India vs South Africa 2nd T20: SA Wins by 51 Runs ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಭಾರತ 51 ರನ್‌ಗಳ ಸೋಲು ಕಂಡಿದೆ. ಕ್ವಿಂಟನ್ ಡಿ ಕಾಕ್ ಅವರ 90 ರನ್‌ಗಳ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ 213 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
India Latest News Live: ಡಿಕಾಕ್ ಡ್ಯಾಶಿಂಗ್ ಆಟದ ಮುಂದೆ ಥಂಡಾ ಹೊಡೆದ ಟೀಮ್ ಇಂಡಿಯಾ!

ನವದೆಹಲಿ: ಇ-ಕಾಮರ್ಸ್ ದೈತ್ಯ ಅಮೆಜಾನ್ ಹಾಗೂ ಟೆಕ್ ದೈತ್ಯ ಮೈಕ್ರೋಸಾಫ್ಟ್ ಕಂಪನಿಗಳು ಭಾರತದಲ್ಲಿ ಭಾರೀ ಹೂಡಿಕೆ ಮಾಡಲು ಮುಂದಾಗಿವೆ. ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಲ್ಲಿ ಭೇಟಿಯಾದ ಮೈಕ್ರೊಸಾಫ್ಟ್ ಸಿಇಒ ಸತ್ಯ ನಾದೆಳ್ಲಾ 1.5 ಲಕ್ಷ ಕೋಟಿ ರು. ಹೂಡಿಕೆ ಮಾಡುವುದಾಗಿ ಘೋಷಿಸಿದ್ದಾರೆ. ಅದರ ಬೆನ್ನಲ್ಲೇ, ಅಮೆಜಾನ್ ಕೂಡ 3.1 ಲಕ್ಷ ಕೋಟಿ ರು.ಹೂಡಿಕೆಗೆ ತಯಾರಿ ನಡೆಸುತ್ತಿದೆ. ಎಐ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಮುಂದಿನ 4 ವರ್ಷದಲ್ಲಿ 1.5 ಲಕ್ಷ ಕೋಟಿ ರು. ಹೂಡಿಕೆ ಮಾಡಲು ಮುಂದಾಗಿರುವ ಮೈಕ್ರೋಸಾಫ್ಟ್, ಇದೇ ವರ್ಷದಲ್ಲಿ 26 ಸಾವಿರ ಕೋಟಿ ರು. ಹೂಡಿಕೆ ಮಾಡಿತ್ತು.
ಪ್ರಸ್ತುತ ಕ್ವಿಕ್-ಕಾಮರ್ಸ್ ಅಮೆಜಾನ್, ದಿನ 5 ವರ್ಷಗಳಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಎಐ ಕ್ಷೇತ್ರಕ್ಕೂ ಕಾಲಿಡಲು ಸಿದ್ಧವಾಗುತ್ತಿದೆ. 2030ರ ವೇಳೆಗೆ ಎಐ ಹಾಗೂ ಸರಕುಸಾಗಣೆ ಮೂಲಸೌಕರ್ಯಗಳ ಮೇಲಿನ ಹೂಡಿಕೆಯಿಂದ 10 ಲಕ್ಷ ಉದ್ಯೋಗವನ್ನೂ ಸೃಷ್ಟಿಸುವುದಾಗಿ ಕಂಪನಿ ಹೇಳಿದೆ. 2010ರಿಂದ ಅಮೆಜಾನ್ ಭಾರತದಲ್ಲಿ 3.5 ಲಕ್ಷ ಕೋಟಿ ರು. ಹೂಡಿಕೆ ಮಾಡಿದೆ.
India Latest News Live 11 December 2025 ಡಿಕಾಕ್ ಡ್ಯಾಶಿಂಗ್ ಆಟದ ಮುಂದೆ ಥಂಡಾ ಹೊಡೆದ ಟೀಮ್ ಇಂಡಿಯಾ!
India Latest News Live 11 December 2025 ಹೊಸ ವರ್ಷದ ಆರಂಭದಲ್ಲೇ ಮಾರುಕಟ್ಟೆಗೆ ಎಂಟ್ರಿ ನೀಡಲಿದೆ ರೆಡ್ಮಿ ಮಾಸ್ಟರ್ ಪಿಕ್ಸೆಲ್ ಫೋನ್, ಬೆಲೆ ಎಷ್ಟು ಕಡಿಮೆ ಗೊತ್ತಾ?
