Karna Serial: ನಿತ್ಯಾ ಮತ್ತು ಕರ್ಣ ಹ್ಯಾಪಿ ಹ್ಯಾಪಿಯಾಗೋ ನ್ಯೂಸ್ ನೀಡಿದ ಅಮ್ಮ ಮಾಲತಿ
ಜೀ ಕನ್ನಡದ ಕರ್ಣ ಸೀರಿಯಲ್‌ನಲ್ಲಿ, ತೇಜಸ್ ಅಪಹರಣದ ಹಿಂದೆ ತನ್ನ ಗಂಡ ರಮೇಶ್‌ನ ಕೈವಾಡವಿದೆ ಎಂಬ ಸತ್ಯ ಮಾಲತಿಗೆ ತಿಳಿಯುತ್ತದೆ. ಚಿಕ್ಕಮಗಳೂರಿನಲ್ಲಿ ತೇಜಸ್ ಇರುವ ಸುಳಿವನ್ನು ಮಾಲತಿ ಮಗ ಕರ್ಣನಿಗೆ ನೀಡಿದ್ದು, ಕರ್ಣ ಮತ್ತು ನಿತ್ಯಾ ಮುಂದಿನ ನಡೆ ಕುತೂಹಲ ಕೆರಳಿಸಿದೆ.

ಕರ್ಣ ಸೀರಿಯಲ್
ಜೀ ಕನ್ನಡದಲ್ಲಿ ಪ್ರಸಾರವಾಗುವ ಕರ್ಣ ಸೀರಿಯಲ್‌ನಲ್ಲಿ ಸಂಚಿಕೆಯಿಂದ ಸಂಚಿಕೆಗೆ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಿದೆ. ಕರ್ಣನಷ್ಟೇ ನೋವು ಪಡುತ್ತಿರುವ ಜೀವ ಅಂದ್ರೆ ಅದು ಅಮ್ಮ ಮಾಲತಿ. ತನ್ನ ಮುಂದೆಯೇ ಗಂಡ ರಮೇಶ್‌ನ ಚಕ್ರವ್ಯೂಹಕ್ಕೆ ಸಿಲುಕಿ ಮಗ ಕರ್ಣ ನೋವು ಅನುಭವಿಸುತ್ತಿರೋದನ್ನು ನೋಡಿ ಮಾಲತಿ ಸಹ ಕಣ್ಣೀರು ಹಾಕುತ್ತಿದ್ದಾಳೆ. ಇದೀಗ ನಿತ್ಯಾ ಮತ್ತು ಕರ್ಣ ಖುಷಿಯಾಗುವ ವಿಷಯವೊಂದು ಮಾಲತಿ ಹೇಳಿದ್ದಾಳೆ.
ಮದುವೆಯಿಂದ ಮಾಯವಾದ ತೇಜಸ್
ಮದುವೆಯಿಂದ ಮಾಯವಾದ ತೇಜಸ್ ಚಿಕ್ಕಮಗಳೂರಿನಲ್ಲಿರುವ ವಿಷಯ ಮಾಲತಿಗೆ ಗೊತ್ತಾಗಿದೆ. ನೀಚ ರಮೇಶ್‌ನ ಜೊತೆಯಲ್ಲಿ ತೇಜಸ್ ತಂದೆ-ತಾಯಿ ಸೇರಿಕೊಂಡಿರೋದ ಸತ್ಯ ಬಯಲಾಗಿದೆ. ಈ ಹಿಂದೆ ಕೋಣೆಯೊಂದರಲ್ಲಿ ತೇಜಸ್ ಮತ್ತು ಅವರ ತಂದೆ-ತಾಯಿಯನ್ನು ಬಂಧಿಸಿಟ್ಟಿರೋದನ್ನು ತೋರಿಸಲಾಗಿತ್ತು. ಇದೀಗ ಇದರ ಮುಂದುವರಿದ ಭಾಗವನ್ನು ತೋರಿಸಲಾಗಿದೆ.
