- Home
- News
- India News
- India Latest News Live: IPL 2026 ನಿನ್ನೆ ನಡೆದ ಲಖನೌ-ಕೆಕೆಆರ್ ನಡುವಿನ ಸೂಪರ್ ಓವರ್ ಮ್ಯಾಚ್ ಗೆದ್ದಿದ್ದು ಯಾರು?
India Latest News Live: IPL 2026 ನಿನ್ನೆ ನಡೆದ ಲಖನೌ-ಕೆಕೆಆರ್ ನಡುವಿನ ಸೂಪರ್ ಓವರ್ ಮ್ಯಾಚ್ ಗೆದ್ದಿದ್ದು ಯಾರು?

ಢಾಕಾ: ಅರ್ಚಕನೊಬ್ಬನನ್ನು ಇಬ್ಬರು ಅಪರಿಚಿತ ವ್ಯಕ್ತಿಗಳು ಕರೆದೊಯ್ದ 3 ದಿನಗಳ ಬಳಿಕ ಆತನ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಬಾಂಗ್ಲಾದೇಶದ ಚಟ್ಟೋಗ್ರಾಮ ಜಿಲ್ಲೆಯಲ್ಲಿ ನಡೆದಿದೆ. ದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಹೆಚ್ಚುತ್ತಿರುವ ಮಧ್ಯೆ ಈ ಘಟನೆ ಆತಂಕ ಮೂಡಿಸಿದೆ.
ದೋಹಝರಿ ನಿವಾಸಿ ನಯನ್ ಸಾಧು (40) ಮೃತ ವ್ಯಕ್ತಿ. ಏ.19ರ ಸಂಜೆ ಇಬ್ಬರು ಅಪರಿಚಿತರು ನಯನ್ರನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದರು. 3 ದಿನಗಳ ನಂತರ, ಗ್ರಾಮದ ಹೊರವಲಯದಲ್ಲಿರುವ ಗುಡ್ಡಗಾಡು ಪ್ರದೇಶದಲ್ಲಿ ಮರಕ್ಕೆ ನೇತಾಡುತ್ತಿರುವ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದು ಕೊ*ಲೆಯೋ ಅಥವಾ ಆತ್ಮಹ*ತ್ಯೆಯೋ ಎಂಬುದು ಖಚಿತವಾಗಿಲ್ಲ.
India Latest News Live 27 April 2026IPL 2026 ನಿನ್ನೆ ನಡೆದ ಲಖನೌ-ಕೆಕೆಆರ್ ನಡುವಿನ ಸೂಪರ್ ಓವರ್ ಮ್ಯಾಚ್ ಗೆದ್ದಿದ್ದು ಯಾರು?
India Latest News Live 27 April 2026100 ಮೀ. ದೂರದಲ್ಲಿ ಬಿಜೆಪಿ ರ್ಯಾಲಿ ಸದ್ದು - ಭಾಷಣ ನಿಲ್ಲಿಸಿ ನಿರ್ಗಮಿಸಿದ ಸಿಎಂ ಮಮತಾ!
ಭವಾನಿಪುರದಲ್ಲಿ ತಮ್ಮ ರ್ಯಾಲಿ ಸಮೀಪವೇ ಬಿಜೆಪಿ ಸಭೆ ನಡೆಸಿದ್ದಕ್ಕೆ ಕೋಪಗೊಂಡ ಮಮತಾ ಬ್ಯಾನರ್ಜಿ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ ನಿರ್ಗಮಿಸಿದರು. ಈ ಘಟನೆಯು ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗದ್ದಲಕ್ಕೆ ಕಾರಣವಾಯಿತು.
India Latest News Live 27 April 2026ಏಳು ಪಕ್ಷಾಂತರಿಗಳ ಸದಸ್ಯತ್ವ ರದ್ದುಗೊಳಿಸುವಂತೆ ರಾಜ್ಯಸಭೆ ಸ್ಪೀಕರ್ಗೆ ಆಪ್ ಮನವಿ
ಬಿಜೆಪಿ ಸೇರಿದ 7 ರಾಜ್ಯಸಭಾ ಸಂಸದರನ್ನು ಅನರ್ಹಗೊಳಿಸುವಂತೆ ಆಮ್ ಆದ್ಮಿ ಪಕ್ಷವು ರಾಜ್ಯಸಭೆ ಸಭಾಪತಿಗೆ ಮನವಿ ಸಲ್ಲಿಸಿದೆ. ಇದು ಪಕ್ಷಾಂತರ ವಿರೋಧಿ ಕಾನೂನಿನ ಉಲ್ಲಂಘನೆಯಾಗಿದ್ದು, ಅಗತ್ಯಬಿದ್ದರೆ ನ್ಯಾಯಾಲಯದ ಮೊರೆ ಹೋಗುವುದಾಗಿ ಆಪ್ ನಾಯಕ ಸಂಜಯ್ ಸಿಂಗ್ ಎಚ್ಚರಿಸಿದ್ದಾರೆ.