ಈ ರೆಡ್ಮಿ ಮಾಸ್ಟರ್ ಪಿಕ್ಸೆಲ್ ಆವೃತ್ತಿಯು ಮುಂದಿನ ತಿಂಗಳು ಅಂದರೆ ಹೊಸ ವರ್ಷದಲ್ಲಿ ಭಾರತೀಯ ಮಾರುಕಟ್ಟೆಗೆ ಲಗ್ಗೆ ಇಡಲಿದೆ. ಬಿಡುಗಡೆಯಾದ ನಂತರ ಈ ಫೋನ್ ಯಾವ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುತ್ತದೆ ಮತ್ತು ಈ ಹ್ಯಾಂಡ್‌ಸೆಟ್ ಯಾವ ವೈಶಿಷ್ಟ್ಯಗಳನ್ನು ಹೊಂದಿರುತ್ತದೆ ಅನ್ನೋ ವಿವರ ಇಲ್ಲಿದೆ.
India Latest News Live 11 December 2025 ರೈಲ್ವೆ ಪ್ರಯಾಣ, ಟಿಕೆಟ್ ಬುಕಿಂಗ್ ಎಲ್ಲವೂ ಬಲು ಸುಲಭ - ಸಂಪೂರ್ಣ ಮಾಹಿತಿ ಈ ಒಂದೇ ಒಂದು ಆ್ಯಪ್ನಲ್ಲಿ!
ರೈಲ್ವೆ ಇಲಾಖೆಯು 'ರೈಲ್ ಒನ್' ಎಂಬ ಹೊಸ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಈ ಒಂದೇ ಆ್ಯಪ್ ಮೂಲಕ ಪ್ರಯಾಣಿಕರು ಟಿಕೆಟ್ ಬುಕ್ಕಿಂಗ್, ರೈಲಿನ ಲೈವ್ ಸ್ಟೇಟಸ್, ಪಿಎನ್‌ಆರ್ ಸ್ಥಿತಿ ಸೇರಿದಂತೆ ಹಲವು ಸೇವೆಗಳನ್ನು ಸುಲಭವಾಗಿ ಪಡೆಯಬಹುದು, ಇದರಿಂದಾಗಿ ಅನೇಕ ಆ್ಯಪ್‌ಗಳನ್ನು ಬಳಸುವ ಕಿರಿಕಿರಿ ತಪ್ಪುತ್ತದೆ.
India Latest News Live 11 December 2025 ವಾಟ್ಸಾಪ್ ಬಳಕೆದಾರರೇ ಎಚ್ಚರ - ಈ ಮೂರು ತಪ್ಪುಗಳು ಮಾಡಿದ್ರೆ ಜೈಲು ಪಾಲಾಗೋದು ಫಿಕ್ಸ್!
ವಾಟ್ಸಾಪ್ ನಮ್ಮ ದೈನಂದಿನ ಜೀವನದ ಭಾಗವಾಗಿದ್ದರೂ, ಇದರಲ್ಲಿ ಮಾಡುವ ಕೆಲವು ತಪ್ಪುಗಳು ಗಂಭೀರ ಕಾನೂನು ಪರಿಣಾಮಗಳನ್ನು ಉಂಟುಮಾಡಬಹುದು. ನಕಲಿ ಸುದ್ದಿ ಹರಡುವುದು, ಆಕ್ಷೇಪಾರ್ಹ ಫೋಟೋ/ವೀಡಿಯೊ ಕಳುಹಿಸುವುದು, ಮತ್ತು ಬೆದರಿಕೆ ಸಂದೇಶಗಳನ್ನು ಕಳುಹಿಸುವುದು ಸೈಬರ್ ಅಪರಾಧಗಳಾಗಿವೆ.
