Gujarat man killed friend: ಮಹಿಳೆಯ ವಿಚಾರಕ್ಕೆ ಸಂಬಂಧಿಸಿದಂತೆ ಗೆಳೆಯರಿಬ್ಬರ ಮಧ್ಯೆ ಕಾದಾಟ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಮಾಡಿದ ನಂತರ ಆರೋಪಿ ಸ್ನೇಹಿತನ ಶವವನ್ನು ಹಲವು ಭಾಗಗಳಾಗಿ ಕತ್ತರಿಸಿ ಮೃತದೇಹದ ಭಾಗಗಳನ್ನು ಬೋರ್‌ವೆಲ್‌ಗೆ ಎಸೆದಿದ್ದಾನೆ. ಡಿಟೇಲ್ ಸ್ಟೋರಿ ಇಲ್ಲಿದೆ
ಮಹಿಳೆಯ ವಿಚಾರಕ್ಕೆ ಸ್ನೇಹಿತನ ಕತೆ ಮುಗಿಸಿದ ಗೆಳೆಯ:
ಮಹಿಳೆಯ ವಿಚಾರಕ್ಕೆ ಸಂಬಂಧಿಸಿದಂತೆ ಗೆಳೆಯರಿಬ್ಬರ ಮಧ್ಯೆ ಕಾದಾಟ ನಡೆದಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಕೊಲೆ ಮಾಡಿದ ನಂತರ ಆರೋಪಿ ಸ್ನೇಹಿತನ ಶವವನ್ನು ಹಲವು ಭಾಗಗಳಾಗಿ ಕತ್ತರಿಸಿ ಮೃತದೇಹದ ಭಾಗಗಳನ್ನು ಬೋರ್‌ವೆಲ್‌ಗೆ ಎಸೆದಿದ್ದಾನೆ. ಗುಜರಾತ್‌ನ ಮುರು ಗ್ರಾಮದಲ್ಲಿ ಈ ಭಯಾನಕ ಕೊಲೆ ಪ್ರಕರಣ ನಡೆದಿದೆ. 20 ವರ್ಷದ ರಮೇಶ್ ಮಹೇಶ್ವರಿ ಕೊಲೆಯಾದ ಯುವಕ, ಕಳೆದ ಆರು ದಿನಗಳಿಂದ ನಖತ್ರಾಣದ ಸಮೀಪದ ಮುರು ಗ್ರಾಮದ ರಮೇಶ್ ಮಹೇಶ್ವರ್ ಕಾಣೆಯಾಗಿದ್ದ. ಪುತ್ರ ಕಾಣೆಯಾದ ಹಿನ್ನೆಲೆ ಆತನ ಮನೆಯವರು ನಾಪತ್ತೆ ಪ್ರಕರಣ ದಾಖಲಿಸಿದ್ದರು. ಹೀಗಾಗಿ ಪ್ರಕರಣದ ದಾಖಲಿಸಿಕೊಂಡ ಪೊಲೀಸರು ಹುಡುಕಾಟ ಆರಂಭಿಸಿದ್ದರು. ಪೊಲೀಸರು ತನಿಖೆ ಮುಂದುವರೆಸಿದಾಗ ಸ್ವತಃ ರಮೇಶ್‌ನ ಮಹೇಶ್ವರಿಯ ಸ್ನೇಹಿತ ಕಿಶೋರ್ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ. ಹೀಗಾಗಿ ಆತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಪೊಲೀಸರಿಗೆ ಕೊಲೆ ಮಾಡಿದ್ದು ಆತನೇ ಎಂಬುದು ತಿಳಿದು ಬಂದಿದೆ.
