ಬಾಟಲಿ ಕೊಳಕಾಗಿ ಕೆಟ್ಟ ವಾಸನೆ ಬರುತ್ತಿದ್ದರೆ ಸ್ವಲ್ವವೂ ಕೈ ನೋಯಿಸಿಕೊಳ್ಳದಂತೆ ಕ್ಲೀನ್ ಮಾಡುವ ಟಿಪ್ಸ್
Cleaning Tricks: ನಿಮ್ಮ ನೀರಿನ ಬಾಟಲಿಯು ಒಳಗಡೆ ಕೊಳಕಾಗಿದ್ದರೆ ಮತ್ತು ಕೆಟ್ಟ ವಾಸನೆ ಬರುತ್ತಿದ್ದರೆ ನೀವು ಕೆಲವು ಕ್ಲೀನಿಂಗ್ ಟ್ರಿಕ್ಸ್ ಫಾಲೋ ಮಾಡುವುದರಿಂದ ನೀರಿನ ಬಾಟಲಿಯನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಬಹುದು.

ಫ್ರೆಶ್ ಮತ್ತು ಕ್ಲೀನ್
ನೀವು ಕೊಳಕು ಅಥವಾ ವಾಸನೆ ಬರುವ ನೀರಿನ ಬಾಟಲಿಯನ್ನು ಬಳಸುತ್ತಿದ್ದರೆ ಹಲವಾರು ಆರೋಗ್ಯ ಸಮಸ್ಯೆಗಳನ್ನು ಆಹ್ವಾನಿಸುತ್ತಿದ್ದೀರಿ ಎಂದರ್ಥ. ಹಾಗೆಂದು ನೀವು ಅನಾರೋಗ್ಯ ತಪ್ಪಿಸಲು ಹೊಸ ನೀರಿನ ಬಾಟಲಿ ಖರೀದಿಸುವ ಅಗತ್ಯವಿಲ್ಲ. ನಿಮ್ಮ ಹಳೆಯ ನೀರಿನ ಬಾಟಲಿಯನ್ನು ಸರಿಯಾಗಿ ಸ್ವಚ್ಛಗೊಳಿಸುವ ಮೂಲಕ ನೀವು ಅದನ್ನು ಫ್ರೆಶ್ ಮತ್ತು ಕ್ಲೀನ್ ಆಗಿ ಇಡಬಹುದು.
ಕೆಲವು ಕ್ಲೀನಿಂಗ್ ಟಿಪ್ಸ್
ನೀರಿನ ಬಾಟಲಿಗಳಿಂದ ವಾಸನೆ, ಕೊಳೆ ತೆಗೆದುಹಾಕುವಲ್ಲಿ ಈಗಾಗಲೇ ಅನೇಕರಿಗೆ ಅತ್ಯುತ್ತಮ ಫಲಿತಾಂಶ ನೀಡಿರುವ ಕೆಲವು ಕ್ಲೀನಿಂಗ್ ಟಿಪ್ಸ್ ಇಲ್ಲಿವೆ ನೋಡಿ.
ಉಪ್ಪು ಮತ್ತು ನಿಂಬೆಹಣ್ಣು
ಉಪ್ಪು ಮತ್ತು ನಿಂಬೆಹಣ್ಣಿನ ಮಿಶ್ರಣವು ನೀರಿನ ಬಾಟಲಿಯಿಂದ ಕೊಳೆಯನ್ನು ತೆಗೆದುಹಾಕುವಲ್ಲಿ ಮಾತ್ರವಲ್ಲದೆ, ಬಾಟಲಿಯಿಂದ ಯಾವುದೇ ವಾಸನೆಯನ್ನು ತೆಗೆದುಹಾಕುವಲ್ಲಿಯೂ ಪರಿಣಾಮಕಾರಿಯಾಗಿದೆ.
ಚೆನ್ನಾಗಿ ಸ್ಕ್ರಬ್ ಮಾಡಿ
ಮೊದಲು ಬಾಟಲಿಗೆ ಉಪ್ಪು ಮತ್ತು ನಿಂಬೆ ರಸವನ್ನು ಸೇರಿಸಿ. ಈಗ ಸ್ವಲ್ಪ ನೀರು ಸೇರಿಸಿ. ಬ್ರಷ್‌ನಿಂದ ಬಾಟಲಿಯನ್ನು ಚೆನ್ನಾಗಿ ಸ್ಕ್ರಬ್ ಮಾಡಿ. ಸ್ವಲ್ಪ ಸಮಯದ ನಂತರ ಅದನ್ನು ತೊಳೆಯಿರಿ.
ವಿನೆಗರ್ ಮತ್ತು ಸೋಡಾ
ನೀರಿನ ಬಾಟಲಿಗೆ ಒಂದು ಚಮಚ ವಿನೆಗರ್ ಮತ್ತು ಒಂದು ಚಮಚ ಸೋಡಾವನ್ನು ಸೇರಿಸಬೇಕು. ಬಾಟಲಿಗೆ ಸ್ವಲ್ಪ ನೀರು ಸೇರಿಸಿ ಮುಚ್ಚಿ. ಈಗ ನೀವು ನೀರಿನ ಬಾಟಲಿಯನ್ನು ಚೆನ್ನಾಗಿ ಅಲ್ಲಾಡಿಸಬೇಕು. ಸುಮಾರು 10 ರಿಂದ 15 ನಿಮಿಷಗಳ ನಂತರ ನೀವು ನೀರಿನ ಬಾಟಲಿಯನ್ನು ತೊಳೆದು ಸ್ವಚ್ಛಗೊಳಿಸಬಹುದು. ಈ ಶುಚಿಗೊಳಿಸುವ ತಂತ್ರದಿಂದ ನಿಮ್ಮ ನೀರಿನ ಬಾಟಲಿಯು ಒಳಗೆ ಹೊಳೆಯುವುದಲ್ಲದೆ, ಸ್ವಚ್ಛವಾಗಿರುತ್ತದೆ.
ಗಮನಿಸಬೇಕಾದ ವಿಷಯ
ನೀರಿನ ಬಾಟಲಿಯು ಯಾವಾಗಲೂ ಒದ್ದೆಯಾಗಿದ್ದರೆ, ಒಳಗೆ ನಿರಂತರ ತೇವಾಂಶ ಇರುವುದರಿಂದ ಕೆಟ್ಟ ವಾಸನೆ ಬರಬಹುದು. ನೀರಿನ ಬಾಟಲಿಯಲ್ಲಿ ವಾಸನೆ ಬರದಂತೆ ತಡೆಯಲು ತೊಳೆದ ನಂತರ ಅದನ್ನು ಚೆನ್ನಾಗಿ ಒಣಗಿಸಬೇಕು. ನೀರಿನ ಬಾಟಲಿಯ ಮುಚ್ಚಳ ಸಂಪೂರ್ಣವಾಗಿ ಒಣಗಿದ ನಂತರವೇ ಅದಕ್ಕೆ ಪುನಃ ನೀರು ಹಾಕಬೇಕು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