India Latest News Live 11 December 2025 10 ಸಾವಿರವಲ್ಲ, 1 ಲಕ್ಷ ಕೊಟ್ರೂ ಮುಸ್ಲಿಮರು ನನಗೆ ವೋಟ್ ಹಾಕೋದಿಲ್ಲ - ಅಸ್ಸಾಂ ಸಿಎಂ ಹಿಮಾಂತ ಬಿಸ್ವಾ ಶರ್ಮ
ಅಜೆಂಡಾ ಆಜ್ ತಕ್ 2025 ರ ವೇದಿಕೆಯಲ್ಲಿ, ಅಸ್ಸಾಂ ಮುಖ್ಯಮಂತ್ರಿಗಳು ರಾಜ್ಯದ ವಿದ್ಯಾರ್ಥಿಗಳು ಮತ್ತು ಮಹಿಳೆಯರಿಗಾಗಿ ತಮ್ಮ ಪ್ರಮುಖ ಯೋಜನೆಗಳನ್ನು ವಿವರಿಸಿದರು. ಒಂಬತ್ತನೇ ತರಗತಿಗಿಂತ ಮೇಲ್ಪಟ್ಟ ವಿದ್ಯಾರ್ಥಿಗಳಿಗೆ 300,000 ಕ್ಕೂ ಹೆಚ್ಚು ಬೈಸಿಕಲ್‌ಗಳನ್ನು ವಿತರಿಸಲಾಗಿದೆ ಎಂದು ಹೇಳಿದ್ದಾರೆ.
India Latest News Live 11 December 2025 ಪ್ರಧಾನಿ ಮೋದಿ, ಅಮಿತ್ ಶಾ ಜೊತೆ ರಾಹುಲ್ ಗಾಂಧಿ 90 ನಿಮಿಷದ ಅಪರೂಪದ ಸಭೆ, ಚರ್ಚೆ ಆಗಿದ್ದೇನು?
ಎಲ್ಲಾ ನೇಮಕಾತಿಗೆ ರಾಹುಲ್ ಗಾಂಧಿ ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆದರೆ, ಇದನ್ನು ಒಂದೇ ನೇಮಕಾತಿಗೆ ಸಲ್ಲಿಸಲಾಗಿದೆಯೇ ಅಥವಾ ಬಹು ನೇಮಕಾತಿಗೆ ಸಲ್ಲಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
India Latest News Live 11 December 2025 ದೆವ್ವಗಳ ಬಗ್ಗೆ ಪಿಎಚ್‌ಡಿ ಮಾಡಲಿದ್ದಾರೆ ಬಾಗೇಶ್ವರ ಬಾಬಾ ಧೀರೇಂದ್ರ ಶಾಸ್ತ್ರಿ! ಘೋಸ್ಟ್ ಬಗ್ಗೆ ತಿಳಿಯಲು ನಿಮಗೆ ಆಸಕ್ತಿ ಇದೆಯೇ?
ಬಾಗೇಶ್ವರ ಧಾಮದ ಪಂಡಿತ್ ಧೀರೇಂದ್ರ ಶಾಸ್ತ್ರಿ ಅವರು 'ದೆವ್ವಗಳು' ಮತ್ತು ಅಲೌಕಿಕ ವಿದ್ಯಮಾನಗಳ ಕುರಿತು ಪಿಎಚ್‌ಡಿ ಮಾಡುವ ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ. ಈ ವಿಷಯದ ಬಗ್ಗೆ ಅಧ್ಯಯನ ಮಾಡಲು ವಿದೇಶಿ ವಿಶ್ವವಿದ್ಯಾಲಯವನ್ನು ಪರಿಗಣಿಸುತ್ತಿರುವುದಾಗಿ ಅವರು ಹೇಳಿದ್ದಾರೆ. ಸಂದರ್ಶನದ ಲಿಂಕ್ ಇಲ್ಲಿದೆ.
India Latest News Live 11 December 2025 ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ?
ಭಾರತ-ಪಾಕಿಸ್ತಾನ ಟಿ20 ವಿಶ್ವಕಪ್ ಪಂದ್ಯದ ಟಿಕೆಟ್ ಮಾರಾಟ ಆರಂಭ, 450 ರೂಗೆ ಬುಕಿಂಗ್ ಹೇಗೆ? ಭಾರತ ಹಾಗೂ ಶ್ರೀಲಂಕಾ ಆಯೋಜಿಸುತ್ತಿರುವ 2026ರ ಟಿ20 ವಿಶ್ವಕಪ್ ಟೂರ್ನಿ ಟಿಕೆಟ್ ಮಾರಾಟ ಆರಂಭಗೊಂಡಿದೆ.
