07:52 AM (IST) Apr 29

India Latest News Live 29 April 2026ಪಂಚರಾಜ್ಯ ಚುನಾವಣೆ ಮುಗಿಯುವ ಮುನ್ನವೇ 7 ರಾಜ್ಯಗಳಲ್ಲಿ ಕಮಲ ಅರಳಿಸಲು ಮುಂದಾದ ಬಿಜೆಪಿ

ಪಂಚರಾಜ್ಯ ಚುನಾವಣೆ ಫಲಿತಾಂಶಕ್ಕೆ ಕಾಯದೆ ಬಿಜೆಪಿ 2027ರಲ್ಲಿ ನಡೆಯಲಿರುವ 7 ರಾಜ್ಯಗಳ ಚುನಾವಣೆಗೆ ಸಿದ್ಧತೆ ಆರಂಭಿಸಿದೆ. ಮತ್ತೊಂದೆಡೆ, ಪ್ರಧಾನಿ ಮೋದಿ ವಾರಾಣಸಿಯಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರುವ ಭರವಸೆ ನೀಡಿದ್ದು, ವಿಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.
Read Full Story
07:49 AM (IST) Apr 29

India Latest News Live 29 April 2026ಯುದ್ಧದ ಮಧ್ಯೆ ‘ಒಪೆಕ್‌’ಗೆ ಯುಎಇ ಗುಡ್‌ಬೈ! ತೈಲಬೆಲೆ ಮೇಲೆ ಎಫೆಕ್ಟ್?

ಜಾಗತಿಕ ತೈಲ ಬಿಕ್ಕಟ್ಟಿನ ನಡುವೆ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಒಪೆಕ್ ಮತ್ತು ಒಪೆಕ್+ ಕೂಟದಿಂದ ಹೊರಬರಲು ನಿರ್ಧರಿಸಿದೆ. ತನ್ನ ಆರ್ಥಿಕ ಹಿತಾಸಕ್ತಿ, ಉತ್ಪಾದನಾ ಗುರಿಗಳು ಮತ್ತು ಸೌದಿ ಅರೇಬಿಯಾದೊಂದಿಗಿನ ಹದಗೆಟ್ಟ ಸಂಬಂಧಗಳು ಈ ನಿರ್ಧಾರಕ್ಕೆ ಕಾರಣವಾಗಿದ್ದು, ಇದು ಜಾಗತಿಕ ತೈಲ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
Read Full Story
07:30 AM (IST) Apr 29

India Latest News Live 29 April 2026ಬ್ರಹ್ಮಾಸ್ತ್ರವೇ ಆಯ್ತು ಇರಾನ್‌ಗೆ ಹೊಸ ತಲೆನೋವು; ಅಮೆರಿಕ ಚಕ್ರವ್ಯೂಹದಲ್ಲಿ ಖಮೇನಿ?

ಅಮೆರಿಕದ ನೌಕಾ ನಿರ್ಬಂಧದಿಂದಾಗಿ ಇರಾನ್‌ಗೆ ತೈಲ ರಫ್ತು ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ಸಂಗ್ರಹಾಗಾರಗಳು ತುಂಬಿದ್ದು, ಉತ್ಪಾದನೆ ಕಡಿತಗೊಳಿಸಬೇಕಾದ ಅನಿವಾರ್ಯತೆ ಎದುರಾಗಿದೆ. ಇದು ದೇಶದ ಆರ್ಥಿಕತೆಯನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಲಿದ್ದು, ಜನ ದಂಗೆ ಏಳುವ ಸಾಧ್ಯತೆಯನ್ನೂ ಸೃಷ್ಟಿಸಿದೆ

07:18 AM (IST) Apr 29

India Latest News Live 29 April 2026ಪಾಕಿಸ್ತಾನ ಬಳಿ ಒಂದು ದಿನಕ್ಕೂ ಆಗುವಷ್ಟು ತೈಲ ದಾಸ್ತಾನು ಇಲ್ಲ! ಖುದ್ದು ಪಾಕ್‌ ತೈಲ ಸಚಿವನಿಂದ ದೇಶದ ದುಸ್ಥಿತಿ ಬಹಿರಂಗ

