- Home
- News
- India News
- India Latest News Live: ವೈಟ್ಹೌಸ್ ಗುಂಡಿನ ದಾಳಿಯ ನಡುವೆ ವೈನ್ ಬಾಟಲ್ ಎತ್ತಿದ ಮಹಿಳೆ - ವೀಡಿಯೋ ವೈರಲ್
India Latest News Live: ವೈಟ್ಹೌಸ್ ಗುಂಡಿನ ದಾಳಿಯ ನಡುವೆ ವೈನ್ ಬಾಟಲ್ ಎತ್ತಿದ ಮಹಿಳೆ - ವೀಡಿಯೋ ವೈರಲ್

ನವದೆಹಲಿ: ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದಂತೆಯೇ ದೇಶದ ಹಲವು ರಾಜ್ಯಗಳಲ್ಲಿ ಉಷ್ಣಾಂಶ ಭಾರೀ ಪ್ರಮಾಣದಲ್ಲಿ ಏರಿಕೆ ಕಂಡಿದ್ದು, ಸಾಮಾನ್ಯ ಜನಜೀವನಕ್ಕೆ ಅಡ್ಡಿಯಾಗಿದೆ. ಸೋಮವಾರ ಉತ್ತರಪ್ರದೇಶದ ಬಾಂದಾದಲ್ಲಿ ಉಷ್ಣಾಂಶವು ಗರಿಷ್ಠ 47.6 ಡಿ.ಸೆ. ತಲುಪಿದ್ದು, ಇದು ದೇಶದಲ್ಲಿ ದಾಖಲಾದ ಅತಿಹೆಚ್ಚು ತಾಪಮಾನವಾಗಿದೆ. ಇದು ಸಾಮಾನ್ಯಕ್ಕಿಂತ 5.4 ಡಿ.ಸೆ.ನಷ್ಟು ಹೆಚ್ಚು. ಇಲ್ಲಿ 2022ರ ಏಪ್ರಿಲ್ನಲ್ಲಿ 47.4 ಡಿ.ಸೆ. ತಾಪಮಾನ ದಾಖಲಾಗಿತ್ತು.ಅತ್ತ ಮಹಾರಾಷ್ಟ್ರದ ಅಕೋಲಾದಲ್ಲಿ 46.9 ಡಿ.ಸೆ. ದಾಖಲಾಗಿದೆ. 46.8 ಡಿ.ಸಿ. ಉಷ್ಣಾಂಶದಲ್ಲಿ ಬೆಂದ ಅಮರಾವತಿಯೂ ಅದರ ಬೆನ್ನಿಗೇ ಇದೆ.
ರಾಜಸ್ಥಾನದ ಜೈಸಲ್ಮೇರ್ನಲ್ಲಿ 46.7 ಡಿಗ್ರಿ, ಬರ್ಮೆರ್ನಲ್ಲಿ 46 ಡಿಗ್ರಿ, ಕೋಟಾ ಮತ್ತು ವನಸ್ಥಲಿಯಲ್ಲಿ 45.7 ಡಿಗ್ರಿ ದಾಖಲಾಗಿದೆ. ಅತ್ತ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಉಷ್ಣಾಂಶವು 44 ಡಿಗ್ರಿ ಆಗಿದೆ. ಉತ್ತರ ಮತ್ತು ಮಧ್ಯ ಭಾರತದಿಂದ ಬೀಸುತ್ತಿರುವ ಬಿಸಿ ಗಾಳಿ, ಸೂರ್ಯನ ತಾಪ ತಗ್ಗಿಸಲು ಮೋಡವೇ ಇಲ್ಲದಿರುವುದು, ಮುಂಗಾರು ವಿಳಂಬಗಳು ಇದಕ್ಕೆ ಕಾರಣ ಎನ್ನಲಾಗಿದೆ.
India Latest News Live 28 April 2026ವೈಟ್ಹೌಸ್ ಗುಂಡಿನ ದಾಳಿಯ ನಡುವೆ ವೈನ್ ಬಾಟಲ್ ಎತ್ತಿದ ಮಹಿಳೆ - ವೀಡಿಯೋ ವೈರಲ್
India Latest News Live 28 April 2026ನರಭಕ್ಷಕರಾದ್ರಾ ರಷ್ಯಾ ಸೈನಿಕರು? ಜತೆಗಾರನ ಕಾಲು ಕತ್ತರಿಸಿ ತಿನ್ನುತ್ತಿದ್ದ ಆಡಿಯೋ
India Latest News Live 28 April 2026ಮತ್ತೆ ಗಾಯಗೊಂಡ MS Dhoni, ಐಪಿಎಲ್ಗೆ ಗುಡ್ ಬೈ ಹೇಳ್ತಾರಾ? ಫ್ಲೆಮಿಂಗ್ ಹೇಳಿದ್ದೇನು?
ಸರಣಿ ಗಾಯಗಳಿಂದ ಬಳಲುತ್ತಿರುವ ಸ್ಟಾರ್ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ದೂರ ಉಳಿಯಲಿದ್ದಾರೆಯೇ? ಚೆನ್ನೈ ಸೂಪರ್ ಕಿಂಗ್ಸ್ ಮುಖ್ಯ ಕೋಚ್ ಸ್ಟೀಫನ್ ಫ್ಲೆಮಿಂಗ್ ಏನು ಹೇಳಿದ್ದಾರೆ ಇಲ್ಲಿದೆ.
India Latest News Live 28 April 2026ಮನು ಭಾಕರ್ ವರ್ಸಸ್ ವೈಭವ್ ಸೂರ್ಯವಂಶಿ - ಯುವ ಕ್ರಿಕೆಟರ್ ಬಗ್ಗೆ ಕೇಳಿದ ಪ್ರಶ್ನೆಗೆ ಒಲಿಂಪಿಕ್ ವಿಜೇತೆ ಹೇಳಿದ್ದೇನು?
ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಅವರಿಗೆ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಬಗ್ಗೆ ಕೇಳಿದ ಪ್ರಶ್ನೆಯು ಸೋಶಿಯಲ್ ಮೀಡಿಯಾದಲ್ಲಿ ಭಾರೀ ವಿವಾದಕ್ಕೆ ಕಾರಣವಾಗಿದೆ. ಅನೇಕರು ಪ್ರಶ್ನೆ ಕೇಳಿದವರ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
India Latest News Live 28 April 2026ಪವರ್ ಪಾಯಿಂಟ್ | ವಿದೇಶದಲ್ಲಿರುವ ಭಾರತೀಯರೇ ತಾಯ್ನಾಡು ಕಟ್ಟಲು ಬನ್ನಿ!
ಝೋಹೋ ಸಂಸ್ಥಾಪಕ ಶ್ರೀಧರ್ ವೆಂಬು ಅವರು ಅಮೆರಿಕದಲ್ಲಿ ಬದಲಾಗುತ್ತಿರುವ ಪರಿಸ್ಥಿತಿ ಮತ್ತು ಭಾರತೀಯರ ಮೇಲಿನ ಮನೋಭಾವವನ್ನು ವಿವರಿಸುತ್ತಾರೆ. ಅಮೆರಿಕದಲ್ಲಿರುವ ಭಾರತೀಯ ಪ್ರತಿಭೆಗಳು ತಾಯ್ನಾಡಿಗೆ ಹಿಂತಿರುಗಿ ದೇಶ ಕಟ್ಟುವ ಕಾರ್ಯದಲ್ಲಿ ಭಾಗಿಯಾಗಬೇಕೆಂದು ಅವರು ಮನವಿ ಮಾಡಿದ್ದಾರೆ.