India Latest News Live 11 December 2025 ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್
ಭೀಮ್ ಆರ್ಮಿಯ ಸಹ ಸಂಸ್ಥಾಪಕ, ಅಜಾದ್ ಸಮಾಜ ಪಾರ್ಟಿಯ ರಾಷ್ಟ್ರೀಯ ಅಧ್ಯಕ್ಷ ಉತ್ತರ ಪ್ರದೇಶದ ನಾಗಿನಾ ಲೋಕಸಭಾ ಕ್ಷೇತ್ರದ ಸಂಸದ ಚಂದ್ರಶೇಖರ್ ಅಜಾದ್ ರಾವಣ್ ವಿರುದ್ದ ಈಗ ಅವರ ಮಾಜಿ ಗೆಳೆತಿ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
India Latest News Live 11 December 2025 ಸೌಟು, ಕುಕ್ಕರ್ ಹಿಡಿದು ನಿಲ್ಲಿ, SIR ವಿರುದ್ಧ ಹೋರಾಟಕ್ಕೆ ಮಹಿಳೆಯರಿಗೆ ಸಿಎಂ ಮಮತಾ ಬ್ಯಾನರ್ಜಿ ಕರೆ
ಸೌಟು, ಕುಕ್ಕರ್ ಹಿಡಿದು ನಿಲ್ಲಿ, SIR ವಿರುದ್ಧ ಹೋರಾಟಕ್ಕೆ ಮಹಿಳೆಯರಿಗೆ ಸಿಎಂ ಮಮತಾ ಬ್ಯಾನರ್ಜಿ ಕರೆ ನೀಡಿದ್ದಾರೆ. ಚುನಾವಣಾ ಆಯೋಗದ ಮತದಾರ ಪಟ್ಟಿ ಪರಿಷ್ಕರಣೆ ವಿರೋಧ ವ್ಯಕ್ತಪಡಿಸಿರುವ ಮಮತಾ, ಇದೀಗ ಮಹಿಳೆಯರು SIR ವಿರುದ್ದ ಹೋರಾಟ ಮಾಡಲು ಸೂಚಿಸಿದ್ದಾರೆ.
India Latest News Live 11 December 2025 ಮಧುಮೇಹ ಚಿಕಿತ್ಸೆಯಲ್ಲಿ ಹೊಸ ಕ್ರಾಂತಿ - AIIMS ವೈದ್ಯರಿಂದ ಅದ್ಭುತ ಸಾಧನೆ, ಈಗ ಕೇವಲ 2 ಗಂಟೆಯಲ್ಲಿ ಗುಣಪಡಿಸಬಹುದು!
India Latest News Live 11 December 2025 ನದಿ ಸಮೀಪ ಡೆತ್ನೋಟ್ ಬರೆದಿಟ್ಟು ರೇ*ಪ್ ಆರೋಪಿ ಎಸ್ಕೇಪ್ - ಆತನಿಗಾಗಿ ನದಿಯಲ್ಲಿ 3 ದಿನ ಹುಡುಕಿದ ಪೊಲೀಸರು
ಅತ್ಯಾ*ಚಾರ ಪ್ರಕರಣದ ಆರೋಪಿಯೊಬ್ಬ, ಕಾನೂನಿನಿಂದ ತಪ್ಪಿಸಿಕೊಳ್ಳಲು ಆತ್ಮ*ಹತ್ಯೆ ನಾಟಕವಾಡಿದ್ದಾನೆ. ನದಿಗೆ ಹಾರಿದಂತೆ ನಂಬಿಸಿ, ಡೆತ್ ನೋಟ್ ಬಿಟ್ಟು ಹೋಗಿದ್ದ ಈತನನ್ನು, ಮೂರು ದಿನಗಳ ಶೋಧದ ನಂತರ ಪೊಲೀಸರು ಕಡೆಗೂ ಬಂಧಿಸಿದ್ದಾರೆ.
India Latest News Live 11 December 2025 ಚೈನೀಸ್ ಮಾಂಜಾಗೆ ಮತ್ತೊಂದು ಬಲಿ - ಮಗಳನ್ನು ಶಾಲೆಗೆ ಬಿಟ್ಟು ವಾಪಸಾಗುತ್ತಿದ್ದ ತಂದೆ ಸಾವು
ಗಾಳಿಪಟದ ದಾರ ಸಿಲುಕಿ ಮಗಳನ್ನು ಶಾಲೆಗೆ ಬಿಟ್ಟು ವಾಪಸ್ ಬೈಕ್‌ನಲ್ಲಿ ಮನೆಗೆ ಬರುತ್ತಿದ್ದ ತಂದೆಯೊಬ್ಬರು ಸಾವನ್ನಪ್ಪಿದ್ದಾರೆ. ಬೈಕ್‌ನಲ್ಲಿ ಬರುತ್ತಿದ್ದ ವೇಳೆ ಚೈನೀಸ್ ಮಾಂಜಾ ಅವರ ಕತ್ತಿಗೆ ಸಿಲುಕಿ ಈ ದುರಂತ ನಡೆದಿದೆ.