India Latest News Live 27 April 2026ಭೋಪಾಲ ದುರಂತದ ಐಕಾನಿಕ್ ಫೋಟೋ ಕ್ಲಿಕ್ಕಿಸಿದ್ದ ರಘು ನಿಧನ; ಪದ್ಮಶ್ರೀ ಸೇರಿ ಅನೇಕ ಪ್ರಶಸ್ತಿಗಳ ಪುರಸ್ಕೃತ
ಛಾಯಾ ಪತ್ರಿಕೋದ್ಯಮದಲ್ಲಿ ಹೊಸ ಅಧ್ಯಾಯ ಬರೆದ, ಪದ್ಮಶ್ರೀ ಪುರಸ್ಕೃತ ಹಿರಿಯ ಛಾಯಾಗ್ರಾಹಕ ರಘು ರಾಯ್ (83) ಅವರು ಕ್ಯಾನ್ಸರ್ನಿಂದ ನಿಧನರಾದರು. ಭೋಪಾಲ್ ಅನಿಲ ದುರಂತ, ಬಾಂಗ್ಲಾ ನಿರಾಶ್ರಿತರ ಬಿಕ್ಕಟ್ಟು ಸೇರಿದಂತೆ ಹಲವು ಐತಿಹಾಸಿಕ ಕ್ಷಣಗಳನ್ನು ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದರು.
India Latest News Live 27 April 2026ಬೈಲಕುಪ್ಪೆಯ ಬೌದ್ಧ ವಿಹಾರದ ಬಗ್ಗೆ ಪ್ರಧಾನಿ ಮೋದಿ ಮೆಚ್ಚುಗೆ - 100 ಎಕರೆ ಕಾಡಲ್ಲಿ 700 ಸ್ಥಳೀಯ ಮರಗಳ ಸಂರಕ್ಷಣೆ
ಪ್ರಧಾನಿ ನರೇಂದ್ರ ಮೋದಿಯವರು ತಮ್ಮ 'ಮನ್ ಕೀ ಬಾತ್' ಕಾರ್ಯಕ್ರಮದಲ್ಲಿ, ಕರ್ನಾಟಕದ ಬೈಲಕುಪ್ಪೆ ಬೌದ್ಧವಿಹಾರದ ಪ್ರಕೃತಿ ಸಂರಕ್ಷಣಾ ಕಾರ್ಯವನ್ನು ಶ್ಲಾಘಿಸಿದ್ದಾರೆ. 100 ಎಕರೆ ಕಾಡಿನಲ್ಲಿ 700ಕ್ಕೂ ಹೆಚ್ಚು ಸ್ಥಳೀಯ ಮರಗಳನ್ನು ಸಂರಕ್ಷಿಸಿ, ಪ್ರಕೃತಿಯೊಂದಿಗಿನ ಬೌದ್ಧ ಸಂಪ್ರದಾಯದ ಸಂಬಂಧಕ್ಕೆ ಉತ್ತಮ ಉದಾಹರಣೆಯಾಗಿದೆ.
India Latest News Live 27 April 2026ಅಮೆರಿಕ ಅಧ್ಯಕ್ಷ ಟ್ರಂಪ್ 'ಗುಂಡು' ಪಾರ್ಟಿಯಲ್ಲಿ ಗುಂಡಿನ ಸದ್ದು; ಅಸಲಿಗೆ ಟಾರ್ಗೆಟ್ ಯಾರು?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾಗವಹಿಸಿದ್ದ ಶ್ವೇತಭವನ ಪತ್ರಕರ್ತರ ಭೋಜನಕೂಟದಲ್ಲಿ ಶಸ್ತ್ರಸಜ್ಜಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿದ್ದಾನೆ. ಭದ್ರತಾ ಸಿಬ್ಬಂದಿ ತಕ್ಷಣವೇ ದಾಳಿಕೋರನನ್ನು ಬಂಧಿಸಿದ್ದು, ಟ್ರಂಪ್ ಸೇರಿದಂತೆ ಎಲ್ಲಾ ಗಣ್ಯರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.