ಮಾಲತಿ ಶಾಕ್
ತೇಜಸ್ ಕಣ್ತಪ್ಪಿಸಿ ಹೊರಗೆ ಬಂದಿರುವ ಆತನ ಪೋಷಕರು ರಮೇಶ್‌ನಿಗೆ ಕಾಲ್ ಮಾಡಿದ್ದಾರೆ. ತೇಜಸ್ ಪೋಷಕರೊಂದಿಗೆ ರಮೇಶ್ ಮಾತನಾಡುತ್ತಿರೋದನ್ನು ಮಾಲತಿ ಕೇಳಿಸಿಕೊಂಡಿದ್ದಾಳೆ. ತೇಜಸ್ ಅಪಹರಣ ಹಿಂದೆಯೂ ಗಂಡನ ಕೈವಾಡವಿರೊ ವಿಷಯ ಕೇಳಿ ಮಾಲತಿ ಶಾಕ್ ಆಗಿದ್ದಾಳೆ. ಕೂಡಲೇ ಮಗನ ಬಳಿ ತೆರಳಿ ತೇಜಜ್ ಚಿಕ್ಕಮಗಳೂರಿನಲ್ಲಿರುವ ವಿಷಯ ತಿಳಿಸಿದ್ದಾಳೆ.
ಚಿಕ್ಕಮಗಳೂರಿಗೆ ಹೋಗ್ತಾರಾ?
ಇತ್ತ ಕರ್ಣ ಸಹ ಖುಷಿಯಿಂದ ನಿತ್ಯಾಗೂ ವಿಷಯ ತಿಳಿಸಿದ್ದಾನೆ. ಮುಂದೆ ತೇಜಸ್‌ನನ್ನು ಹುಡುಕಿಕೊಂಡು ಕರ್ಣ ಮತ್ತು ನಿತ್ಯಾ ಚಿಕ್ಕಮಗಳೂರಿಗೆ ಹೋಗ್ತಾರಾ? ಅನ್ನೋದು ಮುಂದಿನ ಸಂಚಿಕೆಯಲ್ಲಿ ತಿಳಿಯಲಿದೆ. ನಿನ್ನ ಪ್ರೀತಿ ಸಿಗಬೇಕಾದ್ರೆ ಮೊದಲು ನೀನು ತೇಜಸ್‌ನನ್ನು ಹುಡುಕಬೇಕೆಂದು ಮಗನಿಗೆ ಮಾಲತಿ ಸಲಹೆ ಹೇಳಿದ್ದಾಳೆ.
ಇದನ್ನೂ ಓದಿ: Karna Serial: ತ್ಯಾಗಮಯಿ ಕರ್ಣನ ಮೇಲೆ ಮತ್ತೊಂದು ಅಪವಾದ; ನೀಚನ ದುಷ್ಟತನಕ್ಕೆ ವೀಕ್ಷಕರ ಹಿಡಿಶಾಪ
ರಮೇಶ್‌ನಿಂದ ಅವಮಾನ ಮಾಡುವ ಕೆಲಸ
ನಿರಾಶ್ರಿತರಾಗಿರುವ ನಿಧಿ ಮತ್ತು ಶಾಂತಿ ಅಜ್ಜಿಯ ಸ್ವಾಭಿಮಾನಕ್ಕೆ ಪದೇ ಪದೇ ದಕ್ಕೆಯುಂಟಾಗುತ್ತಿರೋದರಿಂದ ಕರ್ಣನ ಮನೆಯಿಂದ ಹೊರಗೆ ಹೋಗಲು ನಿರ್ಧರಿಸಿದ್ದಾರೆ. ಇತ್ತ ನಿತ್ಯಾಗೆ ಮಾವ ರಮೇಶ್‌ನಿಂದ ಅವಮಾನ ಮಾಡುವ ಕೆಲಸ ಶುರುವಾಗಿದೆ.
ಇದನ್ನೂ ಓದಿ: Karna Serial: ರಮೇಶ್‌ನಿಗೆ ಮತ್ತೊಂದು ಶಾಕ್; ಗಾಯಗೊಂಡ ಹಾವಿನಂತಾದ ಕರ್ಣನ ನೀಚ ತಂದೆ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

