ಸಿಎಂ ಕುರ್ಚಿಗೆ 500 ಕೋಟಿ, ಸ್ಫೋಟಕ ಹೇಳಿಕೆ ಬೆನ್ನಲ್ಲೇ ಸಿಧು ಪತ್ನಿ ಕಾಂಗ್ರೆಸ್‌ನಿಂದ ಅಮಾನತು, ನವಜೋತ್ ಸಿಂಗ್ ಸಿಧು ಸಕ್ರೀಯ ರಾಜಕಾರಣದಿಂದ ದೂರ ಉಳಿದಿರುವ ಕುರಿತು ಹೇಳಿಕೆ ನೀಡಿದ್ದ ನವಜೋತ್ ಕೌರ್ ಸಿಧು ಇದೀಗ ಪಕ್ಷದಿಂದಲೇ ಸಸ್ಪೆಂಡ್ ಆಗಿದ್ದಾರೆ.

ಪಂಜಾಬ್ (ಡಿ.08) ಕಾಂಗ್ರೆಸ್‌ನಲ್ಲಿ ಮುಖ್ಯಮಂತ್ರಿಯಾಗಲು 500 ಕೋಟಿ ರೂಪಾಯಿ ನೋಟು ಇರುವ ಸೂಟ್ ಕೇಸ್ ನೀಡಬೇಕು ಎಂಬ ನವಜೋತ್ ಸಿಂಗ್ ಸಿಧು ಪತ್ನಿ ನವಜೋತ್ ಕೌರ್ ಸಿಧು ಹೇಳಿಕೆ ಕಾಂಗ್ರೆಸ್‌ನಲ್ಲಿ ಕೋಲಾಹಲ ಸೃಷ್ಟಿಸಿದೆ. ದೇಶಾದ್ಯಂತ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿದ್ದು, ಭಾರಿ ಟೀಕೆ ಎದುರಾಗುತ್ತಿದೆ. ಪಂಜಾಬ್ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಬಳಿಕ ದಿಢೀರ್ ರಾಜೀನಾಮೆ ನೀಡಿ ಹೊರಬಂದ ನವಜೋತ್ ಸಿಂಗ್ ಸಿಧು ಅವರ ಸಕ್ರೀಯ ರಾಜಕಾರಣ ಕುರಿತ ಪ್ರಶ್ನೆಗೆ ನೀಡಿದ ಉತ್ತರ ಭಾರಿ ವಿವಾದ ಸೃಷ್ಟಿಸಿದೆ. 500 ಕೋಟಿ ಕೊಟ್ಟರೆ ಮಾತ್ರ ಸಿಎಂ ಆಗಲು ಸಾಧ್ಯ ಎಂಬ ಹೇಳಿಕೆ ನೀಡಿದ ನವಜೋತ್ ಸಿಂಗ್ ಸಿಧು ಕಾಂಗ್ರೆಸ್ ಪಕ್ಷದಿಂದ ಅಮಾನತ್ತಾಗಿದ್ದಾರೆ.

ಪಂಜಾಬ್ ಕಾಂಗ್ರೆಸ್ ಶಿಸ್ತು ಸಮಿತಿಯಿಂದ ಆದೇಶ

ಕಾಂಗ್ರೆಸ್ ಪಕ್ಷದಲ್ಲಿ ದುಡ್ಡಿದ್ದವರು ಮುಖ್ಯಮಂತ್ರಿ ಆಗುತ್ತಾರೆ, ದುಡ್ಡ ಕೊಟ್ಟರೆ ಮಾತ್ರ ಸಿಎಂ ಕುರ್ಚಿಯಲ್ಲಿ ಕೂರಲು ಸಾಧ್ಯ ಎಂಬ ಹೇಳಿಕೆ ನೀಡಿದ ನವಜೋತ್ ಕೌರ್ ಸಿಧು ವಿರುದ್ಧ ಪಂಜಾಬ್ ಕಾಂಗ್ರೆಸ್ ಶಿಸ್ತು ಕ್ರಮ ಕೈಗೊಂಡಿದೆ. ವಿವಾದಿತ ಹೇಳಿಕ ನೀಡಿ ಪಕ್ಷಕ್ಕೆ ಮುಜುಗರ ತಂದಿದ್ದು ಮಾತ್ರವಲ್ಲ, ದೇಶಾದ್ಯಂತ ಹಿನ್ನಡೆಯಾಗುವಂತೆ ಮಾಡಿದ ನವಜೋತ್ ಸಿಂಗ್ ಸಿಧುವನ್ನು ತಕ್ಷಣದಿಂದಲೇ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.ಕಳೆದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವೆಯಾಗಿದ್ದ ಕೌರ್ ಇದೀಗ ಪ್ರಾಥಮಿಕ ಸದಸ್ಯತ್ವದಿಂದಲೇ ಅಮಾನತುಗೊಂಡಿದ್ದಾರೆ.

