ವಿದೇಶದಿಂದ ಬರ್ತಾ ಫ್ರೆಂಡ್ ಗೆ ಮದ್ಯದ ಬಾಟಲಿ ತರುವಂತೆ ಆರ್ಡರ್ ಮಾಡೋರು ಸಿಕ್ಕಾಪಟ್ಟೆ ಮಂದಿ. ಇಯರ್ ಆಂಡ್ ಗೆ ಬೇಕು ಅಂತ ಈಗ್ಲೇ ಅನೇಕರು ಮದ್ಯದ ಬಾಟಲ್ ಖರೀದಿ ಮಾಡ್ತಿದ್ದಾರೆ. ಆದ್ರೆ ಇದಕ್ಕೂ ಕಾನೂನಿದೆ.

ಕ್ರಿಸ್ ಮಸ್ (Christmas) ಗೆ ಇನ್ನೇನು ಮೂರೇ ದಿನ ಇದೆ. ಇನ್ನು ನ್ಯೂ ಇಯರ್ (New Year )ಕೂಡ ಹತ್ತಿರ ಬರ್ತಿದೆ. ಇಯರ್ ಆಂಡ್ ಬರ್ತಿದ್ದಂತೆ ಜನರು ಪಾರ್ಟಿ ಮೂಡಿಗೆ ಬರ್ತಾರೆ. ನಾನಾ ಹೊಟೇಲ್, ರೆಸ್ಟೊರೆಂಟ್, ರೆಸಾರ್ಟ್ ಗಳಲ್ಲಿ ನ್ಯೂ ಇಯರ್ ಪಾರ್ಟಿಗೆ ತಯಾರಿ ನಡೆಯುತ್ತಿದೆ. ಪಾರ್ಟಿ ಅಂದ್ಮೇಲೆ ಬಾಟಲ್ ಇರ್ಲೇಬೇಕು ಅನ್ನೋದು ಅನಧಿಕೃತ ರೂಲ್ಸ್. ಕೆಲವರು ನ್ಯೂ ಇಯರ್ ಜಿಗಿಜಿಗಿಯಲ್ಲಿ ಮನೆಯಿಂದ ಹೊರಗೆ ಹೋಗೋಗೆ ಇಷ್ಟಪಡೋದಿಲ್ಲ. ಮನೆಯಲ್ಲೇ ಪಾರ್ಟಿ ಪ್ಲಾನ್ ಮಾಡ್ತಾರೆ. ನೀವೂ ಪಾರ್ಟಿಗೆ ತಯಾರಿ ನಡೆಸಿದ್ದು, ಡ್ರಿಂಕ್ ಖರೀದಿಗೆ ಮುಂದಾಗಿದ್ರೆ ಮೊದಲು ರೂಲ್ಸ್ ತಿಳಿದುಕೊಳ್ಳಿ. ಕಾನೂನಿನ ಪ್ರಕಾರ ಮನೆಯಲ್ಲಿ ಎಷ್ಟು ಮದ್ಯದ ಬಾಟಲಿಯನ್ನು ಇಟ್ಕೊಳ್ಬೇಕು ಎಂಬುದನ್ನು ತಿಳಿದ್ಕೊಳ್ಳಿ.

ಮನೆಯಲ್ಲಿ ಎಷ್ಟು ಮದ್ಯದ ಬಾಟಲಿ ಇಡ್ಬೇಕು?

ಭಾರತದಲ್ಲಿ, ಮದ್ಯ-ಸಂಬಂಧಿತ ಕಾನೂನುಗಳನ್ನು ಕೇಂದ್ರ ಸರ್ಕಾರವಲ್ಲ, ರಾಜ್ಯ ಸರ್ಕಾರಗಳು ನಿಗದಿಪಡಿಸುತ್ತವೆ. ಅಬಕಾರಿ ಸುಂಕವು ಸಂವಿಧಾನದ ಏಳನೇ ಅಧಿಸೂಚನೆಯಡಿ ಬರುತ್ತದೆ. ಅಬಕಾರಿ ನಿಯಮ ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತವೆ. ಅದಕ್ಕಾಗಿಯೇ ಒಂದು ರಾಜ್ಯದಲ್ಲಿ ಕಾನೂನುಬದ್ಧವಾಗಿರುವುದನ್ನು ಮತ್ತೊಂದು ರಾಜ್ಯದಲ್ಲಿ ಅಪರಾಧವೆಂದು ಪರಿಗಣಿಸಬಹುದು. ಹಲವು ರಾಜ್ಯಗಳಲ್ಲಿ ಕಾನೂನು ಮಿತಿಯನ್ನು ಮೀರಿ ಮದ್ಯದ ಬಾಟಲಿಯನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ದಂಡ ಮಾತ್ರವಲ್ಲದೆ ಜೈಲು ಶಿಕ್ಷೆಗೂ ಕಾರಣ ಆಗ್ಬಹುದು. ಮನೆ ಮೇಲೆ ಪೊಲೀಸರು ದಾಳಿ ನಡೆಸಬಹುದು. ಅಬಕಾರಿ ಇಲಾಖೆ ಕ್ರಮ ತೆಗೆದುಕೊಳ್ಳಬಹುದು.

