಕ್ಕೆ ಮೂರು ಜನರು ಪ್ಲ್ಯಾನ್ ಹಾಕಿದ್ದಾರೆ. ಇನ್ನೊಂದು ಕಡೆ ಚಾರು ಗರ್ಭಿಣಿಯಾಗಿರುವ ಖುಷಿಯಲ್ಲಿದ್ದಾರೆ.
ಆರಂಭದಲ್ಲಿ ಅದ್ಭುತವಾಗಿ ಮೂಡಿ ಬರುತ್ತಿದ್ದ ರಾಮಾಚಾರಿ ಧಾರಾವಾಹಿಯಲ್ಲಿ ಇದೀಗ ವಿಲನ್ ಗಳದ್ದೇ ರಾಜ್ಯಭಾರ ಮಾಡ್ತಿರೋದನ್ನು ನೋಡಿ ಅಭಿಮಾನಿಗಳು ಕಿಡಿ ಕಾರಿದ್ದಾರೆ. ನಿರ್ದೇಶಕರು ಯಾಕೆ ಹೀಗೆ ಮಾಡ್ತಿದ್ದಾರೆ, ಏನೇನೋ ಕಥೆ ಮಾಡೋದಕ್ಕಿಂತ ಸೀರಿಯಲ್ ಮುಗಿಸ್ಬಿಡಿ ಎಂದು ಹೇಳಿದ್ದಾರೆ.
ಏನು ಧಾರಾವಾಹಿ ಇದು ನೋಡೋದಕ್ಕೆ ಕಷ್ಟ ಆಗ್ತಿದೆ, ಚಾರು, ಚಾರೀನ ಸಾಯಿಸಿ ಸೀರಿಯಲ್ (serial) ಮುಗಿಸ್ಬಿಡಿ. ಅಯ್ಯೋ ಬರೀ ಇದೆ ಆಯ್ತು ಮಾಡೋಕ್ ಕೆಲಸ ಇಲ್ಲಾ ಬೇಗ ಮುಗ್ಸಿ ಇನ್ನೇನು ಸ್ಟೋರಿ ಇಲ್ಲಾ ಅನ್ಸುತ್ತೆ ಎಂದು ಕೂಡ ಹೇಳಿದ್ದಾರೆ.
ಇನ್ನು ಎಷ್ಟು ಜನ ಬರ್ತಿರಾ? ಮುಗಿಸಿ ಫಸ್ಟ್ ಈ ಸೀರಿಯಲ್ ನಾ ನೋಡದಿಕೆ ಆಗ್ತಿಲ್ಲ. ವೈಶಾಖಾ ಮಾನ್ಯತಾ ಜೈಲಿಗೆ ಹೋದಾಗಲೇ ಸೀರಿಯಲ್ ಮುಗಿಸಬೇಕಿತ್ತು. ಇನ್ನು ಎಷ್ಟು ದಿನ ಎಳ್ಕೊಂಡು ಹೋಗತೀರ ಇನ್ನಾದ್ರೂ ಮುಗಿಸಿ, ಕಥೆ ಮೂಲ ತನವನ್ನೇ ಕಳೆದುಕೊಂಡಿದೆ ಎಂದು ಕಿಡಿ ಕಾರಿದ್ದಾರೆ.
ರಾಮಾಚಾರಿ ಸೀರಿಯಲ್ ಆರಂಭದಲ್ಲಿ ಚಾರು ವಿಲನ್ ಆಗಿದ್ಲು, ತಾನು ಹೇಳಿದ್ದೆ ಸರಿ, ತಾನು ನಡೆದಿದ್ದ ದಾರಿ ಎಂದು ಜಂಭದಿಂದ ಮೆರೆಯುತ್ತಿದ್ದ ಚಾರು ಜೀವನದಲ್ಲಿ ರಾಮಾಚಾರಿ ಎಂಟ್ರಿ ಕೊಟ್ಟ ಮೇಲೆ ಏನೇನಾಯಿತು ಅನ್ನೋದು ಕಥೆ. ಆದರೆ ಈಗ ಕಥೆ ಹಾದಿ ತಪ್ಪಿ ಎಲ್ಲೆಲ್ಲೋ ಹೋಗುತ್ತಿದೆ.
ಅಂದ ಹಾಗೇ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಮಾಚಾರಿ ಧಾರಾವಾಹಿಯಲ್ಲಿ ರಿತ್ವಿಕ್ ಕೃಪಾಕರ್ (Rithvik Krupakar), ಮೌನ ಗುಡ್ಡೆಮನೆ, ಅಂಜಲಿ, ಶಂಕರ್ ಅಶ್ವಥ್, ಗುರುದತ್, ಸೇರಿ ಹಲವು ನಟ-ನಟಿಯರು ನಟಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