India Latest News Live 11 December 2025 ಸಂಜು ಸ್ಯಾಮ್ಸನ್ ಔಟ್, ಶುಭ್‌ಮನ್ ಗಿಲ್ ಇನ್ - ಅಸಲಿ ಸತ್ಯ ಬಿಚ್ಚಿಟ್ಟ ರವಿಚಂದ್ರನ್ ಅಶ್ವಿನ್!
ಟಿ20 ಸರಣಿಯಿಂದ ಸಂಜು ಸ್ಯಾಮ್ಸನ್‌ರನ್ನು ಹೊರಗಿಟ್ಟಿದ್ದಕ್ಕೆ ಆರ್. ಅಶ್ವಿನ್ ಕಾರಣ ನೀಡಿದ್ದಾರೆ. ಶುಭಮನ್ ಗಿಲ್‌ರನ್ನು ಉಪನಾಯಕರನ್ನಾಗಿ ಮಾಡಿದ್ದೇ ಸಂಜು ಸ್ಥಾನಕ್ಕೆ ಕುತ್ತು ತಂದಿತು ಎಂದು ಅವರು ವಿಶ್ಲೇಷಿಸಿದ್ದಾರೆ.
India Latest News Live 11 December 2025 ಮೊದಲ ಸಲ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಸಂಬಳ ಕಟ್! ಬಿಸಿಸಿಐ ಮಹತ್ವದ ತೀರ್ಮಾನ?
ಡಿಸೆಂಬರ್ 22ರಂದು ನಡೆಯಲಿರುವ ಬಿಸಿಸಿಐ ವಾರ್ಷಿಕ ಸಭೆಯಲ್ಲಿ ಟೀಂ ಇಂಡಿಯಾದ ಸೆಂಟ್ರಲ್ ಕಾಂಟ್ರ್ಯಾಕ್ಟ್ ಪ್ರಮುಖ ಚರ್ಚೆಯ ವಿಷಯವಾಗಿದೆ. ಕೇವಲ ಏಕದಿನ ಮಾದರಿಯಲ್ಲಿ ಆಡುತ್ತಿರುವ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ 'ಎ+' ಗ್ರೇಡ್‌ನಿಂದ ಹಿಂಬಡ್ತಿ ಹೊಂದುವ ಸಾಧ್ಯತೆಯಿದೆ.
India Latest News Live 11 December 2025 ಬಿಗ್‌ಬಾಸ್ ಮನೆಯಿಂದ ಹೊರಬಂದ ಬೆನ್ನಲ್ಲಿಯೇ ಸ್ಪರ್ಧಿ ಮೇಲೆ ಗಂಭೀರ ಆರೋಪ ಮಾಡಿದ ಡಿಸೈನರ್!
Bigg Boss Finalist Tanya Mittal Accused of Not Paying Designer for 800 Sarees After Show ಬಿಗ್ ಬಾಸ್ 19 ಮನೆಯಲ್ಲಿದ್ದಾಗ, ತಾನ್ಯಾ ಮಿತ್ತಲ್ ಯಾವಾಗಲೂ ಸೀರೆ ಧರಿಸುತ್ತಿದ್ದರು. ಅಷ್ಟೇ ಅಲ್ಲ, 800 ಸೀರೆಗಳ ಜೊತೆಗೆ ಬಿಗ್ ಮನೆಗೆ ಬಂದಿದ್ದಾಗಿ ಅವರು ಹೇಳಿಕೊಂಡಿದ್ದರು.
