ಪ್ರಕರಣ ಸಂಬಂಧ ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ. ಆದರೆ ಈ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಆರೋಪಿಗೆ 1 ಲಕ್ಷ ರೂಪಾಯಿ ಪರಿಹಾರ ಸಿಕ್ಕಿದೆ. ಪ್ರಕರಣದಲ್ಲಿ ಠಾಣೆಗೆ ಹಾಜರಾಗಿ ಸಹಿ ಮಾಡಿ ಬರುವುದು ಸಾಮಾನ್ಯ, ಇದೇನಿದು ಹೊಸ ಕೇಸ್?
ಪಾಟ್ನ (ಡಿ.08) ಪ್ರಕರಣ ಸಂಬಂಧ, ದಾಖಲಾಗಿರುವ ದೂರುಗಳಿಂದ ಹಲವು ಬಾರಿ ಆರೋಪಿಗಳು ಅಥವಾ ದಾಖಲಾಗಿರುವ ದೂರಿನ ಕಾರಣ ಪೊಲೀಸ್ ಠಾಣೆಗೆ ತೆರಳಿ ಸಹಿ ಮಾಡಿ ಬರುವ ಪ್ರಕ್ರಿಯೆ ಹೊಸದೇನಲ್ಲ. ಕಳ್ಳತನ, ವಂಚನೆ, ಬೆದರಿಕೆ ಸೇರಿದಂತೆ ಇತರ ಹಲವು ಪ್ರಕರಣಗಳಲ್ಲಿ ಆರೋಪಿಗಳಿಗೆ ಜಾಮೀನು ನೀಡುವಾಗ ತಿಂಗಳಿಗೆ ಒಂದು ಬಾರಿ, ವಾರದಲ್ಲಿ ಅಥವಾ ಇಂತಿಷ್ಟು ದಿನಗಳಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತೆರಳಿ ಸಹಿ ಮಾಡಲು ಸೂಚಿಸುತ್ತದೆ. ಹೀಗೆ ಎರೆಡೆರು ಪ್ರಕರಣ ಹೊತ್ತಿದ್ದ ಆರೋಪಿಗೂ ಜಿಲ್ಲಾ ನ್ಯಾಯಾಲಯ ದಿನಕ್ಕೆ ಎರಡು ಬಾರಿ ಪೊಲೀಸ್ ಠಾಣೆಗೆ ತೆರಳಿ ಸಹಿ ಹಾಕುವಂತೆ ಸೂಚಿಸಿತ್ತು. ಇದರಂತೆ ಎರಡು ತಿಂಗಳು ಆರೋಪಿ ಹರಹಾಸ ಮಾಡಿದ್ದಾನೆ. ಬಳಿಕ ಹೈಕೋರ್ಟ್ ಮೆಟ್ಟಿಲೇರಿದ್ದಾನೆ. ಈತನ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಆದೇಶ ರದ್ದುಗೊಳಿಸಿದ್ದು ಮಾತ್ರವಲ್ಲ, ಆರೋಪಿಗೆ 1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಹೈಕೋರ್ಟ್ ಆದೇಶಿಸಿದ ಘಟನೆ ಬಿಹಾರದಲ್ಲಿ ನಡೆದಿದೆ.
ಏನಿದು ಪ್ರಕರಣ?
ಸಹರ್ಸಾ ನಿವಾಸಿಯಾಗಿರುವ ವ್ಯಕ್ತಿ ಮೇಲೆ ಎರಡು ಪ್ರಕರಣಗಳು ದಾಖಲಾಗಿತ್ತು. ಒಂದು ವಂಚನೆ ಹಾಗೂ ಮತ್ತೊಂದು ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ ಸೇರಿದಂತೆ 2 ಪ್ರಕರಣ ಈತನ ಮೇಲೆ ದಾಖಲಾಗಿತ್ತು. ಈ ಪ್ರಕರಣದಲ್ಲಿ ಆರೋಪಿಗೆ ಜಾಮೀನು ನೀಡುವ ವೇಳೆ ಸಹರ್ಸಾ ಜಿಲ್ಲಾ ನ್ಯಾಯಾಲ, ದಿನಕ್ಕೆ ಎರಡು ಬಾರಿ ಪೊಲೀಸ್ ಠಾಣೆಗೆ ತೆರಳಿ ಸಹಿ ಮಾಡುವಂತೆ ಷರತ್ತು ವಿಧಿಸಿತ್ತು. ಇದು ಹೊಸದೇನಲ್ಲ. ಎರಡು ಪ್ರಕರಣದ ಸಂಬಂಧ ದಿನಕ್ಕೆ ಎರಡು ಬಾರಿ ಸೂಚಿಸಿತ್ತು. ಒಂದು ಬೆಳಗ್ಗೆ 9 ಗಂಟೆಯಿಂದ 11 ಗಂಟೆ ಒಳಗೆ, ಮತ್ತೊಂದು ಪ್ರಕರಣಕ್ಕೆ ಸಂಜೆ 5 ಗಂಟೆಯಿಂದ ರಾತ್ರಿ 8 ಗಂಟೆ ಒಳಗೆ ಪೊಲೀಸ್ ಠಾಣೆಗೆ ತೆರಳಿ ಸಹಿ ಮಾಡುವಂತೆ ಸೂಚಿಸಿತ್ತು.
