ಬಂಧನ ವಿರುದ್ಧ ರಕ್ಷಣೆ ಬಯಸಿದ ಕಾಂಗ್ರೆಸ್ ನಾಯಕನ ಪವರ್ ಖೆರಾಗೆ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆ, ನಿರೀಕ್ಷಾ ಜಾಮೀನು ಕೋರಿದ್ದ ಪವನ್ ಖೆರಾಗೆ ಖಡಕ್ ಸೂಚನೆ ನೀಡಿದೆ. ಇದೀಗ ಖೆರಾ ಸಂಕಷ್ಟ ತೀವ್ರಗೊಂಡಿದೆ.
ನವದೆಹಲಿ (ಏ.17) ಕಾಂಗ್ರೆಸ್ ಹಿರಿಯ ನಾಯಕ ಪವನ್ ಖೆರಾ ಸಂಕಷ್ಟ ಹೆಚ್ಚಾಗಿದೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಹಾಗೂ ಅವರ ಪತ್ನಿ ವಿರುದ್ದ ಗಂಭೀರ ಆರೋಪ ಮಾಡಿದ್ದ ಪವನ್ ಖೆರಾ ಇದೀಗ ಬಂಧನ ಭೀತಿಯಲ್ಲಿದ್ದಾರೆ. ಪವನ್ ಖೆರಾ ಹೇಳಿಕೆ ವಿರುದ್ಧ ಹಿಮಂತ ಬಿಸ್ವ ಶರ್ಮಾ ದೂರು ನೀಡಿದ್ದರು. ಹೀಗಾಗಿ ತೆಲಂಗಾಣ ಹೈಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದಿದ್ದ ಪವನ್ ಖೆರಾಗೆ ಇದೀಗ 2ನೇ ಬಾರಿ ಸುಪ್ರೀಂ ಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ನಿರೀಕ್ಷಣಾ ಜಾಮೀನು ಪಡೆಯಲು ಪವನ್ ಖೆರಾ ಅಸ್ಸಾಂ ನ್ಯಾಯಲಕ್ಕೆ ತೆರಳಲು ಸೂಚಿಸಿದೆ. ಇದೇ ವೇಳೆ ನಿಮ್ಮ ಯಾವುದೇ ಅವಲೋಕಗಳಿನಿಂದ ಕೋರ್ಟ್ ಪ್ರಭಾವಿತರಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ನಾನು ಭಯೋತ್ಪಾದಕನೇ?
ಪವನ್ ಖೆರಾ ಅಸ್ಸಾಂಗೆ ತೆರಳಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಲು ಸುಪ್ರೀಂ ಕೋರ್ಟ್ ಸೂಚಿಸಿದೆ. ನಿರೀಕ್ಷಣಾ ಜಾಮೀನು ನೀಡುವಂತೆ ಕೋರ್ಟ್ ಮುಂದೆ ಮನವಿ ಮಾಡಿದ್ದ ಪವನ್ ಖೆರಾಗೆ ಖಡಕ್ ಆಗಿ ಕೋರ್ಟ್ ಕೆಲ ವಿಚಾರ ಹೇಳಿದೆ. ಖೆರಾ ಪರ ಅಭಿಷೇಕ್ ಮನು ಸಿಂಗ್ವಿ ವಾದ ಮಂಡಿಸಿದ್ದರು. ನಿರೀಕ್ಷಣಾ ಜಾಮೀನು ನಿರಾಕರಿಸುತ್ತಿದ್ದಂತೆ ತನಗೆ ನಿರೀಕ್ಷಣಾ ಜಾಮೀನು ನೀಡದಿರಲು ನಾನೇನು ಭಯೋತ್ಪಾದಕನೇ ಎಂದು ಪ್ರಶ್ನಿಸಿದ್ದಾರೆ.
