ರೈಲು ಪ್ರಯಾಣಿಕರಿಗೆ ಶಾಕ್, ಡಿಸೆಂಬರ್ 26ರಿಂದ ಟಿಕೆಟ್ ದರ ಹೆಚ್ಚಳ ಘೋಷಿಸಿದ ಭಾರತೀಯ ರೈಲ್ವೇ, ವಿಶೇಷ ಅಂದರೆ ಈ ಬಾರಿಯ ರೈಲು ಟಿಕೆಟ್ ದರ ಹೆಚ್ಚಳದಲ್ಲಿ ಪ್ರತಿ ನಿತ್ಯ ರೈಲಿನಲ್ಲಿ ಓಡಾಡುವವರಿಗೆ ಸೇರಿದಂತೆ ಹಲವರಿಗೆ ವಿನಾಯಿತಿ ನೀಡಲಾಗಿದೆ.
ನವದೆಹಲಿ (ಡಿ.21) ಭಾರತೀಯ ರೈಲ್ವೇ ಸೌಲಭ್ಯಗಳನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಬಹುತೇಕ ರೈಲ್ವೇ ನಿಲ್ದಾಣಗಳು ನವೀಕರಣಗೊಂಡಿದೆ. ಅತ್ಯಾಧುನಿಕ ಸೌಲಭ್ಯಗಳನ್ನು ನೀಡಲಾಗುತ್ತದೆ. ರೈಲ್ವೇ ವಿದ್ಯುದ್ದೀಕರಣ ಸೇರಿದಂತೆ ಹಲವು ಕ್ರಮಗಳನ್ನು ಯಶಸ್ವಿಯಾಗಿ ಮಾಡಲಾಗಿದೆ. ಇದೀಗ ಭಾರತೀಯ ರೈಲ್ವೇ ರೈಲು ಟಿಕೆಟ್ ದರ ಹೆಚ್ಚಳ ಮಾಡುತ್ತಿದೆ. ಡಿಸೆಂಬರ್ 26ರಿಂದ ಹೊಸ ದರ ಅನ್ವಯವಾಲಿದೆ.ವಿಶೇಷ ಅಂದರೆ ಜನಸಾಮಾನ್ಯರಿಗೆ ಹೊರೆಯಾಗದಂತೆ ರೈಲು ಟಿಕೆಟ್ ದರ ಹೆಚ್ಚಳಕ್ಕೆ ರೈಲ್ವೇ ಮುಂದಾಗಿದೆ.
215 ಕಿಲೋಮೀಟರ್ ಒಳಗಿನ ಪ್ರಯಾಣಕರಿಗೆ ವಿನಾಯಿತಿ
ರೈಲು ಟಿಕೆಟ್ ದರ ಹೆಚ್ಚಳದಲ್ಲಿ ಜನಸಾಮಾನ್ಯರು ಹಾಗೂ ಪ್ರತಿ ನಿತ್ಯ ರೈಲು ಪ್ರಯಾಣ ಮಾಡುವವರಿಗೆ ವಿನಾಯಿತಿ ನೀಡಲಾಗಿದೆ. 215 ಕಿಲೋಮೀಟರ್ ಒಳಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಯಾವುದೇ ದರ ಹೆಚ್ಚಳ ಅನ್ವಯವಾಗುವುದಿಲ್ಲ. ಈ ಪ್ರಯಾಣಿಕರಿಗೆ ಟಿಕೆಟ್ ದರ ಹೆಚ್ಚಳಂದ ವಿನಾಯಿತಿ ನೀಡಲಾಗಿದೆ.
ಯಾರಿಗೆಲ್ಲಾ ವಿನಾಯಿತಿ
- ಸಬರ್ಬನ್ ರೈಲು, ತಿಂಗಳ ಸೀಸನ್ ಟಿಕೆಟ್ ಪ್ರಯಾಣಿಕರಿಗೆ ವಿನಾಯಿತಿ
- 215 ಕಿಲೋಮೀಟರ್ ಒಳಗೆ ಪ್ರಯಾಣಿಸುವ ಆರ್ಡಿನರಿ ಕ್ಲಾಸ್ ಪ್ರಯಾಣಿಕರು
1 ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಳ
ಭಾರತೀಯ ರೈಲ್ವೇ ಟಿಕೆಟ್ ದರ ಏರಿಕೆಯಲ್ಲಿ ಭಾರಿ ಮುತುವರ್ಜಿ ವಹಿಲಾಗಿದೆ. 215 ಕಿಲೋಮೀಟರ್‌ಗಿಂತ ಹೆಚ್ಚು ದೂರ ಪ್ರಯಾಣಿಸುವ ಆರ್ಡಿನರಿ ಕ್ಲಾಸ್ ಪ್ರಯಾಣಿಕರು ಹೊಸ ದರದ ಪ್ರಕಾರ 1 ಕಿಲೋಮೀಟರ್‌ಗೆ 1 ಪೈಸೆ ಹೆಚ್ಚುವರಿಯಾಗಿ ನೀಡಬೇಕಿದೆ. ಇನ್ನು ಮೈಲ್, ಎಕ್ಸ್‌ಪ್ರೆಸ್, ನಾನ್ ಎಸಿ ಹಾಗೂ ಎಸಿ ಕ್ಲಾಸ್ ಪ್ರಯಾಣಿಕರ ( 215 ಕಿಲೋಮೀಟರ್‌ಗಿಂತ ಹೆಚ್ಚು ದೂರ ಪ್ರಯಾಣಿಸುವವರು) ಟಿಕೆಟ್ ದರ ಪ್ರತಿ ಕಿಲೋಮೀಟರ್‌ಗೆ 2 ಪೈಸೆ ಹೆಚ್ಚಳ ಮಾಡಲಾಗಿದೆ. ಇನ್ನು 500 ಕಿಲೋಮೀಟರ್‌ಗಿಂತ ಹೆಚ್ಚು ದೂರ ಪ್ರಯಾಣಿಸುವ ನಾನ್ ಎಸಿ ಪ್ರಯಾಣಿಕರ ಟಿಕೆಟ್ ದರದಲ್ಲಿ 10 ರೂಪಾಯಿ ಹೆಚ್ಚಳ ಮಾಡಲಾಗಿದೆ. ಅಂದರೆ 500 ಕಿಲೋಮೀಟರ್ ಅಥವಾ ಅದಕ್ಕಿಂತ ಹೆಚ್ಚಿನ ದೂರ ಪ್ರಾಯಣಿಸುವ ಪ್ರಯಾಣಿಕರು ತಮ್ಮ ಟಿಕೆಟ್ ಒಟ್ಟು ದರದಲ್ಲಿ 10 ರೂಪಾಯಿ ಹೆಚ್ಚಳವಾಗಿ ನೀಡಬೇಕು.