ರೈಲ್ವೆ ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕಿಂಗ್ ನ್ಯೂಸ್; ಡಿ.26ರಿಂದಲೇ ಹೊಸ ದರಗಳು ಅನ್ವಯ

ದೇಶದ ಕೆಲವು ಭಾಗಗಳಲ್ಲಿ ಮದ್ಯಪಾನ ಮಾಡುವುದು ಮತ್ತು ಮದ್ಯದ ಬಾಟಲಿ ಇಟ್ಟುಕೊಳ್ಳೋದು ಎರಡೂ ಅಪರಾಧವಾಗಿದೆ. 2016 ರಿಂದ ಬಿಹಾರದಲ್ಲಿ ಮದ್ಯವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಯಾವುದೇ ಮದ್ಯಪಾನ ಸಂಬಂಧಿತ ಕೃತ್ಯವನ್ನು ಗಂಭೀರ ಅಪರಾಧವೆಂದು ಪರಿಗಣಿಸಲಾಗಿದೆ. ಪ್ರವಾಸಿಗರು ಮತ್ತು ಅನಿವಾಸಿ ಭಾರತೀಯರಿಗೆ ಸೀಮಿತ ಅವಧಿಯ ಪರವಾನಗಿ ವ್ಯವಸ್ಥೆ ಇದ್ದರೂ, ಗುಜರಾತ್ 1960 ರಿಂದ ಮದ್ಯಪಾನ ನಿಷೇಧ ಕಾನೂನು ಜಾರಿಗೆ ತಂದಿದೆ. 1989 ರಿಂದ ನಾಗಾಲ್ಯಾಂಡ್ನಲ್ಲಿ ನಿಷೇಧ ಜಾರಿಯಲ್ಲಿದೆ. ಮಿಜೋರಾಂನಲ್ಲಿ ನಿಯಮಗಳು ನಿಯತಕಾಲಿಕವಾಗಿ ಬದಲಾಗಿದ್ದರೂ, ಪ್ರಸ್ತುತ ಸಂಪೂರ್ಣ ನಿಷೇಧ ಜಾರಿಯಲ್ಲಿದೆ. ಇತ್ತೀಚಿನ ವರ್ಷಗಳಲ್ಲಿ ಮಣಿಪುರದ ಕೆಲವು ಪ್ರದೇಶಗಳಲ್ಲಿ ಸಡಿಲಿಕೆಗಳನ್ನು ಘೋಷಿಸಲಾಗಿದ್ದರೂ, ರಾಜ್ಯದ ಹೆಚ್ಚಿನ ಭಾಗದಲ್ಲಿ ಮದ್ಯವನ್ನು ನಿಷೇಧಿಸಲಾಗಿದೆ. ಬಂಗಾರಮ್ ದ್ವೀಪದಲ್ಲಿ ಸೀಮಿತ ಪ್ರವಾಸಿಗರಿಗೆ ಅವಕಾಶವಿದ್ದರೂ, ಮದ್ಯಪಾನವನ್ನು ನಿಷೇಧಿಸಲಾಗಿರುವ ದೇಶದ ಏಕೈಕ ಕೇಂದ್ರಾಡಳಿತ ಪ್ರದೇಶ ಲಕ್ಷದ್ವೀಪ.