ಯಾವುದೇ ಅವಲೋಕನಗಳಿಂದ ನ್ಯಾಯಾಲಯವು ಪ್ರಭಾವಿತವಾಗುವುದಿಲ್ಲ ಎಂದ ಸುಪ್ರೀಂ ಕೋರ್ಟ್ ಹೇಳಿದೆ. ಇಷ್ಟೇ ಅಲ್ಲ ನ್ಯಾಯಾಲಯವು ತನ್ನದೇ ಆದ ಅರ್ಹತೆಯ ಮೇಲೆ ಜಾಮೀನು ಅರ್ಜಿಯನ್ನು ನಿರ್ಧರಿಸಬೇಕು ಎಂದಿದೆ. ಸುಪ್ರೀಂ ಕೋರ್ಟ್ ಆದೇಶದಿಂದ ಪವನ್ ಖೆರಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಸ್ಸಾಂಗೆ ತೆರಳಿದರೆ ಬಂಧನ ಭೀತಿ ಹೆಚ್ಚಾಗಲಿದೆ.
ಏನಿದು ಪ್ರಕರಣ
ಅಸ್ಸಾಂ ಚುನಾವಣೆ ಕಾವಿನಲ್ಲಿ ಪವನ್ ಖೆರಾ ಗಂಭೀರ ಆರೋಪ ಮಾಡಿದ್ದರು. ಅಸ್ಸಾಂ ಸಿಎಂ ಹಿಮಂತ ಬಿಸ್ವ ಶರ್ಮಾ ಪತ್ನಿ ಕೆಲ ವಿದೇಶಿ ಪಾಸ್‌ಪೋರ್ಟ್ ಹೊಂದಿದ್ದಾರೆ. ಜೊತೆಗೆ ವಿದೇಶದಲ್ಲಿ ಕೆಲ ಆಸ್ತಿ, ಉದ್ಯಮ ವ್ಯವಹಾರಗಳಿವೆ. ಇದನ್ನು ಹಿಮಂತ ಬಿಸ್ವ ಶರ್ಮಾ ತಮ್ಮ ಚುನಾವಣಾ ಅಫಿದವಿತ್‌ನಲ್ಲಿ ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದರು. ಈ ಹೇಳಿಕೆ ವಿರುದ್ದ ಹಿಮಂತ ಬಿಸ್ವ ಶರ್ಮಾ ಕೆಂಡಾಮಂಡಲರಾಗಿದ್ದರು. ಇಷ್ಟೇ ಅಲ್ಲ ದೂರು ನೀಡಿದ್ದರು. ದೂರು ದಾಖಳಿಸಿದ ಅಸ್ಸಾಂ ಪೊಲೀಸರು ಪವನ್ ಖೆರಾ ಬಂಧಿಸಲು ತಯಾರಿ ನಡೆಸಿದ್ದರು. ಇದೇ ವೇಳೆ ಪವನ್ ಖೆರಾ ತೆಲಂಗಾಣ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಪಡೆದಿದ್ದಾರೆ.
ಹೈಕೋರ್ಟ್ ನಿರೀಕ್ಷಣಾ ಜಾಮೀನು ವಿರುದ್ದ ಅಸ್ಸಾಂ ಪೊಲೀಸರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ತೆಲಂಗಾಣ ಹೈಕೋರ್ಟ್ ವ್ಯಾಪ್ತಿಗೆ ಈ ಪ್ರಕರಣ ಒಳಪಡುವುದಿಲ್ಲ ಎಂದು ಅಸ್ಸಾಂ ಪೊಲೀಸರು ವಾದಿಸಿದ್ದರು. ಈ ವಾದ ಪುರಸ್ಕರಿಸಿದ ಸುಪ್ರೀಂ ಕೋರ್ಟ್ ಹೈಕೋರ್ಟ್ ನೀಡಿದ ಮಧ್ಯಂತರ ಜಾಮೀನಿಗೆ ತಡೆ ನೀಡಿತ್ತು.