India Latest News Live 11 December 2025 22 ಕಾರ್ಮಿಕರ ಸಾಗಿಸುತ್ತಿದ್ದ ಟ್ರಕ್ ಭೀಕರ ಅಪಘಾತದಲ್ಲಿ 17 ಸಾವು, 4 ದಿನ ಬಳಿಕ ಘಟನೆ ಬೆಳಕಿಗೆ
22 ಕಾರ್ಮಿಕರ ಸಾಗಿಸುತ್ತಿದ್ದ ಟ್ರಕ್ ಭೀಕರ ಅಪಘಾತದಲ್ಲಿ 17 ಸಾವು, 4 ದಿನದ ಬಳಿಕ ಘಟನೆ ಬೆಳಕಿಗೆ, ಇನ್ನುಳಿದ ಕಾರ್ಮಿಕರು ಗಂಭೀರ ಗಾಯಗೊಂಡಿದ್ದಾರೆ. ದುರಂತ ಎಂದರೆ ಅಪಘಾತವಾಗಿ ನಾಲ್ಕು ದಿನ ಬಳಿಕ ಘಟನೆ ಬೆಳಕಿಗೆ ಬಂದಿದೆ.
India Latest News Live 11 December 2025 ಪ್ರತಿಷ್ಠಿತ ಶಾಲೆಯ ಮೇಲೆ ಐಟಿ ರೈಡ್ - ಕೋಟಿ ಕೋಟಿ ಹಣ ಪತ್ತೆ - ಹಣ ಎಣಿಸುವ ಯಂತ್ರ ತರಿಸಿದ ಅಧಿಕಾರಿಗಳು
ಪ್ರತಿಷ್ಠಿತ ವರ್ಧಮಾನ್ ಗ್ರೂಪ್ ಆಫ್ ಸ್ಕೂಲ್ಸ್ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ. ತೆರಿಗೆ ವಂಚನೆ ಆರೋಪದ ಮೇಲೆ ನಡೆದ ಈ ಶೋಧ ಕಾರ್ಯಾಚರಣೆಯಲ್ಲಿ, ಶಾಲೆಯ ಕಚೇರಿಯಿಂದ ಕೋಟ್ಯಾಂತರ ರೂಪಾಯಿ ನಗದು ಮತ್ತು ರಿಯಲ್ ಎಸ್ಟೇಟ್ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
India Latest News Live 11 December 2025 ಧೋನಿ ಸಸ್ಯಹಾರಿಯೋ, ಮಾಂಸಹಾರಿಯೋ? ಮಹಿ ಇಷ್ಟದ ಆಹಾರ ಬಗ್ಗೆ ಗುಟ್ಟು ಬಿಚ್ಚಿಟ್ಟ ಮಾಜಿ ರೂಮ್‌ಮೇಟ್!
ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ, ಎಂ ಎಸ್ ಧೋನಿ ಜೊತೆಗಿನ ತಮ್ಮ ಹಳೆಯ ನೆನಪೊಂದನ್ನು ಹಂಚಿಕೊಂಡಿದ್ದಾರೆ. 2004ರಲ್ಲಿ ರೂಮ್‌ಮೇಟ್ ಆಗಿದ್ದಾಗ, ಸಸ್ಯಾಹಾರಿಯಾಗಿದ್ದ ಚೋಪ್ರಾ ಅವರಿಗಾಗಿ ಧೋನಿ ಒಂದು ತಿಂಗಳ ಕಾಲ ಕೇವಲ ಸಸ್ಯಾಹಾರವನ್ನೇ ಸೇವಿಸಿದ್ದರು.
India Latest News Live 11 December 2025 ಕ್ಯಾಸ್ಟ್ರೋಲ್ ಬ್ರಾಂಡ್‌ನ ನಕಲಿ ಎಂಜಿನ್ ಆಯಿಲ್ ಉತ್ಪಾದನೆ ಮಾಡುತ್ತಿದ್ದ ಘಟಕದ ಮೇಲೆ ದಾಳಿ
ದೆಹಲಿ ಪೊಲೀಸರು ಅಲಿಪುರದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅತೀ ದೊಡ್ಡ ನಕಲಿ ಎಂಜಿನ್ ಎಣ್ಣೆ ಉತ್ಪಾದನಾ ಘಟಕವನ್ನು ಭೇದಿಸಿ, ಮಾರುಕಟ್ಟೆಯಲ್ಲಿ ವಿತರಣೆಗೆ ಸಿದ್ಧವಾಗಿದ್ದ ಕ್ಯಾಸ್ಟ್ರೋಲ್ ಬ್ರಾಂಡ್ ಉತ್ಪನ್ನಗಳ ಬೃಹತ್ ಸಂಗ್ರಹವನ್ನು ವಶಪಡಿಸಿಕೊಂಡಿದ್ದಾರೆ.