ನವಜೋತ್ ಕೌರ್ ಸಿಧು ಹೇಳಿದ್ದೇನು?

ಪಂಜಾಬ್‌ನಲ್ಲಿ ಸದ್ಯ ಆಪ್ ಸರ್ಕಾರವಿದೆ. ಇದಕ್ಕೂ ಮೊದಲು ಕಾಂಗ್ರಸ್ ಸರ್ಕಾರವಿತ್ತು. ಪಂಜಾಬ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ನವಜೋತ್ ಸಿಂಗ್ ಸಿಧು ಮುಖ್ಯಮಂತ್ರಿ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷದ ಕಚ್ಚಾಟ, ಬಡಿದಾಟಗಳಿಂದ ಸಿಧು ರಾಜೀನಾಮೆ ನೀಡಿ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು. ಪಂಜಾಬ್ ರಾಜ್ಯಪಾಲರ ಭೇಟಿಯಾದ ಬಳಿಕ ಮಾಧ್ಯಮಗಳ ಜೊತೆ ಮಾತನಾಡುವ ವೇಳೆ ನವಜೋತ್ ಕೌರ್ ಸಿಧು ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ನವಜೋತ್ ಸಿಂಗ್ ಸಿಧು ಸಕ್ರಿಯ ರಾಜಕಾರಣಕ್ಕೆ ಮರಳುತ್ತಾರಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಪತ್ನಿ ನವಜೋತ್ ಕೌರ್ ಸಿಧು, ನಮ್ಮ ಬಳ 500 ಕೋಟಿ ರೂಪಾಯಿ ಇಲ್ಲ. ನಮ್ಮ ಬಳಿ ಯಾರೂ ಹಣ ಕೇಳಿಲ್ಲ. ಆದರೆ ಅಸಲಿ ವಿಚಾರ ಎಂದರೆ 500 ಕೋಟಿ ರೂಪಾಯಿ ಕೊಟ್ಟವರು ಮಾತ್ರ ಮುಖ್ಯಮಂತ್ರಿಯಾಗಲು ಸಾಧ್ಯ ಎಂದು ಕೌರ್ ಹೇಳಿದ್ದರು.

Scroll to load tweet…

ಸಿಧು ಬೆಳೆಯಲು ಬಿಡಲ್ಲ

ನವಜೋತ್ ಸಿಂಗ್ ಸಿಧು ಮುಖ್ಯಮಂತ್ರಿಯಾಗುವುದು ಕಷ್ಟ. ಅಭ್ಯರ್ಥಿಯಾಗಿ ಘೋಷಿಸುವುದು ಅಸಾಧ್ಯವಾಗಿದೆ. ಕಾಂಗ್ರೆಸ್‌ನಲ್ಲಿ ಕನಿಷ್ಠ ಐದು ಮಂದಿ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಅವರು ಸಿಧುವನ್ನು ಬೆಳೆಯಲು ಬಿಡುವುದಿಲ್ಲ. ನವಜೋತ್ ಸಿಂಗ್ ಸಿಧು ಸಕ್ರಿಯ ರಾಜಕಾರಣಕ್ಕೆ ಮರಳಲು ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಅಧಿಕೃತವಾಗಿ ಘೋಷಿಸಬೇಕು ಎಂದು ಕೌರ್ ಹೇಳಿದ್ದರು.

ನವಜೋತ್ ಕೌರ್ ಸಿಧು 500 ಕೋಟಿ ರೂಪಾಯಿ ಹೇಳಿಕೆ ನೀಡುತ್ತಿದ್ದಂತೆ ಬಿಜೆಪಿ ವಾಗ್ದಾಳಿ ನಡೆಸಿತ್ತು. ಕಾಂಗ್ರೆಸ್‌ನಲ್ಲಿ ನಾಯಕರಿಂದ ಕಾರ್ಯಕರ್ತರ ವರೆಗೆ ಯಾವ ರೀತಿ ಭ್ರಷ್ಟಾಚಾರ ನಡೆಯುತ್ತಿದೆ ಅನ್ನೋದು ಪ್ರಮುಖ ನಾಯಕರೇ ಬಾಯಿಬಿಡುತ್ತಿದ್ದಾರೆ ಎಂದು ಬಿಜೆಪಿ ನಾಯಕ ಸುಧಾಂಶು ತ್ರಿವೇದಿ ಹೇಳಿದ್ದರು. ಈ ಎಲ್ಲಾ ಬೆಳವಣಿಗೆಯಿಂದ ನವವಜೋತ್ ಕೌರ್ ಇದೀಗ ಅಮಾನತ್ತಾಗಿದ್ದಾರೆ.