- Home
- Entertainment
- TV Talk
- ಲಕ್ಷ್ಮೀ ನಿವಾಸ, ಅಣ್ಣಯ್ಯ ಸೀರಿಯಲ್‌ನಲ್ಲಿ ಚಮತ್ಕಾರ; ಒಂದು ಬದಲಾವಣೆಗೆ ವೀಕ್ಷಕರು ಫುಲ್ ಖುಷ್!
ಲಕ್ಷ್ಮೀ ನಿವಾಸ, ಅಣ್ಣಯ್ಯ ಸೀರಿಯಲ್‌ನಲ್ಲಿ ಚಮತ್ಕಾರ; ಒಂದು ಬದಲಾವಣೆಗೆ ವೀಕ್ಷಕರು ಫುಲ್ ಖುಷ್!
ಝೀ ಕನ್ನಡದ ಜನಪ್ರಿಯ ಧಾರಾವಾಹಿಗಳಾದ 'ಲಕ್ಷ್ಮೀ ನಿವಾಸ' ಮತ್ತು 'ಅಣ್ಣಯ್ಯ'ದಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಇಷ್ಟು ದಿನ ಅಳುಮುಂಜಿ ಪಾತ್ರಗಳಿಗೆ ನಿರ್ದೇಶಕರು ಸ್ವಲ್ಪ ಧೈರ್ಯ ನೀಡಿದ್ದಾರೆ.

ಎರಡು ಜನಪ್ರಿಯ ಧಾರಾವಾಹಿ
ಝೀ ಕನ್ನಡದ ಎರಡು ಜನಪ್ರಿಯ ಧಾರಾವಾಹಿಗಳಲ್ಲಿ ಚಮತ್ಕಾರ ನಡೆದಿದೆ. ಇಷ್ಟು ದಿನ ಅಳುಮುಂಜಿ ಪಾತ್ರಗಳಿಗೆ ನಿರ್ದೇಶಕರು ಸ್ವಲ್ಪ ಧೈರ್ಯ ನೀಡಿದ್ದಾರೆ. ಸೋಮವಾರದಿಂದ ಶುಕ್ರವಾರದವರೆಗೆ ಅಣ್ಣಯ್ಯ ರಾತ್ರಿ 7.30 ಮತ್ತು ಲಕ್ಷ್ಮೀ ನಿವಾಸ 8.30ಕ್ಕೆ ಪ್ರಸಾರವಾಗುತ್ತಿದೆ. ಈ ಎರಡು ಧಾರಾವಾಹಿಗಳಲ್ಲಿ ಬದಲಾಗಿರುವ ಒಂದು ಬದಲಾವಣೆ ಏನು ಗೊತ್ತಾ?
ಲಕ್ಷ್ಮೀ ನಿವಾಸ
ಲಕ್ಷ್ಮೀ ನಿವಾಸ ಸೀರಿಯಲ್ ಮೊದಲ ಸಂಚಿಕೆಯಿಂದಲೇ ಭಾವನಾ ಪಾತ್ರವನ್ನು ಸಾದು ಅಂತಾನೇ ತೋರಿಸಲಾಗಿದೆ. ಏನೇ ಕಷ್ಟಗಳು ಬಂದರೂ ಎಲ್ಲವನ್ನು ತಾಳ್ಮೆಯಿಂದ ಕಣ್ಣೀರು ಹಾಕುತ್ತಾ ಎದುರಿಸುವ ಪಾತ್ರವೇ ಭಾವನಾ. ಇದೀಗ ನಿರ್ದೇಶಕರು ಭಾವನಾ ಪಾತ್ರಕ್ಕೆ ಕೊಂಚ ಧೈರ್ಯ ತುಂಬಿಸಿದ್ದಾರೆ.
ತಿರುಗೇಟು ನೀಡಲು ಭಾವನಾ ಪ್ಲಾನ್
ಜಾತಕದಲ್ಲಿ ದೋಷವಿದ್ದು, ಗಂಡ ಸಿದ್ದು ಜೀವಕ್ಕೆ ಅಪಾಯವಿದೆ ಎಂದು ಜ್ಯೋತಿಷಿಗಳಿಂದ ಅತ್ತೆ ರೇಣುಕಾ, ಓರಗಿತ್ತಿ ನೀಲು ಸುಳ್ಳು ಹೇಳಿಸಿದ್ದರು. ವ್ರತಾಚಾರಣೆ ಅಂತೇಳಿ ಸಿದ್ದುವಿನಿಂದ ಭಾವನಾಳನ್ನು ದೂರ ಮಾಡಲು ಸಂಚು ರೂಪಿಸಿದ್ದರು. ಈ ಸತ್ಯ ಭಾವನಾಳಿಗೆ ಗೊತ್ತಾಗಿದ್ದು, ಅವರು ರೂಪಿಸಿದ ಸಂಚಿನ ಮೂಲಕ ತಿರುಗೇಟು ನೀಡಲು ಪ್ಲಾನ್ ಮಾಡಿದ್ದು ವೀಕ್ಷಕರಿಗೆ ಇಷ್ಟವಾಗಿದೆ.
