ದೇಶಿಯ ವಿಮಾನ ಸಾರಿಗೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿ ಹಲವು ಪ್ರಯಾಣಿಕರ ಕನಸು ಕಸಿದ ಇಂಡಿಗೋ ವಿಮಾನಗಳ ನಿರಂತರ ರದ್ದು ಪ್ರಕರಣದ ತನಿಖೆ ನಡೆಸುತ್ತಿರುವ ಸಮಿತಿಯೂ ಈಗ ನಾಲ್ವರು ವಿಮಾನ ಕಾರ್ಯಾಚರಣೆ ಇನ್ಸ್‌ಪೆಕ್ಟರ್‌ಗಳನ್ನು ಸೇವೆಯಿಂದ ವಜಾ ಮಾಡಿದೆ.

ನಾಲ್ವರು ವಿಮಾನ ಕಾರ್ಯಾಚರಣೆ ಇನ್ಸ್‌ಪೆಕ್ಟರ್‌ಗಳ ವಜಾ:

ದೇಶಿಯ ವಿಮಾನ ಸಾರಿಗೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿ ಹಲವು ಪ್ರಯಾಣಿಕರ ಕನಸು ಕಸಿದ ಇಂಡಿಗೋ ವಿಮಾನಗಳ ನಿರಂತರ ರದ್ದು ಪ್ರಕರಣದ ತನಿಖೆ ನಡೆಸುತ್ತಿರುವ ಸಮಿತಿಯೂ ಈಗ ನಾಲ್ವರು ವಿಮಾನ ಕಾರ್ಯಾಚರಣೆ ಇನ್ಸ್‌ಪೆಕ್ಟರ್‌ಗಳನ್ನು ಸೇವೆಯಿಂದ ವಜಾ ಮಾಡಿದೆ.

ದೇಶದಲ್ಲಿ ಇಂಡಿಗೋ ವಿಮಾನಗಳು ಹಠಾತ್ ಆಗಿ ರದ್ದಾಗಿದ್ದರಿಂದ ಉಂಟಾಗಿರುವ ದೊಡ್ಡ ಪ್ರಮಾಣದ ಅಡಚಣೆಗಳ ಪರಿಣಾಮಗಳು ಮುಂದುವರಿದಿದ್ದು, ಈ ಪ್ರಕರಣದ ಬಗ್ಗೆ ತನಿಖೆ ಮಾಡುತ್ತಿರುವ ನಾಗರಿಕ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ)ವೂ ಇಂಡಿಗೋದ ಮೇಲ್ವಿಚಾರಣೆಗೆ ನೇರವಾಗಿ ಜವಾಬ್ದಾರರಾಗಿದ್ದ ನಾಲ್ವರು ವಿಮಾನ ಕಾರ್ಯಾಚರಣೆ ನಿರೀಕ್ಷಕರನ್ನು ವಜಾಗೊಳಿಸಿದೆ. ಇಂಡಿಗೋದ ಈ ಹಠಾತ್ ವಿಮಾನಗಳ ರದ್ದುಗೊಳಿಸುವಿಕೆಯಿಂದಾಗಿ ವಿಮಾನ ನಿಲ್ದಾಣಗಳಲ್ಲಿ ದೊಡ್ಡ ಮಟ್ಟದ ಗೊಂದಲ ಉಂಟಾಗಿತ್ತು. ಸಾವಿರಾರು ಪ್ರಯಾಣಿಕರು ತೀವ್ರ ಸಂಕಷ್ಟಕ್ಕೀಡಾಗಿದ್ದರು. ಕಡೆಕ್ಷಣದಲ್ಲಿ ವಿಮಾನ ರದ್ದಾಗಿದ್ದರಿಂದ ಕೆಲವರಿಗೆ ಅವರದ್ದೇ ಮದುವೆಗೆ ಹೋಗಲಾಗದ ಸ್ಥಿತಿ ನಿರ್ಮಾಣವಾಗಿತ್ತು. ಇನ್ನು ಕೆಲವರಿಗೆ ಮೃತರಾದ ಆತ್ಮೀಯರನ್ನು ಕೊನೆ ಕ್ಷಣದಲ್ಲಿ ನೋಡಲಾಗದಂತಹ ದುಸ್ಥಿತಿ ಏರ್ಪಟ್ಟಿತ್ತು. ಹಾಗೆಯೇ ಕೆಲವರಿಗೆ ಬದುಕಿನಲ್ಲಿ ಬಹಳ ಮಹತ್ವದೆನಿಸಿರುವ ಉದ್ಯೋಗವೇ ಕೈ ಜಾರಿದ ಘಟನೆಗಳು ನಡೆದಿದ್ದವು.