ಗೆಳೆಯನ ಗೆಳತಿಗೆ ತನ್ನೊಂದಿಗೂ ಸಂಬಂಧ ಹೊಂದುವಂತೆ ಒತ್ತಡ
ಮಹಿಳೆಯ ವಿಚಾರಕ್ಕೆ ಈ ಕೊಲೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ವಿಚಾರಣೆ ವೇಳೆ ಈ ಕೊಲೆ ಪ್ರಕರಣದಲ್ಲಿ ಅಪ್ರಾಪ್ತ ಬಾಲಕನೂ ಭಾಗಿಯಾಗಿರುವುದು ತಿಳಿದು ಬಂದಿದೆ. ಕಿಶೋರ್ ತಮ್ಮಿಬ್ಬರಿಗೂ ಪರಿಚಿತಳಾದ ಮಹಿಳೆಯ ವಿಷಯದಲ್ಲಿ ನಡೆದ ವಾಗ್ವಾದದ ನಂತರ ರಮೇಶ್‌ನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ. ಪೊಲೀಸರ ಪ್ರಕಾರ ಆರೋಪಿ, ಕಿಶೋರ್ ಆ ಮಹಿಳೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ಸಂದೇಶ ಕಳುಹಿಸಿ, ತನ್ನೊಂದಿಗೂ ಸಂಬಂಧ ಹೊಂದುವಂತೆ ಒತ್ತಡ ಹೇರಿದ್ದ. ಆಕೆ ಈ ವಿಚಾರದ ಬಗ್ಗೆ ರಮೇಶ್‌ಗೆ ಮಾಹಿತಿ ನೀಡಿದ್ದರಿಂದ ಇಬ್ಬರು ಸ್ನೇಹಿತರ ನಡುವೆ ಗಲಾಟೆ ಉಂಟಾಗಿತ್ತು. ಇದರಿಂದ ಬೇಸತ್ತ ಕಿಶೋರ್ ಆತನನ್ನೇ ಕೊಲ್ಲಲು ನಿರ್ಧರಿಸಿದ್ದ ಎನ್ನಲಾಗಿದೆ.
ಇದನ್ನೂ ಓದಿ: ರಿಯಲ್ ಹೀರೋ ಮೇಜರ್ ಮೋಹಿತ್ ಶರ್ಮಾ ಪತ್ನಿಯನ್ನು ಮುನ್ನೆಲೆಗೆ ತಂದ ಧುರಂಧರ್ ಸಿನಿಮಾ: ಯಾರೀಕೆ?
ಆರೋಪಿ ಕಿಶೋರ್, ರಮೇಶ್‌ನನ್ನು ಗ್ರಾಮದ ಹೊರವಲಯಕ್ಕೆ ಕರೆದೊಯ್ದು ಕೊಲೆ ಮಾಡಿ, ನಂತರ ಚಾಕುವಿನಿಂದ ತಲೆ, ಕೈ ಮತ್ತು ಕಾಲುಗಳನ್ನು ಕತ್ತರಿಸಿದ್ದಾನೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ನಂತರ ರಮೇಶ್‌ನ ದೇಹದ ಭಾಗಗಳನ್ನು ಕೊಳವೆ ಬಾವಿಗೆ ಎಸೆದು, ಉಳಿದ ದೇಹವನ್ನು ಹತ್ತಿರದಲ್ಲೇ ಹೂತು ಹಾಕಿದ್ದಾನೆ. ಈತ ಪೊಲೀಸರ ವಿಚಾರಣೆಯ ನಂತರ ತಪ್ಪೊಪ್ಪಿಕೊಂಡಿದ್ದು ಬಳಿಕ ನಖತ್ರಾಣ ಪೊಲೀಸರು ಸ್ಥಳ ಮಹಜರು ಮಾಡಿದ್ದಾರೆ. ಈ ವೇಳೆ ಕೊಲೆಯಾದ ರಮೇಶ್ ಮಹೇಶ್ವರಿ ಅವರ ದೇಹದ ಭಾಗಗಳನ್ನು ಕೊಳವೆಬಾವಿಯೂ ಸೇರಿದಂತೆ ವಿವಿಧ ಸ್ಥಳಗಳಿಂದ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ರೀಲ್ಸ್ ನೋಡಿ ನೋಡಿ, ಗಂಡ ಮಕ್ಕಳ ಬಿಟ್ಟು ಸೋಶಿಯಲ್ ಮೀಡಿಯಾ ಗೆಳೆಯನಿಗಾಗಿ ಬಸ್ ಹತ್ತಿದ ಮಹಿಳೆ


