ಕಾಂಗ್ರೆಸ್ ನಡೆಸಿದ್ದ ಡ್ರಗ್ಸ್ ವಿರೋಧಿ ಕಾರ್ಯಕ್ರಮದಲ್ಲಿ ಸಚಿನ್ ಸಕ್ರಿಯವಾಗಿ ಭಾಗವಹಿಸಿದ್ದರು.

ಕಡಕ್ಕಲ್ (ಜು.2): ಕೊಲ್ಲಂನ ಕಡಕ್ಕಲ್‌ನಲ್ಲಿ ಗಾಂಜಾ ಸಹಿತ ಕಾಂಗ್ರೆಸ್ ಮುಖಂಡನನ್ನು ಬಂಧಿಸಲಾಗಿದೆ. ಅಬಕಾರಿ ತಂಡ ಗಾಂಜಾ ಸಹಿತ ಮಾಂಗಡ ಮೂಲದ ಸಚಿನ್ ಎಂಬಾತನನ್ನು ಬಂಧಿಸಿದೆ.

ಬಂಧಿತ ಕಾಂಗ್ರೆಸ್ ಮುಖಂಡನಿಂದ ಒಂದೂವರೆ ಕೆಜಿ ಗಾಂಜಾ ಪತ್ತೆಯಾಗಿದ್ದು ವಶಕ್ಕೆ ಪಡೆಯಲಾಗಿದೆ.. ಸಚಿನ್ ಕಾಂಗ್ರೆಸ್ ಕುಮ್ಮಿಲ್ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ. ಚಡಯಮಂಗಲಂ ಅಬಕಾರಿ ರೇಂಜ್‌ ಇನ್‌ಸ್ಪೆಕ್ಟರ್‌ ರಾಜೇಶ್‌ ನೇತೃತ್ವದಲ್ಲಿ ಕಡಕ್ಕಲ್‌ ಮಾರುಕಟ್ಟೆ ಬಳಿ ನಡೆಸಿದ ಶೋಧದಲ್ಲಿ ಸಚಿನ್‌ನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಗುಜರಾತ್‌ನಲ್ಲಿಂದು ಅಮಿತ್ ಶಾ ಸಮ್ಮುಖದಲ್ಲಿ 12,000 ಕೆ.ಜಿ.ಗೂ ಅಧಿಕ Drugs ನಾಶ

ಕಡಕ್ಕಲ್ ಮಾರುಕಟ್ಟೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಜೆ ವೇಳೆ ಮಾದಕ ದ್ರವ್ಯಗಳ ವಿನಿಮಯ ಮತ್ತು ಮಾರಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ನಡೆಸಿದ ದಾಳಿಯಲ್ಲಿ ಕಾಂಗ್ರೆಸ್ ನಾಯಕನನ್ನು ಬಂಧಿಸಲಾಯಿತು. ಸ್ಥಳೀಯ ಕಾಂಗ್ರೆಸ್ ನಾಯಕರಾದ ಸಚಿನ್, ಮಾದಕ ದ್ರವ್ಯಗಳ ವಿರುದ್ಧ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಸಕ್ರಿಯರಾಗಿದ್ದರು.

ಸಚಿನ್ ಬೇರೆ ರಾಜ್ಯಗಳಿಂದ ಗಾಂಜಾ ಆಮದು ಮಾಡಿಕೊಂಡು ಸಣ್ಣ ಪ್ಯಾಕೆಟ್ ಗಳಲ್ಲಿ ಮಾರಾಟ ಮಾಡುತ್ತಿದ್ದ ಎಂದು ಅಬಕಾರಿ ಇಲಾಖೆ ತಿಳಿಸಿದೆ. ಆತನ ಗ್ಯಾಂಗ್ ನ ಸದಸ್ಯರನ್ನು ಗುರುತಿಸಲಾಗಿದ್ದು, ಗಾಂಜಾ ತಲುಪಿಸುವವರ ಮೇಲೆ ನಿಗಾ ಇಡಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