ಹೀಗಾಗಿ ಇಂಡಿಗೋದ ಈ ಕೊನೆ ಕ್ಷಣದಲ್ಲಿ ವಿಮಾನ ರದ್ದು ಮಾಡಿರುವ ಕ್ರಮಗಳ ಹಿಂದಿನ ಪ್ರಕರಣದ ತನಿಖೆಗೆ ನಾಗರಿಕ ವಿಮಾನಯಾನ ಸಚಿವಾಲಯವು 8 ಸದಸ್ಯರ ಮೇಲ್ವಿಚಾರಣ ತಂಡವನ್ನು ರಚನೆ ಮಾಡಿದೆ. ಈ ತಂಡವೂ ನಾಲ್ವರು ಇನ್ಸ್‌ಪೆಕ್ಟರ್‌ಗಳ ವಜಾ ಮಾಡಿದೆ. ಇದು ದೇಶಾದ್ಯಂತ ವಿಮಾನ ನಿಲ್ದಾಣಗಳು ಮತ್ತು ವಿಮಾನಯಾನ ಕಾರ್ಯನಿರ್ವಹಣೆಯನ್ನು ಮೇಲ್ವಿಚಾರಣೆ ಮಾಡಲಿದೆ. ಡಿಜಿಸಿಎ ಆಡಳಿತ ವಿಭಾಗದಿಂದ ಸಂಪೂರ್ಣವಾಗಿ ಆಯ್ಕೆ ಮಾಡಲಾದ ಈ ತಂಡವು ಕಾರ್ಯಾಚರಣೆಯ ಕಾರ್ಯಕ್ಷಮತೆ ಮತ್ತು ಪ್ರಯಾಣಿಕರ ಕಲ್ಯಾಣವನ್ನು ಪ್ರತಿದಿನವೂ ಗಮನಿಸುತ್ತಿದೆ.

ಡಿಜಿಸಿಎ ರಚನೆ ಮಾಡಿದ ಈ ಮೇಲ್ವಿಚಾರಣ ತಂಡದಲ್ಲಿ ಡೆಪ್ಯೂಟಿ ಚೀಫ್ ಫ್ಲೈಟ್ ಆಪರೇಷನ್ಸ್ ಇನ್ಸ್‌ಪೆಕ್ಟರ್ ಕ್ಯಾಪ್ಟನ್ ವಿಕ್ರಮ್ ಶರ್ಮಾ, ಸೀನಿಯರ್ ಫ್ಲೈಟ್ ಆಪರೇಷನ್ಸ್ ಇನ್ಸ್‌ಪೆಕ್ಟರ್ (SFOI) ಕ್ಯಾಪ್ಟನ್ ಕಪಿಲ್ ಮಂಗಲಿಕ್, ಕ್ಯಾಪ್ಟನ್ ವಿ.ಪಿ. ಸಿಂಗ್ (SFOI), ಅಪೂರ್ವ ಅಗರ್ವಾಲ್ (SFOI), ಸ್ವಾತಿ ಲೂಂಬಾ (SFOI), ಅಮನ್ ಸುಹಾಗ್ (SFOI), ನಿತ್ಯ ಜೈನ್ (FOI), ಮತ್ತು ಕ್ಯಾಪ್ಟನ್ NJ ಸಿಂಗ್ (FOI) ಸೇರಿದ್ದಾರೆ. ಈ ತಂಡದ ಇಬ್ಬರು ಅಧಿಕಾರಿಗಳು ಇಂಡಿಗೋದ ಗುರುಗ್ರಾಮ್‌ನಲ್ಲಿರು ಕಾರ್ಪೊರೇಟ್ ಕಚೇರಿಯಲ್ಲಿ ಪ್ರತಿದಿನ ವಿಮಾನಗಳ ನಿಯೋಜನೆ, ಸಿಬ್ಬಂದಿ ಬಳಕೆ, ಪೈಲಟ್‌ಗಳು ತರಬೇತಿಯಲ್ಲಿರುವುದು, ನೆಟ್‌ವರ್ಕ್ ಯೋಜನೆ, ಯೋಜಿತವಲ್ಲದ ರಜೆ, ಬಾಧಿತ ವಲಯಗಳು ಮತ್ತು ಕಾಕ್‌ಪಿಟ್ ಮತ್ತು ಕ್ಯಾಬಿನ್ ಎರಡರಲ್ಲೂ ಸ್ಟ್ಯಾಂಡ್‌ಬೈ ಸಿಬ್ಬಂದಿಯ ಲಭ್ಯತೆಯನ್ನು ಪರಿಶೀಲಿಸಲಿದೆ.

