ಅನಾರೋಗ್ಯ ಏನಿದ್ದರೂ ವೀಕ್ ಆಫ್ನಲ್ಲೇ ಬರಬೇಕು ಸಿಕ್ ಲೀವ್ ಇಲ್ಲ, ನೋವು ತೋಡಿಕೊಂಡ ಉದ್ಯೋಗಿ, ಇಬ್ಬರಿಗೆ ಒಟ್ಟಿಗೆ ರಜೆ ಇಲ್ಲ, ಅದು ಸಿಕ್, ಎಮರ್ಜೆನ್ಸಿ ಏನಾದರೂ ಸರಿ ಎಂದು ಬಾಸ್ ಹೇಳಿದ್ದಾರೆ. ಇದರ ಜೊತೆಗೆ ಕೆಲ ಕಂಡೀಷನ್. ಈ ಬಾಸ್ ವಿರುದ್ಧ ಉದ್ಯೋಗಿ ನೋವು ತೋಡಿಕೊಂಡಿದ್ದಾರೆ.
ಕಾರ್ಪೋರೇಟ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಕೆಲಸದ ವಾತಾವರಣ ಕುರಿತು ಹಲವು ಬಾರಿ ಚರ್ಚೆಯಾಗುತ್ತದೆ. ಒಂದು ರಜೆಗಾಗಿ ಪರದಾಡುವ ಪರಿಸ್ಥಿತಿಯನ್ನು ಹಲವರು ಹಂಚಿಕೊಂಡಿದ್ದಾರೆ. ಇದೀಗ ಉದ್ಯೋಗಿಯೊಬ್ಬರು ತನ್ನ ಬಾಸ್ ಕುರಿತ ಅಸಮಾಧಾನ ಹೊರಹಾಕಿದ್ದಾರೆ. ತೀವ್ರ ಜ್ವರವಿದ್ದರೂ ಸಿಕ್ ಲೀವ್ ನೀಡಲು ನಿರಾಕರಿಸಿದ್ದಾರೆ. ನನ್ನಂತೆ ಹಲವು ಉದ್ಯೋಗಿಗಲಿಗೆ ಎಮರ್ಜೆನ್ಸಿ ರಜೆ ನೀಡದೇ ಸತಾಯಿಸುತ್ತಾರೆ ಎಂದು ರೆಡ್ಡಿಟ್ ಮೂಲಕ ಆಕ್ರೋಶ, ನೋವು ಹೊರಹಾಕಿದ್ದಾರೆ. ಡಿಸೆಂಬರ್, ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಯಾವುದೇ ರಜೆ ಹಾಕದಂತೆ ಸೂಚಿಸುತ್ತಾರೆ. ಆದರೆ ಬಾಸ್ ನ್ಯೂ ಇಯರ್, ವೆಕೇಶನ್ ಎಂದು ರಜೆ ಹಾಕಿ ಹೋಗುತ್ತಾರೆ ಎಂದಿದ್ದಾರೆ. ಇಲ್ಲಿ ಅನಾರೋಗ್ಯ ಏನೇ ಬಂದರೂ ವಾರದ ರಜೆಯಲ್ಲೇ ಮುಗಿಯಬೇಕು. ಇನ್ನುಳಿದ ದಿನ ಜ್ವರ ಬಂದರೆ ರಜೆ ಇಲ್ಲ, ಕೆಲಸ ಮಾತ್ರ ಎಂದು ಉದ್ಯೋಗಿ ಹೇಳಿಕೊಂಡಿದ್ದಾರೆ.
ಸಿಕ್ ಲೀವ್ ನಿರಾಕರಿಸಲು ಕೊಟ್ಟ ಕಾರಣವೇನು?
ಕಾರ್ಪೋರೇಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಉದ್ಯೋಗಿ ಈ ಮಾಹಿತಿಯನ್ನು ರೆಡ್ಡಿಟ್ ಮೂಲಕ ಹಂಚಿಕೊಂಡಿದ್ದಾರೆ. ನಾನು ಎಂಎನ್ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಮಹಿಳಾ ಮ್ಯಾನೇಜರ್ ವರ್ತನೆ, ಸೂಚನೆಗಳು ಕೆಲಸದ ವಾತಾವರಣವನ್ನೇ ಕೆಡಿಸಿಬಿಡುತ್ತದೆ. ಟಾಕ್ಸಿಕ್ ಬಾಸ್ ನನ್ನ ಸಿಕ್ ಲೀವ್ ನಿರಾಕರಿಸಿದ್ದರೆ. ಕಾರಣ ಇಬ್ಬರು ಒಂದೇ ದಿನ ರಜೆ ಮಾಡುವಂತಿಲ್ಲ ಎಂದಿದ್ದಾರೆ. ಒಂದು ರಜೆ ಪಡೆಯಲು ನಾವು ಭಿಕ್ಷೆ ಬೇಡಬೇಕು. ಈ ಹಿಂದೆ ಉದ್ಯೋಗಿಯೊಬ್ಬರ ತಂದೆ ಆಸ್ಪತ್ರೆ ದಾಖಲಾಗಿದ್ದರು. ಆರೋಗ್ಯ ಗಂಭೀರವಾಗಿದ್ದ ಕಾರಣ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಬ್ಯೂಸಿನೆಟ್, ಟಾರ್ಗೆಟ್, ಡೆಡ್ಲೈನ್ ಕಾರಣ ಹೇಳಿ ಉದ್ಯೋಗಿಗೆ ರಜೆ ನಿರಾಕರಿಸಿದ್ದರು. ಇನ್ನು ಕಚೇರಿಯಲ್ಲಿ ಒಂದು ನಿಯಮ ಮಾಡಿದ್ದಾರೆ. ಯಾರೂ ಕೂಡ, ಯಾವುದೇ ಉದ್ಯೋಗಿ ಡಿಸೆಂಬರ್, ಜನವರಿ ಹಾಗೂ ಫೆಬ್ರವರಿಯಲ್ಲಿ ರಜೆ ಮಾಡುವಂತಿಲ್ಲ. ಆದರೆ ಮಹಿಳಾ ಬಾಸ್ ಡಿಸೆಂಬರ್ನಲ್ಲಿ ವೆಕೇಶನ್, ನ್ಯೂಇಯರ್ ಎಂದು ರಜೆ ಹಾಕುತ್ತಾರೆ ಎಂದು ನೋವು ತೋಡಿಕೊಂಡಿದ್ದಾರೆ.
