ಪಶ್ಚಿಮ ಬಂಗಾಳದ ಚುನಾವಣಾ ಪ್ರಚಾರದ ವೇಳೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಪಾದಯಾತ್ರೆಯಲ್ಲಿ ಅನಿರೀಕ್ಷಿತ ಘಟನೆಯೊಂದು ನಡೆದಿದೆ. ಅಭಿಮಾನಿಯೊಬ್ಬರು ದಿಢೀರನೆ ಅವರ ಕಾಲಿಗೆ ಬೀಳಲು ಬಂದಾಗ ದೀದಿ ಬೆಚ್ಚಿಬಿದ್ದಿದ್ದು, ಈ ಘಟನೆಯು ರಾಜಕೀಯ ನಾಯಕರ ಭದ್ರತೆಯ ಆತಂಕವನ್ನು ನೆನಪಿಸಿದೆ.

ಪಶ್ಚಿಮ ಬಂಗಾಳದ ಚುನಾವಣೆ ಇದೇ ತಿಂಗಳು 23 ಮತ್ತು 29ರಂದು ಎರಡು ಹಂತಗಳಲ್ಲಿ ನಡೆಯಲಿದೆ. ಇದಾಗಲೇ ಎಲ್ಲಾ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರದಲ್ಲಿ ತೊಡಗಿವೆ. ದೀದಿ ಎಂದೇ ಫೇಮಸ್​ ಆಗಿರೋ ಮಮತಾ ಬ್ಯಾನರ್ಜಿ ಅವರು ಸತತ ಮೂರು ಬಾರಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಅವರು ಮೊದಲು ಮೇ 20, 2011 ರಂದು ಅಧಿಕಾರ ವಹಿಸಿಕೊಂಡರು ಮತ್ತು ನಂತರ 2016 ಮತ್ತು 2021 ರಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಜಯಗಳಿಸಿ, ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷವನ್ನು ಮುನ್ನಡೆಸಿದರು. ಅವರು ರಾಜ್ಯದ ಮೊದಲ ಮಹಿಳಾ ಮುಖ್ಯಮಂತ್ರಿ. ಆದರೆ ಈ ಬಾರಿ ಬಿಜೆಪಿ ಪಶ್ಚಿಮ ಬಂಗಾಳವನ್ನು ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸಿದೆ.

ಕೋಟಿ ಭೇದಿಸ್ತಾರಾ ದೀದಿ

ದೀದಿಯ ಕೋಟೆಯನ್ನು ಭೇದಿಸುವಲ್ಲಿ ಮೋದಿ ಸಕ್ಸಸ್​ ಆಗ್ತಾರಾ ಎನ್ನುವುದು ಸದ್ಯಕ್ಕಿರುವ ಕುತೂಹಲ. ಏಕೆಂದರೆ, ಪಶ್ಚಿಮ ಬಂಗಾಳ ಕೆಲವು ವರ್ಷಗಳಿಂದ ಇನ್ನಿಲ್ಲದಂತೆ ಹಿಂಸಾಚಾರ ಕಂಡಿದೆ. ಹಿಂದೂಗಳ ಮೇಲಿನ ದೌರ್ಜನ್ಯವನ್ನು ಅಲ್ಲಿದ್ದವರು ಸಹಿಸುತ್ತಿಲ್ಲ. ನುಸುಳುಕೋರರಿಗೆ ಆಶ್ರಯ ನೀಡಿದ್ದ ಮಮತಾ ಬ್ಯಾನರ್ಜಿಗೆ SIR ಶಾಕ್​ ಕೊಟ್ಟಿದೆ. ಲಕ್ಷಾಂತರ ಮಂದಿ ನುಸುಳುಕೋರರು ಗಡಿಪಾರಾಗಿದ್ದಾರೆ. ಇವರೆಲ್ಲರೂ ಮಮತಾಗೆ ವೋಟರ್ಸ್​ ಆಗಿದ್ದರು. ಈ ಹಿನ್ನೆಲೆಯಲ್ಲಿ ಈ ಬಾರಿಯ ಚುನಾವಣೆ ಸಾಕಷ್ಟು ರಂಗೇರಿಸುತ್ತಿದೆ.