ಯಾರಿಗೆಲ್ಲಾ ಟಿಕೆಟ್ ದರ ಹೆಚ್ಚಳ
- 215 ಕಿ.ಮೀಗಿಂತ ಹೆಚ್ಚು ಪ್ರಯಾಣಿಸುವ ಆರ್ಡಿನರ್ ಕ್ಲಾಸ್: 1 ಪೈಸೆ ಪ್ರತಿ ಕಿಲೋಮೀಟರ್‌ಗೆ
- ಮೈಲ್, ಎಕ್ಸ್‌ಪ್ರೆಸ್, ನಾನ್ ಎಸಿ ಕ್ಲಾಸ್: 2 ಪೈಸೆ ಪ್ರತಿ ಕಿಲೋಮೀಟರ್‌ಗೆ
- ಮೈಲ್, ಎಕ್ಸ್‌ಪ್ರೆಸ್, ಎಸಿ ಕ್ಲಾಸ್: 2 ಪೈಸೆ ಪ್ರತಿ ಕಿಲೋಮೀಟರ್‌ಗೆ
- ನಾನ್ ಎಸಿ 500 ಕಿಲೋಮೀಟರ್ ಪ್ರಯಾಣ: 10 ರೂಪಾಯಿ
600 ಕೋಟಿ ರೂಪಾಯಿ ನಿರೀಕ್ಷೆ
ಈ ಬಾರಿಯ ರೈಲು ದರ ಹೆಚ್ಚಳದಿಂದ ಭಾರತೀಯ ರೈಲ್ವೇ ಇಲಾಖೆ 600 ಕೋಟಿ ರೂಪಾಯಿ ಆದಾಯದ ನಿರೀಕ್ಷೆಯಲ್ಲಿದೆ. ಇದಕ್ಕೂ ಹಿಂದೆ 2025ರ ಜುಲೈನಲ್ಲಿ ಕೆಲ ಪ್ರಯಾಣ ದರ ಹೆಚ್ಚಳ ಮಾಲಾಗಿತ್ತು. ಇದರಿಂದ ಇದುವರೆಗೆ 700 ಕೋಟಿ ರೂಪಾಯಿ ಹೆಚ್ಚುವರಿಯಾಗಿ ಸಂಗ್ರಹವಾಗಿದೆ ಎಂದು ರೈಲ್ವೇ ಸಚಿವಾಲಯ ಹೇಳಿದೆ.
ಕ್ರಿಸ್ಮಸ್, ಹೊಸ ವರ್ಷಕ್ಕೆ ಹೆಚ್ಚುವರಿ ರೈಲು
ಇದೇ ವೇಳೆ ಕ್ರಿಸ್ಮಸ್ ಹಾಗೂ ಹೊಸ ವರ್ಷಕ್ಕೆ ಹೆಚ್ಚುವರಿ ರೈಲು ಸೇವೆ ಘೋಷಿಸಿದೆ. ಸದ್ಯ 224 ಹೆಚ್ಚುವರಿ ರೈಲು ಸೇವೆ ನೀಡಲಾಗುತ್ತಿದೆ. ಶೀಘ್ರದಲ್ಲೇ ಮತ್ತಷ್ಟು ಹೆಚ್ಚುವರಿ ರೈಲು ಸೇವೆ ನೀಡಲಾಗುತ್ತದೆ ಎಂದಿದ್ದಾರೆ. ಕ್ರಿಸ್ಮಸ್ ರಜೆ ಹಾಗೂ ಹೊಸ ವರ್ಷದ ರಜಾ ದಿನಗಳಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗಲಿದೆ. ಹೀಗಾಗಿ ಜಸಂದಣಿ ನಿರ್ವಹಿಸಲು ಹೆಚ್ಚುವರಿ ರೈಲು ಸೇವೆ ನೀಡಲಾಗುತ್ತಿದೆ ಎಂದಿದೆ.