ಸಾವಿರ ಕಾರಣ ಹೇಳಿ ಬ್ಯೂಸಿನೆಸ್ ಗೊತ್ತಿಲ್ಲ ಎನ್ನುತ್ತಾರೆ
ನಾನು ತೀವ್ರ ಜ್ವರದಿಂದ ಬಳಲುತ್ತಿದ್ದೇನೆ. ತಲೆನೋವು, ಮೈಕೈ ನೋವಿನಿಂದ ಕೆಲಸ ಮಾಡಲು ಆಗುತ್ತಿಲ್ಲ. ಸಿಕ್ ಲೀವ್ ಕೆಳಿದರೆ ಸಾವಿರ ಕಾರಣ ಹೇಳುತ್ತಿದ್ದಾರೆ, ನಿಮಗೆ ಸ್ಯಾಲರಿ ಎಣಿಸಲು ಮಾತ್ರ ಗೊತ್ತು, ಈ ದುಡ್ಡು ಎಲ್ಲಿಂದ ಬರುತ್ತೆ, ಬ್ಯೂಸಿನೆಸ್ ಏನೂ ಅನ್ನೋದೇ ಗೊತ್ತಿಲ್ಲ ಎಂದು ಬಾಸ್ ಹೇಳಿದ್ದಾರೆ. ಪಿಎಲ್ ರಜೆಗಳನ್ನು ಡಿಸೆಂಬರ್ ಮೊದಲ ವಾರದಲ್ಲಿ ಮುಗಿಸಲು ಹೇಳಿದ್ದರು. ಇದೀಗ ಸಿಕ್ ಲೀವ್ ಇಲ್ಲ ಎಂದಿದ್ದಾರೆ. ಏನು ಮಾಡಲಿ ಎಂದು ಅಳಲು ತೋಡಿಕೊಂಡಿದ್ದಾರೆ.
ಟಾಕ್ಸಿಕ್ ಕಂಪನಿಗಳ ಹೆಸರೂ ಸೂಚಿಸಿ ಎಂದು ಸಲಹೆ
ಈ ರೀತಿ ಟಾಕ್ಸಿಕ್ ಕೆಲಸದ ವಾತಾವರಣ ಇರುವ ಕಂಪನಿಗಳ ಹೆಸರು ಅಥವಾ ಕಂಪನಿಗಳ ಕುರಿತು ಹಿಂಟ್ ನೀಡಿದರೆ ಉತ್ತಮ. ಕಾರಣ ಈ ರೀತಿಯ ಕಂಪನಿಗಳಿಂದ ಉದ್ಯೋಗಿಗಳು ದೂರ ಉಳಿಯಬಹುದು. ಇದರಿಂದ ಕಂಪನಿಗೆ ನೇಮಕಾತಿಯಲ್ಲಿ ಸಮಸ್ಯೆಯಾಗಲಿದೆ. ಕಂಪನಿ ಕುಸಿತ ಕಾಣಲಿದೆ. ಇಷ್ಟೇ ಅಲ್ಲ ಈ ರೀತಿಯ ಹೇಳುವಾಗ ಸ್ಪಷ್ಟತೆಯೂ ಅವಶ್ಯತೆ ಬೇಕಿದೆ. ಹೀಗಾಗಿ ಸತ್ಯಾಂಶವೂ ಬಯಲಾಗಲಿದೆ ಎಂದು ಹಲವರು ಸಲಹೆ ನೀಡಿದ್ದಾರೆ. ಇನ್ನು ಕೆಲವರು ಈ ರೀತಿಯ ಕಂಪನಿಯಲ್ಲಿ ಕೆಲಸ ಮಾಡದಂತೆ ಸೂಚಿಸಿದ್ದರೆ. ಬೇರೆ ಕಂಪನಿಗೆ ನೋಡಿಕೊಂಡು ಮುಂದುವರಿಯಲು ಸೂಚಿಸಿದ್ದಾರೆ. ಭಾರತದಲ್ಲಿ ಜೀತದಾಳು ರೀತಿಯಲ್ಲಿ ದುಡಿಸಿಕೊಳ್ಳುತ್ತಾರೆ. ಉತ್ತಮ ವಾತಾವರಣ ಕಲ್ಪಿಸುವುದನ್ನು ಕಂಪನಿಗಳು ಕಲಿಯಬೇಕು ಎಂದು ಸಲಹೆ ನೀಡಿದ್ದಾರೆ.