ಮಾಲ್‌ನಲ್ಲಿ ಹುಡುಗಿಗೆ ಪ್ರಪೋಸ್ ಮಾಡಿ ಅಲ್ಲೇ ತಾಳಿ ಕಟ್ಟಿದ ಯುವಕ: ವೀಡಿಯೋ ಭಾರಿ ವೈರಲ್

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಮದ್ಯಕ್ಕೆ ಸಂಬಂಧಿಸಿದಂತೆ ನಿಯಮ ಭಿನ್ನವಾಗಿದೆ. 25 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಯು ಮನೆಯಲ್ಲಿ ಬಿಯರ್ ಮತ್ತು ವೈನ್ ಸೇರಿದಂತೆ 18 ಲೀಟರ್ ವರೆಗೆ ಮದ್ಯವನ್ನು ಹೊಂದಿರಬಹುದು. ರಮ್, ವಿಸ್ಕಿ, ವೋಡ್ಕಾ ಅಥವಾ ಜಿನ್ ನಂತಹ ಹಾರ್ಡ್ ಡ್ರಿಂಕ್ಸ್ ಮಿತಿ 9 ಲೀಟರ್. ಒಂದೇ ಮನೆಯಲ್ಲಿ ವಾಸಿಸುವ ಎಲ್ಲಾ ವಯಸ್ಕರು ತಮ್ಮ ಮಿತಿಯೊಳಗೆ ಮದ್ಯವನ್ನು ಹೊಂದಿರಬಹುದು ಎಂದು ದೆಹಲಿ ಹೈಕೋರ್ಟ್ ಸ್ಪಷ್ಟಪಡಿಸಿದೆ. ಆದಾಗ್ಯೂ, ದೆಹಲಿಯ ಹೊರಗೆ ಪ್ರಯಾಣಿಸುವಾಗ ಕೇವಲ ಒಂದು ಲೀಟರ್ ಮದ್ಯವನ್ನು ಮಾತ್ರ ಅನುಮತಿಸಲಾಗಿದೆ.

ಇನ್ನು ಕರ್ನಾಟಕದಲ್ಲಿ18.2 ಲೀಟರ್ ಕಂಟ್ರಿ ಬಿಯರ್, 9.1 ಲೀಟರ್ ಆಮದು ಮಾಡಿಕೊಂಡ ವಿದೇಶಿ ಮದ್ಯ, 4.5 ಲೀಟರ್ ಫೋರ್ಟಿಫೈಡ್ ವೈನ್, 9 ಲೀಟರ್ ಫ್ರೂಟ್ ವೈನ್ ಅನುಮತಿಸಲಾಗಿದೆ.

ಹರಿಯಾಣದಲ್ಲಿ, ಗರಿಷ್ಠ ಆರು ಬಾಟಲಿಗಳ ಕಂಟ್ರಿ ಲಿಕ್ಕರ್ ಮತ್ತು ಒಟ್ಟು 18 ಬಾಟಲಿಗಳ IMFL ಹೊಂದಿರಬಹುದು. ಆಮದು ಮಾಡಿಕೊಂಡ ಮದ್ಯವನ್ನು ಆರು ಬಾಟಲಿಗಳವರೆಗೆ ಇಡಬಹುದು. ಉತ್ತರ ಪ್ರದೇಶದಲ್ಲಿ ನಿಯಮಗಳು ಕಠಿಣವಾಗಿವೆ. ಪರವಾನಗಿ ಇಲ್ಲದೆ, ಒಬ್ಬರು 1.5 ಲೀಟರ್ ವಿದೇಶಿ ಮದ್ಯ, ಆರು ಲೀಟರ್ ಬಿಯರ್ ಮತ್ತು ಎರಡು ಲೀಟರ್ ವೈನ್ ಹೊಂದಿರಬಹುದು. ಪಂಜಾಬ್ನಲ್ಲಿ, ಎರಡು ಬಾಟಲಿ IMFL, ಒಂದು ಕೇಸ್ ಬಿಯರ್, ಎರಡು ಬಾಟಲಿ ವಿದೇಶಿ ಮದ್ಯ, ಎರಡು ಬಾಟಲಿ ಹಳ್ಳಿಗಾಡಿನ ಮದ್ಯ ಮತ್ತು ಒಂದು ಬಾಟಲಿ ಬ್ರಾಂಡಿಯನ್ನು ಅನುಮತಿಸಲಾಗಿದೆ. ಇನ್ನು ಗೋವಾದಲ್ಲಿ ಮದ್ಯ ಅಗ್ಗವಾಗಿದ್ದು ನಿವಾಸಿಗಳು 12 ಬಾಟಲಿ IMFL, 24 ಬಾಟಲಿ ಬಿಯರ್ ಮತ್ತು 18 ಬಾಟಲಿಗಳ ದೇಶದ ಮದ್ಯವನ್ನು ಹೊಂದಬಹುದು. ಕೇರಳದಲ್ಲಿ, ಮೂರು ಲೀಟರ್ IMFL ಮತ್ತು ಆರು ಲೀಟರ್ ಬಿಯರ್ ಅನ್ನು ಅನುಮತಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ, 12 ಬಾಟಲಿ IMFL ಮತ್ತು 12 ಬಾಟಲಿ ಬಿಯರ್ ಅನ್ನು ಹೊಂದಲು ಅನುಮತಿಸಲಾಗಿದೆ.