60 ಕಿಲೋಮೀಟರ್ ದೂರದಲ್ಲಿತ್ತು ಪೊಲೀಸ್ ಠಾಣೆ
ಆದೇಶ ನೀಡಿದ ಬಳಿಕ ಆರೋಪಿ 2 ತಿಂಗಳು ಹರಾಹಸ ಪಟ್ಟಿದ್ದಾನೆ. ಕಾರಣ ಈತನ ಮನೆಯಿಂದ ಪೊಲೀಸ್ ಠಾಣೆ 60 ಕಿಲೋಮೀಟರ್ ದೂರದಲ್ಲಿತ್ತು. ಬೆಳಗ್ಗೆ ಈತ ಪೊಲೀಸ್ ಠಾಣೆಗೆ ಹೋದರೆ ಎರಡು ಬಾರಿ ಹಾಜರಾಗಿ ಬಳಿಕ ರಾತ್ರಿ ವೇಳೆ ಮನೆಗೆ ವಾಪಾಸ್ಸಾಗುತ್ತಿದ್ದ. ಇದು ಅಸಾಧ್ಯವಾಗಿತ್ತು. ಹೀಗಾಗಿ ಈ ಆದೇಶದ ವಿರುದ್ಧ ಪಾಟ್ನಾ ಹೈಕೋರ್ಟ್ ಮೆಟ್ಟಿಲೇರಿದ್ದ.
ಜಸ್ಟೀಸ್ ರಾಜೀವ್ ಖನ್ನಾ ಪ್ರಸಾದ್ ಹಾಗೂ ಜಸ್ಟೀಸ್ ಸುರೇಂದ್ರ ಪಾಂಡೆ ಪೀಠ ಈ ಅರ್ಜಿ ವಿಚಾರಣೆ ನಡೆಸಿತ್ತು. ಈ ವೇಳೆ ಜೀವನ ಹಾಗೂ ಸ್ವಾತಂತ್ರ್ಯದ ಬಗ್ಗೆ ಕೋರ್ಟ್ ಮೌನವಾಗಿ ಇರುವುದಿಲ್ಲ. ಕಾನೂನು ಸರಿಯಾಗಿ ಪಾಲನೆ ಮಾಡಿಲ್ಲ.ಆರೋಪಿಯ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡಲಾಗಿದೆ. 60 ಕಿಲೋಮೀಟರ್ ದೂರದಲ್ಲಿರುವ ಠಾಣೆಗೆ ದಿನಕ್ಕೆ ಎರಡು ಬಾರಿ ಹಾಜರಾಗುವುದು ಹೇಗೆ ಸಾಧ್ಯ? ಎರಡು ತಿಂಗಳ ಕಾಲ ಆರೋಪಿ ಸಾಹಸ ಮಾಡಿದ್ದಾನೆ. ಅಸಾಧ್ಯ ರೀತಿಯಲ್ಲಿ ಆದೇಶ ನೀಡಲಾಗಿದೆ ಎಂದು ಹೈಕೋರ್ಟ್ ಆದೇಶ ರದ್ದು ಮಾಡಿತು.
1 ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶ
ಆದೇಶ ರದ್ದು ಮಾಡಿದ ಹೈಕೋರ್ಟ್ ಬಿಹಾರ ಸರ್ಕಾರಕ್ಕೆ ಆರೋಪಿಗೆ 1 ಲಕ್ಷ ರೂಪಾಯಿ ಹರಿಹಾರ ನೀಡುವಂತೆ ಸೂಚಿಸಿದೆ. ಇದರಲ್ಲಿ ಕಾನೂನು ಹೋರಾಟದ 10, 000 ರೂಪಾಯಿ ಒಳಗೊಂಡಿದೆ.