ರೋಷ್​ ಷೋ ವೇಳೆ ಘಟನೆ

ಇದರ ನಡುವೆಯೇ ಮಮತಾ ಬ್ಯಾನರ್ಜಿ ಅವರ ಅಭಿಮಾನಿಯೊಬ್ಬ ರೋಡ್​ ಷೋ ವೇಳೆ ಅವರ ಜೀವವನ್ನೇ ಬಾಯಿಗೆ ತಂದುಬಿಟ್ಟಿದ್ದಾನೆ. ಅವನು ಮಾಡಿದ ಕೃತ್ಯಕ್ಕೆ ದೀದಿ ಹೃದಯ ಅರೆಕ್ಷಣ ಸ್ಟಾಪ್ ಆಗಿಹೋಯಿತು. ಇದರ ವಿಡಿಯೋ ವೈರಲ್ ಆಗುತ್ತಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಮಮತಾ ಅವರು ಚುನಾವಣೆ ನಿಮಿತ್ತ ಪಾದಯಾತ್ರೆ ಕೈಗೊಂಡಿದ್ದರು. ಆಗ ಇದ್ದಕ್ಕಿಂತೆಯೇ ಅವರ ಅಭಿಮಾನಿಯೊಬ್ಬ ಮಿಂಚಿನ ವೇಗದಲ್ಲಿ ಅವರ ಕಾಲಿಗೆ ಬೀಳಲು ಬಂದಿದ್ದಾನೆ. ಮಮತಾ ಬಾಡಿಗಾರ್ಡ್​ ಆತನನ್ನು ಆಚೆಗೆ ಅಟ್ಟುವಷ್ಟರಲ್ಲಿಯೇ ಅದೆಲ್ಲಿಂದಲೋ ಜಿಗಿದು ಬಂದಿದ್ದಾನೆ ಆ ಅಭಿಮಾನಿ. ಆತ ಮಾಡಿದ ರೀತಿ ನೋಡಿ ಮಮತಾ ಅರೆಕ್ಷಣ ಬೆಚ್ಚಿಬಿದ್ದಿದ್ದಾರೆ. ಹೃದಯದ ಮೇಲೆ ಕೈಯಿಟ್ಟು ಶಾಕ್​ ಆಗಿ ಹೋಗಿದ್ದಾರೆ.

ಹಲವು ನಾಯಕರ ಸಾವು

ಇದಾಗಲೇ ಕೆಲವು ನಾಯಕರನ್ನು ಇದೇ ರೀತಿ ಬಾಂಬ್​ ಹಾಕಿ ಸಾಯಿಸಿದ್ದು ಬಹುಶಃ ದೀದಿಗೆ ನೆನಪಾಯಿತೋ ಏನೊ. ರಾಜೀವ್​ಗಾಂಧಿ ಅವರಿಗೆ ಹಾರ ಹಾಕುವ ಸಮಯದಲ್ಲಿ, ಇಂದಿರಾಗಾಂಧಿ ಅವರಿಗೆ ಖುದ್ದು ಅವರ ಅಂಗರಕ್ಷಕನೇ, ಗಾಂಧೀಜಿಗೆ ಇದೇ ರೀತಿ ಎದುರಿಗಿನಿಂದ ನಾಥೂರಾಮ್​ ಗೋಡ್ಸೆ ಸೇರಿದಂತೆ ಹಲವು ನಾಯಕರಿಗೆ ಇದೇ ರೀತಿ ಅಚಾನಕ್​ ಆಗಿ ಸಾಯಿಸಲಾಗಿತ್ತು. ಆದ್ದರಿಂದ ರಾಜಕೀಯ ನಾಯಕರು ಎಷ್ಟು ಮೈಯೆಲ್ಲಾ ಕಣ್ಣಾಗಿ ಇದ್ದರೂ ಕಷ್ಟವೇ. ಮೊನ್ನೆಯಷ್ಟೇ ತಮಿಳುನಾಡಿನಲ್ಲಿ ವಿಜಯ್​ ಅವರು ರೋಡ್​ಷೋ ಮಾಡುವಾಗ ಅವರ ಬಳಿ ಬಂದಿದ್ದ ಹೂವಿನ ಚಂಡನ್ನು ಬಾಂಬ್​ ಎಂದು ತಿಳಿದು ಬೆಚ್ಚಿಬಿದ್ದಿದ್ದರು. ಇದೇ ರೀತಿ ಈಗಲೂ ಆಗಿದೆ.

View post on Instagram