ಇದನ್ನೂ ಓದಿ: BOYS NOT ALLOWED ಅಂತ ಸ್ಟಾಲ್‌ನಲ್ಲಿ ಬೋರ್ಡ್‌ ಹಾಕಿದ ಪಾನಿಪುರಿ ಭೈಯಾ: ನೆಟ್ಟಿಗರಿಂದ ತೀವ್ರ ಆಕ್ರೋಶ

ಇವರ ಜೊತೆಗೆ ಇನ್ನಿಬ್ಬರು ಅಧಿಕಾರಿಗಳಾದ ಉಪನಿರ್ದೇಶಕ ಐಶ್ವೀರ್ ಸಿಂಗ್ ಮತ್ತು ಹಿರಿಯ ಅಂಕಿ ಅಂಶ ಅಧಿಕಾರಿ ಮಣಿಭೂಷಣ್ ಅವರನ್ನು ಗುರುಗ್ರಾಮ್ ಕಚೇರಿಯಲ್ಲಿ ನಿಯೋಜಿಸಲಾಗಿದ್ದು, ಅವರು ಟಿಕೆಟ್ ರದ್ದತಿ, ವಿಮಾನಯಾನ ಮತ್ತು ಒಟಿಎ ಪ್ಲಾಟ್‌ಫಾರ್ಮ್‌ಗಳಲ್ಲಿ ಮರುಪಾವತಿ ಸ್ಥಿತಿ, ಸಮಯಕ್ಕೆ ಸರಿಯಾಗಿ ಕಾರ್ಯ, ಪರಿಹಾರ ಮತ್ತು ಲಗೇಜ ಹಿಂದಿರುಗಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ. ಇಲ್ಲಿನ ಎರಡೂ ತಂಡಗಳು ಸಂಜೆ 6:00 ಗಂಟೆಯೊಳಗೆ ಜಂಟಿ ಮಹಾನಿರ್ದೇಶಕ (ಆಡಳಿತ) ಹರೀಶ್ ಕುಮಾರ್ ವಶಿಷ್ಠ ಮತ್ತು ಜಂಟಿ ಮಹಾನಿರ್ದೇಶಕ ಜೈ ಪ್ರಕಾಶ್ ಪಾಂಡೆ ಅವರಿಗೆ ದೈನಂದಿನ ವರದಿಯನ್ನು ಸಲ್ಲಿಸಲಿವೆ.

ಇಂಡಿಗೋ ಸಿಇಒಗೆ ಡಿಜಿಸಿಎ ಸಮನ್ಸ್

ಇಂಡಿಗೋದ ಹೆಚ್ಚುತ್ತಿರುವ ಬಿಕ್ಕಟ್ಟಿನ ಮಧ್ಯೆಯೇ ನಿನ್ನೆ ಎಂದರೆ ಡಿಸೆಂಬರ್ 11, ಗುರುವಾರ ಹಾಜರಾಗುವಂತೆ ಇಂಡಿಗೋ ಸಿಇಒ ಪೀಟರ್ ಎಲ್ಬರ್ಸ್ ಅವರಿಗೆ ಡಿಜಿಸಿಎ ಸಮನ್ಸ್ ಜಾರಿ ಮಾಡಿತ್ತು ಇಂಡಿಗೋದಿಂದ ಆದ ಅಡಚಣೆಗಳು, ಕಾರ್ಯಾಚರಣೆಯನ್ನು ಸ್ಥಿರಗೊಳಿಸಲು ತೆಗೆದುಕೊಂಡ ಕ್ರಮಗಳು ಮತ್ತು ವಿಮಾನಯಾನ ಸಂಸ್ಥೆಯ ನೇಮಕಾತಿ ಯೋಜನೆಗಳ ಬಗ್ಗೆ ವಿವರ ನೀಡುವಂತೆ ಅವರನ್ನು ಕೇಳಲಾಗಿತ್ತು.

ಇದನ್ನೂ ಓದಿ: ಮಾಜಿ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ನಿಧನ