ಇದನ್ನೂ ಓದಿ: ಪತಿ ರೋಷನ್ ಬರ್ತ್ ಡೇಗೆ ಕವನ ಬರೆದು ಟಿಪಿಕಲ್ ಹೆಂಡ್ತಿ ಅನ್ನೋದನ್ನು ಪ್ರೂವ್ ಮಾಡಿದ ಅನುಶ್ರೀ
ಅಣ್ಣಯ್ಯ
7.30ಕ್ಕೆ ಪ್ರಸಾರವಾಗುವ ಅಣ್ಣಯ್ಯ ಸೀರಿಯಲ್‌ನಲ್ಲಿ ಮಾಸ್ತಿಕೊಪ್ಪಲಿನ ರಾಜಕುಮಾರನಾಗಿರುವ ಮನು ಪಾತ್ರವನ್ನು ಪೆದ್ದನಂತೆ ತೋರಿಸಲಾಗಿತ್ತು. ಇದೀಗ ಮನು ಪಾತ್ರದಲ್ಲಿ ಬದಲಾವಣೆಯಾಗುತ್ತಿದ್ದು, ಪ್ರಶ್ನೆ ಮಾಡುವ ಧೈರ್ಯವನ್ನು ತೋರಿಸುತ್ತಿದ್ದಾನೆ. ರಾಣಿಗೆ ಬರೆ ಹಾಕಿರೋದರಿಂದ ಅಣ್ಣಂದಿರ ಮುಂದೆ ಧೈರ್ಯುವಾಗಿ ನಿಂತು ಕ್ಷಮೆ ಕೇಳುವಂತೆ ಮನು ಹೇಳಿದ್ದಾನೆ.
ಇದನ್ನೂ ಓದಿ: ಕೊನೆಗೂ ಗಿಲ್ಲಿಯೂ ಸೋತ, ಸಪೋರ್ಟ್ ಸಿಕ್ರೂ ಕಾವ್ಯಾ ಮಾಡಿಕೊಂಡ್ರಾ ಎಡವಟ್ಟು!
ಆಸ್ತಿಗಾಗಿ ಮನು ಜೊತೆ ರಾಣಿ ಮದುವೆ
ಆಸ್ತಿಗಾಗಿ ಮನು ಜೊತೆ ರಾಣಿ ಮದುವೆ ಮಾಡಿಸಲಾಗಿತ್ತು. ಆಸ್ತಿ ಪತ್ರಕ್ಕೆ ಸಹಿ ಹಾಕುತ್ತಿದ್ದಂತೆ ನಂಜೇಗೌಡ ಆಂಡ್ ಫ್ಯಾಮಿಲಿ ತಮ್ಮ ಅಸಲಿ ಮುಖ ತೋರಿಸಿ ರಾಣಿಗೆ ಕಿರುಕುಳ ನೀಡಲು ಆರಂಭಿಸಿದ್ದಾರೆ. ಆದ್ರೆ ಆಸ್ತಿ ಪತ್ರಕ್ಕೆ ರಾಣಿ ತಪ್ಪಾಗಿ ಸಹಿ ಹಾಕಿದ್ದಾಳೆ. ಈ ವಿಷಯ ಗೊತ್ತಾದ್ರೆ ಮುಂದೆ ಏನು ಆಗುತ್ತೆ ಎಂಬುದರ ಬಗ್ಗೆ ವೀಕ್ಷಕರಲ್ಲಿ ಕುತೂಹಲ ಮೂಡಿದೆ.
ಇದನ್ನೂ ಓದಿ: ಗೋವಾದ ಬೀಚ್‌ನಲ್ಲಿ ಇದ್ರೆ ನೆಮ್ದಿಯಾಗ್ ಇರ್ಬೇಕು.. ಹೇಟರ್ಸ್ ಇನ್ನೂ ಉರ್ಕೊಂಡು ಸಾಯಿರಿ ಎಂದ ಸೋನು ಗೌಡ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

