ಪಟ್ಟಮಟ್ಟಂ ನಿವಾಸಿ ಯುವತಿಯೊಬ್ಬರ ಮೂಗುತಿ ಮೂಗಿನೊಳಗೆ ಆಳವಾಗಿ ಸಿಲುಕಿಕೊಂಡು ಆತಂಕ ಸೃಷ್ಟಿಸಿತ್ತು. ಕುಟುಂಬದ ಪ್ರಯತ್ನ ವಿಫಲವಾದಾಗ, ಅಗ್ನಿಶಾಮಕ ದಳದ ಸಿಬ್ಬಂದಿ ಜಾಗರೂಕತೆಯಿಂದ ಕಾರ್ಯಾಚರಣೆ ನಡೆಸಿ ಮೂಗುತಿಯನ್ನು ಸುರಕ್ಷಿತವಾಗಿ ಹೊರತೆಗೆದು ಯುವತಿಯನ್ನು ರಕ್ಷಿಸಿದರು.

ತಿರುವನಂಪುರಂ: ಯುವತಿಯೊಬ್ಬರು ತಾವು ಹಾಕಿಕೊಂಡಿದ್ದ ಮೂಗುತಿಯನ್ನು ತೆಗೆಯಲು ಹೋಗಿ, ಅದು ಮೂಗಿನ ಒಳಗೆ ಸಿಲುಕಿಕೊಂಡಿತ್ತು. ಆರಂಭದಲ್ಲಿ ಯುವತಿಯೇ ಮೂಗುತಿಯನ್ನು ಹೊರಗೆ ತೆಗೆದುಕೊಳ್ಳಲು ಪ್ರಯತ್ನಿಸಿದ್ದಾರೆ. ತನ್ನಿಂದ ಸಾಧ್ಯವಾಗದಾಗ ಯವತಿ ಕುಟುಂಬಸ್ಥರ ಸಹಾಯ ಕೇಳಿದ್ದಾಳೆ. ಕುಟುಂಬಸ್ಥರಿಂದಲೂ ಮೂಗುತಿ ಹೊರಗೆ ತೆಗೆಯಲು ಸಾಧ್ಯವಾಗಿಲ್. ಇದರಿಂದಾಗಿ ಯುವತಿ ಕುಟುಂಬಸ್ಥರು ಆತಂಕಗೊಂಡಿದ್ದರು. ಪಟ್ಟಮಟ್ಟಂ ನಿವಾಸಿಯಾದ 21 ವರ್ಷದ ಯುವತಿಗೆ ಈ ಸಮಸ್ಯೆ ಎದುರಾಗಿತ್ತು. ಅಗ್ನಿಶಾಮಕ ದಳ ಸಿಬ್ಬಂದಿಯಿಂದಾಗಿ ಯುವತಿ ನಿಟ್ಟುಸಿರು ಬಿಟ್ಟಿದ್ದಾಳೆ.

ಮೂಗುತಿಯ ಹೆಡ್ ಭಾಗವು ಮೂಗಿನ ತೂತಿನೊಳಗೆ ಆಳವಾಗಿ ಇಳಿದು, ಹೊರಗಿನಿಂದ ಕಾಣದಷ್ಟು ಒಳಗೆ ಸೇರಿಕೊಂಡಿತ್ತು. ಮನೆಯವರು ಬಹಳ ಹೊತ್ತು ಪ್ರಯತ್ನಿಸಿದರೂ ಮೂಗುತಿಯನ್ನು ಹೊರತೆಗೆಯಲು ಆಗಲಿಲ್ಲ. ಪ್ರಯತ್ನ ಮುಂದುವರಿಸಿದಂತೆ ಯುವತಿಗೆ ನೋವು ಮತ್ತು ಕಿರಿಕಿರಿ ಹೆಚ್ಚಾಗಿತ್ತು.

ಅಗ್ನಿಶಾಮಕ ಠಾಣೆಗೆ ದೌಡು

ಬೇರೆ ದಾರಿ ಕಾಣದೇ, ರಾತ್ರಿ 7:30ರ ಸುಮಾರಿಗೆ ಯುವತಿ ಮತ್ತು ಆಕೆಯ ಕುಟುಂಬಸ್ಥರು ನೇರವಾಗಿ ಪಟ್ಟಮಟ್ಟಂ ಅಗ್ನಿಶಾಮಕ ಠಾಣೆಗೆ ಬಂದು ಸಹಾಯ ಕೇಳಿದ್ದಾರೆ. ತಕ್ಷಣವೇ, ಸ್ಟೇಷನ್ ಆಫೀಸರ್ ಎನ್.ಎಚ್. ಅಸೈನಾರ್ ಮತ್ತು ಸೀನಿಯರ್ ಫೈರ್ & ರೆಸ್ಕ್ಯೂ ಆಫೀಸರ್ ಶ್ರೀ ರಂಜಿತ್ ನೇತೃತ್ವದ ತಂಡ ರಕ್ಷಣಾ ಕಾರ್ಯಾಚರಣೆ ಶುರುಮಾಡಿತು.

ಇದನ್ನೂ ಓದಿ: ಶತಮಾನದ ಇತಿಹಾಸವಿರುವ ಕುಡಚಿ-ಬಾಗಲಕೋಟೆ ರೈಲು ಮತ್ತೆ ನೇಪಥ್ಯಕ್ಕೆ, ಕನಸು ಹಳಿ ತಪ್ಪಿತೇ?

ಟ್ಯೂಸರ್ ಮತ್ತು ಕತ್ತರಿ ಬಳಸಿ ಮೂಗುತಿಯ ಲಾಕ್ ಓಪನ್

ಅಗ್ನಿಶಾಮಕದ ದಳದ ಸಿಬ್ಬಂದಿ ತುಂಬಾನೇ ಜಾಗರೂಕತೆಯಿಂದ ಟ್ಯೂಸರ್ ಮತ್ತು ಕತ್ತರಿ ಬಳಸಿ ಮೂಗುತಿಯ ಲಾಕ್ ತೆಗೆದು, ಅದನ್ನು ಸುರಕ್ಷಿತವಾಗಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ತಂಡದಲ್ಲಿ ಫೈರ್ & ರೆಸ್ಕ್ಯೂ ಆಫೀಸರ್‌ಗಳಾದ ವಿಜಿತ್ ಕುಮಾರ್, ಜಯೇಶ್, ಅನು ಹಾಗೂ ಹೋಮ್ ಗಾರ್ಡ್‌ಗಳಾದ ಪ್ರದೀಪ್ ಮತ್ತು ರಾಮಚಂದ್ರನ್ ಕೂಡ ಇದ್ದರು.

ಇದನ್ನೂ ಓದಿ: ಮನೇಲಿ ತರಕಾರಿ ಇಲ್ಲದಿರುವಾಗ ಮಾಡಿ ಘಮ ಘಮಿಸುವ ರುಚಿಯಾದ ಜೀರೋ ವೆಜಿಟೇಬಲ್ ಬಿರಿಯಾನಿ

Scroll to load tweet…