ಪಾಕಿಸ್ತಾನದ ಪೆಟ್ರೋಲಿಯಂ ಸಚಿವ ಅಲಿ ಮಲಿಕ್‌, ಭಾರತದ ಬೃಹತ್ ವ್ಯೂಹಾತ್ಮಕ ತೈಲ ಸಂಗ್ರಹ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ಜಾಗತಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ 60-70 ದಿನಗಳ ಬೇಡಿಕೆ ಪೂರೈಸಬಲ್ಲದು, ಆದರೆ ಪಾಕಿಸ್ತಾನದಲ್ಲಿ ಒಂದು ದಿನದ ಸಂಗ್ರಹವೂ ಇಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
Read Full Story
06:55 AM (IST) Apr 29

India Latest News Live 29 April 2026ಪ್ಲೀಸ್ ಒಂದು ಸಹಿ ಮಾಡಿ ಪುಣ್ಯ ಕಟ್ಕೊಳ್ಳಿ - ಭಾರತದ ಮುಂದೆ ಮತ್ತೆ ಕೈ ಚಾಚಿದ ಪಾಕಿಸ್ತಾನ

ಪಾಕಿಸ್ತಾನದ ಪೆಟ್ರೋಲಿಯಂ ಸಚಿವ ಅಲಿ ಮಲಿಕ್‌, ಭಾರತದ ಬೃಹತ್ ವ್ಯೂಹಾತ್ಮಕ ತೈಲ ಸಂಗ್ರಹಣಾ ಸಾಮರ್ಥ್ಯವನ್ನು ಶ್ಲಾಘಿಸಿದ್ದಾರೆ. ತಮ್ಮ ದೇಶದಲ್ಲಿ ಕನಿಷ್ಠ ಒಂದು ದಿನದ ಅಗತ್ಯ ಪೂರೈಸುವ ಸಂಗ್ರಹಾಗಾರವೂ ಇಲ್ಲವೆಂದು ವಿಷಾದ ವ್ಯಕ್ತಪಡಿಸಿದ್ದಾರೆ.

Read Full Story
06:39 AM (IST) Apr 29

India Latest News Live 29 April 2026ಇರಾನ್‌ ಶಾಂತಿ ಪ್ರಸ್ತಾಪಗಳಿಗೆ ಡೊನಾಲ್ಡ್ ಟ್ರಂಪ್‌ ನಕಾರ; ಅಣ್ವಸ್ತ್ರ ಬಿಟ್ಟು ಚರ್ಚೆ ಇಲ್ಲ

ಮಧ್ಯಪ್ರಾಚ್ಯ ಯುದ್ಧ ಸ್ಥಗಿತಗೊಳಿಸಲು ಇರಾನ್ ಮುಂದಿಟ್ಟಿದ್ದ ಮೂರು ಹಂತದ ಶಾಂತಿ ಪ್ರಸ್ತಾಪವನ್ನು ಅಮೆರಿಕ ತಿರಸ್ಕರಿಸಿದೆ. ಅಣ್ವಸ್ತ್ರ ವಿಷಯವನ್ನು ಕೊನೆಯ ಹಂತಕ್ಕೆ ಸೇರಿಸಿದ್ದೇ ಅಮೆರಿಕದ ನಕಾರಕ್ಕೆ ಕಾರಣವಾಗಿದ್ದು, ಇದರಿಂದಾಗಿ ಉಭಯ ದೇಶಗಳ ನಡುವೆ ಸಂಧಾನದ ಆಸೆ ದೂರವಾಗಿದೆ.
Read Full Story
05:34 AM (IST) Apr 29

India Latest News Live 29 April 2026ಪಂಚ ರಾಜ್ಯದಲ್ಲಿ ಯಾರಿಗೆ ಗೆಲುವು - ಇಂದು ಸಮೀಕ್ಷೆ ಪ್ರಕಟ, ಬಂಗಾಳದಲ್ಲಿಂದು ಕಡೆಯ ಹಂತದ ಮತದಾನ

ಪಶ್ಚಿಮ ಬಂಗಾಳದ ಅಂತಿಮ ಹಂತದ ಮತದಾನದೊಂದಿಗೆ ಪಂಚರಾಜ್ಯ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ಮೇ 4 ರ ಅಧಿಕೃತ ಫಲಿತಾಂಶಕ್ಕೂ ಮುನ್ನ, ಇಂದು ಸಂಜೆ ಪ್ರಕಟವಾಗಲಿರುವ ಮತದಾನೋತ್ತರ ಸಮೀಕ್ಷೆಗಳು ಸಂಭವನೀಯ ಗೆಲುವಿನ ಸುಳಿವು ನೀಡಲಿವೆ.
Read Full Story